ಬಂಗಾರದ ಮನಸಿನವರು ಇರುವಾಗ ಬಂಗಾರದ ಅಗತ್ಯವಿಲ್ಲ: ಧರ್ಮದರ್ಶಿ ರಮೇಶ್ ಪೂಜಾರಿ
Team Udayavani, Feb 20, 2021, 6:28 PM IST
ನವಿಮುಂಬಯಿ: ನಿಮ್ಮ ಪ್ರೀತಿ, ಗೌರವಕ್ಕೆ ಋಣಿಯಾಗಿದ್ದೇನೆ. ನಿಮ್ಮ ಪ್ರೀತಿಯನ್ನು ಕಂಡು ಮನ ತುಂಬಿ ಬಂತು. ನೀವೆಲ್ಲ ಬಂಗಾರವನ್ನು ನೀಡಿ ನನ್ನನ್ನು ಹರಸಿದ್ದೀರಿ. ಬಂಗಾರದ ಮನಸ್ಸುಳ್ಳ ನಿಮ್ಮಂಥವರು ಜತೆ ಇರುವಾಗ ನನಗೆ ಬಂಗಾರದ ಅಗತ್ಯವಿಲ್ಲ. ನೀವು ತೋರಿದ ಪ್ರೀತಿ ನನ್ನ ಜೀವನದ ನಿಜವಾದ ಸಂಪತ್ತಾಗಿದೆ. ಕಳೆದ ಮೂರು ದಶಕಗಳಿಂದ ನಾನು ಶ್ರೀ ಶನೀಶ್ವರ ಮಂದಿರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಧರ್ಮದರ್ಶಿ ಬಿರುದು ಪಡೆದಿರುವುಕ್ಕೆ ನೀವೆಲ್ಲ ತೋರಿದ ಪ್ರೀತಿ, ವಿಶ್ವಾಸವೇ ಕಾರಣವಾಗಿದೆ ಎಂದು ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್ ಎಂ. ಪೂಜಾರಿ ತಿಳಿಸಿದರು.
ಫೆ. 14ರಂದು ನೆರೂಲ್ ಶ್ರೀ ಶನೀಶ್ವರ ಮಂದಿರದಲ್ಲಿ ಮಂದಿರದ ವಿಶ್ವಸ್ಥ ಮಂಡಳಿ ಯವರು ಆಯೋಜಿಸಿದ್ದ ಅಭಿನಂದನ ಸಮಾ ರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಹಿಂತಚಿಂತಕರು, ಸಮಾಜ ಸೇವಕರಾದ ಸಂತೋಷ್ ಡಿ. ಶೆಟ್ಟಿ ಹಾಗೂ ಮಂದಿರದ ವಿಶ್ವಸ್ಥ ಮಂಡಳಿಯವರ, ಭಕ್ತರ ಸಹಕಾರದಿಂದ ನಾನು ಧಾರ್ಮಿಕ, ಸಾಮಾಜಿಕ ಸೇವೆಯನ್ನು ಮಾಡಲು ಸಾಧ್ಯ ವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ನನ್ನ 75ನೇ ಹುಟ್ಟುಹಬ್ಬವನ್ನು ಪ್ರೀತಿಯಿಂದ ಆಚ ರಿಸಿ ನನಗೆ ಆಶೀರ್ವಾದವನ್ನು ಮಾಡಿದ್ದೀರಿ. ನಿಮಗೆಲ್ಲ ಶ್ರೀ ಶನೀಶ್ವರ ದೇವರು ಹಾಗೂ ಪರಿವಾರ ದೇವರು ಸನ್ಮಂಗಲವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ನೆರೂಲ್ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಸೂರಜ್ ಭಟ್ ಮಾತನಾಡಿ, ಕಳೆದ 19 ವರ್ಷಗಳಿಂದ ನಾನು ರಮೇಶ್ ಪೂಜಾರಿ ಅವರ ಒಡನಾಟದಲ್ಲಿದ್ದೇನೆ. ಅವರು ತಪ್ಪನ್ನು ತಿದ್ದುವ ಗುಣವುಳ್ಳವರು. ಯಾರ ಮನಸ್ಸನ್ನು ನೋಯಿಸಿದವರಲ್ಲ. ಒಳ್ಳೆಯ ನಡತೆಯನ್ನು ಹೊಂದಿರುವ ಅವರಿಗೆ ಮತ್ತಷ್ಟು ದೇವರ ಸೇವೆ ಮಾಡುವಂತಾಗಲು ಶ್ರೀ ಶನೀಶ್ವರನು ಅನುಗ್ರಹಿಸಲಿ ಎಂದು ಹಾರೈಸಿದರು.
