ಅಜೆಕಾರು ಕಲಾಭಿಮಾನಿ ಬಳಗ: ತಾಳಮದ್ದಳೆಗೆ ಚಾಲನೆ
Team Udayavani, Jul 15, 2018, 5:38 PM IST
ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ವಾರ್ಷಿಕ ಸರಣಿ ತಾಳಮದ್ದಳೆಯು ಜು. 14 ರಂದು ಚಾಲನೆಗೊಂಡಿತು. ಅಪರಾಹ್ನ 4 ರಿಂದ ಕಾಂಜೂರ್‌ಮಾರ್ಗ ಪೂರ್ವದ ಶ್ರೀ ಅಂಬಿಕಾ ಮಂದಿರದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಅಂಬಿಕಾ ಮಂದಿರದ ಶ್ರೀ ಅನಂತ ಭಟ್ ಆಶೀರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಮಾನಸ ಮುಂಬಯಿ ಅಧ್ಯಕ್ಷ ಶೇಖರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಅಂಬಿಕಾ ಮಂದಿರದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ, ಗುರುದೇವಾ ಸೇವಾ ಬಳಗ ಥಾಣೆ ಘಟಕದ ಅಧ್ಯಕ್ಷ ಗುಣಪಾಲ್ ಎಸ್. ಶೆಟ್ಟಿ, ಶ್ರೀ ಅಂಬಿಕಾ ಮಂದಿರದ ಅಧ್ಯಕ್ಷ ಶಂಕರ ಪೂಜಾರಿ, ಕರ್ನಾಟಕ ಬ್ಯಾಂಕ್ ಮುಲುಂಡ್ ಶಾಖೆಯ ಮ್ಯಾನೇಜರ್ ನಾಗೇಂದ್ರ ಎನ್. ಎಸ್., ಶ್ರೀ ಅಂಬಿಕಾ ಮಂದಿರದ ಉಪ ಕಾರ್ಯಾಧ್ಯಕ್ಷ ಸುಂದರ ಎಂ. ಶೆಟ್ಟಿ, ಕಾರ್ಯದರ್ಶಿ ಶೇಖರ್ ಶೆಟ್ಟಿಗಾರ್, ಜನಪ್ರಿಯ ಯಕ್ಷಗಾನ ಮಂಡಳಿ ಕುರ್ಲಾ ಅಧ್ಯಕ್ಷ ರವೀಂದ್ರ ಪೈ ಅವರು ಪಾಲ್ಗೊಂಡಿದ್ದರು.
ಉದ್ಘಾಟನ ಸಮಾರಂಭದ ವೇದಿಕೆಯಲ್ಲಿ ಅಜೆಕಾರು ಕಲಾಭಿ ಮಾನಿ ಬಳಗದ ಸಂಸ್ಥಾಪಕಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಊರಿನ ಪ್ರಸಿದ್ಧ ಕಲಾವಿದರುಗಳಿಂದ ಭೀಷ್ಮ ವಿಜಯ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕು| ಕಾವ್ಯಶ್ರೀ ಅಜೇರು, ಚೆಂಡೆಯಲ್ಲಿ ಪ್ರಶಾಂತ್ ವಗೆನಾಡು, ಮದ್ದಳೆಯಲ್ಲಿ ಶ್ರೀಪತಿ ನಾಯಕ್ ಅಜೇರು, ಅರ್ಥದಾರಿಗಳಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಹರೀಶ್ ಭಟ್ ಬಳಂತಿಮೊಗರು, ಶ್ಯಾಮ್ ಭಟ್ ಪಕಳಕುಂಜ, ಅವಿನಾಶ್ ಶೆಟ್ಟಿ ಉಬರಡ್ಕ ಇವರು ಪಾಲ್ಗೊಂಡಿದ್ದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ದಿನೇಶ್ ಶೆಟ್ಟಿ ವಿಕ್ರೋಲಿ ಸಹಕರಿಸಿ ದರು. ಕಾಂಜೂರ್‌ಮಾರ್ಗ ಪೂರ್ವದ ಶ್ರೀ ಅಂಬಿಕಾ ಮಂದಿರದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಕಲಾಭಿಮಾನಿಗಳು, ತುಳು- ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಜು. 21 ರವರೆಗೆ ನಗರ ಮತ್ತು ಉಪನಗರಗಳ ವಿವಿಧೆಡೆ ಗಳಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಜು. 15 ರಂದು ಬೊರಿವಲಿ ಪಶ್ಚಿಮದ ಜಯರಾಜ್ ನಗರದ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಅಪರಾಹ್ನ 3.30 ರಿಂದ ಶ್ರೀ ರಾಮಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಳೆ ನೆರವೇರಲಿದೆ.
ಚಿತ್ರ-ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.