ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಸಮಾಜದ ಒಳಿತಿಗೆ ಶ್ರಮಿಸಬೇಕು: ಐಕಳ


Team Udayavani, Aug 18, 2019, 1:53 PM IST

mumbai-tdy-1

ಮುಂಬಯಿ, ಆ. 17: ನಾನು ನನ್ನ ಹೊಟೇಲು ಉದ್ಯಮವನ್ನು ವಸಾಯಿ ಪರಿಸರದಲ್ಲಿ ಪ್ರಾರಂಭಿಸಿದ್ದು, ಈ ಪರಿಸರವು ನನಗೆ ಬಹಳ ಹತ್ತಿರವಾಗಿದೆ. ಬಂಟರ ಸಂಘಟನೆಯಂತೆ ಇಲ್ಲಿ ಇತರ ಜಾತೀಯ ಸಂಘಗಳಿವೆ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿವೆ. ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು ಸಮಾಜದ ಒಳಿತಿಗಾಗಿಯೇ ಸೇವೆ ಮಾಡಬೇಕು. ದ್ವೇಷ ಕಟ್ಟಿಕೊಂಡು ಬದುಕು ನಡೆಸಬಾರದು. ನಮ್ಮವರು ಪ್ರತಿ ನಗರದಲ್ಲಿ ಸಂಘಟನೆಯನ್ನು ಕಟ್ಟಿದವರು. ಎಲ್ಲ ಸಂಘಟನೆಗಳು ಸಮಾಜದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿವೆ. ಜಾತೀಯ ಸಂಘಟನೆಗಳ ಮಧ್ಯೆ ಪೈಪೋಟಿ ಇಲ್ಲದೆ ಸಮಾಜ ಸೇವೆ ಮಾಡಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಭಿಪ್ರಾಯ ಪಟ್ಟರು.

ಆ. 14ರಂದು ಸಂಜೆ ವಸಾಯಿ ಪಶ್ಚಿಮದ ಸ್ವರ್ಣ ಬ್ಯಾಂಕ್ವೆಟ್ಸ್‌ ಮೂರನೇ ಮಾಳಿಗೆ, ದತ್ತಾನಿ ಸ್ಕ್ಯೆಯರ್‌ ಮಾಲ್ ಇಲ್ಲಿ ನಡೆದ ಮೀರಾ-ಡಹಾಣು ಬಂಟ್ಸ್‌ ಇದರ ನಾಯ್ಗಾಂವ್‌-ವಿರಾರ್‌ ಪ್ರಾದೇಶಿಕ ಸಮಿತಿಯ ವತಿಯಿಂದ ಆಟಿದ ಕೂಟ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಐಕಳ ಹರೀಶ್‌ ಶೆಟ್ಟಿ ಅವರು, ಯಾವುದೇ ಕಾರ್ಯಕ್ರಮದ‌ಲ್ಲಿ ಭಾಗವಹಿಸಿದರೂ ಸಭಾ ಕಾರ್ಯಕ್ರಮಗಳಿಗಿಂತ ಸಾಂಸ್ಕೃತಿಕ ಕಾರ್ಯಕ್ರಮಗಳೇ ಆಕರ್ಷಣೀಯ. ನಮ್ಮ ಮಕ್ಕಳು ಬಹುಮುಖ ಪ್ರತಿಭೆಯುಳ್ಳವರು. ದೇಶ ವಿದೇಶದಲ್ಲಿ ಬಂಟ ಸಮುದಾಯದ ಸುಮಾರು 112 ಸಂಘಟನೆಗಳಿದ್ದು, ವಿದೇಶದಲ್ಲಿರುವ ನಮ್ಮವರ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಲ್ಲಿ ಅವರಿಗೆ ಬಹಳ ಸಂತೋಷವಾಗುತ್ತದೆ. ನಮಗೆ ಎಷ್ಟು ಸಂಘಟನೆಗಳಿದ್ದರೂ ಕುರ್ಲಾದ ಬಂಟರ ಸಂಘವು ನಮ್ಮೆಲ್ಲರ ಮಾತೃ ಸಂಘವೇ ಆಗಿದೆ ಎಂದರು.

