ಆಪರೇಷನ್ ವಿಜಯ್ ಶೌರ್ಯದ ದಾಖಲೆ: ಸಿಎಂ ಫಡ್ನವೀಸ್
Team Udayavani, Jul 27, 2019, 12:44 PM IST
ಮುಂಬಯಿ, ಜು. 26: ಭಾರತ ಯಾವತ್ತೂ ಯಾವುದೇ ದೇಶವನ್ನು ಆಕ್ರಮಿಸಿಲ್ಲ, ಆದರೆ ಯಾರಾದರೂ ಭಾರತವನ್ನು ಆಕ್ರಮಿಸಲು ಪ್ರಯತ್ನಿಸಿದರೆ, ನಮ್ಮ ದೇಶದ ಸೈನಿಕರು ಅವರ ದಾಳಿಗೆ ಪ್ರತಿ ಉತ್ತರ ನೀಡಿ, ಅವರನ್ನು ಹಿಮ್ಮೆಟ್ಟಿಸುವ ಶಕ್ತಿ ಹೊಂದಿದ್ದಾರೆ. ಆಪರೇಶನ್ ವಿಜಯದಲ್ಲಿ ಭಾರತೀಯ ಸೈನಿಕರು ಪಾಕಿಸ್ಥಾನವನ್ನು ತಲುಪಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಭಾವಿಸಿತ್ತು. ಆದರೆ ಭಾರತೀಯ ಸೈನಿಕರು ತಮ್ಮ ಪ್ರಾಣತ್ಯಾಗ ಮಾಡಿ ಆಪರೇಶನ್ ವಿಜಯ್ ಯಶಸ್ವಿಯಾದರು. ಅದಕ್ಕಾಗಿಯೇ ಆಪರೇಶನ್ ವಿಜಯ ಶೌರ್ಯದ ದಾಖಲೆಯಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿದರು.
ಕಾರ್ಗಿಲ್ ವಿಜಯ ದಿನದ ನಿಮಿತ್ತ ಅಥರ್ವಾ ಫೌಂಡೇಶನ್ ವತಿಯಿಂದ ಶಣ್ಮುಖಾನಂದನ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಸಚಿವ ಆಶಿಶ್ ಶೇಲಾರ್, ಶಾಸಕ ಮಂಗಲ್ ಪ್ರಭಾತ್ ಲೋಧಾ, ಶಾಸಕ ರಾಜ್ ಪುರೋಹಿತ್, ಲೆಫ್ಟಿನೆಂಟ್ ಜನರಲ್ ಎಸ್. ಕೆ. ಪರಾಶರ್, ವಿಂಗ್ ಕಮಾಂಡರ್ ಜಗಮೋಹನ್‌ನಾಥ್, ಚಾರಿಟಿ ಅಧಿಕಾರಿ ಸಂಜಯ್ ಭಾಟಿಯಾ, ಆಪರೇಶನ್ ವಿಜಯದಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಕಾರ್ಗಿಲ್ ವಿಜಯೋತ್ಸವ ದಿನದ ಶುಭಾಶಯಗಳನ್ನು ಉಪಸ್ಥಿತ ಗಣ್ಯರಿಗೆ ಪ್ರಸ್ತುತಪಡಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಜುಲೈ 26ರಂದು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿನ ಎಂದು ಆಚರಿಸಲಾಗುತ್ತಿದೆ. ಕಾರ್ಗಿಲ್ ವಿಜಯವು 20 ವರ್ಷಗಳನ್ನು ಪೂರೈಸಿದ್ದು, ನಮ್ಮ ಭಾರತಕ್ಕೆ ಗೌರವದ ದಿನವಾಗಿದೆ. ಇಂದು ಆಪರೇಶನ್ ವಿಜಯದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗವನ್ನು ನಾವು ನೆನಪಿನಲ್ಲಿಡಬೇಕು. ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಭಾರತಕ್ಕೆ ಸಂಪನ್ಮೂಲಗಳ ಅವಶ್ಯಕತೆಯಿದೆಯೋ, ಹಾಗೆ ನಮ್ಮ ರಾಷ್ಟ್ರದ ಸೈನ್ಯವು ದೊಡ್ಡದಾಗಿರಬೇಕು. ಇಂದು ಭಾರತ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ನಮ್ಮ ದೇಶ ಸುರಕ್ಷಿತ ಮತ್ತು ಪ್ರಬಲ ವಾಗಿರುವುದರಿಂದ ಈ ಅಭಿವೃದ್ಧಿಯನ್ನು ಮಾಡಲು ನಮಗೆ ಸಾಧ್ಯವಾಗಿದೆ.
