ಅಂಧೇರಿ ಸ್ಥಳಿಯ ಬಿಲ್ಲವ ಅಸೋಸಿಯೇಶನ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ
Team Udayavani, Aug 26, 2018, 5:15 PM IST
ಮುಂಬಯಿ: ಬಿಲ್ಲವರ ಅಸೋ. ಅಂಧೇರಿ ಸ್ಥಳೀಯ ಸಮಿ ತಿಯ 2018-2021 ರ ಅವಧಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಪದಗ್ರಹಣ, ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಆರ್ಥಿಕ ನೆರವು ಕಾರ್ಯಕ್ರಮವು ಆ. 5ರಂದು ಅಂಧೇರಿ ಪೂರ್ವದ ಕೊಂಡಿವಿಟಾದ ಶ್ರೀ ರಾಮಕೃಷ್ಣ ಮಂದಿರದ ವಠಾರದಲ್ಲಿ ಜರಗಿತು.
ಅಸೋಸಿಯೇಶನ್‌ನ ನೂತನ ಅಧ್ಯಕ್ಷ ಚಂದ್ರಶೇಖರ್. ಎಸ್. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಅಂಧೇರಿ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರ ಎಸ್. ಕೋಟ್ಯಾನ್ ಅವರು ಸ್ವಾಗತಿಸಿದರು, ಗೌರವ ಕಾರ್ಯದರ್ಶಿ ಹರೀಶ್ ಶಾಂತಿಯವರು ಸಮಿತಿಯ ಕಳೆದ ಮೂರು ವರುಷದ ವರದಿಯನ್ನು ವಾಚಿಸಿದರು. ಬಳಿಕ ಅಸೋಸಿಯೇಶನ್‌ನ ನೂತನ ಗೌರವ ಪ್ರಧಾನ ಕಾರ್ಯದರ್ಶಿ ಗಳಾದ ಧನಂಜಯ ಶಾಂತಿ ಅವರು ಅಂಧೇರಿ ಸಮಿತಿಯ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆ ಗೊಂಡ ಪದಾಧಿಕಾರಿಗಳನ್ನು ಪರಿ ಚಯಿಸಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಾಬು ಕೆ. ಪೂಜಾರಿ ಗೌರವ ಕಾರ್ಯಾಧ್ಯಕ್ಷರಾಗಿ ಹಾಗೂ ರವೀಂದ್ರ ಎಸ್. ಕೋಟ್ಯಾನ್ ಕಾರ್ಯಾಧ್ಯಕ್ಷರಾಗಿ ಪುನರಾಯ್ಕೆಗೊಂಡರು. ಉಪ ಕಾರ್ಯಾಧ್ಯಕ್ಷರಾಗಿ ಸುರೇಶ್ ಬಿ. ಸುವರ್ಣ, ಜಗನ್ನಾಥ್ ಕರ್ಕೇರ, ಗೌರವ ಕಾರ್ಯದರ್ಶಿಯಾಗಿ ಹರೀಶ್ ಶಾಂತಿ, ಗೌರವ ಕೋಶಾಧಿಕಾರಿಯಾಗಿ ಸುಧಾಕರ್ ಜತ್ತನ್ ಅವರು ಆಯ್ಕೆಯಾದರು.
