ಆಹಾರ್‌ನ 7ನೇ ಮಾಸಿಕ ಸಭೆ

Team Udayavani, Aug 7, 2018, 2:41 PM IST

0508mum51.jpg

ಮುಂಬಯಿ: ಆಹಾರ್‌ನ 7ನೇ ಮಾಸಿಕ ಸಭೆಯು ಜು. 30ರಂದು ಚಕಾಲ ಸಾಯಿ ಪ್ಯಾಲೇಸ್‌ ಹೊಟೇಲ್‌ನಲ್ಲಿ ಜರಗಿತು.

ಪ್ರಾಯೋಜಕ ವಲಯ 8ರ ಉಪಾಧ್ಯಕ್ಷ ಭುಜಂಗ ಶೆಟ್ಟಿ ಅವರ ಸ್ವಾಗತ ಭಾಷಣದೊಂದಿಗೆ ಸಭೆಯು ಪ್ರಾರಂಭಗೊಂಡಿತು. ಆಹಾರ್‌ನ ಅಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ ಮಾತನಾಡಿ, ಪ್ರತಿ ವರ್ಷ ಮಹಾನಗರ ಪಾಲಿಕೆ ಹೊಟೇಲಿಗರ ಅರ್ಜಿಯ ಮೇಲೆ ಮಾನ್ಸೂನ್‌ ಶೆಡ್‌ ಅನ್ನು ಹಾಕಲು ಪರವಾನಿಗೆಯನ್ನು ನೀಡುತ್ತಿತ್ತು. ಆದರೆ ಪ್ರಸಕ್ತ ವರ್ಷ ಪರವಾನಿಗೆಯನ್ನು ನೀಡದೆ ಮಾನ್ಸೂನ್‌ ಶೆಡ್‌ ಅನ್ನು ತೆರವುಗೊಳಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳು 48 ತಾಸುಗಳ ನೋಟಿಸ್‌ ನೀಡಿದ್ದರು. 

ಆಹಾರ್‌ನ ವಿವಿಧ ಅಧಿಕಾರಿಗಳು, ಉಪಾಯುಕ್ತ, ಆಯುಕ್ತರನ್ನು ಭೇಟಿ ಮಾಡಿ ತೆರವು ಮಾಡದಂತೆ ವಿನಂತಿ ಮಾಡಿತ್ತು. ಆದರೆ ಮಹಾನಗರ ಪಾಲಿಕೆ ಅದನ್ನು ತಿರಸ್ಕರಿಸಿದಾಗ ಯಾವುದೇ ಉಪಾಯವಿಲ್ಲದೆ  ಐಸಿಆರ್‌ಎ (ಡಬ್ಲ್ಯುಐ) ಮತ್ತು ಎನ್‌ಆರ್‌ಎಐನ ಸಹಕಾರದೊಂದಿಗೆ ಬಾಂಬೆ ಹೈಕೋರ್ಟ್‌ನಲ್ಲಿ  ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ ಮಹತ್ತರದ ನಿರ್ಣಯವನ್ನು ನೀಡಿ ಪರವಾನಿಗೆ ಇಲ್ಲದೆ ಗೈದ ಮಾನ್ಸೂನ್‌ ಶೆಡ್‌ಗಳನ್ನು ತೆರವುಗೊಳಿಸಿ, ಅನಂತರ ಹೊಟೇ ಲಿಗರು ಮಹಾನಗರ ಪಾಲಿಕೆಗೆ ತಮ್ಮ ವಾರ್ಡಿನಲ್ಲಿ ಅನುಮತಿಗೆ ಅರ್ಜಿ ಸಲ್ಲಿಸಬೇಕು. 14 ದಿನಗಳ ಒಳಗೆ ಮಹಾನಗರ ಪಾಲಿಕೆಯಿಂದ ಉತ್ತರ ಬಾರದಿದ್ದಲ್ಲಿ ಕೋರ್ಟಿಗೆ ಅರ್ಜಿ ಸಲ್ಲಿಸಬಹುದೆಂದು ಆದೇಶ ನೀಡಿತ್ತು. ಮಹಾನಗರ ಪಾಲಿಕೆ ಪರವಾನಿಗೆ ನೀಡದೆ ಶೆಡ್‌ಗಳನ್ನು ಬಲವಂತವಾಗಿ ತೆರವು ಮಾಡುತ್ತಿದೆ. ಶಾಸಕಿ ಮನಿಷಾ ಚೌಧರಿ ಅವರು ನಾಗಪುರದಲ್ಲಿ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಈ ವಿಷಯದಲ್ಲಿ ಮಾತನಾಡಿದಾಗ, ಮುಖ್ಯಮಂತ್ರಿ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಆದೇಶವನ್ನು ನೀಡುವುದಾಗಿ ತಿಳಿಸಿದರೂ ಈವರೆಗೆ ತೆರವು ಮಾಡುವ ಕೆಲಸ ಜಾರಿಯಲ್ಲಿದೆ. ಈ ಸಂಬಂಧ ಲೋಕಸಭಾ ಸದಸ್ಯ ಗೋಪಾಲ್‌ ಶೆಟ್ಟಿ ಅವರ ಸಹಕಾರದಿಂದ ಹಲವು ಮಾತುಕತೆಗಳು ಜರಗಿದ್ದು ಸದ್ಯವೇ ನಮಗೆ ಪರಿಹಾರ ಸಿಗುವ ಆಶಯವಿದೆ ಎಂದು ತಿಳಿಸಿದರು.

