ಬಂಟ ನಾಯಕರಲ್ಲಿ ಐಕಳ ಸರ್ವಶ್ರೇಷ್ಠರು: ಎ. ಸದಾನಂದ ಶೆಟ್ಟಿ
Team Udayavani, Mar 19, 2019, 3:18 PM IST
ಮುಂಬಯಿ: ಬಂಟ ರಲ್ಲಿ ಎಲ್ಲರೂ ನಾಯಕರೆ ಆಗಿದ್ದು, ಇವರಿಗೆಲ್ಲ ಐಕಳ ಹರೀಶ್ ಶೆಟ್ಟಿಯವರು ಸರ್ವಶ್ರೇಷ್ಠರು ಎನ್ನುವುದನ್ನು ಅವರು ಸಾಬೀತು ಪಡಿಸಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ತನ್ನ ನಾಯಕತ್ವ ಏನೆಂಬುವುದನ್ನು ಜಗತ್ತಿಗೆ ತೋರ್ಪಡಿಸಿದ್ದಾರೆ. ಅವರ ಸೇವಾ ವೈಖರಿ ಏನೆಂದು ಸೇವಾ ಸಾಕ್ಷ Âಚಿತ್ರದ ಮೂಲಕ ತಿಳಿದು ಆಶ್ಚರ್ಯ ಚಕಿತನಾಗಿ ನನ್ನ ಕಣ್ಣೊರೆಸುವಂತಾಯಿತು. ಸರ್ವ ಸಂಪನ್ನರಾದ ಐಕಳ ಹರೀಶ್ ಸರ್ವ ರನ್ನೂ ಸಮಾನರಾಗಿಸಿ ಒಗ್ಗಟ್ಟಿನಿಂದ ಸಮಾಜವನ್ನು ಮುನ್ನಡೆಸಲು ಶ್ರೇಷ್ಠ ವ್ಯಕ್ತಿಯಾಗಿದ್ದು, ಸಾಂಘಿಕವಾಗಿ ಮುನ್ನಡೆದರೆ ಸಫಲತೆಯ ಸಮಬಾಳು ಪ್ರಾಪ್ತಿ ಅನ್ನುವ ಸಂದೇಶವನ್ನು ಇವರು ಜಗತ್ತಿಗೆ ನೀಡಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಮಾಜಿ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ತಿಳಿಸಿದರು.
ಮಾ. 17 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ವಿಶ್ವ ಬಂಟರ ಸಮಾಗಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದ ನೂತನ ಸಮಿತಿಗೆ ಶುಭಹಾರೈಸಿದರು.
ಸಕ್ರಿಯ ವ್ಯಕ್ತಿಗಳು ಆಯ್ಕೆ: ಪದ್ಮನಾಭ ಎಸ್. ಪಯ್ಯಡೆ
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸದ್ಯ ಈ ಫೆಡರೇಶನ್‌ಗೆ ಬಂಟ್ಸ್ ಸಂಘ ಮುಂಬಯಿಯ ಮೂವರು ಸಕ್ರಿಯ ವ್ಯಕ್ತಿಗಳು ಆಯ್ಕೆ ಆಗಿರುವುದು ಅಭಿನಂದನೀಯ. ಐಕಳ ಹರೀಶ್ ಫೆಡರೇಶನ್‌ನ ಅಧ್ಯಕ್ಷರಾಗಿ ಅಗ್ರಗಣ್ಯರೆಣಿಸಿ ನಮ್ಮ ಸಂಸ್ಥೆಯ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿರುವುದು ಸ್ತುತ್ಯರ್ಹ. ಆ ಮೂಲಕ ನಿರ್ಜೀವವಾಗಿದ್ದ ಫೆಡರೇಶನ್ ಸದ್ಯ ಪುನರ್ಜನ್ಮ ಪಡೆದು ಸೇವೆ ನಿರತವಾಗಿದೆ. ಬಂಟರು ಜಾಗತೀಕವಾಗಿ ಬೆಳೆದಿದ್ದು, ಅವರೆಲ್ಲರ ಸೇವೆಗೆ ಈ ಫೆಡರೇಶನ್‌ಅಣಿಗೊಂಡು ಸಮಾಜವನ್ನು ಇನ್ನಷ್ಟು ಶ್ರೀಮಂತಗೊಳಿಸುವಂತಾಗಲಿ ಎಂದು ಹೇಳಿದರು.
ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಆಗ್ಯಾìನಿಕ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಫೆಡರೇಶನ್‌ನ ನಿರ್ದೇಶಕ ತೋನ್ಸೆ ಆನಂದ ಎಂ. ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ, ಎಂಆರ್‌ಜಿ ಸಮೂಹ ಬೆಂಗಳೂರು ಕಾರ್ಯಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಬಂಟ್ಸ್ ಫೆಡರೇಶನ್‌ನ ಗೌ| ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ವಾಣಿ ವಿ. ಆಳ್ವ, ಗೌ| ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಜೊತೆ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ, ಫೆಡರೇಶನ್‌ನ ಲೆಕ್ಕಪರಿಶೋಧಕ ಹಾಗೂ ಚುನವಣಾ ಧಿಕಾರಿ ನ್ಯಾಯವಾದಿ ಕೆ. ಪ್ರಥ್ವಿರಾಜ್ ರೈ, ಸತೀಶ್ ಅಡಪ ಸಂಕಬೈಲ್, ಉಳೂ¤ರು ಮೋಹನ್‌ದಾಸ್ ಶೆಟ್ಟಿ ವೇದಿಕೆಯಲ್ಲಿದ್ದರು.
ಬಂಟರ ಸಂಘ ಮುಂಬಯಿ ಮಹಿಳಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಬೋಂಬೆ ಬಂಟ್ಸ್ ಅಸೋಶಿಯೇಶನ್ ಅಧ್ಯಕ್ಷ ಸುಭಾಷ್ ಬಿ. ಶೆಟ್ಟಿ, ಬಂಟ್ಸ್ ಸಂಘ ಬೆಂಗಳೂರು ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಬಂಟ್ಸ್ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲಾಬೆಟ್ಟು, ಮೀರಾ-ಡಹಾಣು ಬಂಟ್ಸ್ ಗೌರವಾಧ್ಯಕ್ಷ ಡಾ| ಶಂಕರ್ ಶೆಟ್ಟಿ ವಿರಾರ್, ಬಂಟ್ಸ್ ಸಂಘ ಬೆಳ್ತಂಗಡಿ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ, ಅಹ್ಮದಾಬಾದ್ ಬಂಟ್ಸ್‌ನ ಅಧ್ಯಕ್ಷ ರಿತೇಶ್ ಹೆಗ್ಡೆ, ಬಂಟ್ಸ್ ಯುವ ವಿಭಾಗದ ದೇವಿಚರಣ್ ಶೆಟ್ಟಿ, ಥಾಣೆ ಬಂಟ್ಸ್‌ನ ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಬಂಟರ ಸಂಘ ಕುಂದಾಪುರ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬಂಟ್ಸ್ ಸಂಘ ಗುರುಪುರ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ, ಬಂಟ್ಸ್ ಸಂಘ ಪಿಂಪ್ರಿ-ಚಿಂಚಾÌಡ್ ಅಧ್ಯಕ್ಷ ವಿಜಯ ಶೆಟ್ಟಿ, ಬಂಟ್ಸ್ ಸಂಘ ಹಾವೇಲಿ ಪುಣೆ ಅಧ್ಯಕ್ಷ ಆನಂದ ಶೆಟ್ಟಿ, ಜವಾಬ್ ಅಧ್ಯಕ್ಷ ಜಯ ಪ್ರಕಾಶ್ ಶೆಟ್ಟಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಪ್ರಕಾಶ್‌ಚಂದ್ರ ಶೆಟ್ಟಿ ಹುಂತ್ರಿಕೆ, ಬಂಟ್ಸ್ ಸಂಘ ದೆಹಲಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಸಿಎ ದಯಾಕಿರಣ್ ಶೆಟ್ಟಿ, ಮನೋಜ್ ಶೆಟ್ಟಿr ತೋನ್ಸೆ, ಬಂಟ್ಸ್ ಸಂಘ ಮುಂಬಯಿ ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರಾದ ಡಾ| ಆರ್. ಕೆ. ಶೆಟ್ಟಿ, ನಲ್ಯಗುತ್ತು ಪ್ರಕಾಶ್ ಶೆಟ್ಟಿ, ರವೀಂದ್ರ ಶೆಟ್ಟಿ, ಚಂದ್ರಶೇಖರ್ ರೈ, ಸತೀಶ್ ಎನ್. ಶೆಟ್ಟಿ, ಕರುಣಾಕರ ಶೆಟ್ಟಿ ಕಲ್ಲಡ್ಕ, ಚಂದ್ರಶೇಖರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಜಯಂತ್ ಪಕ್ಕಳ, ಕಾರ್ಯಕ್ರಮ ಸಂಯೋಜಕರಾದ ಡಾ| ಪ್ರಭಾಕರ ಶೆಟ್ಟಿ ಬೋಳ, ರತ್ನಾಕರ ಶೆಟ್ಟಿ ಮುಂಡ್ಕೂರು, ಇಂದ್ರಾಳಿ ದಿವಾಕರ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು.
ಸಾಮರಸ್ಯತ್ವದ ಬದುಕಿಗೆ ಪ್ರೇರಕರು
ವಿಶ್ವ ಬಂಟ್ಸ್ ಫೆಡರೇಶನ್‌ನ ಗೌ| ಕಾರ್ಯ ದರ್ಶಿ ವಿಜಯ ಪ್ರಸಾದ್ ಆಳ್ವ ಮಾತನಾಡಿ, ಸೇವಾ ಸಂತೃಪ್ತನಾದ ನಾನು ಫೆಡರೇಶನ್‌ನಿಂದ ನಿರ್ಗಮನದ ಸಂಭ್ರಮ ಮರೆಯಲು ಅಸಾಧ್ಯ. ಕಾನೂನಾತ್ಮಕವಾಗಿ ಮುನ್ನಡೆದಾಗ ಬರುವ ಜನರು ಅರ್ಹರಾಗಿ ಬರುತ್ತಾರೆ. ಇದನ್ನು ಐಕಳ ತೋರಿಸಿ ಮಾದರಿಯಾಗಿದ್ದಾರೆ. ಬಂಟರು ಸ್ವಸಾಮರ್ಥ್ಯವುಳ್ಳ ಸಾಧಕರಾಗಿದ್ದು, ಸಾಮರಸ್ಯತ್ವದ ಬದುಕಿಗೆ ಪ್ರೇರಕರು. ಆದರೆ ಬಂಟರು ಬರೀ ಭೂಮಿಗೆ ಅಂಟಿಕೊಂಡು ತಮ್ಮೊಳಗಿನ ಅಹಂನಿಂದ ಬಡವರೆನಿಸಿದ್ದಾರೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಸಮುದಾಯದ ದೂರದೃಷ್ಠಿವುಳ್ಳ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಫೆಡರೇಶನ್ ಮುಖೇನ ಸಾಧ್ಯ ಎಂದರು.