ಮೀರಾ – ಡಹಾಣು ಬಂಟ್ಸ್‌ನ ಗೌರವ ಅಧ್ಯಕ್ಷ ಡಾ| ವಿರಾರ್‌ ಶೆಟ್ಟಿ ಅವರು ಮಾತನಾಡುತ್ತಾ, ಸ್ತ್ರೀ ಶಕ್ತಿಯಿಂದಾಗಿ ಸಂಘದ ಕಾರ್ಯವು ಉತ್ತಮವಾಗಿ ನಡೆಯುತ್ತಿದೆ. ಯಾವುದೇ ಸಮಾರಂಭಕ್ಕೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಆಭಿನಂದನೀಯ. ಆಟಿ ತಿಂಗಳು ಅಂದರೆ ಊರಲ್ಲಿ ಕಷ್ಟದ ದಿನ ಅನ್ನುತ್ತಿದ್ದರು. ಆದರೆ ಕಾಲ ಬದಲಾಗಿದೆ ಮೊದಲಿನಂತಿಲ್ಲ. ಇಂತಹ ಕಾರ್ಯಕ್ರಮಗಳಿಂದ ನಮ್ಮ ಮಕ್ಕಳಿಗೆ ನಾಡಿನ ಸಂಸ್ಕೃತಿ, ಆಚಾರ-ವಿಚಾರಗಳು ತಿಳಿಯಲು ಸಾಧ್ಯವಾಗುತ್ತಿದೆ ಎಂದರು.

ಮೀರಾ ಡಹಾಣು ಬಂಟ್ಸ್‌ನ ಅಧ್ಯಕ್ಷರೂ ಮತ್ತು ಸ್ಥಳೀಯ ಮಹಾನಗರ ಪಾಲಿಕೆಯ ಸಭಾಪತಿ ಅರವಿಂದ ಎ. ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಆಟಿ ತಿಂಗಳೆಂದರೆ ಕಷ್ಟದ ತಿಂಗಳೆಂದು ಹಿರಿಯರು ಹೇಳುತ್ತಿದ್ದ ಮಾತುಗಳನ್ನು ಕೇಳಿದ್ದೇನೆ. ಆದರೆ ಮುಂಬಯಿ ನಗರದಲ್ಲಿ ನಡೆ‌ಯುವ ಆಟಿ ತಿಂಗಳ ಒಂದೊಂದು ಕಾರ್ಯಕ್ರಮಗಳಲ್ಲಿ 150ಕ್ಕಿಂತ ಮಿಕ್ಕಿ ಖಾದ್ಯಗಳನ್ನು ಉಣಬಡಿಸುವುದನ್ನು ಕಂಡಾಗ ಮುಂದಿನ ದಿನಗಳಲ್ಲಿ ಕೂಡ ಇಂತಹದ್ದೇ ಸುಖ ಜೀವನ ಕೂಡಿ ಬರಲಿ ಎಂದರು.

ವೇದಿಕೆಯಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಥಾಣೆ ಬಂಟ್ಸ್‌ನ ಅಧ್ಯಕ್ಷ ಕುಶಲ್ ಭಂಡಾರಿ ಮಾತನಾಡಿ, ಆಟಿ ಕೂಟದ ಕಾರ್ಯಕ್ರಮಗಳು ನಗರದಲ್ಲಿ ಬಹು ಉಲ್ಲಾಸದಾಯಕವಾಗಿ ನಡೆಯುತ್ತದೆ. ಈ ಒಂದು ಸಂಪ್ರದಾಯ ಇಂದಿನ ಯುವ ಸಮುದಾಯಕ್ಕೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಸ್ಥಳೀಯ ಸಮಿತಿಯ ಸಂಚಾಲಕರಾದ ನಾಗರಾಜ ಎನ್‌. ಶೆಟ್ಟಿ ಅವರು, ಮೀರಾ ಡಹಾಣು ಬಂಟ್ಸ್‌ ಸಮಾಜ ಬಾಂಧವರಿಗೆ ಶಿಕ್ಷಣ, ವೈವಾಹಿಕ ಮುಂತಾದ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದೆ. ಸಂಘವು ಸಣ್ಣ ಮಟ್ಟದಲ್ಲಾದರೂ ಇಂತಹ ಕೆಲಸವನ್ನು ಮಾಡುತ್ತಾ ಬಂದಿದೆ. ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳಿಗೆ ದಾನಿಗಳ ಸಹಕಾರ ಸದಾಯಿರಲಿ ಎಂದರು. ವೇದಿಕೆಯಲ್ಲಿ ಜೀವದಾನಿ ಯಕ್ಷಕಲಾ ವೇದಿಕೆಯ ಅಧ್ಯಕ್ಷ ಮಂಜುನಾಥ ಶೆಟ್ಟಿ, ಜಾಗತಿಕ ಮತ್ತು ರಾಷ್ಟ್ರೀಯ ಜಾಗತಿಕ ಹ್ಯುಮನ್‌ ರೈಟ್ಸ್‌ ಪೀಪಲ್ಸ್ ಕೌನ್ಸಿಲ್ ಅಧ್ಯಕ್ಷ ಡಾ| ಲಯನ್‌ ಕೆ. ಟಿ. ಶಂಕರ ಶೆಟ್ಟಿ. ನಾಲಾಸೋಪಾರ ವಿರಾರ್‌ ಕರ್ನಾಟಕ ಸಂಸ್ಥೆಯ ಉಪಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ರವಿ ಬಿ. ಶೆಟ್ಟಿ, ವಿರಾರ್‌-ವಸಾಯಿ ನಗರ ಸೇವಕಿ, ಮಾಟುಂಗಾದ ಸರಕಾರಿ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕಿ ಡಾ| ಸಂಧ್ಯಾ ವಿ. ಶೆಟ್ಟಿ, ಮೀರಾ-ಭಾಯಂದರ್‌ ಬಂಟ್ಸ್‌ ಫೋರಂನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮೀರಾ-ಡಹಾಣು ಬಂಟ್ಸ್‌ನ ಸ್ಥಾಪಕ ಅಧ್ಯಕ್ಷ ಪ್ರಕಾಶ್‌ ಎಂ. ಹೆಗ್ಡೆ, ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಟ್ರಸ್ಟಿ ಸುರೇಶ್‌ ಶೆಟ್ಟಿ ಗಂಧರ್ವ, ಟ್ರಸ್ಟಿ ಸಂತೋಷ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಸತೀಶ್‌ ಶೆಟ್ಟಿ, ಕಾರ್ಯದರ್ಶಿ ಲತಾ ಎ. ಶೆಟ್ಟಿ, ವಲಯದ ಕಾರ್ಯಾಧ್ಯಕ್ಷೆ ಅಶೋಕ್‌ ಕೆ. ಶೆಟ್ಟಿ, ಸ್ಥಳೀಯ ಸಮಿತಿಯ ಕಾರ್ಯದರ್ಶಿ ಪ್ರದೀಪ್‌ ಶೆಟ್ಟಿ , ಜತೆ ಕಾರ್ಯದರ್ಶಿ ನವೀನ್‌ಎಂ. ಶೆಟ್ಟಿ, ಪಳ್ಳಿ ಪ್ರಸನ್ನ ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ದಯಾನಂದ ಪಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶ್ರೀನಿವಾಸ ಆಳ್ವ, ಸಂಚಾಲಕ ರಾಧಾಕೃಷ್ಣ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಸುಕೇಶ್‌ ವಿ. ರೈ, ಕೃಷ್ಣಯ್ಯ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ತಾರಾನಾಥ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿ ಜೆ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿ ಜಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುಗುಣಾ ಬಿ. ಶೆಟ್ಟಿ, ಉಪ ಕಾರ್ಯಧ್ಯಕ್ಷೆ ಚಂದ್ರಕಲಾ ಆರ್‌. ಶೆಟ್ಟಿ, ಕಾರ್ಯದರ್ಶಿ ದಿವ್ಯಾ ಜೆ. ರೈ, ಸದಸ್ಯರಾದ ರವಿ ಎಂ. ಶೆಟ್ಟಿ, ಸುಕೇಶ್‌ ಕೆ. ಶೆಟ್ಟಿ, ಹರೀಶ್‌ ಶೆಟ್ಟಿ ಬಂಗ್ಲಿ, ಯಶೋದಾ ಎನ್‌. ಶೆಟ್ಟಿ , ಉಷಾ ವಿ. ಶೆಟ್ಟಿ, ಪ್ರಮೀಳಾ ಬಿ ಶೆಟ್ಟಿ, ಶುಭವತಿ ಕೆ. ಶೆಟ್ಟಿ, ಮಾಲತಿ ಆರ್‌ ಶೆಟ್ಟಿ, ಸರಿತಾ ಎಸ್‌. ಶೆಟ್ಟಿ, ಹೇಮಾವತಿ ಆರ್‌. ಶೆಟ್ಟಿ, ಸುರೇಶ ಶೆಟ್ಟಿ ಮೊದಲಾವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ಹೊಟೇಲ್ ಉದ್ಯಮಿಗಳಾದ ಮೋಹನ್‌ ಬಿ. ಶೆಟ್ಟಿ, ಜಗದೀಶ್‌ ಶೆಟ್ಟಿ, ರಮೇಶ್‌ ಬಿ. ಶೆಟ್ಟಿ, ಪ್ರೇಮಾನಂದ ಬಿ. ಶೆಟ್ಟಿ, ವಾಸು ಶೆಟ್ಟಿ ವಿರಾರ್‌, ವನಿತಾ ಆರ್‌. ಶೆಟ್ಟಿ, ಸುರೇಶ ಶೆಟ್ಟಿ ಪೂನಂ ನಲಸೋಪಾರ ಇವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಮಮತಾ ದೇವಿದಾಸ ಶೆಟ್ಟಿ, ಸರೋಜಾ ಜೆ. ಶೆಟ್ಟಿ, ಸಹಾನಿ ಬಿ. ಶೆಟ್ಟಿ, ಸುಶೀಲಾ ಕೆ. ಶೆಟ್ಟಿ ಪ್ರಾರ್ಥನೆಗೈದರು. ಸಮಿತಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮವನ್ನು ಸುಕೇಶ್‌ ರೈ ನಿರೂಪಿಸಿ, ವಂದಿಸಿದರು. ಪ್ರಾರಂಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಟಾಪ್ ನ್ಯೂಸ್

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

6-udupi

Udupi: ಪ್ರಧಾನಿ ಸಹೋದರ ಸೋಮು ಬಾೖ ಶ್ರೀ ಕೃಷ್ಣಮಠಕ್ಕೆ ಭೇಟಿ

Mangaluru: ಮಕ್ಕಳ ಮಾರಾಟ, ಖರೀದಿಗೆ 5 ವರ್ಷ ಜೈಲು ಶಿಕ್ಷೆ

Mangaluru: ಮಕ್ಕಳ ಮಾರಾಟ, ಖರೀದಿಗೆ 5 ವರ್ಷ ಜೈಲು ಶಿಕ್ಷೆ

5-MAHE

MAHE Convocation: ನ. 8-10: ಮಾಹೆ ಘಟಿಕೋತ್ಸವ

Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ

Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.