ಆಹಾರ್‌ನ ಸತತ ಪ್ರಯತ್ನ, ಮಾತುಕತೆ, ಪೇಪರ್‌ ಮಂಡಿಸುವಿ ಕೆಯ ಫಲ ಸ್ವರೂಪವಾಗಿ ಮುಂಬಯಿ ಅಗ್ನಿಶಾಮಕ ದಳದ ಹೊಸ ಕೋಡಿಫೈಡ್‌ ಅಗ್ನಿ ಸುರಕ್ಷೆ ನಿಯಮಾವಳಿಗಳಲ್ಲಿ ತಿದ್ದುಪಡಿ ಹಾಗೂ ಸರಳೀಕರಣವನ್ನು ಮಾಡಿದೆ. ಕಷ್ಟಕರ ಅಥವಾ ಸಾಧ್ಯವಿಲ್ಲದ ನಿಯಮಾವಳಿಗಳನ್ನು ಸರಳೀಕರಿಸಿ ಹೊಟೇಲಿಗರಿಗೆ ಪರಿಪಾಲಿಸಲು ಸಾಧ್ಯವಾಗುವಂತೆ ಮಾಡಲಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಸದ್ಯ ಮಹಾನಗರ ಪಾಲಿಕೆಯು ಯಾವ ರೀತಿಯ ಕಂಟೈನರ್‌ಗಳನ್ನೂ ಉಪಯೋಗಿಸಲು ಬಿಡುತ್ತಿಲ್ಲ ಮತ್ತು ಅದರ ಬದಲಿಗೆ ಪರ್ಯಾಯ ವಸ್ತುಗಳನ್ನೂ ಪರಿಚಯಿಸುತ್ತಿಲ್ಲ. ಈ ಸಂಬಂಧ ಆಹಾರ್‌ ಸಚಿವರು, ಮುಖ್ಯಮಂತ್ರಿ ಹಾಗೂ ಪರಿಸರ ಇಲಾಖೆಯಲ್ಲಿ ಮಾತುಕತೆಯನ್ನು ನಡೆಸಿದ್ದು ಸದ್ಯದಲ್ಲೇ ಸಮಾಧಾನಕರ ಫಲಿತಾಂಶ ಸಿಗಬಹುದೆಂದು ತಿಳಿಸಿದರು.

ಕೇಂದ್ರ ಸರಕಾರದ ಉದ್ಯೋಗ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ತ್ತೈಮಾಸಿಕ ಉದ್ಯೋಗ ಸರ್ವೆ ನಡೆಯುತ್ತಿದ್ದು ಸದಸ್ಯರು ಕೇವಲ ತಮ್ಮಲ್ಲಿರುವ ವಿವರಗಳನ್ನು ನೀಡಬಹುದೆಂದು ಅಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ ಸಭೆಗೆ ಹೇಳಿದರು.
ಸಭೆಯಲ್ಲಿ ಸಲಹೆಗಾರರಾದ ಚಂದ್ರಹಾಸ ಕೆ. ಶೆಟ್ಟಿ, ಆದರ್ಶ್‌ ಬಿ. ಶೆಟ್ಟಿ, ನಾರಾಯಣ್‌ ಆಳ್ವ ಹಾಗೂ ಸುಧಾಕರ ವೈ. ಶೆಟ್ಟಿ ಸಮಯೋಚಿತವಾಗಿ ತಮ್ಮ ಸಲಹೆ/ಸೂಚನೆಗಳನ್ನು ಸದಸ್ಯರಿಗೆ ನೀಡಿದರು.

