ಬೊರಿವಲಿ ತುಳು ಸಂಘದ 8ನೇ ವಾರ್ಷಿಕ ಮಹಾಸಭೆ
Team Udayavani, Aug 30, 2018, 12:29 PM IST
ಮುಂಬಯಿ: ತುಳುನಾಡ ಭಾಷೆ, ಸಂಸ್ಕೃತಿಯನ್ನು ಉಳಿಸುವ ದೃಷ್ಟಿಕೋನದಿಂದ ಭಾÅತೃತ್ವದ ನೆಲೆಯಲ್ಲಿ ಸ್ಥಾಪನೆಗೊಂಡ ತುಳು ಸಂಘ ಬೊರಿವಲಿ ಇಂದು ಮಹಾನಗರದಲ್ಲಿ ಭಾಷಾಭಿಮಾನದ ಸಂಸ್ಥೆಯಾಗಿ ಬೆಳೆಯುತ್ತಿದೆ. ಹಲವಾರು ದೂರದೃಷ್ಟಿಯ ಚಿಂತನೆಯೊಂದಿಗೆ ಬೊರಿವಲಿಯ ಮಹಿಷಮರ್ದಿನಿ ದೇವಿಯ ಸಾನ್ನಿಧ್ಯದಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯು ದೇವಿಯ ಅನುಗ್ರಹದೊಂದಿಗೆ ಸದಸ್ಯ ಬಾಂಧವರ ಹುರುಪು, ಉತ್ಸಾಹ, ತುಳು ಸಂಘದ ಬೆಳವಣಿಗೆಗೆ ಕಾರಣವಾಗಿದೆ. ಜನತಾ ಸೇವೆಯೇ ಜನಾರ್ದನ ಸೇವೆ ಎಂದೇ ನಾವೆಲ್ಲ ಕಾರ್ಯವೆಸಗಿದಾಗ ಮಹಾನಗರದಲ್ಲಿ ಈ ಸಂಸ್ಥೆ ತುಳುವರ ಪ್ರಾತಿನಿಧ್ಯ ಸಂಸ್ಥೆಯಾಗಿ ಬೆಳೆಯಲು ಸಾಧ್ಯ ಎಂದು ಬೊರಿವಲಿ ತುಳು ಸಂಘದ ಅಧ್ಯಕ್ಷ ವಾಸು ಕೆ. ಪುತ್ರನ್ ಅವರು ಅಭಿಪ್ರಾಯಿಸಿದರು.
ಆ. 25ರಂದು ಬೊರಿವಲಿ ಪಶ್ಚಿಮದ ಯೋಗಿನಗರ ಹೌಸಿಂಗ್ ಸೊಸೈಟಿಯ ಅಸೋಸಿಯೇಶನ್ ಸಭಾಗೃಹದಲ್ಲಿ ಜರಗಿದ ತುಳು ಸಂಘ ಬೊರಿವಲಿ ಇದರ 8ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಂತ ಕಚೇರಿ ಸೇರಿದಂತೆ ಮುಂಬರುವ ಜನಪ್ರಿಯ ಯೋಜನೆಗಳನ್ನು ಹೊಂದಿರುವ ಈ ಸಂಸ್ಥೆಗೆ ಸದಸ್ಯರೇ ಬಂಡವಾಳವಾಗಿದ್ದು, ತಮ್ಮ ಕಾರ್ಯಚಟುವಟಿಕೆಯ ಮೂಲಕ ಸಂಸ್ಥೆಯ ಆರ್ಥಿಕ ಬೆಳವಣಿಗೆಗೆ ಸಂಘಟಿತರಾಗಿ ಕಾರ್ಯವೆಸಗಬೇಕು ಎಂದು ಕರೆ ನೀಡಿ ಶುಭ ಹಾರೈಸಿದರು.
ಸದಸ್ಯರ ಬೆಂಬಲದ ಅಗತ್ಯ
ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ಅವರು ವರ್ಷದ ಸುದೀರ್ಘ ವರದಿಯನ್ನು ಸಭೆಯಲ್ಲಿ ಮಂಡಿಸಿ, ಹಲವಾರು ಯೋಜನೆಗಳನ್ನು ಹೊಂದಿದ ಈ ಸಂಸ್ಥೆಗೆ ಸದಸ್ಯರ ಬೆಂಬಲದ ಅಗತ್ಯವಿದ್ದು, ಮುಂಬರುವ ವಾರ್ಷಿಕೋತ್ಸವ ಹಾಗೂ ಆರ್ಥಿಕ ನಿಧಿ ಸಂಗ್ರಹಕ್ಕೆ ಸದಸ್ಯರು ಅತೀ ಹೆಚ್ಚಿನ ಉತ್ಸುಕತೆಯಿಂದ ಕಾರ್ಯ ಪ್ರವೃತ್ತರಾಗಿರಬೇಕು ಎಂದು ನುಡಿದರು.
