ಅಂಧೇರಿ ಕರ್ನಾಟಕ ಸಂಘ: ಕುಣಿತ ಭಜನೆ ಸ್ಪರ್ಧೆ ಪ್ರಶಸ್ತಿ ಪ್ರದಾನ
Team Udayavani, Jul 12, 2018, 4:51 PM IST
ಮುಂಬಯಿ: ಅಂಧೇರಿ ಕರ್ನಾಟಕ ಸಂಘದ 12 ನೇ ವಾರ್ಷಿಕೋತ್ಸವದ ಅಂಗವಾಗಿ ಕುಣಿತ ಭಜನ ಸ್ಪರ್ಧೆಯು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆಯಿತು.
ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕಾಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಮತ್ತು ವೇದಮೂರ್ತಿ ಎಸ್. ಎನ್. ಉಡುಪ ಅವರು ದೀಪಪ್ರಜ್ವಲಿಸಿ ಕುಣಿತ ಭಜನ ಸ್ಪರ್ಧೆಗೆ ಚಾಲನೆ ನೀಡಿದರು. ಶ್ರೀ ಭ್ರಮರಾಂಬಿಕೆ ದೇವಸ್ಥಾನ ಸಾಕಿನಾಕಾ ಮಹಿಳಾ ಸದಸ್ಯೆಯರಿಂದ ಸಾಂಕೇತಿಕವಾಗಿ ಕುಣಿತ ಭಜನೆ ಪ್ರಾರಂಭಗೊಂಡಿತು.
ಸ್ಪರ್ಧೆಯಲ್ಲಿ ಮುಂಬಯಿ ಹಾಗೂ ಊರಿನ ಒಟ್ಟು 7 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಶ್ರೀ ರಾಧಾಕೃಷ್ಣ ಭಜನ ಮಂಡಳಿ ಕದಿಕೆ ಸಸಿಹಿತತ್ಲು ತಂಡವು ಪ್ರಥಮ ಬಹುಮಾನ 20 ಸಾವಿರ ರೂ. ಹಾಗೂ ಟ್ರೋಫಿ, ದ್ವಿತೀಯ ಸ್ಥಾನವನ್ನು ಶ್ರೀ ರಾಮ ಭಜನಾ ಮಂದಿರ ಬಟ್ಟೆಕುದ್ರು ಕುಂದಾಪುರ 15 ಸಾವಿರ ರೂ. ಮತ್ತು ಟ್ರೋಫಿ ಹಾಗೂ ಜರಿಮೆರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನವು ತೃತೀಯ ಬಹುಮಾನ ಪಡೆದುಕೊಂಡಿತು. ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.
ಸ್ಪರ್ಧೆಯಲ್ಲಿ ಶ್ರೀ ದತ್ತಾತ್ರೇಯ ಭಜನಾ ಮಂಡಳಿ ಅಸಲ್ಫಾ, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜರಿಮೆರಿ, ಶ್ರೀ ಆದಿಶಕ್ತಿ ದೇವಸ್ಥಾನ ಥಾಣೆ, ಮಹಿಷ ಮರ್ದಿನಿ ಭಜನಾ ಮಂಡಳಿ ಬೊರಿವಲಿ, ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಶ್ರೀ ರಾಮ ಭಜನಾ ಮಂದಿರ ಬಟ್ಟೆಕುದ್ರು ಕುಂದಾಪುರ, ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಕದಿಕೆ ಸಸಿಹಿತ್ಲು ತಂಡಗಳು ಭಾಗವಹಿಸಿದ್ದವು.
ತೀರ್ಪುಗಾರರಾಗಿ ವಿಶ್ವನಾಥ್ ಭಟ್, ಶೇಖರ ಸಸಿಹಿತ್ಲು, ಸರಿಯಾ ಕೋತ್ವಾಲ್ ಅವರು ಸಹಕರಿಸಿದರು. ಸ್ಪರ್ಧಾಳುಗಳ ವಿವರವನ್ನು ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಸಸಿಹಿತ್ಲು ಓದಿದರು. ಪತ್ರಕರ್ತ ದಯಾ ಸಾಗರ್ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿದರು. ಪಾಲ್ಗೊಂಡ ಎಲ್ಲಾ ಭಜನಾ ತಂಡಗಳಿಗೂ ಸಮಾಧಾನಕರ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸಂಸ್ಥಾಪಕ ಕೈರಬೆಟ್ಟು ವಿಶ್ವನಾಥ್ ಭಟ್, ಕ್ಲಾಸಿಕ್ ಗ್ರೂಪ್ ಆಫ್ ಹೊಟೇಲ್ಸ್ ನ ಸುರೇಶ್ ಕಾಂಚನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಜೆರಿಮೆರಿ ಶ್ರೀ ಉಮಾಮಹೇಶ್ವರಿ ಮಂದಿರದ ಅರ್ಚಕ ಎಸ್. ಎನ್. ಉಡುಪ, ಟೆಕ್‌ನಿಕ್ ಎಂಜಿನೀಯರಿಂಗ್ ಇದರ ಎಂಡಿ ನಾಗರಾಜ್ ಪಡುಕೋಣೆ, ಉದ್ಯಮಿ ಸುಭಾಷ್ ಶೆಟ್ಟಿ, ಸುಗಮ ಸಂಗೀತ ಪರಿಷತ್ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾಪು, ಫಾಸ್ಟ್‌ಟ್ರಾÂಕ್ ವಲ್ಶ್ವೈಡ್ ಪ್ರೈವೇಟ್ ಲಿಮಿಟೆಡ್ ಇದರ ಮಂಜುನಾಥ ಶೆಟ್ಟಿ, ಗಜಾನನ ಇಂಡಸ್ಟಿÅàಸ್ ಇದರ ಬಿ. ಗಣಪತಿ, ಸ್ಟ್ರೇಕಾನ್ ಬಿಲ್ಡರ್ ಆ್ಯಂಡ್ ಡೆವಲಪರ್ ಇದರ ಸುರೇಶ್ ಶೆಟ್ಟಿ, ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ರಾಮಚಂದ್ರ ಗಾಣಿಗ, ಉದ್ಯಮಿ ಪ್ರವೀಣ್ ಶೆಟ್ಟಿ ಪುಣೆ ಉಪಸ್ಥಿತರಿದ್ದರು.
ಸಂಘದ ಸಂಸ್ಥಾಪಕಾಧ್ಯಕ್ಷ ಕೃಷ್ಣ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ಪಿ. ಧನಂಜಯ ಶೆಟ್ಟಿ, ಅಧ್ಯಕ್ಷ ಹ್ಯಾರಿ ಸಿಕ್ವೇರಾ, ಉಪಾಧ್ಯಕ್ಷರುಗಳಾದ ರವೀಂದ್ರ ಶೆಟ್ಟಿ ಮತ್ತು ಸತೀಶ್ ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ರಾವ್, ಜತೆ ಕಾರ್ಯದರ್ಶಿ ದಿನೇಶ್ ಆರ್. ಕೆ., ಗೌರವ ಕೋಶಾಧಿಕಾರಿ ಗಣೇಶ್ ಬಲ್ಯಾಯ, ಜತೆ ಕೋಶಾಧಿಕಾರಿ ಸೀತಾರಾಮ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ
MUST WATCH
ಹೊಸ ಸೇರ್ಪಡೆ
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.