ಮಕ್ಕಳ ನಡೆ ಎಂದಿಗೂ ಸಾಧನೆಯ ಕಡೆ ಇರಲಿ: ಫಾ| ಫೆಲಿಕ್ಸ್‌ ಡಿ’ಸೋಜಾ


Team Udayavani, Feb 27, 2022, 11:43 AM IST

ಮಕ್ಕಳ ನಡೆ ಎಂದಿಗೂ ಸಾಧನೆಯ ಕಡೆ ಇರಲಿ: ಫಾ| ಫೆಲಿಕ್ಸ್‌ ಡಿ’ಸೋಜಾ

ಮುಂಬಯಿ: ಆಧುನಿಕ ಬದುಕು ಹೊಸ ಕಲ್ಪನೆ ಮತ್ತು ತಂತ್ರಜ್ಞಾನದೊಂದಿಗೆ ಮುಂದುವರಿಯುತ್ತಿದೆ. ಇದಕ್ಕೆ ನಾವು ಯಾರನ್ನೂ ಹೊಣೆಯಾಗಿಸಿ ಆಪಾದನೆ ಮಾಡುವುದು ಸರಿಯಲ್ಲ. ನಮ್ಮ ನಡೆ ಬರೇ ಸಾಧನೆಯಕಡೆ ಇರಿಸಿ ಸಾಗಬೇಕು. ಯಶಸ್ವಿ ವ್ಯಕ್ತಿಗಳ ಹಿನ್ನೆಲೆಗಳನ್ನು ತಿಳಿದರೆ ಅವರು ಕಠಿನ ಪರಿಶ್ರಮದ ಮೂಲಕ ಸಾಧನೆಯ ಶಿಖರವನ್ನೇರಿರುವುದು ತಿಳಿಯಬಹುದು. ಅವರಂತೆಯೇ ನಾವೂ ಕನಸು ಕಾಣಬೇಕು. ಅದರ ನನಸಿಗೆ ಅಷ್ಟೇ ಪರಿಶ್ರಮ ಪಡಬೇಕು ಎಂದು ಸೈಂಟ್‌ ಆ್ಯಂಟೋನಿ ಚರ್ಚ್‌ ವಕೊಲಾ ಇದರ ಮುಖ್ಯ ಧರ್ಮಗುರು ರೆ| ಫಾ| ಫೆಲಿಕ್ಸ್‌ ಡಿ’ಸೋಜಾ ತಿಳಿಸಿದರು.

ಫೆ. 26ರಂದು ಪೂರ್ವಾಹ್ನ ಬಾಂದ್ರಾ ಪಶ್ಚಿಮದ ಸೈಂಟ್‌ ಆ್ಯಂಡ್ರೂಸ್‌ ಸಭಾಗೃಹದಲ್ಲಿ ಮೋಡೆಲ್‌ ಕೋ.ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ತನ್ನ ಷೇರುದಾರರ ಪ್ರತಿಭಾನ್ವಿತ ಮಕ್ಕಳಿಗಾಗಿ ಆಯೋಜಿಸಿದ್ದ 2019-20 ಮತ್ತು 2020-21ನೇ ಶೈಕ್ಷಣಿಕ ಸಾಲಿನ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರವನ್ನು ಪ್ರದಾನಿಸಿ ಶುಭಹಾರೈಸಿದರು. ಬಳಿಕ ಮಾತನಾಡಿದ ಅವರು, ಮೋಡೆಲ್‌ ಬ್ಯಾಂಕ್‌ ಒಂದು ಪ್ರಮುಖ ಸಹಕಾರಿ ಬ್ಯಾಂಕ್‌ ಆಗಿದ್ದು, ಇದು ವೃತ್ತಿಪರವಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಅಗ್ರ 3 ಸಹಕಾರಿ ಬ್ಯಾಂಕ್‌ಗಳಲ್ಲಿ ಇದು ಒಂದಾಗಿ ಗುರುತಿಸಿಕೊಂಡಿರುವುದು ಅಭಿನಂದನೀಯ. ಕೊರೊನಾ ಆಯ್ತು ಈಗ ಉಕ್ರೇನ್‌ ಯುದ್ಧ ಇವೆಲ್ಲವೂ ಜನಜೀವನವನ್ನು ಅಪಾಯದಲ್ಲಿರಿಸಿದೆ. ಜನರಲ್ಲಿ ಹಣವಿಲ್ಲ, ಆದರೆ ಶಿಕ್ಷಣಕ್ಕೆ ಪೂರ್ಣವಿರಾಮವಿಲ್ಲ. ಇವೆಲ್ಲವೂ ಸದ್ಯ ಕಾಡುವ ಬಹುದೊಡ್ಡ ಸವಾಲುಗಳಾಗಿವೆ. ಆದರೆ ನೀವು ಜೀವನದುದ್ದಕ್ಕೂ ಯಾರನ್ನೂ ದೂಷಿಸದೆ, ಇತರರ ಸಾಧನೆಗಳನ್ನು ಪ್ರಶಂಸಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲ್ಯೂ. ಡಿ’ಸೋಜಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾಯìಕ್ರಮದಲ್ಲಿ ಬ್ಯಾಂಕ್‌ನ ಸಂಸ್ಥಾಪಕಾಧ್ಯಕ್ಷ ಜೋನ್‌ ಡಿ’ಸಿಲ್ವಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪರಿಣತರಾಗಿ ಬೆಳೆಯಬೇಕು. ಆಗ ಸ್ವ-ಅಭಿವೃದ್ಧಿ ಮತ್ತು ಸಮಾಜದ ಬದಲಾವಣೆ ಸಾಧ್ಯ. ನಮ್ಮಲ್ಲಿನ ಮೇಧಾವಿತನವನ್ನು ಉದ್ಯೋಗಿತನಕ್ಕೆ ಮೀಸಲಾಗಿರಿಸದೆ ಸ್ವಉದ್ಯಮದತ್ತ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ನಾಗರಿಕ ಸೇವೆ, ರಕ್ಷಣಾ ಅಥವಾ ನ್ಯಾಯಾಂಗ ಸೇವೆಗಳ ಉನ್ನತ ಹುದ್ದೆಗಳನ್ನು ನಿರ್ವಹಿಸುವಲ್ಲಿ ಮುಂದಾಗಬೇಕು ಎಂದರು.

ಬ್ಯಾಂಕ್‌ನ ನಿರ್ದೇಶಕ ಥೋಮಸ್‌ ಡಿ.ಲೋಬೊ ಮಾತನಾಡಿ, ಶಿಕ್ಷಣದ ನಿಜವಾದ ಉದ್ದೇಶವು ಮನಸ್ಸನ್ನು ಪ್ರಫುಲ್ಲಗೊಳಿಸುವುದಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಆದರ್ಶ ವ್ಯಕ್ತಿಗಳ ತತ್ವಗಳನ್ನು ಅನುಸರಿಸಿಕೊಂಡು ಶಿಕ್ಷಣದಲ್ಲಿ ತೊಡಗಬೇಕು. ತಾನು ಬೆಳೆಯಬೇಕು, ಇನ್ನೊಬ್ಬರನ್ನು ಬೆಳೆಸಬೇಕು ಎಂಬ ಉದ್ದೇಶವನ್ನು ಅರಿಯಬೇಕು. ಶಿಕ್ಷಣವು ಕೇವಲ ಜೀವನ ಮುನ್ನಡೆಗೆ ಸಿದ್ಧತೆಯಲ್ಲ, ಬದಲಾಗಿ ಅದು ಭವಿಷ್ಯವಾಗಿರುತ್ತದೆ ಎಂಬುದನ್ನು  ಮಕ್ಕಳಿಗೆ ತಿಳಿಯಪಡಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.

ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಜೆ. ಸಿಕ್ವೇರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕ್‌ನ ನಿರ್ದೇಶಕರಾದ ಸಿಎ ಪೌಲ್‌ ನಝರೆತ್‌, ನ್ಯಾಯವಾದಿ ಪಿಯುಸ್‌ವಾಸ್‌, ಜೆರಾಲ್ಡ್‌ ಕರ್ಡೊàಜಾ, ಲಾರೇನ್ಸ್‌ ಡಿ’ಸೋಜಾ, ಬ್ಯಾಂಕ್‌ನ ಪ್ರಧಾನ ಪ್ರಬಂಧಕ, ಸಿಇಒ ಓಸ್ಡೆನ್‌ ಎ.ಫೂನ್ಸೆಕಾ, ಹೆಚ್ಚುವರಿ ಪ್ರಧಾನ ಪ್ರಬಂಧಕ ಝೆನೊನ್‌ ಡಿಕ್ರೂಜ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಷೇರುದಾರರು, ಹಿತೈಷಿಗಳು, ಗ್ರಾಹಕರು, ಬ್ಯಾಂಕ್‌ನ ಸಹಾಯಕ ಪ್ರಧಾನ ಪ್ರಬಂಧಕರಾದ ನರೇಶ್‌ ಠಾಕೂರ್‌, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಹಾಜರಿದ್ದರು. ವಿಲಿಯಂ ಜೆ. ಸಿಕ್ವೇರಾ ಸ್ವಾಗತಿಸಿದರು. ಓಸೆxನ್‌ ಎ.ಫೂನ್ಸೆಕಾ ಅತಿಥಿಗಳನ್ನು ಪರಿಚಯಿಸಿದರು. ಹಿರಿಯ ಪ್ರಬಂಧಕಿ ಬಿಯೆಟಾ ಕಾರ್ವಾಲೋ ಕಾರ್ಯಕ್ರಮ ನಿರೂಪಿಸಿದರು. ಮತ್ತು ಕ್ಲೈರ್‌ ಅನ್‌° ಡಿ’ಸೋಜಾ ಪುರಸ್ಕೃತ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು. ಲಾರೇನ್ಸ್‌ ಡಿ’ಸೋಜಾ ವಂದಿಸಿದರು.

