ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ: ಮಹಾವೀರ ಜಯಂತಿ
Team Udayavani, Apr 23, 2019, 3:12 PM IST
ಮುಂಬಯಿ: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ವತಿಯಿಂದ ಮಹಾವೀರ ಜಯಂತಿ ಆಚರಣೆಯು ಎ. 17ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂಬ್ರಾದ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.
ಪ್ರಾರಂಭದಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪೂಜೆ ಹಾಗೂ ಭಗವಾನ್ ಬಾಹುಬಲಿಗೆ ಪಾದಪೂಜೆ, ಭಗವಾನ್ ಮಹಾವೀರ ಸ್ವಾಮಿಯ ಬಿಂಬದ ಪಲ್ಲಕ್ಕಿ ಉತ್ಸವ ನಡೆಯಿತು. ಪಲ್ಲಕಿಯನ್ನು ವಾದ್ಯ, ಬ್ಯಾಂಡ್ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ದೇವರಿಗೆ ವಿಶೇಷ ಅಭಿಷೇಕ, ವಿವಿಧ ದ್ರವ್ಯಾಭಿಷೇಕ, ಚತುಷೊRàನ ಕಲಶಾಭಿಷೇಕ, ಪೂರ್ಣಕುಂಭ ಕಲಶಾಭಿಷೇಕ, ನಾಮಕರಣ ವಿಧಿ-ವಿಧಾನಗಳನ್ನು ಕಾರ್ಕಳ ಪರಪ್ಪಾಡಿಯ ಜಿನಸೇನ ಇಂದ್ರರು ನೆರವೇರಿಸಿ ಆಶೀರ್ವದಿಸಿದರು.
ಯಾದಪ್ಪ ಕೋರಿ ಹಾಗೂ ವಿಜಯಮಾಲಾ ಕೋರಿ ಅವರು ಸೌದ್ಧರ್ಮೇಂದ್ರ ಹಾಗೂ ಶಚೀದೇವಿಯಾಗಿ ಮಹಾವೀರ ಸ್ವಾಮಿಗೆ ವಿವಿಧ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ರಾಜೇಂದ್ರ ಹೆಗ್ಗಡೆ, ರತ್ನಾಕರ ಅಜ್ರಿ, ಸನತ್ ಕುಮಾರ್ ಜೈನ್, ನೇಮಿರಾಜ್ ಜೈನ್, ಉದಯ ಅಧಿಕಾರಿ, ವಾರಿಸೇನ ಜೈನ್, ಸುರೇಶ್ ಬಲ್ಲಾಳ್, ರಘುವೀರ್ ಹೆಗ್ಡೆ, ಪ್ರವೀಣ್‌ಚಂದ್ರ ಜೈನ್, ಲೋಕನಾಥ್ ಜೈನ್, ಜಯರಾಜ್ ಜೈನ್, ಜಯಶ್ರೀ ಜೈನ್, ರಿಯಾನ್ಸ್ ಜೈನ್, ವಸಂತಿ ಜೈನ್, ಅವರು ವಿವಿಧ ಅಭಿಷೇಕಗಳನ್ನು ನೆರವೇರಿಸಿ ಸಹಕರಿಸಿದರು.
ಪ್ರಫುಲ್ಲಾ ಮುನಿರಾಜ್ ಜೈನ್ ಹಾಗೂ ಕುಮೋದಿನಿ ಮಹಾವೀರ್ ಜೈನ್ ಅವರು ಜನ್ಮ ಕಲ್ಯಾಣ ವಿಧಿ-ವಿಧಾನಗಳನ್ನು ನೆರವೇರಿಸಿದರು. ಉದಯ ಅತಿಕಾರಿ ಮಹಾ ಮಂಗಳಾರತಿಗೈದರು. ಉದಯ ಹೆಗ್ಗಡೆ, ಕು| ಶ್ರಾವ್ಯಾ, ಸುಜಯ್ ಎಲ್. ಜೈನ್, ಸುಪ್ರಿಯಾ ಆರ್. ಹೆಗ್ಗಡೆ, ಮಲ್ಲಿಕಾ ಜೆ. ಜೈನ್, ವಿನೋದಾ ಜೈನ್, ಪದ್ಮಪ್ರಿಯಾ ಬಲ್ಲಾಳ್ ಅವರು ಜಿನಗೀತೆಗಳನ್ನು ಹಾಡಿದರು.
ಹಿಮ್ಮೇಳದಲ್ಲಿ ಮಾ| ಪ್ರಥಮ್ ಬಲ್ಲಾಳ್ ಹಾರ್ಮೋನಿಯಂನಲ್ಲಿ, ಅಶೋಕ್ ಅವರು ತಬಲಾದಲ್ಲಿ ಸಹಕರಿಸಿದರು. ಮುಂಬ್ರಾ ಬಾಹುಬಲಿ ಮಂದಿರ ಟ್ರಸ್ಟ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು. ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ವತಿಯಿಂದ ಮಂದಿರದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ವಸಂತಿ ಜೈನ್ ಪರಿವಾರದ ಸೇವಾರ್ಥಕವಾಗಿ ಭೋಜನದ ವ್ಯವಸ್ಥೆ ನಡೆಯಿತು. ಕು| ಡಿಂಪಲ್ ರಾಜೇಂದ್ರ ಬಲ್ಲಾಳ್ ಅವರು ಬೆಳಗ್ಗೆಯ ಉಪಾಹಾರದ ವ್ಯವಸ್ಥೆ ಮಾಡಿದ್ದರು. ರಾಜವರ್ಮ ಜೈನ್ ಪರಿವಾರದವರಿಂದ ಮಂದಿರದ ದೇವರಿಗೆ ತೊಟ್ಟಿಲನ್ನು ಸಮರ್ಪಿಸಲಾಯಿತು.
ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಅಧ್ಯಕ್ಷ ಮುನಿರಾಜ ಅಜಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗೌರವ ಪ್ರಧಾನ ಕಾರ್ಯದರ್ಶಿ ಪವನಂಜಯ ಬಲ್ಲಾಲ್ ನಿರ್ವಹಿಸಿದರು. ಜತೆ ಕಾರ್ಯದರ್ಶಿ ರಘುವೀರ್ ಹೆಗ್ಗಡೆ ವಂದಿಸಿದರು. ಮನೀಶ್ ಹೆಗ್ಗಡೆ, ಪದ್ಮರಾಜ್ ಹೆಗ್ಡೆ, ಮಹಾವೀರ್ ಎಂ. ಜೈನ್, ವಿನಯಾ ಪ್ರಮಥ್ ಬಂಗ, ಉದಯ ಅತಿಕಾರಿ ಸಹಕರಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.