ರಾಜ್ಯದ ಸೈನಿಕರ ಸಹಾಯದಲ್ಲಿ ಹೆಚ್ಚಳ:
ಭಾರತವು ಯಾವಾಗಲೂ ತ್ಯಾಗ ಮತ್ತು ಶೌರ್ಯವನ್ನು ತೋರಿಸಿದೆ. ಭಾರತೀಯ ಸೈನಿಕರು ಸಹ ತ್ಯಾಗ ಮತ್ತು ಶೌರ್ಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದ್ದರಿಂದ ಮಹಾರಾಷ್ಟ್ರ ಸರಕಾರ ಈ ಸೈನಿಕರ ಹಿಂದೆ ಬೆಂಬಲವಾಗಿ ನಿಂತಿದೆ. ನಮ್ಮ ಸೈನಿಕರ ಬಗ್ಗೆ ನಾವೆಲ್ಲರೂ ಕರ್ತವ್ಯಭಾವನೆಯನ್ನು ಹೊಂದಿರುವುದು ಅವಶ್ಯವಾಗಿದೆ.
ಮಹಾರಾಷ್ಟ್ರದ ಹುತಾತ್ಮರ ಕುಟುಂಬ ಗಳಿಗೆ ನೀಡುವ ಪರಿಹಾರ ನಿಧಿಯನ್ನು ಹೆಚ್ಚಿಸಲಾಗಿದೆ. ಈಗ ನೆರವು ಸುಮಾರು 5 ಲಕ್ಷ ರೂ. ದಿಂದ ಹೆಚ್ಚಿಸಿ ಒಂದು ಕೋಟಿ ರೂ.ಗಳಷ್ಟು ಮಾಡಲಾಗಿದೆ. ನಾವೆಲ್ಲರೂ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಏನೆಂದರೆ, ಸುಮಾರು 125 ಕೋಟಿ ಜನರು ಸೈನಿಕರ ಕುಟುಂಬದೊಂದಿಗೆ ಇದ್ದಾರೆ ಎಂದು ನಾವು ಭರವಸೆ ನೀಡಬೇಕು.
5 ಎಕರೆ ಭೂಮಿ:
ಹುತಾತ್ಮರ ಕುಟುಂಬಗಳಿಗೆ 5 ಎಕರೆ ಭೂಮಿಯನ್ನು ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಈ ಭೂ ಖರೀದಿಯಲ್ಲಿ ಸ್ಟಾಂಪ್ ಡ್ಯೂಟಿ ಮನ್ನಾ ಮಾಡಲಾಗುತ್ತದೆ. ಈ ನಿರ್ಧಾರವನ್ನು ಎರಡು ವರ್ಷಗಳ ಹಿಂದೆ ತೆಗೆದುಕೊಳ್ಳಲಾಗಿದೆ. ರಾಜ್ಯ ಸರಕಾರವು ಆಗಸ್ಟ್ 15 ಹಾಗೂ ಜನವರಿ 26ರಂದು ಹುತಾತ್ಮರ ಕುಟುಂಬದವರನ್ನು ಸಮ್ಮಾನಪೂರ್ವಕ ಸರಕಾರಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಆರಂಭಿಸಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್ ಹೇಳಿದರು.
ಅಥರ್ವಾ ಫೌಂಡೇಶನ್ ವತಿಯಿಂದ ಕಾರ್ಗಿಲ್ ವಿಜಯ ದಿನವನ್ನು ಆಚರಿ ಸಲು ವಿಶೇಷ ಕಾರ್ಯಕ್ರಮವನ್ನು ನಡೆಯಿತು. ಆಪರೇಶನ್ ವಿಜಯ್‌ದ ಬಗ್ಗೆ ಕಿರುಚಿತ್ರವನ್ನು ಕಾರ್ಯಕ್ರಮದ ವೇಳೆ ಪ್ರದರ್ಶಿಸಲಾಯಿತು.
ಹುತಾತ್ಮರ ಕುಟುಂಬಗಳಿಗಾಗಿ ಅಥರ್ವಾ ಫೌಂಡೇಶನ್ ಮಾಡಿದ ಕಾರ್ಯಗಳ ಬಗ್ಗೆ ಸುನಿಲ್ ರಾಣೆ ಮಾಹಿತಿ ನೀಡಿದರು. ಫೌಂಡೇಶನ್ ವತಿಯಿಂದ ವರ್ಷಾ ರಾಣೆ ಅವರು ಹುತಾತ್ಮರಾದ ಕುಟುಂಬಗಳನ್ನು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.