ಆಹಾರ್ ಹೊಟೇಲ್ ಉದ್ಯಮದ ಪ್ರತಿಷ್ಠೆಯ ಸಂಸ್ಥೆ
Team Udayavani, Dec 22, 2017, 12:37 PM IST
ಮುಂಬಯಿ: ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಸಂಸ್ಥೆಯ 38 ನೇ ವಾರ್ಷಿಕ ಮಹಾಸಭೆಯ ಸಂದರ್ಭದ ಬೆಳಗ್ಗೆ ಆಯೋಜಿಸಲಾಗಿದ್ದ ಆಹಾರೋ ದ್ಯಮ ವಸ್ತುಪ್ರದರ್ಶನಕ್ಕೆ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಚಾಲನೆ ನೀಡಿದರು.
ಗುರುವಾರ ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಸಂಘದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಆಹಾರ್ ಅಧ್ಯಕ್ಷ ಆದರ್ಶ್ ಬಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರದರ್ಶನ ಮಳಿಗೆಗಳಿಗೆ ಪದ್ಮನಾಭ ಎಸ್. ಪಯ್ಯಡೆ ಅವರು ಸಾಂಪ್ರದಾ ಯಿಕವಾಗಿ ತೆಂಗಿನಕಾಯಿ ಒಡೆದು, ಶ್ರೀ ವಿN°àಶ್ವರನಿಗೆ ಆರತಿಗೈದು, ರಿಬ್ಬನ್ ಬಿಡಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಸುಮಾರು ನಾಲ್ಕು ದಶಕಗಳಿಂದ ಅವಿರತವಾಗಿ ಸೇವಾ ನಿರತವಾಗಿಕೊಂಡಿರುವ ಆಹಾರ್ ಆಹಾರೋದ್ಯಮದ ಶಕ್ತಿ ಯಾಗಿ ಮುನ್ನಡೆಯುತ್ತಿರುವುದು ಅಭಿಮಾನದ ವಿಚಾರ. ಆಹಾರ್ ಹೊಟೇಲ್ ಉದ್ಯಮದ ಪ್ರತಿಷ್ಠೆಯ ಮತ್ತು ಪ್ರತಿಷ್ಠಿತ ಸಂಸ್ಥೆಯಾಗಿದೆ. ಜಾಗತೀಕರಣದ ಈ ಕಾಲದಲ್ಲಿ ಆಹಾರ್ ಬದಲಾವಣೆಗಳಿಗೆ ಸ್ಪಂದಿಸಿ ಮುನ್ನಡೆಸುವ ಅಗತ್ಯವಿದೆ.
ಆ ಮೂಲಕ ಸೇವೆಯು ಇನ್ನಷ್ಟು ಫಲಕಾರಿ ಆಗಬಲ್ಲದು. ಉದಯೋ ನ್ಮುಖ ಯುವ ಜನತೆಯಲ್ಲಿ ನಮ್ಮ ಉದ್ಯಮದ ಅರಿವು ಮೂಡಿಸಬೇಕು. ಹೊಟೇಲ್ ಉದ್ಯಮದ ನವ ವೈಜ್ಞಾನಿಕ ಮಾರ್ಪಾಡುಗಳನ್ನು ಪ್ರೋತ್ಸಾಹಿಸಬೇಕು. ನಮ್ಮ ಉದ್ಯಮವು ಹಲವಾರು ಸಮಸ್ಯೆ ಗಳನ್ನು ಎದುರಿಸುತ್ತಿದೆ ನಿಜ. ಇದಕ್ಕೆ ಅಧ್ಯಕ್ಷ ಆದರ್ಶ್ ಶೆಟ್ಟಿ ಸಾರಥ್ಯದ ಸಮಿತಿ ಅವಿರತವಾಗಿ ಶ್ರಮಿಸಿ ಪರಿಹಾರಗಳನ್ನು ಕಂಡು ಹಿಡಿಯುತ್ತಿರುವುದು ಪ್ರಶಂಸನೀಯ. ಮುಂದೆಯೂ ಹೊಟೇಲಿಗರ ಪರ ಈ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿ. ಆಹಾರ್ ಉದ್ಯಮಕ್ಕೆ ಬಂಟರ ಸಂಘದ ಸಹಯೋಗ ಸದಾವಿದೆ ಎಂದು ನುಡಿದರು.
