ಅಕ್ಕ ಸಮ್ಮೇಳನ:ಗೋಪಾಲ ತ್ರಾಸಿ ಆಯ್ಕೆ
Team Udayavani, Aug 29, 2018, 3:16 PM IST
ಮುಂಬಯಿ: ಅಸೋಸಿಯೇಶನ್ ಆಫ್ ಕನ್ನಡ ಕೂಟಾಸ್ ಆಫ್ ಅಮೆರಿಕ ಸಂಯೋಜಿತ ವಿಶ್ವದ ಅಕ್ಕ ಸಂಸ್ಥೆ ಈ ಬಾರಿ ಹತ್ತನೇ ವಿಶ್ವ ಅಕ್ಕ ಕನ್ನಡ ಸಮ್ಮೇಳನವನ್ನು ಆಯೋಜಿಸಿದ್ದು ಸಮೇಳನದಲ್ಲಿ ಕನ್ನಡದ ಕಂಪನ್ನು ಪಸರಿಸುವ ಕವಿ ಮನಗಳನ್ನು ಪರಿಚಯಿಸುವ ಕವಿಗೋಷ್ಠಿಗೆ ಕನ್ನಡದ ಕವಿ ಗೋಪಾಲ ತ್ರಾಸಿ ಅವರು ಆಯ್ಕೆಗೊಂಡಿದ್ದಾರೆ.
ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ ಅಕ್ಕ ಸಂಸ್ಥೆಯು ಆ. 31 ಹಾಗೂ ಸೆ. 1 ಮತ್ತು ಸೆ. 2 ರಂದು ಮೂರು ದಿನಗಳಲ್ಲಿ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮ್ಮೇಳನ ಸಭಾಗೃಹದಲ್ಲಿ ಅಕ್ಕ ವಿಶ್ವ ಕನ್ನಡ 10ನೇ ಸಮ್ಮೇಳನದಲ್ಲಿ ನಾಡಿನ ಹೆಸರಾಂತ ಕವಿ ಜಯಂತ್ ಕಾಯ್ಕಿಣಿ ಅಧ್ಯಕ್ಷತೆಯಲ್ಲಿ ಜರಗುವ ಶ್ರಾವಣ ಮಧ್ಯಾಹ್ನ – ಅಕ್ಕ 2018 ಕವಿಗೋಷ್ಠಿಯಲ್ಲಿ ಗೋಪಾಲ ತ್ರಾಸಿ ತಮ್ಮ ಕವಿತೆಯನ್ನು ಪ್ರಸ್ತುತಪಡಿಸಲಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಿರಿಯ ಪ್ರಬಂಧಕರಾಗಿರುವ ಗೋಪಾಲ ತ್ರಾಸಿ ಅವರ 3 ಕವನ ಸಂಕಲನ, 1 ಕಥಾ ಸಂಕಲನ, 2 ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ. ಲೇಖನ ಮತ್ತು ಅಂಕಣ ಬರಹಗಳ ಕೃತಿ ಅಚ್ಚಿನಲ್ಲಿವೆ. ಕವಿಯಾಗಿ, ಕಥೆಗಾರ, ಅಂಕಣಕಾರ, ನಿರೂಪಣೆ, ರಂಗಭೂಮಿ, ಸಂಗೀತ, ಸಂಘಟನೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಸಕ್ತಿ ಬೆಳೆಸಿಕೊಂಡಿದ್ದಾರೆ. ಗೋಪಾಲ್ ಮುಂಬಯಿ ರಾತ್ರಿ ಶಾಲೆಯಿಂದ ಬಂದ ಬಹುಮುಖ ಪ್ರತಿಭೆ. ಕವಿ ಗೋಷ್ಠಿಗಳಲ್ಲಿ ತಮ್ಮದೇ ಆದೆ ಆಕರ್ಷಕ ಶೈಲಿಯ ವಾಚನ, ಗಾಯನದ ಮೂಲಕ ಶೋತೃಗಳ ಮನಗೆದ್ದ ಯುವಕರಲ್ಲೋರ್ವರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಕ್ರಿಯ ಸದಸ್ಯರೂ, ಕ್ರೀಡಾಪಟು ಕೂಡಾ ಆಗಿರುವ ಗೋಪಾಲ್ ಅವರು ಭರಣಿಮನೆ ಲಿಂಗ ಪೂಜಾರಿ ಉಪ್ಪಿನಕುದುರು ಮತ್ತು ಹೊಸೊಕ್ಲು ಮನೆ ಮುತ್ತು ಪೂಜಾರಿ ತ್ರಾಸಿ ದಂಪತಿ ಪುತ್ರ. ಪತ್ನಿ ಸವಿತಾ ಗೋಪಾಲ್ ಮತ್ತು ಇಬ್ಬರು ಗಂಡು ಮಕ್ಕಳಾದ ಧ್ರುವ ಹಾಗೂ ಅಪೂರ್ವ್ ಅರೊಂದಿಗೆ ಕಾಂದಿವಲಿಯ ಚಾರ್ಕೋಪ್‌ನಲ್ಲಿ ನೆಲೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.