ಬದುಕಿರುವವರೆಗೆ ಕಲಿಯಲು ಬಹಳಷ್ಟಿದೆ :

ಜೀವನ ಒಂದು ಪಾಠಶಾಲೆ ಇದ್ದಂತೆ. ಪ್ರತಿದಿನ ಅದು ನಮಗೆ ಹೊಸ ಪಾಠವನ್ನು ಕಲಿಸುತ್ತದೆ. ನಮ್ಮಲ್ಲಿ ಹೆಚ್ಚಿನವರು ಒಮ್ಮೆ ಪರೀಕ್ಷೆಯನ್ನು ಮುಗಿಸಿದರೆ ಜೀವನದಲ್ಲಿ ಎಲ್ಲವನ್ನು ಸಾಧಿಸಿದಂತೆ ಎಣಿಸುತ್ತಾರೆ. ಆದರೆ ನಮಗೆ ಬದುಕಿರುವವರೆಗೆ ಕಲಿಯಲು ಬಹಳಷ್ಟಿದೆ. ನಾನು ಬ್ಯಾಂಕ್‌ನ ಓರ್ವ ನಿರ್ದೇಶಕನಾಗಿ ಹೆಚ್ಚು ವ್ಯಾಪಾರದ ಅಂಕಿಅಂಶಗಳನ್ನು ಕಾಣಲು ಅಧಿಕ ಆಸಕ್ತಿಯನ್ನು ಹೊಂದಿರಬಹುದು. ಇದು ಭವಿಷ್ಯದಲ್ಲಿ ನಮ್ಮ ಸವಾಲುಗಳಿಗೆ ಉತ್ತರವಾಗಬಲ್ಲದು. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಮತ್ತು ಉತ್ತಮ ದಾರಿಯಲ್ಲಿ ನಡೆಯಲು ನಾವು ಪ್ರೇರೇಪಿಸಬೇಕು. ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಅವರನ್ನು ಬೆಳೆಸಬೇಕು. ಅದು ಬದುಕಿನ ವ್ಯವಸ್ಥೆಗೆ ಪೂರಕವಾಗಬಲ್ಲದು. ಈ ಕಾರ್ಯಕ್ರಮ ಮೋಡೆಲ್‌ ಬ್ಯಾಂಕ್‌ನ ಗಮನಾರ್ಹ ಉಪಕ್ರಮವಾಗಿದೆ. ತನ್ನ ಷೇರುದಾರರ ಮಕ್ಕಳ ಕಠಿನ ಪರಿಶ್ರಮವನ್ನು ಉತ್ತೇಜಿಸಲು ಮೋಡೆಲ್‌ ಬ್ಯಾಂಕ್‌ ಪ್ರತೀ ವರ್ಷ ಪುರಸ್ಕಾರ ಪ್ರದಾನ ಕಾರ್ಯಕ್ರಮ ಆಯೋಜಿಸುತ್ತದೆ. ಮಕ್ಕಳು ತಮ್ಮಲ್ಲಿನ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಮಕ್ಕಳ ಪೋಷಕರಿಗೂ ಇದು ತಮ್ಮ ಮಕ್ಕಳ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲು ಪ್ರೇರಣೆಯಾಗಿದೆ. ವಿಲಿಯಂ ಜೆ. ಸಿಕ್ವೇರಾ,  ಉಪ ಕಾರ್ಯಾಧ್ಯಕ್ಷ, ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕ್‌

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.