ಗಾಣಿಗ ಸಮಾಜ ಮುಂಬಯಿ ವತಿಯಿಂದ  72ನೇ ಸ್ವಾತಂತ್ರ್ಯ ದಿನಾಚರಣೆ


Team Udayavani, Aug 16, 2018, 4:08 PM IST

1508mum05.jpg

ಮುಂಬಯಿ: ಸೇವೆಯಲ್ಲಿ ಸ್ವಾರ್ಥ ಇರಿಸುವುದು ಸೇವಾ ಧರ್ಮವಲ್ಲ. ಕೊಟ್ಟು ಪಡಕೊಳ್ಳುವ ಸೇವೆ ಅರ್ಥರಹಿತ. ಇಂತಹ ಸೇವೆಯು ಫಲದಾಯಕವೂ ಆಗದು. ಆದ್ದರಿಂದ ನಿಸ್ವಾರ್ಥ ಸೇವಾ ಮನೋಭಾವ  ಮೈಗೂಡಿಸಿ ಅಗತ್ಯವುಳ್ಳವರನ್ನು ಸ್ಪಂದಿಸಿ ಸೇವಾ ನಿರತರಾಗಿರಿ. ಇದನ್ನು  ಭಗವಂತ ಮೆಚ್ಚುತ್ತಾನೆ.  ಸಂಸ್ಕಾರಯುತ ಬಾಳಿಗೆ ಆಚರಣೆಗಳೇ ಅಡಿಪಾಯವಿದ್ದಂತೆ. ಒಂದು ಸಂಸಾರಿಕ ಬದುಕನ್ನು ರೂಪಿಸಲು ಸಂಸ್ಕಾರ ಎನ್ನುವುದು ಎಷ್ಟು ಮುಖ್ಯವೋ ಅಂತೆಯೇ ನೆಮ್ಮದಿಯುತ ಬಾಳಿಗೆ ಸಾಮರಸ್ಯವೂ, ಸಾಂಘಿಕತೆಯೂ ಅಷ್ಟೇ ಪ್ರಧಾನವಾದುದು. ಆದ್ದರಿಂದ  ರಾಷ್ಟ್ರೀಯ ಉತ್ಸವಗಳನ್ನು  ಬರೇ ಸಂತೋಷ, ಸಂಭ್ರಮಕ್ಕಾಗಿ ಆಚರಿಸದೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಸಿ ಬಾಳಿಗೆ ಫಲಕಾರಿ ಆಗುವಂತೆ ಆಚರಿಸಿ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವೂ ಸಾಧ್ಯವಾಗುವುದು ಎಂದು ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ ತಿಳಿಸಿದರು.

