ಪುಣೆಯಲ್ಲಿ ರಂಜಿಸಿದ ಅಮರ್ ಬೊಳ್ಳಿಲು ಯಕ್ಷಗಾನ ಪ್ರದರ್ಶನ
Team Udayavani, Feb 27, 2018, 3:34 PM IST
ಪುಣೆ : ಸಾಂಸ್ಕೃತಿಕ ನಗರಿ ಪುಣೆಯ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ ಇದರ ಪ್ರತಿಭಾವಂತ ಕಲಾವಿದರು ಹಾಗೂ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಫೆ. 13ರಂದು ಮಹಾ ಶಿವರಾತ್ರಿಯ ನಿಮಿತ್ತ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದಲ್ಲಿ ಅಮರ್ ಬೊಳ್ಳಿಲು ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.
ಸುಮಾರು 4 ಗಂಟೆಗಳ ಕಾಲ ನಡೆದ ಈ ಪ್ರದರ್ಶನ ಸೇರಿದ್ದ ನೂರಾರು ಸಂಖ್ಯೆಯ ಭಕ್ತಾದಿಗಳ ಮನಸೂರೆಗೊಂಡಿತ್ತು. ಭಾಗವತರಾಗಿ ಜಯರಾಮ್ ಅಡೂರು, ಚೆಂಡೆಯಲ್ಲಿ ವಿಷ್ಣುಶರಣ ಬನಾರಿ, ಮದ್ದಳೆಯಲ್ಲಿ ಯೋಗೀಶ್ ಕಡಂಬಳಿತ್ತಾಯ ಅವರು ಸಹಕರಿಸಿದರು. ಪೆರುಮಳ ಬÇÉಾಳನಾಗಿ ನಾಟ್ಯಗುರು ಮದಂಗಲ್ಲು ಆನಂದ ಭಟ್, ಸಾಯನ ಬೈದ್ಯನಾಗಿ ಪಾಂಗಾಳ ವಿಶ್ವನಾಥ ಶೆಟ್ಟಿ, ಬುದ್ಧಿವಂತನಾಗಿ ಊರಿನ ಹೆಸರಾಂತ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಕೋಟಿಯಾ ಪಾತ್ರದಲ್ಲಿ ಗೋವಿಂದ ಸಫಲಿಗ ಹಾಗೂ ವಾಸು ಕುಲಾಲ್ ವಿಟ್ಲ, ಚೆನ್ನಯ್ಯನಾಗಿ ಸುಕೇಶ್ ಶೆಟ್ಟಿ ಎಣ್ಣೆಹೊಳೆ ಹಾಗೂ ಕಾರ್ತಿಕ್ ಶೆಟ್ಟಿ, ರಾಮಾ ಜೋಯಿಸರಾಗಿ ಹಾಗೂ ಪಯ್ಯಬೈದ್ಯನಾಗಿ ಊರಿನ ಪ್ರಸಿದ್ಧ ಹಾಸ್ಯ ಕಲಾವಿದ ಸುಂದರ ಬಂಗಾಡಿ, ಚಂದುಗಿಡಿಯಾಗಿ ವಿಕೇಶ್ ರೈ ಶೇಣಿ, ನಾಗಬ್ರಹ್ಮನಾಗಿ ಜಗದೀಶ್ ಶೆಟ್ಟಿ, ದೇವಣ್ಣ ಬÇÉಾಳನಾಗಿ ಚೇತನ್ ಶೆಟ್ಟಿ ಎಲಿಯಾಳ, ಮಂಜ ಪೆರ್ಗಡೆಯಾಗಿ ಧನರಾಜ್ ಪೊಳಲಿ ಹಾಗೂ ಕೇಮರ ಬÇÉಾಳನಾಗಿ ಸುಕೇಶ್ ಶೆಟ್ಟಿ ಅವರುಗಳು ಉತ್ತಮವಾಗಿ ಅಭಿನಯಿಸಿ ಪ್ರದರ್ಶನವನ್ನು ಯಶಸ್ವಿಗೊಳಿಸಿ¨ªಾರೆ.
ಪ್ರದರ್ಶನ ಮಧ್ಯಾಂತರದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಂಘದಿಂದ ಕಲಾವಿದರನ್ನು ಗೌರವಿಸಲಾಯಿತು. ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪಾಂಗಾಳ, ಉಪಾಧ್ಯಕ್ಷರಾದ ಪ್ರಕಾಶ್ ಹೆಗ್ಡೆ ಮಟ್ಟಾರು, ಪ್ರಧಾನ ಕಾರ್ಯದರ್ಶಿ ಮದಂಗಲ್ಲು ಆನಂದ ಭಟ್, ಕೋಶಾಧಿಕಾರಿ ವಾಸು ಕುಲಾಲ್ ವಿಟ್ಲ ಮತ್ತು ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಅವಕಾಶ ನೀಡಿದ ದೇವಸ್ಥಾನದ ಆಡಳಿತ ಮಂಡಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಒಟ್ಟಿನಲ್ಲಿ ಯಕ್ಷಗಾನವು ನೂರಾರು ಕಲಾಭಿಮಾನಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಲೇಖಕ : ಕಿರಣ್ ಬಿ. ರೈ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.