“ಅಕ್ಷಯ’ದ 30ನೇ ಹುಟ್ಟುಹಬ್ಬ ;ವಿಶೇಷ ಸಂಚಿಕೆ ಬಿಡುಗಡೆ


Team Udayavani, Oct 11, 2017, 4:51 PM IST

6569.jpg

ಬರೋಡಾ: ಪತ್ರಕರ್ತರಲ್ಲಿ ಸ್ವಸ್ಥ ಸಮಾಜ ಸೃಷ್ಟಿಸುವ ಹೊಸದೃಷ್ಟಿ ಮೂಡಬೇಕು ಎನ್ನುವ ಆಶಯ ನನ್ನದಾಗಿದ್ದು, ಅದಕ್ಕಾಗಿ ಮಾಧ್ಯಮ ಸಂಪನ್ಮೂಲವನ್ನು ಪುಷ್ಟಿಯಾಗಿಸಬೇಕು ಅಂದು ಕೊಳ್ಳುತ್ತಿದ್ದಂತೆಯೇ ನಾನು ಮೆಚ್ಚಿದ ಅಕ್ಷಯಕ್ಕೆ ಪ್ರೋತ್ಸಾಹಿಸಲು ಬಯಸಿದೆ. ಅಕ್ಷಯ ಎಲ್ಲಾ ಪ್ರಕರಗಳಲ್ಲೂ ಸಾಹಿತ್ಯ ಕೃಷಿಮಾಡಿದ ಬಿಲ್ಲವರ ಹಿರಿಮೆಯ ಪತ್ರಿಕೆ ಎಂದು ಹೇಳಲು ಅಭಿಮಾನವಾಗುತ್ತಿದೆ. ಓದುಗರ ನಡುವೆ ಸಮನ್ವಯ ಸಾಧಿಸಿ ಎಲ್ಲರ ಮನ-ಮನೆಗೆದ್ದ ಪತ್ರಿಕೆಯೂ ಹೌದು. ಹಳೆ ಬರಹಗಳೊಂದಿಗೆ ಹೊಸ ಸಾಹಿತ್ಯಕ್ಕೆ ಅವಕಾಶ ಕಲ್ಪಿಸಿ ಆವಿಷ್ಕಾರಕ್ಕೆ ಒತ್ತು ನೀಡಿದ ಪತ್ರಿಕೆ ಎಂದರೂ ತಪ್ಪಾಗಲಾಗದು. ಆದ್ದರಿಂದ  ಈ ಪತ್ರಿಕೆ ಜನಮಾನಸದಲ್ಲಿ ನೆಲೆಯಾಗಿ ಇಂದು ತ್ರಿದಶಕದತ್ತ ಕಾಲಿರಿಸುತ್ತಿದೆ ಎಂದು  ಗುಜರಾತ್‌ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ ಸಿ. ಪೂಜಾರಿ ಅಹ್ಮದಾಬಾದ್‌ ತಿಳಿಸಿದರು.