ಸಭೆಯಲ್ಲಿ ಸಂಘದ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ವಿಶ್ವಸ್ಥ ಪ್ರದೀಪ್ ಸಿ. ಶೆಟ್ಟಿ ಅವರು ಮಾತನಾಡಿ, ದೇವಸ್ಥಾನದಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಗೆ ದೇವಿಯ ಅನುಗ್ರಹ ಸದಾಯಿದ್ದು, ಹಣಕಾಸು ವಿಚಾರದಲ್ಲಿ ಸಮರ್ಪಕವಾಗಿ ಕಾರ್ಯವೆಸಗುವ ಆವಶ್ಯಕತೆಯಿದೆ. ಅನಾವಶ್ಯಕ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಂಘಟಿತರಾಗಿ ಸಂಘಕ್ಕೆ ಸೇವೆ ಸಲ್ಲಿಸಿದಾಗ ಬೊರಿವಲಿ ತುಳು ಸಂಘವು ಮಹಾನಗರದಲ್ಲಿ ಬಹುದೊಡ್ಡ ಸಂಸ್ಥೆಯಾಗಿ ಬೆಳೆಯಲು ಸಾಧ್ಯವಿದೆ ಎಂದರು.
ಸಮಚಿತ್ತದ ದೃಢ ಚಿಂತನೆಯೊಂದಿಗೆ ಒಗ್ಗಟ್ಟು ಸಾಧಿಸಿದರೆ ನಾವು ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯ. ಭಾಷೆ, ಸಂಸ್ಕೃತಿ, ಅಭಿವೃದ್ಧಿಯ ಚಿಂತನೆಗೆ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ ಮಹಿಳಾ ವಿಭಾಗದ ಸದಸ್ಯರ ಕೊಡುಗೆ ಅಪಾರವಾಗಿದೆ. ಅತೀ ಶೀಘ್ರದಲ್ಲಿ ನಮ್ಮ ಸ್ವಂತ ಕಟ್ಟಡದ ಯೋಜನೆ ಈಡೇರಬೇಕು ಎಂದು ಹರೀಶ್ ಜಿ. ಪೂಜಾರಿ ಅಭಿಪ್ರಾಯಿಸಿದರು.
ಸದಸ್ಯರ ಪರವಾಗಿ ಶ್ರೀನಿವಾಸ ಸಾಫಲ್ಯ ಅವರು ಮಾತನಾಡಿ, ತುಳು ಜನತೆಯ ಪ್ರೀತಿಯ ಸಂಕೇತವಾಗಿ ಸ್ಥಾಪನೆಗೊಂಡ ಈ ತುಳು ಸಂಸ್ಥೆಗೆ ಪರಿಸರದ ದೇವಿಯ ಅನುಗ್ರಹವಿದೆ. ಪದಾಧಿಕಾರಿಗಳ ಅತೀವ ಉತ್ಸುಕತೆ ಸಂಸ್ಥೆಯ ಯೋಜನೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಯುವ ಸಂಘಟನೆಯ ಆವಶ್ಯಕತೆಯಿದ್ದು, ಈ ಮೂಲಕ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಅಭಿಪ್ರಾಯಿಸಿದರು.
ಅಲ್ಲದೆ ಮೊಗವೀರ ಮಾಸಿಕದ ಸಂಪಾದಕ ಅಶೋಕ್ ಸುವರ್ಣ ಅವರು ಖ್ಯಾತ ಗಾಯಕ ಗಣೇಶ್ ಎರ್ಮಾಳ್, ಯುವ ಸಂಘಟಕ ಪ್ರವೀಣ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಶೆಟ್ಟಿ, ಶ್ರೀನಿವಾಸ ಪಾಂಗಳ, ಭಾಸ್ಕರ ಶೆಟ್ಟಿ, ಕಟ್ಟಡ ಯೋಜನೆಯ ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಸಲಹೆ ಸೂಚನೆಗಳನ್ನು ನೀಡಿದರು. ಗೌರವ ಕೋಶಾಧಿಕಾರಿ ಹರೀಶ್ ಜಿ. ಮೈಂದನ್ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಜತೆ ಕಾರ್ಯದರ್ಶಿ ದಿವಾಕರ ಬಿ. ಕರ್ಕೇರ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕರುಣಾಕರ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯದರ್ಶಿ ತಿಲೋತ್ತಮ ವೈದ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ವಾಸು ಕೆ. ಪುತ್ರನ್ ಸ್ವಾಗತಿಸಿದರು.
ಚಿತ್ರ-ವರದಿ : ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.