ಮನಪಾ ಚುನಾವಣೆ: ಚಿತ್ರನಟಿ ನಿಶಾ ಬಂಗೇರ ಬಿಜೆಪಿಯಿಂದ ಸ್ಪರ್ಧೆ
Team Udayavani, Feb 9, 2017, 4:16 PM IST
ಮುಂಬಯಿ: ಪ್ರಸ್ತುತ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಖ್ಯಾತ ಮರಾಠಿ ನಟಿ ನಿಶಾ ಸುರೇಶ್ ಬಂಗೇರ ಅವರು ಕಾಂದಿವಲಿ ಪೂರ್ವ ಠಾಕೂರ್ ವಿಲೇಜ್‌ನಿಂದ ವಾರ್ಡ್ ಕ್ರಮಾಂಕ – 25ರಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಕಳೆದ ಸುಮಾರು 18 ವರ್ಷಗಳಿಂದ ಮರಾಠಿ ಕಿರುತೆರೆ ಹಾಗೂ ಚಲನಚಿತ್ರಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಾ ಅಭಿಮಾನಿಗಳ ಮೆಚ್ಚುಗೆ ಪಡೆದ ಇವರು ಮರಾಠಿ ಅಭಿಮಾನಿಗಳಿಗೆ ನಿಶಾ ಪರುಳೇಕರ್ ಎಂದೇ ಪರಿಚಿತರು.
ಮಂಜೇಶ್ವರ ಮೂಲದ ಕಾಂದಿವಲಿಯ ಉದ್ಯಮಿ ಸುರೇಶ್ ಬಂಗೇರ ಅವರ ಪತ್ನಿಯಾಗಿರುವ ನಿಶಾ ಇವರು ತೀಯಾ ಸಮಾಜ ಮುಂಬಯಿ ಸಂಸ್ಥೆಯ ಸದಸ್ಯೆಯಾಗಿದ್ದಾರೆ. ಹಿಂದಿ ಹಾಗೂ ಮರಾಠಿ ಭಾಷೆಗಳ ಹಲವಾರು ಚಿತ್ರಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿದ ಇವರು ಇತ್ತೀಚೆಗೆ ಬಿಡುಗಡೆಗೊಂಡ ರಮಾಬಾಯಿ ಅಂಬೇ ಡ್ಕರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ. ತಾನು ಸ್ಪರ್ಧಿಸುತ್ತಿ ರುವ ಹಿಂದುಳಿದ ಪ್ರದೇಶದ ಜನರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಆ ಪ್ರದೇಶದ ಅಭಿವೃದ್ದಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುದರ ಮೂಲಕ ಜನ ಸಾಮಾನ್ಯರ ಸೇವೆ ಮಾಡುವುದಾಗಿ ನಿಶಾ ಬಂಗೇರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.