ಐಕಳ ಅಧಿಕಾರ ಪರ್ವ ಎಂದೂ ಬಂಜರಾಗದು
ವಿಶ್ವ ಬಂಟರ ಸಂಘಗಳ ಒಕ್ಕೂಟದ ಗೌ| ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಮಾತನಾಡಿ, ನನ್ನ ಬಹುತೇಕ ಜೀವನ ಬಂಟ ಸಮಾಜದವರ ನಡುವೆ ಕಳೆದಿದ್ದೇನೆ. ಅದರಲ್ಲೂ ಸುಮಾರು ಒಂದು ದಶಕದಿಂದ ಈ ಫೆಡರೇಶನ್‌ನಲ್ಲಿ ವ್ಯಯಿಸಿ ಸಮಾಜ ಸೇವೆಗಾಗಿ ಬಾಳಿದ್ದೇನೆ. ಈ ಗೌರವಕ್ಕೆ ಭಾಜನರಾಗಿ ಇಂದು ನನ್ನ ಸೇವಾ ಬದುಕು ಫಲಪ್ರದವಾಯಿತು. ಬಂಟ ಸಮಾಜದ ಭೀಷ್ಮ ಐಕಳ ಹರೀಶ್ ಓರ್ವ ನುಡಿದಂತೆ ನಡೆಯುವ ನಿಸ್ಸೀಮ ನಾಯಕ. ಅವರ ಅಧಿಕಾರ ಪರ್ವ ಎಂದೂ ಬಂಜರಾಗದು. ಐಕಳರ ಸಾರಥ್ಯದಿಂದ ಬಡತನ ಮುಕ್ತ ಬಂಟ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಗೌತಮ್ ಎಸ್. ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ದಿವಾಕರ ಶೆಟ್ಟಿ ಕುರ್ಲಾ, ರವೀಂದ್ರನಾಥ ಎಂ.ಭಂಡಾರಿ, ವೇಣುಗೋಪಾಲ್ ಶೆಟ್ಟಿ, ದಿವಾಕರ ಶೆಟ್ಟಿ ಅಡ್ಯಾರ್, ಪ್ರವೀಣ್ ಶೆಟ್ಟಿ ವಾರಂಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಂಟ ಸಮುದಾಯದ ಸಾಧಕರಾದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಒಕ್ಕೂಟದ ನಿರ್ದೇಶಕರಾದ ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಕೈಗಾರಿಕೋದ್ಯಮಿ ಉದ್ಯಮಿ ತೋನ್ಸೆ ಆನಂದ ಎಂ.ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ ಹಾಗೂ ವಿಜಯಪ್ರಸಾದ್ ಆಳ್ವ ಮತ್ತು ವಾಣಿ ವಿ. ಆಳ್ವ ದಂಪತಿ, ಕೊಲ್ಲಾಡಿ ಬಾಲಕೃಷ್ಣ ರೈ, ಡಾ| ಶಂಕರ್ ಬಿ. ಶೆಟ್ಟಿ ವಿರಾರ್, ಡಾ| ಕರ್ನೂರು ಮೋಹನ್ ರೈ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಅತಿಥಿಗಳು ಸಮ್ಮಾನಿಸಿ ಅಭಿನಂದಿಸಿದರು.
ವೀಣಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕರ್ನಿರೆ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದು ಫೆಡರೇಶನ್‌ನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಬಂಟರವಾಣಿ ಮಾಸಿಕದ ಗೌರವ ಸಂಪಾದಕ ಅಶೋಕ್ ಪಕ್ಕಳ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜಯಕರ್ ಶೆಟ್ಟಿ ಇಂದ್ರಾಳಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬಂಟ ಸಮುದಾಯದ ವಿವಿಧ ಸಂಸ್ಥೆಗಳಿಂದ ನೃತ್ಯ ವೈವಿಧ್ಯ, ವಿಠಲ್ ನಾಯ್ಕ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.