ಅ.8 ರಂದು ಬರೋಡಾ ಅಲ್ಕಾಪುರದ ಗುಜರಾತ್‌ ಬಿಲ್ಲವ  ಸಂಘದ ಬೈದಶ್ರೀ ಸಾಂಸ್ಕೃತಿಕ ಕೇಂದ್ರದ ಸಭಾಗೃಹದಲ್ಲಿ ಗುಜರಾತ್‌ ಬಿಲ್ಲವ ಸಂಘವು ಆಯೋಜಿಸಿದ್ದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮುಖವಾಣಿ ಅಕ್ಷಯ ಮಾಸಿಕದ 30ನೇ ಹುಟ್ಟುಹಬ್ಬ ಮತ್ತು ವಿಶೇಷ ಸಂಚಿಕೆಯ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ  ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಘಟಾನುಘಟಿಗಳ ಮಧ್ಯೆ ನನ್ನ ಅಧ್ಯಕ್ಷತೆಯಲ್ಲಿ ಅಕ್ಷಯ ಸಮಾರಂಭ ನಡೆಸುವುದು ನನ್ನ ಭಾಗ್ಯವಾಗಿದೆ. 30 ರ ಸಾಧನೆಯಲ್ಲಿ ಎಂ. ಬಿ. ಕುಕ್ಯಾನ್‌ರ ಅವಿರತ ಶ್ರಮ ಸರ್ವಸ್ವವಾದದ್ದು. ಬರೋಡಾದಲ್ಲಿ ಅಕ್ಷಯ ತ್ರಿದಶಕೋತ್ಸವ ಸಂಭ್ರಮಿಸುತ್ತಿರುವುದು ಪೂರ್ವಜರ ಪುಣ್ಯವೇ ಸರಿ. ಓದುಗರ ಮತ್ತು ಬರಹಗಾರರ ಪ್ರೇರಣೆಯಿಂದ ಅಕ್ಷಯ ಆಕಾಶದತ್ತ ಏರುವಂತಾಗಿದೆ. ಈ ಪತ್ರಿಕೆ ಶತಮಾನಗಳತ್ತ ಸಾಗುತ್ತಿರಲಿ ಎಂದ‌ು ಹಾರೈಸಿದರು.

ಗೌರವ ಅತಿಥಿಗಳಾಗಿ ಕರ್ನಾಟಕ ಸಂಘ ಬರೋಡಾ ಅಧ್ಯಕ್ಷ ಡಿ. ಕೆ. ನರಸಿಂಹ, ಮನೋಜ್‌ ಸಿ. ಪೂಜಾರಿ ಸೂರತ್‌, ಮಯಾ ಭಕ್ತವತ್ಸಲಾ, ವೇಣು ಭಕ್ತವತ್ಸಲಾ  ಉಪಸ್ಥಿತಿಯಲ್ಲಿ ಅಧ್ಯಾತ್ಮಿಕ ಚಿಂತಕ, ಲೇಖಕ ಶ್ರೀಕೃಷ್ಣ ಆಚಾರ್ಯ ಧನ್ವಂತಿ ಬರೋಡ ಅವರು 2017ನೇ ವಾರ್ಷಿಕ ಅಕ್ಷಯದ ವಿಶೇಷ  ಸಂಚಿಕೆಯನ್ನು  ಬಿಡುಗಡೆಗೊಳಿಸಿದರು.

ಗುಜರಾತ್‌ ಬಿಲ್ಲವರ ಸಂಘದ ಸ್ಥಾಪಕ ರೂವಾರಿ ಪ್ರಸಕ್ತ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ತನ್ನ ಸ್ವರಚಿತ ಕವಿತೆಯಲ್ಲಿ ಅಕ್ಷಯ ಹುಟ್ಟುಬೆಳೆದ ಬಗ್ಗೆ ಸೊಗಸಾಗಿ ಬಣ್ಣಿಸಿದರು. ಶೋಭಾ ದಯಾನಂದ ಬೋಂಟ್ರಾ ಅವರು ಅಕ್ಷಯದ ಶ್ರೇಯೋಭಿವೃದ್ಧಿಗಾಗಿ ಅನನ್ಯ ಸೇವೆ ಸಲ್ಲಿಸುತ್ತಿರುವ ಪ್ರಸಕ್ತ ನಿರ್ವಾಹಕ ಸಂಪಾದಕ ನಿತ್ಯಾನಂದ ಡಿ. ಕೋಟ್ಯಾನ್‌, ಸಂಪಾದಕ ಡಾ| ಈಶ್ವರ ಅಲೆವೂರು, ಸಹಾಯಕ ಸಂಪಾದಕ ಹರೀಶ್‌ ಕೆ. ಹೆಜ್ಮಾಡಿ,ಉಪ ಸಂಪಾದಕ ಹರೀಶ್‌ ಜಿ. ಪೂಜಾರಿ ಕೊಕ್ಕರ್ಣೆ ಅವರಿಗೆ “ರಜತ ಪದಕ’ಗಳನ್ನಿತ್ತು ಗೌರವಿಸಿದರು.