ಆ. 15 ರಂದು ಕುರ್ಲಾ ಪೂರ್ವದ  ಗುಲ್‌ರಾಜ್‌ ಟವರ್‌ನ  ಗಾಣಿಗ ಸಮಾಜ  ಮುಂಬಯಿ ಕಛೇರಿಯಲ್ಲಿ ನಡೆದ 72 ನೇ ಸ್ವಾತಂತ್ರೊÂàತ್ಸವ ಆಚರಣೆ ಸಂಭ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದ ಅವರು, ಸ್ವಾತಂತ್ರÂಕ್ಕಾಗಿ ಗಾಣಿಗ ಸಮುದಾಯದ ಮುತ್ಸದ್ಧಿಗಳೂ ಹೋರಾಟ ನಡೆಸಿದ್ದಾರೆ. 72 ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿ ಕಂಡ ರಾಮರಾಜ್ಯದ ಕನಸು ಇಂದಿಗೂ ಕನಸಾಗಿಯೇ ಉಳಿದಂತಿದೆ. ಪ್ರಜಾಪ್ರಭುತ್ವವನ್ನು ನಾವುಗಳು ಎಷ್ಟರ ತನಕ ಅರ್ಥೈಯಿಸಿ ಜೀವನದಲ್ಲಿ ರೂಢಿಸಿಕೊಳ್ಳಲಾರೆಯೋ ಅಲ್ಲಿ ತನಕ ಜನಸಾಮಾನ್ಯರು ಸ್ವಾತಂತ್ರÂವಾಗಿ ಬಾಳುವುದು ಸುಲಭ ಸಾಧ್ಯವಲ್ಲ.  ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳು ಜಾಗೃತರಾಗಬೇಕು ಎಂದು ನುಡಿದರು.
ಸಂಸ್ಥೆಯು ಹಿತೈಷಿ ಹಾಗೂ ಯುವ ಉದ್ಯಮಿ ರತ್ನಾಕರ್‌ ಶೆಟ್ಟಿ ಥಾಣೆ, ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ್‌ ಎಂ. ಗಾಣಿಗ, ಉಪಾಧ್ಯಕ್ಷ ಭಾಸ್ಕರ ಎಂ. ಗಾಣಿಗ, ಗೌರವ  ಕೋಶಾಧಿಕಾರಿ ಜಯಂತ ಪಿ. ಗಾಣಿಗ, ಉಪ ಕಾರ್ಯದರ್ಶಿ ಜಗದೀಶ ಗಾಣಿಗ, ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್‌. ಭಟ್ಕಳ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯೋದಯ ಉಪ ಸಮಿತಿಯ ವತಿಯಿಂದ ಸಮಾಜದ ಮಕ್ಕಳಿಗೆ ವಾರ್ಷಿಕವಾಗಿ ಕೊಡಮಾಡುವ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಆಶಾ ಹರೀಶ್‌ ತೋನ್ಸೆ, ರಾಜೇಶ್‌ ಆರ್‌. ಕುತ್ಪಾಡಿ, ಬಾಲಚಂದ್ರ ಕಟಪಾಡಿ, ಸದಾನಂದ ಕಲ್ಯಾಣು#ರ್‌, ಎಂ. ಆರ್‌. ಸೀತಾರಾಮ್‌, ಬಾಲಕೃಷ್ಣ ಜಿ. ತೋನ್ಸೆ, ಕಾಳಿಂಗ ರಾವ್‌, ನಾರೇಂದ್ರ ರಾವ್‌, ಪದ್ಮನಾಭ ಎನ್‌. ಗಾಣಿಗ ಗಾಣಿಗ, ಟಿ.ಎಸ್‌ ದಿನೇಶ್‌ ರಾವ್‌, ಗೋಪಾಲಕೃಷ್ಣ ಜಿ. ಗಾಣಿಗ, ದಿನೇಶ್‌ ಗಾಣಿಗ ಭಯಂದರ್‌, ಆರತಿ ಸತೀಶ್‌ ಗಾಣಿಗ, ವೀಣಾ ದಿನೇಶ್‌ ಗಾಣಿಗ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
ಸಮಾಜ ಬಾಂಧವರು ಒಟ್ಟಾಗಲು ಇದೊಂದು ಉತ್ತಮ ವೇದಿಕೆ. ಇಲ್ಲಿ ಎಲ್ಲರೂ ನಮ್ಮವರು ಎಂದಾಗ ತಮ್ಮತನವು ಹೆಚ್ಚುತ್ತಾ ಸಂಬಂಧಗಳು ಇನ್ನಷ್ಟು ಬಲಗೊಳ್ಳುವುದು. ಮುಂದಿನ ದಿನಗಳಲ್ಲಿ ನಾನೂ ಈ ಸಂಸ್ಥೆಯಲ್ಲಿ ಸಕ್ರೀಯಳಾಗಿ ಸಮಾಜದ ಸೇವೆಗೆ ಬಲತುಂಬುವೆ ಎಂದು ಮಂಜುಳಾ ಗಾಣಿಗ ತಿಳಿಸಿ ಸ್ವಾತಂತ್ರೊÂàತ್ಸವದ ಶುಭಾಶಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ರಾಮಚಂದ್ರ ಎಂ. ಗಾಣಿಗ ಅವರ 75ನೇ ಹುಟ್ಟುಹಬ್ಬವನ್ನು ಆಚರಿಸಿ ಶುಭಹಾರೈಸಲಾಯಿತು. ಸುಗುಣಾ ರಾಮಚಂದ್ರ ಗಾಣಿಗ  ಮತ್ತು ಪರಿವಾರ ಸದಸ್ಯರು ಉಪಸ್ಥಿತರಿದ್ದರು. ಕು| ಈಶಾ ರಾಜೇಶ್‌ ಗಾಣಿಗ ರಾಷ್ಟ್ರಗೀತೆಯನ್ನು ಹಾಡಿದರು. ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್‌ ಆರ್‌. ಗಾಣಿಗ ಸ್ವಾಗತಿಸಿ ಪ್ರಸ್ತಾವನೆಗೈದು ಕಾರ್ಯಕ್ರಮ ನಿರ್ವಹಿಸಿದರು. 
ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ ಅವರು  ಪ್ರತಿಭಾನ್ವಿತರ ಯಾದಿ ಪ್ರಕಟಿಸಿ ಮಕ್ಕಳಿಗೆ ಹಿತ ನುಡಿಗಳನ್ನಾಡಿದರು. ಯುವ ವಿಭಾಗಾಧ್ಯಕ್ಷ ಗಣೀಶ್‌ ಆರ್‌. ಕುತ್ಪಾಡಿ ವಂದಿಸಿದರು. 

ಭಾವಿ ಪ್ರಜೆಗಳಾದ ನಮ್ಮ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೊಳಗುವುದು. ಆ ಮುಖೇನ ಇಂತಹ ಸಂಭ್ರಮಗಳು ಅನುಭವದ ಪಾಠಗಳಾಗುವುದು. ರಾಷ್ಟ್ರೀಯ ಆಚಣೆಯಿಂದ ನಮ್ಮ ಸಂಘವು ಸಮುದಾಯವನ್ನು ಒಗ್ಗೂಡಿಸುತ್ತಿರುವುದು ಸ್ತುತöರ್ಹ. ಈ ಮೂಲಕ ಸಂಘ, ಸಮುದಾಯ ಮತ್ತು ಸಮಗ್ರ ರಾಷ್ಟ್ರದ ಶ್ರೇಯೋಭಿವೃದ್ಧಿ ಸಾಧ್ಯ. ಸ್ವಾಂತತ್ರÂಕ್ಕಾಗಿ ಹೋರಾಡಿ ಮಡಿದ ಮಹಾನ್‌ ವ್ಯಕ್ತಿಗಳು, ಸೈನಿಕರ ತ್ಯಾಗ ಬಲಿದಾನವನ್ನು ಅಪಾರವಾಗಿದೆ. ಸದ್ಯ ರಾಷ್ಟ್ರ ರಕ್ಷಣೆಗಾಗಿ ಪಣತೊಡುವ ರಾಷ್ಟ್ರನಾಯಕರ, ಯೋಧರ ಸೇವೆಯನ್ನು  ಸ್ಮರಿಸುವ ಆವಶ್ಯಕತೆಯಿದೆ.
-ಯು. ಬಾಲಕೃಷ್ಣ ಕ ಟಪಾಡಿ, ನ್ಯಾಯವಾದಿಗಳು

ದೇಶದ ಪ್ರತಿಯೊಬ್ಬ ಪ್ರಜೆಯ ಪಾಲಿಗೆ ರಾಷ್ಟ್ರಕಂಡ ಸ್ವಾತಂತ್ರÂ ಎಷ್ಟು ಮಹತ್ವಧ್ದೋ ಜನರೂ ಸ್ವತಂತ್ರರಾಗಿ ಬಾಳುತ್ತಾ ಮತ್ತೂಬ್ಬರಿಗೂ ಸ್ವತಂತ್ರರಾಗಿ ಬದುಕಿಸುವಲ್ಲಿ ಪ್ರೇರೆಪಿಸುವುದೂ ಅಷ್ಟೇ ಮುಖ್ಯ. ಸಂವಿಧಾನವು  ಸ್ವತಂತ್ರರಾಗಿ ಬಾಳಲು ಹಕ್ಕುಗಳನ್ನು ರೂಪಿಸಿದ್ದು ಇವುಗಳನ್ನು ಶಿಸ್ತುಬದ್ಧರಾಗಿ ನಿಷ್ಠೆಯಿಂದ ಪಾಲಿಸಿ ಬಾಳುವುದೇ ಮೊದಲ ಸ್ವತಂತ್ರÂ ಆಗಿದೆ. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ  ಯುವ ಜನಾಂಗ ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು. ಆವಾಗಲೇ ಭ್ರಷ್ಟಮುಕ್ತ ದೇಶ ಸಾಧ್ಯ.
-ಬಿ. ವಾಸುದೇವ ರಾವ್‌, ಉಪಾಧ್ಯಕ್ಷರು, ಗಾಣಿಗ ಸಮಾಜ ಮುಂಬಯಿ
ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

ಬೆಳಗಾವಿ:ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.