ಮುಂಬಯಿಗರು ಅಂದರೆ ಹಣವಂತರು ಎಂದು ತವರೂರ ಜನತೆಯ ಭಾವನೆ. ಆದರೆ ನಮ್ಮವರ ಹಗಲಿರುಳ ಶ್ರಮ ಅವರಿಗೆ ತಿಳಿದಿಲ್ಲ. ನಮ್ಮ ಕಷ್ಟ-ನಷ್ಟ, ಪರಿಶ್ರಮದ ಜೀವನನ್ನು ಅವರು ಅರ್ಥೈಸಿಕೊಳ್ಳುವವರಲ್ಲ. ಇದನ್ನು ಇನ್ನಾದರೂ ಬಂಟರು ತಿಳಿದು ಸಂಪಾದನೆಯ ಗಳಿಕೆಯನ್ನು ಉತ್ತಮ ಉದ್ದೇಶಗಳಿಗೆ ಮಾತ್ರ ವ್ಯಯಿಸಿ ಪುಣ್ಯಕ್ಕೆ ಭಾಜನರಾಗಬೇಕು. ನಾನು ಒಕ್ಕೂಟದ ಅಧ್ಯಕ್ಷನಾಗಿ ಒಂದು ವರ್ಷದಲ್ಲಿ ಸೇವಾ ನಿರತನಾಗಿ ನಮ್ಮವರ ಬದುಕಿನ ಸ್ಥಿತಿಯನ್ನು ಕಂಡು ಅವರ ಜೀವನವನ್ನು ಅರಿತು ಸ್ವಹಸ್ತಗಳಿಂದ ಕಣ್ಣೀರು ಒರೆಸುತ್ತಾ ಅವರಿಗೆ ಆಸರೆಯಾಗುವಲ್ಲಿ ನಿಜಾರ್ಥದ ಸೇವೆಯನ್ನು ಕಂಡುಕೊಂಡಿದ್ದೇನೆ. ಅನೇಕ ದಶಕಗಳಿಂದ ಸಮಾಜ ಸೇವೆಯಲ್ಲಿ ನಿರತನಾಗಿದ್ದು ಅದು ಶೋಕಿಯಾಗಿತ್ತೇ ಎನ್ನುವ ಅನುಮಾನ ಇದೀಗ ನನ್ನನ್ನು ಕಾಡುತ್ತಿದೆ. ನಾವು ದೇವಸ್ಥಾನಗಳಿಗೆ ಕೋಟಿ-ಗಟ್ಟಲೆ ಹಣ ಸುರಿಯುತ್ತೇವೆ. ಆದರೆ ನಮ್ಮಲ್ಲಿನ ಜನತೆಯ ಬಡತನ ನೀಗಿಸುವತ್ತ ಚಿಂತಿಸುವುದಿಲ್ಲ. ಇನ್ನಾದರೂ ಸ್ವಸಮಾಜದ ಬಡತನ ತಿಳಿದು ಅಭಯ ಹಸ್ತ ನೀಡಿ ಪುಣ್ಯಗಳಿಸುವ ಕಾಯಕದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು .
– ಐಕಳ ಹರೀಶ್ ಶೆಟ್ಟಿ , ಅಧ್ಯಕ್ಷರು, ವಿಶ್ವ ಬಂಟರ ಸಂಘಗಳ ಒಕ್ಕೂಟ
ಪರಶುರಾಮ ದೇವರ ಕೊಡಲಿಗೆ ಕಡಲು ಕೊಟ್ಟ ನಾಡು ಅದೇ ತುಳುನಾಡು. ಇಂತಹ ಪುಣ್ಯ ನಾಡಲ್ಲಿ ನಾವು ಇಲ್ಲಿ ಬಂಟರಾಗಿ ಹುಟ್ಟಿದ್ದು ನಮ್ಮೆಲ್ಲರ ಸೌಭಾಗ್ಯ. ಬಂಟರು ಎಲ್ಲಾ ಕ್ಷೇತ್ರಗಳಲ್ಲೂ ಸಾಧಕರೆನಿಸಿದವರು. ಇಂತಹ ಸಮುದಾಯದ ಜಾಗತಿಕ ಸಂಸ್ಥೆಯ ಚುಕ್ಕಾಣಿ ಹಿಡಿದ ಐಕಳರಿಗೆ ಫೆಡರೇಶನ್ ಮೂಲಕ ನಾವು ಬಹುದೊಡ್ಡ ಜವಾಬ್ದಾರಿ ನೀಡಿದೆ. ಇಡೀ ಸಮಾಜ ನಮಗೆ ಬಹಳ ಕೊಟ್ಟಿದ್ದು ನಾವೂ ಸಮಾಜಕ್ಕೇನಾದರೂ ಕೊಟ್ಟು ಸಮಾಜದ ಋಣ ಪೂರೈಸುವ. ಬಂಟ ಸಮಾಜ ನಮಗೆ ಬಹಳಷ್ಟು ನೀಡಿದ್ದರೂ ನಾವು ನಮ್ಮ ಸಮಾಜಕ್ಕೆ ನೀಡಿದ್ದು ತುಂಬಾ ಕಡಿಮೆ. ಫೆಡರೇಶನ್‌ನಿಂದ ನಮ್ಮೆಲ್ಲರಲ್ಲೂ ಬಹಳಷ್ಟು ನಿರೀಕ್ಷೆ ಅಪೇಕ್ಷೆ ಬಹಳಷ್ಟಿದೆ. ಇದನ್ನು ಈಡೇರಿಸುವ ಭರವಸೆ ನಮಗಿದೆ .
– ಕೆ. ಪ್ರಕಾಶ್ ಶೆಟ್ಟಿ , ಕಾರ್ಯಾಧ್ಯಕ್ಷರು, ಎಂಆರ್‌ಜಿ ಸಮೂಹ ಬೆಂಗಳೂರು
ಸ್ವಸ್ಥ Â ಸಮಾಜದ ಮುನ್ನಡೆಗೆ ಓರ್ವ ಸಮರ್ಥ ನಾಯಕನ ಅಗತ್ಯವಿದೆ. ಹೇಗೆ ದೇಶಕ್ಕೆ ಒಳ್ಳೆಯ ಪ್ರಧಾನಿ, ಪ್ರಾಂತ್ಯಕ್ಕೆ ದಕ್ಷ ರಾಜ ಇರಬೇಕೋ ಅದರಂತೆ ಸಮುದಾಯದ ಸರ್ವೋನ್ನತಿಗೆ ದಿಟ್ಟ ಧುರೀಣ ಅಗತ್ಯವಾಗಿರಬೇಕು. ನಾನು ಕಂಡಂತೆ ಬಂಟ ಸಮುದಾಯಕ್ಕೆ ಐಕಳರು ವೀರ ಇದ್ದಂತೆ. ಸಮುದಾಯದ ಅಧ್ಯಯನ ನಡೆಸಿ ಆಶಕ್ತ ಬಂಧುಗಳ ಕಣ್ಣೀರು ಒರೆಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ನಮ್ಮೆಲ್ಲರ ಭಾಗ್ಯ. ಅವರೊಂದಿಗೆ ಶ್ರಮಿಸುವ ಕರ್ನಿರೆ ಅವರೂ ದಾನ ಕರ್ಣರಾಗಿ ಸಮಾಜದ ಕಳಕಳಿಯನ್ನು ತಿಳಿದು ಮುನ್ನಡೆಯುತ್ತಿದ್ದಾರೆ. ಇದನ್ನೆಲ್ಲಾ ಅವರು ಅವರ ಮನೆಗಾಗಿ ಅಲ್ಲ ಬಂಟ ಸಮಾಜಕ್ಕಾಗಿ ಮಾಡುತ್ತಿದ್ದಾರೆ ಅನ್ನುವ ಕನಿಷ್ಠ ಮನೋಭಾವ ನಮ್ಮಲ್ಲಿರಬೇಕು.
– ಆನಂದ ಶೆಟ್ಟಿ , ಕಾರ್ಯಾಧ್ಯಕ್ಷರು : ಆಗ್ಯಾìನಿಕ್ ಇಂಡಸ್ಟಿÅàಸ್ ಲಿಮಿಟೆಡ್
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.