ಅಕ್ಕಲ್‌ಕೋಟೆ ತಾ| ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸುದ್ದಿಗೋಷ್ಠಿ
Team Udayavani, Jul 29, 2018, 1:50 PM IST
ಸೊಲ್ಲಾಪುರ: ಅಕ್ಕಲ್‌ಕೋಟೆ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಕಲ್‌ಕೋಟೆ ತಾಲೂಕಿನ ಮೈಂದರ್ಗಿಯ ಶ್ರೀ ಶಿವಚಲೇಶ್ವರ ಮಂಗಲ ಕಾರ್ಯಾಲಯದಲ್ಲಿ ಜು. 28 ರಂದು ಆಯೋಜಿಸಲಾಗಿದ್ದು, ಈ ಭಾಗದ ಕನ್ನಡಿಗರಿಗೆ ಸಾಹಿತ್ಯದ ರಸದೌತಣ ಸಿಗಲಿದೆ. ಈಗಾಗಲೇ ಸಮ್ಮೇಳನದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಂಡಿದೆ. ಆದ್ದರಿಂದ ಎಲ್ಲ ಕನ್ನಡಾಭಿಮಾನಿಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದುಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಲ್‌ಕೋಟೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಡ್ಡೆ ಅವರು ಸುದ್ದಿಗೋಷ್ಠಿಯಲ್ಲಿ ನುಡಿದರು.
ಬೆಳಗ್ಗೆ 8.00 ಮೈಂದರ್ಗಿ ನಗರಾಧ್ಯಕ್ಷೆ ದಿಪ್ತಿ ಕೇಸೂರ ರಾಷ್ಟ್ರ ಧ್ವಜ ಹಾಗೂ ಅಕ್ಕಲ್‌ಕೋಟೆ ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಮಡ್ಡೆ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮೈಂದರ್ಗಿಯ ಮಾಜಿ ನಗರಾಧ್ಯಕ್ಷರಾದ ಸಿ.ಎಫ್.ಶಾವರಿ, ತುಕಪ್ಪಾ ನಾಗೂರ ಮತ್ತು ಶಿವಚಲಪ್ಪ ಗೊಬ್ಬುರ, ಸಾಹಿತಿ ಮಂಗಳಗೌರಿ ಪಾಟೀಲ ಭಾಗವಹಿಸಲಿದ್ದಾರೆ. ಮುಂಜಾನೆ 9 ಗಂಟೆಗೆ ಮೈಂದರ್ಗಿಯ ಹಾಜಿ ಫಜಲೆರಹೆಮಾನ ಶಾಬ್ದಿ ಮೆರವಣಿಗೆಗೆ ಚಾಲನೆ ನೀಡುವರು. ಉಪ ನಗರಾಧ್ಯಕ್ಷ ವಿಠuಲ ಆರೇನವರು ಅಧ್ಯಕ್ಷತೆ ವಹಿಸಲಿದ್ದಾರೆ. ನಗರಪಾಲಿಕೆಯ ಮುಖ್ಯಾಧಿಕಾರಿ ಪ್ರಸಾದ ಕಾಟಕರ, ಸಿದ್ಧಾರಾಮ ಕಾಳೆ, ಸಿದ್ಧಾರಾಮ ಸಾತಲ್ಗಾಂವ್, ನೀಲಕಂಠ ಮೆಂಥೆ, ಬಸವರಾಜ ಗೊಬ್ಬುರ, ಸುರೇಶ ದಿವಟೆ ಭಾಗವಹಿಸಲಿದ್ದಾರೆ. ಮುಂಜಾನೆ 10.30 ರಿಂದ ಅಕ್ಕಲ್‌ಕೋಟೆ ಶಾಸಕ ಸಿದ್ಧರಾಮ ಮೆØàತ್ರೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪೂಜ್ಯ ನೀಲಕಂಠ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವೆ ಡಾ| ಬಿ. ಟಿ. ಲಲಿತಾ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾರಾಷ್ಟ್ರ ಘಟಕದ ಕಸಾಪ ಅಧ್ಯಕ್ಷ ಬಸವರಾಜ ಮಸೂತಿ ಆಶಯ ನುಡಿಗಳನ್ನಾಡಲಿದ್ದಾರೆ. ಜಿ. ಪಂ. ಸಭಾಪತಿ ಮಲ್ಲಿಕಾರ್ಜುನ ಪಾಟೀಲ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಬಿ. ಬಿ. ಜೇವೂರ ಸರ್ವಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಚಿಂತನ ಗೋಷ್ಠಿಯಲ್ಲಿ ಮೈಂದರ್ಗಿ ಶಿವಚಲೇಶ್ವರ ಪ್ರಶಾಲೆಯ ಪ್ರಾಚಾರ್ಯ ಎಸ್. ಎಮ್. ಜಾಧವ್ ಅಧ್ಯಕ್ಷ ವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ನಡೆಯುವ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಅ. ಬ. ಚಿಕ್ಕಮಣೂರ ಅಧ್ಯಕ್ಷ ವಹಿಸಲಿದ್ದಾರೆ. ಮೈಂದರ್ಗಿ ವಿರಕ್ತ ಮಠದ ಮಹಾಂತ ಶ್ರೀಗಳು ಮತ್ತು ಪೂಜ್ಯ ಅಭಿನವರೇವಣಸಿದ್ಧ ಪಡ್ಡದೇವರು ಸಾನಿಧ್ಯ ವಹಿಸಲಿದ್ದಾರೆ.