ಹೊಟೇಲ್ ಉದ್ಯಮಕ್ಕೆ ಸಂಬಂಧಿತ ದೇಶ ವಿದೇಶಗಳ ವಿಭಿನ್ನ ಆರೋಗ್ಯ ದಾಯಕ ಆಹಾರೋದ್ಯಮ, ಪಾನೀಯ ಇನ್ನಿತರ ಪರಿಕರಗಳ ವಸ್ತು ಪ್ರದರ್ಶನದ ಮಳಿಗೆಯು ಎಲ್ಲರ ಆಕರ್ಷಿಸಿತು. ಮಧ್ಯಾಹ್ನ ನಡೆದ ಆಹಾರೋದ್ಯಮ ಪೂರಕ ವಿಚಾರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಿಐಪಿಎಲ್ ಸಂಸ್ಥೆಯ ನಿರ್ದೇಶಕ ರಂಜಿತ್ ಶೆಟ್ಟಿ ಅವರು ಬಯೊ ಎನಾರ್ಜಿ ಆ್ಯಂಡ್ ವೇಸ್ಟ್ ಮ್ಯಾನೇಜ್‌ಮೆಂಟ್ ವಿಚಾರವಾಗಿ ಮಾಹಿತಿ ನೀಡಿದರು.
ಉದ್ಯಮಗಳ ಅಧ್ಯಯನದಿಂದ ಧನಾತ್ಮಕ ಚಿಂತನೆ ಸಾಧ್ಯ. ಆದುದರಿಂದ ಸಾಮಾಜಿಕ ಚಿಂತನೆಯ ಸಂಘಟನೆಗಳು ಮಾನವ ಸಂಪನ್ಮೂಲವನ್ನು ವೃದ್ಧಿಸಿ ಜ್ಞಾನೋದಯದ ಅರಿವು ಪಡೆಯಬೇಕು. ವೇಸ್ಟೇಜ್ ಬರೇ ಹೊಟೇಲ್ ಉದ್ಯಮದ ಸಮಸ್ಯೆಯಲ್ಲ. ಇದು ಎಲ್ಲರ ಸಮಸ್ಯೆ. ಇದಕ್ಕೆ ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಬಹಳಷ್ಟು ಯೋಜನೆಗಳಿಗೆ ಇದನ್ನು ಅಳವಡಿಸಿದಾಗ ತ್ಯಾಜ್ಯ ನಿರ್ವಹಣೆಯಾಗಿ ಸ್ವಸ್ಥ ಸಮಾಜ ನಿರ್ವಹಣೆಯೂ ಸಾಧ್ಯವಾಗುವುದು ಎಂದು ರಂಜಿತ್ ಶೆಟ್ಟಿ ತಿಳಿಸಿದರು.
ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಶಶಿಧರ ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ವಿಶ್ವಪಾಲ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಜೆ. ಡಿ. ಶೆಟ್ಟಿ, ವಿವಿಧ ವಲಯಗಳ ಉಪಾಧ್ಯಕ್ಷರುಗಳಾದ ವಲಯ ಒಂದರ ಮಹೇಂದ್ರ ಎಸ್. ಕರ್ಕೇರ, ವಲಯ ಎರಡರ ಕೆ. ವಿ. ಶೆಟ್ಟಿ, ವಲಯ ಮೂರರ ವಿಜಯ ಕೆ. ಶೆಟ್ಟಿ, ವಲಯ ನಾಲ್ಕರ ಸುನಿಲ್ ಎಸ್. ಶೆಟ್ಟಿ, ವಲಯ ಐದರ ರವೀಂದ್ರನಾಥ್ ಎಲ್. ನೀರೆ, ವಲಯ ಆರರ ಅಮರ್ ಎಸ್. ಶೆಟ್ಟಿ, ವಲಯ ಏಳರ ರಾಜನ್ ಆರ್. ಶೆಟ್ಟಿ, ವಲಯ ಎಂಟರ ಜಗದೀಶ್ ಎಸ್. ಶೆಟ್ಟಿ, ವಲಯ ಒಂಬತ್ತರ ಕರುಣಾಕರ ಎಸ್. ಶೆಟ್ಟಿ, ವಲಯ ಹತ್ತರ ಪ್ರಭಾಕರ ಬಿ. ಶೆಟ್ಟಿ ಹಾಗೂ ಸಲಹಾ ಸಮಿತಿ, ಉಪ ಸಮಿತಿಗಳು, ಸದಸ್ಯರು, ಆಡಳಿತ ಸಮಿತಿ, ಮಾಜಿ ಅಧ್ಯಕ್ಷರುಗಳ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು. ಆಹಾರ್‌ನ ಅಧ್ಯಕ್ಷ ಆದರ್ಶ್ ಶೆಟ್ಟಿ ಸ್ವಾಗತಿಸಿದರು.
ಕಾರ್ಯನಿರ್ವಾಹಕ ಕಾರ್ಯ ದರ್ಶಿ ವಸಂತ್ ಕೆ. ಕಾರ್ಕಳ್ ಪ್ರಸ್ತಾವನೆಗೈದು ವಂದಿಸಿದರು. ಸದಸ್ಯ ಬಾಂಧವರು, ಹೊಟೇಲ್ ಉದ್ಯಮಿಗಳು, ವಿವಿಧ ಹೊಟೇಲ್ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಚಿತ್ರ- ವರದಿ:ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.