ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ 20ನೇ ವಾರ್ಷಿಕ ಮಹಾಸಭೆ


Team Udayavani, Aug 8, 2017, 3:11 PM IST

5444.jpg

ಮುಂಬಯಿ: ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ  ಇದರ 20ನೇ ವಾರ್ಷಿಕ ಮಹಾ ಸಭೆಯು ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಆ. 6ರಂದು ಜರಗಿತು.

ಸಂಘದ ಅಧ್ಯಕ್ಷ ಬಿ. ಮುನಿರಾಜ ಅಜಿಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ನಮ್ಮ ಹಿರಿಯರು ಸಮುದಾಯದ ಸಮೃದ್ಧಿಯ ದೂರದೃಷ್ಟಿಯಿಂದ ಸುಮಾರು ಎರಡುದಶಕಗಳ ಮುನ್ನಡೆಯಲ್ಲಿ ಹಲವು  ಏರು ಪೇರುಗಳನ್ನು ಕಂಡರೂ ಏಕತೆಯತ್ತ ಸಾಗಿದೆೆ. ವಿವಿಧ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಕ್ರೀಡಾ ಮತ್ತು ಶೈಕ್ಷಣಿಕ ಸೇವೆಯೊಂದಿಗೆ ಸ್ವಸಮುದಾಯದ ಹಿತಕ್ಕಾಗಿ ಶ್ರಮಿಸಿದೆ. ಈ ಸಂಘ ಜೈನ ಕುಟುಂಬ ಇದ್ದಂತೆ. ಸಂಘದ ಮೂಲಕ ಸೇವೆಗೈಯಲು ಬಂಧುಗಳು ಪುರುಸೊತ್ತು ಮಾಡಿದಾಗ‌ಲೇ ಎಲ್ಲರಲ್ಲೂ ಸೇವಾ ಉಮೇದು ಬರುವುದು. ಅದಕ್ಕಾಗಿ ಯುವಪೀಳಿಗೆ ಸಾಮಾಜಿಕ ಕಾಳಜಿ ರೂಪಿಸಬೇಕು. ಅವಾಗಲೇ ಹೊಸ ತಲೆಮಾರು ಮುಂದೆ ಬರಲು  ಸಾಧ್ಯ. ಸಂಘದ ಏಕತೆ ಎಲ್ಲರ ಮನಸ್ಸಿನಲ್ಲಿ ಮೂಡಿದಾಗ ಎಲ್ಲಾ ಕೆಲಸಗಳು ಸಲೀಸಾಗುವುದು. ಸಂಘದಿಂದ ಪದಾಧಿಕಾರಿಗಳಿಗೆ ಕಷ್ಟವಾಗಬಾರದು. ಸಂಕಟ ಬಂದಾಗ ಸಂಘದ ಸಹವಾಸಕ್ಕಿಂತ ಸಹಾಯವಾಗುವಾಗಲೇ ಸಂಘದ ಜೊತೆಗೆ ಸದಾ ನಿಕಟವಾಗಿದ್ದರೆ ಸಂಘ-ಸಂಸ್ಥೆಗಳು ತನ್ನೀಂತಾನೇ ಮುನ್ನಡೆಯಲು ಸಾಧ್ಯವಾಗುವುದು. ಆದ್ದರಿಂದ  ಸಮುದಾಯದ ಹಿತದೃಷ್ಟಿಯಿಂದ ಸೇವೆ ಮಾಡುವ ಭಾವನೆ ಹೃದಯದಿಂದ ಮೂಡಲಿ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಉದಯ ಅಧಿಕಾರಿ, ಗೌ| ಜತೆ ಕಾರ್ಯದರ್ಶಿಗಳಾದ ಮನೀಷ್‌ ಹೆಗ್ಡೆ, ರಘುವೀರ್‌ ಹೆಗ್ಡೆ, ಜತೆ ಕೋಶಾಧಿಕಾರಿ ಸಂಪತ್‌ಕುಮಾರ್‌ ಎಸ್‌. ಜೈನ್‌, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲೋಕನಾಥ್‌ ಜೈನ್‌, ವಿನಂತಿ ಜೈನ್‌,  ರಾಜೇಂದ್ರ ಹೆಗ್ಡೆ, ಪಿ. ವಸಂತ್‌ ಕೈಲಾಜೆ, ಪಿ. ಯುವರಾಜ್‌ ಜೈನ್‌, ಮಹಾವೀರ ಜೈನ್‌, ಪದ್ಮರಾಜ ಹೆಗ್ಡೆ ಆಸೀನರಾಗಿದ್ದು, ಗೌ| ಕಾರ್ಯದರ್ಶಿ ಪವನಂಜಯ ಬಲ್ಲಾಳ್‌ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿ,  ಗತ ವಾರ್ಷಿಕ ಕಾರ್ಯಚಟುವಟಿಕೆಗಳನ್ನು ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು.  ಗೌರವ ಕೋಶಾಧಿಕಾರಿ ಪಿ. ಅನಂತ ರಾಜ ಅವರು  ಗತ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.  ಅಧ್ಯಕ್ಷರು ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅಭಿನಂದಿಸಿದರು.

ಸಭೆಯಲ್ಲಿ ಸಂಘದ 2017-19ನೇ ದ್ವೆ„ವಾರ್ಷಿಕ ಸಾಲಿಗೆ ನವೀನ ಕಾರ್ಯಕಾರಿ ಸಮಿತಿಗೆ 16 ಸದಸ್ಯರನ್ನು ಸಭೆಯು ಅವಿರೋಧವಾಗಿ ಆಯ್ಕೆಗೊಳಿಸಿತು. ಅನಂತರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಿ. ಮುನಿರಾಜ ಅಜಿಲ ಪುನರಾಯ್ಕೆಗೊಂಡರು. ಮಹಿಳಾ ವಿಭಾಗಾಧ್ಯಕ್ಷೆಯಾಗಿ
ವಿಜಯಮಾಲಾ ಕೋರಿ  ಮತ್ತು ಯುವ ವಿಭಾಗಾಧ್ಯಕ್ಷ ರಾಗಿ ವಿಕ್ರಾಂತ್‌ ಅಥಿಕಾರಿ ಆರಿಸಲ್ಪಟ್ಟರು.

ಮಹಿಳಾ ವಿಭಾಗಾಧ್ಯಕ್ಷೆ ಕವಿತಾ ಎಸ್‌. ಜೈನ್‌ ಮತ್ತು ಯುವ ವಿಭಾಗಾಧ್ಯಕ್ಷ ಭರತ್‌ ಜೈನ್‌, ಉಪ ಸಮಿತಿಗಳ ಮುಖಸ್ಥರು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. ಸಂಘದ ಮಹಿಳಾ ವಿಭಾಗದ ಶ್ರಾವಕಿಯ ಕೀರ್ತನೆಯೊಂದಿಗೆ ಸಭೆ ಆದಿಗೊಂಡಿತು. ಬಳಿಕ ಇತ್ತೀಚೆಗೆ ಅಗಲಿದ ಅಖೀಲ ಕರ್ನಾಟಕ ಜೈನ ಸಂಘದ‌ ಸ್ಥಾಪಕ ಸದಸ್ಯರಲ್ಲೋರ್ವರೂ, ಹಾಲಿ ಕಾರ್ಯಕಾರಿ ಸಮಿತಿ   ಸದಸ್ಯ  ಜಯ ಎ. ಜೈನ್‌ ಮತ್ತು ಅಗಲಿದ ಸರ್ವ ಜೈನ ಬಂಧುಗಳು, ಸಂಘದ ಹಿತೈಷಿಗಳಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು.

ಸಂಘದ ಸಕ್ರಿಯ ಕಾರ್ಯಕರ್ತರೂ ಶಿಕ್ಷಕರಾದ ಸನತ್‌ಕುಮಾರ್‌ ಜೈನ್‌, ವಾಣಿ ವೈದ್ಯ, ವತ್ಸಲಾ ಅರಿಗ ಮತ್ತು ಚಂದನ ಯು. ಪಡಿವಾಳ್‌ ಸಭಿಕರ ಪರವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಸಂಘದ ಮುನ್ನಡೆಗೆ ಮಹಿಳಾ ವಿಭಾಗ ಮತ್ತು ಯುವ ವಿಭಾಗ ಅನುಪಮ ಸೇವೆಯನ್ನು ಮನವರಿಸಿದ ಪವನಂಜಯ ಬಲ್ಲಾಳ್‌ ವಂದಿಸಿದರು. 

ಟಾಪ್ ನ್ಯೂಸ್

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

6

Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.