ಅತಿಥಿಗಳಾಗಿ ಜಯಶ್ರೀ ಉಕಲಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ಅಶ್ವಿನಿ ಜಮಶೆಟ್ಟಿ, ಲಕ್ಷ್ಮೀ ದೊಡ್ಡಮನಿ, ಶಾಲುಬಾಯಿ ಕೋರೆ, ಲಕ್ಷ್ಮೀ ಸೌದಿ, ಸುನಂದಾ ಅಷ್ಟಗಿ, ಶಾಲುಮತಿ ಸುತಾರ, ಸಿ. ಎಮ್. ಸ್ವಾಮಿ, ಹುವಾನಂದ ಸಲಗರ, ಡಾ| ಗುರುಸಿದ್ಧಯ್ನಾ ಸ್ವಾಮಿ, ಭೀಮಾಶಂಕರ ಸಲಗರ, ಗೇನಸಿದ್ಧ ಸುರವಸೆ, ಅಣ್ಣಯ್ಯ ಸಾಲಿಮಠ, ರಮಾನಂದ ವಿರೆಜೇ ವರ್ಗಿ, ಮಂಗಾಣೆ, ಬಸವರಾಜ ಬಂದ್ರಾಡ, ಮಹಮ್ಮದ ಪಟೇಲ್ ಭಾಗವಹಿಸಲಿದ್ದಾರೆ.
ಸಂಜೆ ಸಮಾರೋಪ ಸಮಾ ರಂಭದಲ್ಲಿ ಜಿ. ಪಂ. ವಿಪಕ್ಷ ನಾಯಕ ಆನಂದ ತಾನವಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಪೂಜ್ಯ ಡಾ| ಜಯಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ.
ನಿವೃತ್ತ ಪ್ರಾಚಾರ್ಯ ಎನ್. ಆರ್. ಕುಲಕರ್ಣಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಹಿರಿಯ ಸಾಹಿತಿ ಬಿ. ಬಿ. ಜೇವೂರೆ ಸರ್ವಾ ಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಆಳಂದ ಶಾಸಕ ಸುಭಾಷ ಗುತ್ತೇದಾರ, ಅಕ್ಕಲ್‌ಕೋಟೆ ತಾಲೂಕು ಬಿಜೆಪಿ ಅಧ್ಯಕ್ಷ ಸಚಿನ ಕಲ್ಯಾಣ ಶೆಟ್ಟಿ, ಶಿಕ್ಷಣ ವಿಸ್ತಾರ ಅಧಿಕಾರಿ ಅಶೋಕ ಭಾಂಜೆ, ನಗರಸೇವಕ ಬಸಲಿಂಗಪ್ಪ ಖೇಡಗಿ, ಮಹೇಶ ಹಿಂಡೋಳೆ, ವಿರಾಜ ಪಾಟೀಲ, ರಾಜಶೇಖರ ಮಸೂತಿ, ಶಿವಚಲಪ್ಪ ಮುನ್ನೋಳಿ, ಸುರೇಖಾ ಹೊಳಿಕಟ್ಟಿ ಭಾಗವಹಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.