ಸಮಾರಂಭದಲ್ಲಿ ದಯಾನಂದ ಬೋಂಟ್ರಾ ದಂಪತಿಗೆ ಸಮಾಜ ಸಾಧಕ ರತ್ನ ಬಿರುದು ಪ್ರದಾನಿಸಿ ಅತಿಥಿಗಳು ಗೌರವಿಸಿದರು. ಗುಜರಾತ್‌ ಬಿಲ್ಲವರ ಸಂಘದ ಸ್ಥಾಪಕ ಸಂಚಾಲಕ ಎಸ್ಕೆ ಹಳೆಯಂಗಡಿ, ಎಂ. ಎಸ್‌. ರಾವ್‌ ಅಹ್ಮದಾಬಾದ್‌, ಅಸೋಸಿಯೇಶನ್‌ನ ಗೌರವ  ಪ್ರಧಾನ ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ,  ವಿಶ್ವನಾಥ ಜಿ. ಅಮೀನ್‌, ಕೆ. ಎಸ್‌. ಅಂಚನ್‌, ವಿಶ್ವನಾಥ ಪೂಜಾರಿ, ಸುಮನ್‌ ಕೋಡಿಯಾಲ್‌ಬೈಲ್‌, ವಾಸು ಸುವರ್ಣ, ಮಹಿಳಾಧ್ಯಕ್ಷೆ ಸರಿತಾ ಸೋಮನಾಥ್‌ ವೇದಿಕೆಯಲ್ಲಿ ಆಸೀನರಾಗಿದ್ದರು.

ಶ್ರೀನಿವಾಸ ಆರ್‌. ಕರ್ಕೇರ, ದಯಾನಂದ ಆರ್‌. ಪೂಜಾರಿ, ಮೋಹನ್‌ ಡಿ. ಪೂಜಾರಿ, ಅಶೋಕ್‌ ಕುಕ್ಯಾನ್‌, ಎಸ್‌. ಕೆ ಸುಂದರ್‌ ಮುಂಬಯಿ, ಅಕ್ಷಯ ಮಂಡಳಿಯ ಸತೀಶ್‌ ಎನ್‌. ಬಂಗೇರ, ಜಯರಾಮ ಜಿ. ನಾಯಕ್‌,  ಕುಸುಮಾ ಸಿ. ಪೂಜಾರಿ, ಸದಾನಂದ ಅಮೀನ್‌ ಉಡುಪಿ, ಕೃಷ್ಣ ಅಂಚನ್‌, ಪ್ರಭಾಕರ್‌ ಪೂಜಾರಿ ಸೂರತ್‌,  ವಿ. ಡಿ. ಅಮೀನ್‌, ಸದಾಶಿವ ಪೂಜಾರಿ ವಾಪಿ, ತುಳು ಸಂಘ ಬರೋಡಾ ಸಂಚಾಲಕ ಜಯರಾಮ ಶೆಟ್ಟಿ, ಗುಜರತ್‌ ಬಿಲ್ಲವರ ಕೋಶಾಧಿಕಾರಿ ಜಿನರಾಜ್‌ ಪೂಜಾರಿ, ಸೇರಿದಂತೆ ಸಂಘದ ಪದಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಸದಸ್ಯರು ಉಸ್ಥಿತರಿದ್ದು ಅವರನ್ನು ಪದಾಧಿಕಾರಿಗಳು ಗೌರವಿಸಿದರು.