ಎನ್‌ಐಎ ತನಿಖಾ ದಳದ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯವಾದಿ ಪ್ರಕಾಶ್ ಶೆಟ್ಟಿ ಕಡಂದಲೆ ಅವರು ಮಾತನಾಡಿ, ಮನುಷ್ಯನ ಹುಟ್ಟು ಮುಖ್ಯವಲ್ಲ. ಹುಟ್ಟಿದ ಬಳಿಕ ಆತನ ಜೀವನದ ನಡೆ ಬಹಳ ಮುಖ್ಯ. ನಮ್ಮ ಒಳ್ಳೆಯ ಬಾಳ್ವೆ ಇತರರಿಗೆ ಆದರ್ಶವಾಗಿರಬೇಕು. ರಮೇಶ್ ಪೂಜಾರಿ ಅವರು ಮಾರ್ಗ ದರ್ಶಕರಾಗಿ ಎಲ್ಲರೊಂದಿಗೆ ಬೆರೆತವರು. ಮಹಾನಗರದಲ್ಲಿ ಯಾರೊಬ್ಬ ವೈರಿಯನ್ನು ಹೊಂದಿರದ ವ್ಯಕ್ತಿ ಅವರಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ ಮಾತನಾಡಿ, ಸರಳ, ಸಜ್ಜನತೆಯುಳ್ಳ ರಮೇಶ್ ಪೂಜಾರಿ ಅವರು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ತೊಡಗಿರುವ ವ್ಯಕ್ತಿ. ಅವರ ಧರ್ಮಕಾರ್ಯ, ಸತ್ಕಾರ್ಯ ಎಲ್ಲರಿಗೂ ಆದರ್ಶ ಪ್ರಾಯವಾಗಿರಲಿ ಎಂದು ಹಾರೈಸಿದರು.
ಉದ್ಯಮಿ, ಸಮಾಜ ಸೇವಕ ಸುಪ್ರಿ ಹೆರಿಟೇಜ್‌ನ ಶಿವರಾಮ ಜಿ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶಂಕರ್ ಹೆಗ್ಡೆ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ಶ್ರೀ ಶನೀಶ್ವರ ಮಂದಿರದ ಜತೆ ಕೋಶಾಧಿಕಾರಿ ಅದ್ಯಪಾಡಿ ಗುತ್ತು ಕರುಣಾಕರ ಎಸ್. ಆಳ್ವ, ಸ್ಥಳೀಯ ನಗರ ಸೇವಕಿ ಮೀರಾ ಪಾಟೀಲ್, ರಮೇಶ್ ಪೂಜಾರಿ ಅವರ ಹಿರಿಯ ಸಹೋದರ ಜೆ. ಎಂ. ಕೋಟ್ಯಾನ್, ರಮೇಶ್ ಪೂಜಾರಿ ಅವರ ಮೊಮ್ಮಗಳು ನೈಶಾ ಎನ್. ಪೂಜಾರಿ ಅವರು ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭ ರಮೇಶ್ ಪೂಜಾರಿ ಅವರನ್ನು ಶ್ರೀ ಶನೀಶ್ವರ ಮಂದಿರದ ವಿಶ್ವಸ್ಥ ಮಂಡಳಿಯ ಪರವಾಗಿ ಬಂಗಾರದ ಬಳೆ ತೊಡಿಸಿ, ಶಾಲು ಹೊದೆಸಿ, ಸಮ್ಮಾನ ಪತ್ರವನ್ನಿತ್ತು
ಸಮ್ಮಾನಿಸಲಾಯಿತು. ಶ್ರೀ ಅಯ್ಯಪ್ಪ ಭಕ್ತ ವೃಂದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೆಳ್ಳಿಯ ಕವಚ ಹೊದಿಕೆಯ ಊರುಗೋಲು ನೀಡಿ ಶುಭ ಹಾರೈಸಿದರು. ರಂಗಭೂಮಿ ಫೈನ್ ಆರ್ಟ್ಸ್ ನವಿಮುಂಬಯಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ, ನೆರೂಲ್ ಶ್ರೀ ಅಯ್ಯಪ್ಪ ಕ್ಷೇತ್ರ, ಶ್ರೀ ಬಾಲಾಜಿ ಮಂದಿರ ನೆರೂಲ್, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ, ಕನ್ನಡ ಸಂಘ ನವಿಮುಂಬಯಿ, ಹೆಗ್ಗಡೆ ಸೇವಾ ಸಂಘ ಮುಂಬಯಿ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ, ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಸಮಿತಿ, ಸದ್ಗುರು ಶ್ರೀ ನಿತ್ಯಾನಂದ ಸೇವಾ ಸಮಿತಿ ಸಿಬಿಡಿ ಬೇಲಾಪುರ, ಕರ್ನಾಟಕ ಸಂಘ ಖಾರ್‌ಘರ್, ಕರ್ನಾಟಕ ಸಂಘ ಪನ್ವೇಲ್, ಅರ್ಚಕ ವೃಂದ ಶ್ರೀ ಶನೀಶ್ವರ ಮಂದಿರ ನೆರೂಲ್ ಹೀಗೆ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಮೇಶ್ ಪೂಜಾರಿ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ನೆರೂಲ್ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದ ಅಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಗೌರವಾಧ್ಯಕ್ಷ ರವಿ ಆರ್. ಶೆಟ್ಟಿ, ಮಾಜಿ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ, ಪನ್ವೇಲ್ ಮನಪಾದ ಸ್ಥಾಯೀ ಸಮಿತಿಯ ಅಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಸುಪ್ರೀಂ ಹೆರಿಟೇಜ್ ಶಿವರಾಮ್ ಜಿ. ಶೆಟ್ಟಿ, ಸದ್ಗುರು ಶ್ರೀ ನಿತ್ಯಾನಂದ ಸೇವಾ ಸಮಿತಿ ಸಿಬಿಡಿ ಭಾಸ್ಕರ್ ಶೆಟ್ಟಿ, ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ಶಂಕರ್ ಹೆಗ್ಡೆ, ಸ್ಥಳೀಯ ನಗರ ಸೇವಕಿ ಮೀರಾ ಪಾಟೀಲ್, ಹಿರಿಯ ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ ಅಧ್ಯಕ್ಷ ಹರೀಶ್
ಶೆಟ್ಟಿ ಪಡುಬಿದ್ರೆ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಉಪಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಮಹಾರಾಷ್ಟ್ರ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಜಗನ್ನಾಥ್ ಕೋಟ್ಯಾನ್, ಕೆ. ಕೆ. ಶೆಟ್ಟಿ, ಶ್ರೀ ಬಾಲಾಜಿ ಮಂದಿರ ಹರಿಶ್ಚಂದ್ರ ಕಾಳೆ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಶನೀಶ್ವರ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ ಸಮ್ಮಾನ ಪತ್ರ ವಾಚಿಸಿದರು. ಮಂದಿರದ ವಿಶ್ವಸ್ಥ ಅನಿಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವಸ್ಥರಾದ ಪ್ರಭಾಕರ ಹೆಗ್ಡೆ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಶ್ರೀ ಶನೀಶ್ವರ ಮಂದಿರದ ಅಭಿವೃದ್ಧಿಯಲ್ಲಿ ರಮೇಶ್ ಪೂಜಾರಿ ಅವರ ಶ್ರಮ ಅಪಾರವಿದೆ. ಅವರು ಅಂದು ಹುಟ್ಟುಹಾಕಿದ ಸಮಿತಿ ಈಗ ಹೆಮ್ಮರವಾಗಿ ಬೆಳೆದು ಅದರಿಂದ ಕ್ಷೇತ್ರ ನಿರ್ಮಾಣವಾಗಿ ಅದು ಭಕ್ತರ ಪಾಲಿಗೆ ನೆಮ್ಮದಿಯ ತಾಣವಾಗಿ ಬೆಳಗಿದೆ. ನವಿಮುಂಬಯಿ ಪರಿಸರದ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ರಮೇಶ್ ಪೂಜಾರಿ ಅವರ ಪಾತ್ರ ಮಹತ್ತರವಾಗಿದೆ. ಇಂದು ರಮೇಶ್ ಪೂಜಾರಿ ಅವರಿಗೆ ಸಂದಿರುವುದು ಅಭಿನಂದನೆಯಲ್ಲ; ಅದು ಭಕ್ತರಿಂದ ಅವರಿಗೆ ಅರ್ಪಣೆಯಾದ ಗುರುದಕ್ಷಿಣೆ.–ಸಂತೋಷ್ ಜಿ. ಶೆಟ್ಟಿ, ಕಾರ್ಯಾಧ್ಯಕ್ಷ, ಶ್ರೀ ಶನೀಶ್ವರ ಮಂದಿರ, ನೆರೂಲ್
ಕಳೆದ 29 ವರ್ಷಗಳಿಂದ ರಮೇಶ್ ಪೂಜಾರಿ ಅವರು ಸಾಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಅವರು ಒಳ್ಳೆಯ ಗುಣ, ವಿಚಾರ, ಶಿಸ್ತನ್ನು ಮೈಗೂಡಿಸಿಕೊಂಡ ವ್ಯಕ್ತಿ. ಯಾವುದೇ ಸಂಸ್ಥೆಯ ಮುಖಂಡ ಸನ್ನಡತೆಯಲ್ಲಿದ್ದರೆ ಅಂತಹ ಸಂಸ್ಥೆ ಏಳ್ಗೆಯಾಗಲು ಸಾಧ್ಯ. ಆಡಂಬರವಿಲ್ಲದ ವ್ಯಕ್ತಿತ್ವದೊಂದಿಗೆ ಎಲ್ಲರೊಂದಿಗೆ ಬೆರೆತು ಬಾಳಿ ಸಂತೋಷ್ ಶೆಟ್ಟಿ ಅವರ ನೇತೃತ್ವದ ತಂಡಕ್ಕೆ ಬೆಂಬಲವನ್ನು ನೀಡಿ ಶನೀಶ್ವರ ಮಂದಿರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ರಮೇಶ್ ಪೂಜಾರಿ ಅವರು ಶ್ರಮಿಸುತ್ತಿದ್ದಾರೆ. ಉತ್ತಮ ವ್ಯಕ್ತಿತ್ವವುಳ್ಳವರ ಜತೆ ಸೇರಿದರೆ ನಾವೂ ಉತ್ತಮರಾಗುತ್ತೇವೆ.–ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಅಧ್ಯಕ್ಷ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.