ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು
ಭಾರತೀಯ ಮೂಲದ ಬಾಲಕಿಯ ಮಹಾನ್ ಸಾಧನೆ
Team Udayavani, Nov 28, 2020, 4:08 PM IST
ಮಹಾಮಾರಿ ಕೊರೊನಾಗೆ ಸೂಕ್ತ ಔಷಧದ ಹುಡುಕಾಟ ಇನ್ನೂ ನಡೆಯುತ್ತಿದೆ. ದೇಶ ವಿದೇಶೀಯ ಪ್ರಸಿದ್ಧ ಔಷಧದ ಕಂಪೆನಿಗಳು ಕಳೆದ 11 ತಿಂಗಳುಗಳಿಂದ ಹಗಲಿರುಳು ಪ್ರಯತ್ನಿಸುತ್ತಿದ್ದರೂ ಇದುವರೆಗೂ ಸೂಕ್ತ ಔಷಧ ಮಾರುಕಟ್ಟೆಗೆ ಬಂದಿಲ್ಲ.
ಈ ನಡುವೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 14 ವರ್ಷದ ಬಾಲಕಿ ಅನಿಕಾ ಚೆಬ್ರೊಲು ಅಮೋಘ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿಂದ್ದಾಳೆ. 3 ಎಂ ಚಾಲೆಂಜ್ ವೆಬ್‌ಸೈಟ್ ಮಾಹಿತಿ ಪ್ರಕಾರ ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು ಎನ್ನಲಾಗಿದೆ.
14ರ ಪೋರಿಯ ಅಮೋಘ ಸಾಧನೆ
ಅಮೆರಿಕದ ಟೆಕ್ಸಾಸ್‌ನ ಫ್ರಿಸ್ಕೋನಲ್ಲಿ ನೆಲೆಸಿರುವ ಅನಿಕಾ ಚೆಬ್ರೊಲು ಅವರು ಕೋವಿಡ್-19 ಸಂಭಾವ್ಯ ಚಿಕಿತ್ಸೆ ಒದಗಿಸುವ ಸಂಶೋಧನೆಗಾಗಿ 25,000 (18 ಲಕ್ಷ ರೂ.) ಡಾಲರ್ ಬಹುಮಾನ ಹಾಗೂ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆದ್ದಿದ್ದಾರೆ. ಪ್ರೊಟೀನ್ ಸ್ಟ್ರೈಕ್ಸ್ ಸಂಶೋಧನೆ ಮಾಡಿ ಕೋವಿಡ್- 19ಗೆ ಸಂಭಾವ್ಯ ಆ್ಯಂಟಿ ವೈರಲ್ ಡ್ರಗ್ ಕಂಡು ಹಿಡಿದಿದ್ದು, ಸಿಲಿಕೋ ಮೆಥೆಡೋಲಾಜಿ ಬಳಸಿ ಈ ಔಷಧವನ್ನು ಆನ್ವೇಷಿಸಿದ್ದಾರೆ.
ಸಾಂಕ್ರಾಮಿಕ ರೋಗ ಪತ್ತೆಗೆ ಮದ್ದರೆಯುವ ಪ್ರಯತ್ನ
ಕೊರೊನಾ ಬರುವುದಕ್ಕೂ ಮುಂಚೆಯೆ ಅನಿಕಾ, ಈ ಕುರಿತು ಸಂಶೋಧನೆ ಆರಂಭಿಸಿದ್ದರು. ಮೊದಲು ಸಿಸನಲ್ ಫ್ಲೂ (ಶೀತಜ್ವರ) ಅನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತ ಅಧ್ಯಯನ ನಡೆಸಿದ್ದ ಅನಿಕಾಳ ಯೋಜನೆ ಈಗ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಔಷಧ ಕಂಡುಹಿಡಿಯುವ ದಾರಿಯಲ್ಲಿ ಸಾಗಿದೆ. ಸೋಂಕಿಗೆ ಚಿಕಿತ್ಸೆ ಅಭಿವೃದ್ಧಿಪಡಿಸಲು ಹಲವು ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬಳಸಿಕೊಂಡು ವೈರಸ್‌ನ ಯಾವ ಭಾಗಕ್ಕೆ, ಹೇಗೆ ಅಣುವನ್ನು ಬಂಧಿಸಬಹುದು ಎಂದು ಅನಿಕಾ ತಿಳಿದುಕೊಂಡಿದ್ದಾರೆ.
ಚಿಕಿತ್ಸೆ ಕಂಡುಹಿಡಿಯುವಲ್ಲಿ ಸಹಕಾರಿ
ಸಾರ್ಸ್-ಕೋವಿಡ್- 2 ವೈರಸ್ ನ ಸ್ಟ್ರೈಕ್ ಪ್ರೋಟಿನ್‌ಗೆ ಅಂಟುವ ಪ್ರಮುಖ ಸಂಯುಕ್ತವನ್ನು ಅಭಿವೃದ್ಧಿಪಡಿಸಿರುವ ನನ್ನ ಪ್ರಯತ್ನ ಸಾಗರದಲ್ಲಿ ಒಂದು ಹನಿಯಂತೆ ಅನಿಸಿದರೂ ಅದು ಮುಂದೆ ಉಪಯೋಗಕ್ಕೆ ಬರಬಹುದು. ನಾನು ಹೇಗೆ ಈ ಅಣುವನ್ನು ಅಭಿವೃದ್ಧಿಪಡಿಸಿದೆ ಎಂಬುದು ವೈರಾಲಾಜಿಸ್ಟ್ ಮತ್ತು ಔಷಧ ಅಭಿವೃದ್ಧಿ ತಜ್ಞರ ಜತೆ ಸೇರಿದಾಗ ಈ ವೈರಸ್‌ಗೆ ಚಿಕಿತ್ಸೆ ಕಂಡುಹಿಡಿಯುವಲ್ಲಿ ಸಹಾಯಮಾಡಬಹುದು ಎಂದು ಅನಿಕಾ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಳಾಗುವ ಆಸೆ
ಮುಂದೊಂದು ದಿನ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಳಾಗಬೇಕೆಂಬ ಎಂಬ ಮಹದಾಸೆಯನ್ನಿಟ್ಟುಕೊಂಡಿರುವ ಅನಿಕಾಳಿಗೆ ವಿಜ್ಞಾನದ ಮೇಲೆ ಪ್ರೀತಿ ಮತ್ತು ಉತ್ಸಾಹ ಬರಲು ಅವರ ತಾತ ಕಾರಣ ಎನ್ನುತ್ತಾಳೆ. ತಾತಾ ನನಗೆ ಆವರ್ತಕ ಕೋಷ್ಟಕ ಮತ್ತು ಇತರ ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳುವಂತೆ ಮಾಡಿದರು. ನಾನು ಬೆಳೆಯುತ್ತ ವಿಜ್ಞಾನದೆಡೆಗೆ ಆಸಕ್ತಿ ಬೆಳೆಸಿಕೊಂಡೆ ಎನ್ನುತ್ತಾಳೆ ಯುವ ವಿಜ್ಞಾನಿ ಅನಿಕಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.