ದುಬಾೖ ಎಂಬ ವಿಸ್ಮಯ ಲೋಕ
Team Udayavani, Nov 28, 2020, 1:55 PM IST
ಮನುಷ್ಯರು ವಾಸಿಸಲು ದುಸ್ತರವಾದಂತಹ ನೈಸರ್ಗಿಕ ಕಾರ್ಪಣ್ಯವಿರುವ ನಾಡಿದು. ಆದರೆ ಜಗತ್ತಿನಲ್ಲೇ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ಬೀಡಿದು. ಒಂದೇ ಒಂದು ಮರವೂ ಬೆಳೆಯದಂತಹ ಬಂಜರು ಭೂಮಿಯ ನಾಡಿದು. ಆದರೆ ಗಗನಚುಂಬಿ ಕಟ್ಟಡಗಳೊಂದಿಗೆ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ ಬೀಡಿದು.
ಒಂದೋ ಎರಡೋ ಅಪರೂಪಕ್ಕೆ ಮಳೆ ಯಾಗುವ ದಟ್ಟ ಬರಗಾಲವಿರುವ ನಾಡಿದು. ಆದರೆ ಮುಗಿಲೆತ್ತರಕ್ಕೆ ಚಿಮ್ಮುವ ನೀರಿನ ಕೃತಕ ಕಾರಂಜಿಯನ್ನು ನಿರ್ಮಿಸಿರುವ ಬೀಡಿದು. ಒಂದೇ ಒಂದು ನೈಸರ್ಗಿಕ ನದಿಯೂ ಇರದ ಸಮುದ್ರ ತಟದಲ್ಲಿರುವ ನಾಡಿದು. ಆದರೆ ಉಪ್ಪು ನೀರನ್ನೇ ಸಿಹಿನೀರನ್ನಾಗಿ ಪರಿವರ್ತಿಸಿ ನದಿಯನೀರಿನಂತೆ ಯಥೇತ್ಛವಾಗಿ ಬಳಸುವಬೀಡಿದು. ಒಂದು ಕಾಲದಲ್ಲಿ ಕೇವಲ ಒಂಟೆಯ ಮೇಲೆ ಮಾತ್ರ ಪ್ರಯಾಣ ಸಾಧ್ಯವೆಂಬಂತಿದ್ದ ನಾಡಿದು.
ಇಂದು ಜಗತ್ತಿನಲ್ಲೇ ಅತೀ ದುಬಾರಿ ಕಾರುಗಳನ್ನು, ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಬೀಡಿದು. ಒಂದೇ ಒಂದು ಪ್ರಖರ ಗ್ರೀಷ್ಮ ಋತುವನ್ನು ಮಾತ್ರ ಹೊಂದಿರುವ ನಾಡಿದು. ಆದರೆ ಕೃತಕ ಹವಾನಿಯಂತ್ರಣದಿಂದ ಶಿಶಿರವನ್ನು ಕೂಡ ನಿರ್ಮಿಸಿಕೊಂಡ ಬೀಡಿದು.
ಕೊತ್ತಂಬರಿ ಸೊಪ್ಪು ಕೂಡ ಬೆಳೆಯಲಾಗದಂತಹ ಮರಳುಗಾಡಿನ ಬಂಜರು ನಾಡಿದು. ಆದರೆ ಜಗತ್ತಿನ ಎಲ್ಲ ಬಗೆಯ ಸೊಪ್ಪು ತರಕಾರಿಗಳನ್ನು ತಾಜಾ ಗುಣಮಟ್ಟದಲ್ಲಿ ತರಿಸಿಕೊಳ್ಳುವ ಬೀಡಿದು. ಹೀಗೆ… ನೈಸರ್ಗಿಕವಾಗಿ ಇಷ್ಟೆಲ್ಲ ತೊಂದರೆಗಳಿ ದ್ದರೂ ಮಾನವ ನಿರ್ಮಿತ ಅಚ್ಚರಿಗಳೊಂದಿಗೆ ತನ್ನ ಶ್ರೀಮಂತಿಕೆಯೊಂದಿಗೆ ತೆರೆದುಕೊಳ್ಳುತ್ತಾ ಹೋಗುತ್ತದೆ ಈ ದುಬಾೖ ನಗರಿ. ಕೆಲವು ವರ್ಷಗಳ ಹಿಂದೆ ಕೆಲಸದ ನಿಮಿತ್ತ ದುಬಾೖಗೆ ಬರುವ ಅವಕಾಶ ಸಿಕ್ಕಿತು. ಅದಕ್ಕೆ ಮೊದಲು ಲಂಡನ್ ನಗರದಲ್ಲಿ ಒಂದೆರಡು ವರ್ಷವಿದ್ದ ಅನುಭವವಿತ್ತು.