ಈ ಸಂದರ್ಭದಲ್ಲಿ ನಿರಂಜನ್‌ ಶೆಟ್ಟಿ (ಮಹಾನಗರ ಪಾಲಿಕೆ ಉಪಸಮಿತಿ), ಅಕ್ಷಯ್‌ ಶೆಟ್ಟಿ (ಎಫ್‌ಎಸ್‌ಎಸ್‌ಎಐ ಉಪ ಸಮಿತಿ), ಹರಿಶ್ಚಂದ್ರ ಶೆಟ್ಟಿ (ಎಫ್‌ಎಸ್‌ಎಸ್‌ಎಐ ಉಪ ಸಮಿತಿ) ಹಾಗೂ ಮಹೇಶ್‌ ಶೆಟ್ಟಿ (ಪ್ರಮೋಶನ್‌ ಉಪಸಮಿತಿ) ಅವರು ತಮ್ಮ ಉಪಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಕೋಶಾಧಿಕಾರಿ ಜೆ. ಡಿ. ಶೆಟ್ಟಿ ಅವರು ಮಾತನಾಡಿ, ಝೋಮ್ಯಾಟೊ, ಸ್ವಿಗ್ಗಿ ಯಂತಹ ಸಂಸ್ಥೆಯಿಂದ ಜಿಆರ್‌ಒವೈ ಕಿಚನ್‌ನ ಉಪಯೋಗಿಸಿ ನಮ್ಮ ಉದ್ಯೋಗಕ್ಕೆ ಹಾನಿ ಮಾಡುತ್ತಿದೆ. ಇದರ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಎಂದು ತಿಳಿಸಿದರು.  ಕೆ.ವಿ. ಶೆಟ್ಟಿ ಅವರು ಮಾನ್ಸೂನ್‌ ಶೆಡ್‌ ವಿಷಯದಲ್ಲಿ ಜರಗಿದ 3 ಸಭೆಗಳ ಬಗ್ಗೆ ವಿವರಿಸಿದರು.

ಹೊಟೇಲ್‌ ಸಾಯಿ ಪ್ಯಾಲೆಸ್‌ನ ಮಾಲಕ ರವಿ ಶೆಟ್ಟಿ ಅವರನ್ನು ಸಹಕಾರಕ್ಕಾಗಿ ಸಮ್ಮಾನಿಸಲಾಯಿತು. ಸಭೆಯ ಪ್ರಾಯೋಜಕ ವಲಯ 8ರ ಅಧ್ಯಕ್ಷ ಭುಜಂಗ ಶೆಟ್ಟಿ ಅವರನ್ನು ಅವರ ವಲಯದ ಸದಸ್ಯರು ಸಮ್ಮಾನಿಸಿದರು.

ಉಪಾಧ್ಯಕ್ಷರಾದ ಮಹೀಂದ್ರ ಎಸ್‌. ಕರ್ಕೇರ (ವಲಯ-1), ಕೆ.ವಿ. ಶೆಟ್ಟಿ (ವಲಯ -2), ವಿಜಯ್‌ ಕೆ. ಶೆಟ್ಟಿ (ವಲಯ -3), ಸುರೇಶ್‌ ಎಸ್‌. ಶೆಟ್ಟಿ (ವಲಯ -4), ಅಮರ್‌ ಶೆಟ್ಟಿ (ವಲಯ -6), ವಿಜಯ್‌ ಎಸ್‌. ಶೆಟ್ಟಿ (ವಲಯ – 5), ರಾಜನ್‌ ಶೆಟ್ಟಿ (ವಲಯ -7), ಕರುಣಾಕರ್‌ ಶೆಟ್ಟಿ (ವಲಯ – 9), ಭುಜಂಗ ಶೆಟ್ಟಿ (ವಲಯ -8) ಹಾಗೂ ಪ್ರಭಾಕರ ಶೆಟ್ಟಿ (ವಲಯ -10) ಅವರು ತಮ್ಮ ವಲಯದ ಕಾರ್ಯಚಟುವಟಿಕೆ ಬಗ್ಗೆ ವಿವರಿಸಿದರು.

ಗೌರವ ಜತೆ ಕಾರ್ಯದರ್ಶಿ ಸಮಿತ್‌ ಅರಸರು ಪ್ರದರ್ಶನ ಮಳಿಗೆಯ 13 ವ್ಯಾಪಾರಿಗಳನ್ನು ಪರಿಚಯಿಸಿ ಸಮ್ಮಾನಿಸಿದರು. ಗೌ.ಪ್ರ. ಕಾರ್ಯದರ್ಶಿ ವಿಶ್ವಪಾಲ್‌ ಶೆಟ್ಟಿ ಅವರು ವಂದಿಸಿದರು. 

ಟಾಪ್ ನ್ಯೂಸ್

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.