ಗುಜರಾತ್‌ ಬಿಲ್ಲವ ಸಂಘದ ಸದಸ್ಯೆಯರು ಪ್ರಾರ್ಥನೆಗೈದರು. ಅಸೋಸಿಯೇಶನ್‌ನ ಗೌ. ಪ್ರ. ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್‌ ಪ್ರಸ್ತಾವನೆಗೈದರು. ಗುಜರತ್‌ ಬಿಲ್ಲವರ ಗೌ. ಪ್ರ. ಕಾರ್ಯದರ್ಶಿ ವಾಸು ವಿ. ಸುವರ್ಣ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅಕ್ಷಯದ ಬೆಳವಣಿಗೆ ಬಗ್ಗೆ ತಿಳಿಸಿದರು. ಸಹಾಯಕ ಸಂಪಾದಕ ಹರೀಶ್‌ ಹೆಜ್ಮಾಡಿ ಪುರಸ್ಕೃತರ ಪರಿಚಯಗೈದರು. ರಂಗನಿರ್ದೇಶಕ ಸಾ. ದಯಾ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಗುಜರತ್‌ ಬಿಲ್ಲವರ ಮಹಿಳಾಧ್ಯಕ್ಷೆ ಸರಿತಾ ಸೋಮನಾಥ್‌ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ ಭಟ್‌ ಬಳಗದಿಂದ  “ಸಮುದ್ರ ಮಥನ’ ಹರಿಕಥೆ ಕಾಲಕ್ಷೇಪ ನಡೆಯಿತು.

ಬಿಲ್ಲವರ ಅಸೋಸಿಯೇಶನ್‌ ಲಕ್ಷಾಂತರ ಜನರಿಗೆ ದಾರಿದೀಪವಾದ ಮಹಾನ್‌ ಸಂಸ್ಥೆ. 110 ವರ್ಷಗಳ ಮೂಲ ಹೊಂದಿದ ಚತುರ್‌ ಸಂಸ್ಥೆಗಳ ಒಗ್ಗಟ್ಟಿನಿಂದ ಹುಟ್ಟಿದ ಸಂಸ್ಥೆ ಇದಾಗಿದೆ. ಈ ಸಂಸ್ಥೆಯ ಮುಖವಾಣಿ ಅಕ್ಷಯ ಓದುಗರ ಪಾಲಿನ ಅಕ್ಷಯ ಪಾತ್ರೆಯಂತಿದೆ. ಸರ್ವ ಧರ್ಮ ಸಮನ್ವಯಕವಾಗಿ ಬೆಳೆದು ಓದುಗರಿಂದಲೇ ಮಾನ್ಯತೆ ಪಡೆದ ಈ ಪತ್ರಿಕೆ ನೂರಾರು ಕಾಲ ಪ್ರಕಾಶಿಸಲಿ
  – ಜಯ ಸಿ. ಸುವರ್ಣ (ಅಧ್ಯಕ್ಷರು: ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ).

ಅಕ್ಷಯ ಎಂಬ ಶಬ್ದದಲ್ಲಿ ವಿಶೇಷತೆ ಇದೆ. ಅಕ್ಷಯ ಎಂದರೆ ಕೊನೆಯಲ್ಲದ್ದು. ಈ ಆಶ್ರಯವು ಭಾರತದಾದ್ಯಂತ ತಮ್ಮ ಕದಂಬ ಬಾಹುಗಳನ್ನು ಹರಡಲಿ. ಪತ್ರಿಕೆ ಬೆಳೆಸುವುದು ಸಾಮಾನ್ಯ ಸಂಗತಿಯಲ್ಲ, ಅದರ ಹಿಂದಿರುವ ಪರಿಶ್ರಮದ ಸ್ಮರಣೆಯ ಅಗತ್ಯವಿದೆ 
– ಕೃಷ್ಣ ಆಚಾರ್ಯ (ಆಧ್ಯಾತ್ಮಿಕ ಚಿಂತಕ).

ಅಕ್ಷಯದ ಸಾಧನೆ ಅಸಮಾನ್ಯವಾದದ್ದು. ಮೂರು ದಶಕಗಳ ಮುನ್ನಡೆಯೇ ಇದರ ಸಾಧನೆಯ ಹೆಜ್ಜೆಗಳಾಗಿವೆ. ಈ ಪತ್ರಿಕಾ ಮಂಡಳಿಯ ಕಾರ್ಯಶೈಲಿಯೇ ಇದರ ಯಶಸ್ಸಿನ ಗುಟ್ಟಾಗಿದೆ 
– ಶಶಿಧರ  ಶೆಟ್ಟಿ ( ಅಧ್ಯಕ್ಷರು: ತುಳು ಸಂಘ ಬರೋಡಾ).

 ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.