ಆದರೆ ಅಲ್ಲಿಯ ಶಾಂತ ಥೇಮ್ಸ… ನದಿಯ ಹರಿಯುವಿಕೆಯಲ್ಲಿ ಕಾವೇರಿಯನ್ನು, ಲಂಡನ್ ನಗರದ ಹೊರವಲಯದಲ್ಲಿರುವ ಕೃಷಿಭೂಮಿಯಲ್ಲಿ ಮಂಡ್ಯದ ಗದ್ದೆಗಳನ್ನು, ಸಹಜವಾಗಿ ಹಬ್ಬಿರುವ ಕಾಡುಗಳಲ್ಲಿ ನಮ್ಮ ಮಲೆನಾಡಿನ ಕಾನನವನ್ನು ಊಹಿಸಿಕೊಂಡು ನಾನು ಪರದೇಶದಲ್ಲಿದ್ದೇನೆ ಎಂಬ ಭಾವವನ್ನು ಸ್ವಲ್ಪ ಶಮನ ಮಾಡಿಕೊಂಡಿದ್ದೆ.
ಆದರೆ ಅಂಥ ಯಾವ ಪ್ರಕೃತಿ ರಮ್ಯತೆಯೂ ಇರದ ಈ ದುಬಾೖ ನನಗೆ ಇಷ್ಟವಾಗಲಿಕ್ಕಿಲ್ಲ ಎಂಬ ನಂಬಿಕೆಯೊಂದಿಗೆ ಇಲ್ಲಿಗೆ ಬಂದೆ. ಆದರೆ ಪ್ರಕೃತಿಯ ಉಗ್ರ ರೂಪದ ದರ್ಶನದ ಪ್ರತೀಕದಂತಿರುವ ಬರಡು ಮರುಭೂಮಿಯ ಸೂರ್ಯಾಸ್ತಕ್ಕೂ ತನ್ನದೇ ಆದ ಸೌಂದರ್ಯವಿದೆ ಎಂಬ ಸತ್ಯದ ಅನುಭವವಾಯಿತು.
ಅಷ್ಟೇ ಅಲ್ಲ; ಮನುಷ್ಯ ತಂತ್ರಜ್ಞಾನದ ಉಚ್ಛ್ರಯ ಸ್ಥಿತಿಗೆ ಸಾಕ್ಷಿಯಾಗಿರುವ (ಬುರ್ಜ್ ಖಲೀಫಾ) ಜಗತ್ತಿನ ಅತೀ ಎತ್ತರದ ಕಟ್ಟಡಗಳು, ಸಾಹಸದ ಕುರುಹಿನಂತಿರುವ, ಸಮುದ್ರದ ನಡುವೆ ಮಾನವನೇ ನಿರ್ಮಿಸಿದ ಕೃತಕ ದ್ವೀಪಗಳು, ಶ್ರೀಮಂತಿಕೆಗೆ ತಕ್ಕ ವ್ಯಾಖ್ಯಾನದಂತಿರುವ ಐಷಾರಾಮಿ ಹೊಟೇಲ್ – ಬಂಗಲೆಗಳು, ಹಳೆ ವಿಜಯನಗರ ಸಾಮ್ರಾಜ್ಯವನ್ನುನೆನಪಿಸುವ ಚಿನ್ನ, ಬೆಳ್ಳಿ, ಮುತ್ತು, ರತ್ನಗಳ ಬಜಾರುಗಳು, ಮಸಾಲೆ ಪದಾರ್ಥಗಳ ಸಂತೆಗಳು, ದೃಷ್ಟಿ ಹಾಯಿಸಿದಷ್ಟುದೂರಕ್ಕೆ ಕಾಣಸಿಗುವ ಅಗಲ- ನೇರ ರಸ್ತೆಗಳು, ಕನ್ನಡ, ತುಳು, ಮಲಯಾಳಂ, ಹಿಂದಿ ಹೀಗೆ ನಿರಂತರ ಕಿವಿಯ ಮೇಲೆ ಬೀಳುತ್ತಿರುವ ಭಾರತೀಯ ಭಾಷೆಗಳು- ಈಎಲ್ಲವೂಪ್ರವಾಸಿಗರನ್ನು ಆಕರ್ಷಿಸುತ್ತಲೇ ಇವೆ.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ “ದುಬಾೖ, ಮರುಭೂಮಿಯಲ್ಲಿ ತೈಲದ ಸಿಂಚನಕ್ಕೆ ಅರಳಿದ ಅಚ್ಚರಿಯ ಕಾಂಕ್ರೀಟ್ ಉದ್ಯಾನವನ’.
ಈ ಅಂಕಣದ ವಿಶೇಷತೆಯೆಂದರೆ ವಿದೇಶಗಳಿಗೆ ತೆರಳಿ ಅಲ್ಲೊಂದಿಷ್ಟು ವರ್ಷ ಇದ್ದು ವಾಪಸು ತಾಯ್ನೆಲಕ್ಕೆ ಮರಳಿದವರ ನೆನಪಿನಂಗಳದ ಚಿತ್ರಗಳು. ಪ್ರಶಾಂತ್ ಭಟ್ ಅವರು ಲಂಡನ್, ದುಬಾಯಿಗೆ ತೆರಳಿ ಈಗ ವಾಪಸಾಗಿ ಊರಿನಲ್ಲಿದ್ದಾರೆ.
ಪ್ರಶಾಂತ್ ಭಟ್,ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.