ಕಾರ್ಯಾಧ್ಯಕ್ಷರಾದ ರವೀಂದ್ರ ಎಸ್. ಕೋಟ್ಯಾನ್ ಅವರು ಮಾತನಾಡಿ, ತನ್ನ ಮೇಲೆ ವಿಶ್ವಾಸವನ್ನಿಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾ ಬರುವ ಮೂರು ವರ್ಷಗಳಲ್ಲಿಯೂ ಇದೇ ರೀತಿಯ ಸಹಕಾರದಿಂದ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಸಕ್ತ ವರ್ಷದಲ್ಲಿ ಎಸ್‌ಎಸ್‌ಸಿ ಯಲ್ಲಿ ಉತ್ತಮ ಅಂಕಗಳೊಂದಿಗೆ ಸಾಧನೆಗೈದ ಸಮಿತಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆಗೈದ ಬಾಲಪ್ರತಿಭೆ ವಂಶಿಕಾ ಕಾಪು ಇವಳನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಅವರು ಮಾತನಾಡಿ, ಅಂಧೇರಿ ಸ್ಥಳೀಯ ಸಮಿತಿಯಲ್ಲಿ ಮಹಿಳೆಯರ ಸಂಖ್ಯೆಯು ಎದ್ದು ಕಾಣುತ್ತಿದೆ. ನಮ್ಮ ಸ್ಥಳೀಯ ಸಮಿತಿಗಳಲ್ಲಿ ಕಾರ್ಯಾಧ್ಯಕ್ಷೆ ಹಾಗೂ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲು ಮಹಿಳೆಯರೂ ಮುಂದೆ ಬರಬೇಕೆಂದು ತಿಳಿಸಿದರು. ಅಸೋಸಿಯೇಶನ್‌ನ ಉಪಕಾರ್ಯಾ ಧ್ಯಕ್ಷರುಗಳಾದ ಶಂಕರ್ ಡಿ. ಪೂಜಾರಿ, ಹರೀಶ್ ಜಿ. ಅಮೀನ್ ಇವರೂ ಸಂದಭೋìಚಿತವಾಗಿ ಮಾತನಾಡಿ ದರು. ಅಂಧೇರಿ ಸಮಿತಿಯ ಕಾರ್ಯ ಚಟುವಟಿಕೆಗಳಿಗೆ ಸಹಕಾರವನ್ನು ನೀಡುತ್ತಿರುವ ಲಕ್ಷ್ಮೀ ಕೋಟ್ಯಾನ್ ಅವರನ್ನು ಗೌರವಿಸಲಾಯಿತು.
ಚಂದ್ರಶೇಖರ ಎಸ್. ಪೂಜಾರಿಯವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಅಂಧೇರಿ ಸಮಿತಿಯಲ್ಲಿ ಎಲ್ಲರೂ ಹಸನ್ಮುಖೀಗಳಾಗಿದ್ದು ಇಂತಹ ಲವಲವಿಕೆಯಿರುವ ಜನರಿಂದಲೇ ನಮ್ಮ ಸಮಾಜ ಎತ್ತರಕ್ಕೆ ಬೆಳೆಯುತ್ತದೆ. ನಾನು ಎನ್ನದೆ ನಾವೆಂಬ ಭಾವನೆಯಿಂದ ಕೆಲಸ ಮಾಡಿದರೆ ಖಂಡಿತಾ ಯಶಸ್ಸು ಸಿಗುತ್ತದೆ ಎಂದು ನುಡಿದರು.
ಅಸೋಸಿಯೇಶನ್‌ನ ಉಪಾ ಧ್ಯಕ್ಷರುಗಳಾದ ಶ್ರೀನಿವಾಸ ಕರ್ಕೇರ, ದಯಾನಂದ್ ಆರ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜೇಶ್ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಉಳ್ಳಾಲ್, ಭಾರತ್ ಬ್ಯಾಂಕಿನ ನಿರ್ದೇಶಕರುಗಳಾದ ಗಂಗಾಧರ ಜೆ. ಪೂಜಾರಿ, ಜ್ಯೋತಿ ಕೆ. ಸುವರ್ಣ ಉಪಸ್ಥಿತರಿದ್ದರು. ಅಸೋಸಿಯೇಶನ್‌ಗೆ ಆಯ್ಕೆಗೊಂಡ ನೂತನ ಪದಾಧಿಕಾರಿಗಳನ್ನು ಉಪಸಮಿತಿಯ ಪದಾಧಿಕಾರಿಗಳನ್ನು ಅಂಧೇರಿ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು
ಗೌರವ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಶಾಂತಿ ಸಭಾ ಕಾರ್ಯಕ್ರಮವನ್ನೂ ಹಾಗೂ ಕುಮಾರಿ ಸುಶ್ಮಿತಾ ಕೋಟ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಅಸೋಸಿಯೇಶನ್‌ನ ಮಾಜಿ ಕಾರ್ಯದರ್ಶಿಗಳಾದ ಧರ್ಮಪಾಲ್ ಜಿ. ಅಂಚನ್ ಹಾಗೂ ಲಕ್ಷ್ಮೀ ಕೋಟ್ಯಾನ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ
ಮನಮುಟ್ಟಿದ ನೃತ್ಯ; ಇಂದಿನ ಜಗತ್ತಿನಲ್ಲಿ ಅರ್ಧನಾರೀಶ್ವರನ ಪ್ರಸ್ತುತಿ
Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ
Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು
ಬ್ರಿಟನ್‌ನ “ಅನಿವಾಸಿ.ಕಾಂ’ ಸಾಹಿತ್ಯ ಜಾಲಜಗುಲಿಗೆ ದಶಮಾನೋತ್ಸವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.