ತುಳುವ ಜಾಲ್ಡ್ ಕೃಷ್ಣ ಪಾರ್ದನ ಇಂದು ಸಮಾರೋಪ
Team Udayavani, Jun 18, 2021, 1:21 PM IST
ಮುಂಬಯಿ: ಮುಂಬಯಿ ತುಳು, ಕನ್ನಡಿಗರನ್ನು ಒಳಗೊಂಡ ಐಲೇಸಾ ದಿ ವಾಯ್ಸ ಆಫ್ ಓಶಿಯನ್ ಮತ್ತು ಇಸ್ಕಾನ್ ಬೆಂಗಳೂರು ಸೌತ್ ಸಂಯು ಕ್ತವಾಗಿ ಕಳೆದ ರವಿವಾರದಿಂದ ನಿರಂತರ
ವಾಗಿ 6 ದಿನಗಳಿಂದ ತುಳುವಿನಲ್ಲಿ ಭಗವದ್ಗೀತೆಯ ಸಾರ ಕಾರ್ಯಕ್ರಮ ವನ್ನು (ತುಳುವ ಜಾಲ್ಡ್ ಕೃಷ್ಣ ಪಾರ್ದನ) ಯಶಸ್ವಿಯಾಗಿ ನಡೆಸಿದ್ದು, ಇದೀಗಲೇ ಸುಮಾರು 31 ರಾಷ್ಟ್ರಗಳಲ್ಲಿ ನೆಲೆಸಿರುವ ತುಳು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.
ತುಳು ವಿಶ್ವ ಸಮ್ಮೇಳನ ಯಶಸ್ವಿ ರೂವಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಬಿಯ ಸಂಘಟಕ ಸರ್ವೋತ್ತಮ ಶೆಟ್ಟಿ ಕಾರ್ಯಕ್ರ ಮವನ್ನು ಉದ್ಘಾಟಿಸಿ, ಪ್ರಸಾದೇಶ್ವರ ಕೃಷ್ಣದಾಸ ಸ್ವಾಮೀಜಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಜೂ. 18ರಂದು ಸಂಜೆ ವಿಶ್ವ ತುಳು ಸಮ್ಮೇಳನದ ಪ್ರಧಾನ ರೂವಾರಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾ
ಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಶುಭಾಶಂಸನೆ ಯೊಂದಿಗೆ ಸರ್ವೋತ್ತಮ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಮಾರೋಪ ನಡೆಯಲಿದೆ.
ನಿರಂತರವಾಗಿ 6 ದಿನಗಳ ಕಾಲ ಪ್ರತೀದಿನ ರಾತ್ರಿ 7ರಿಂದ 8.15ರ ವರೆಗೆ ನಡೆಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಈಗಾಗಲೇ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವತೀ ರ್ಥ ಸ್ವಾಮೀಜಿ, ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಉಡುಪಿ ಶ್ರೀ ಪರ್ಯಾ ಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯಾ ತೀರ್ಥ ಶ್ರೀಪಾದರು, ಕೇಮಾರು ಸಾಂದೀಪನೀ ಸಾಧನಾಶ್ರ ಮದ ಶ್ರೀ ಈಶ ವಿಟuಲದಾಸ ಸ್ವಾಮೀಜಿ,
ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನ್‌ದಾಸ್ ಪರಮಹಂಸ ಸ್ವಾಮೀಜಿ, ಕಾಸರಗೋ ಡು ಉಪ್ಪಳದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಸುಂದರ್ ದಾಸ್ ಪ್ರಭುಜಿ ಬೃಂದಾವನ್ ಅವರು ಐಲೇಸಾ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿ ಹರಸಿದ್ದಾರೆ. ಆರ್‌ಎಸ್‌ಎಸ್ ಧುರೀಣ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಸಹಿತ ಹಲವಾರು ಗಣ್ಯರು ಶುಭಾಶಂಸನೆಗೈದಿದ್ದಾರೆ.
ಒಂಬತ್ತು ತಿಂಗಳ ಐಲೇಸಾ ದಿ ವಾಯ್ಸ ಆಫ್ ಓಶಿಯನ್ ಮೊದಲ ಬಾರಿಗೆ ಭಗವದ್ಗೀತೆಯನ್ನು ತುಳುವಿನಲ್ಲಿ ತುಳುವ ಜಾಲ್ಡ್ ಕೃಷ್ಣ ಪಾರ್ದನ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಕೊನೆಯ ದಿನವಾದ ಶುಕ್ರವಾರ ಒಡಿಯೂರು ಮಠಾಧೀಶ ಶ್ರೀ ಗುರು ದೇವಾನಂದ ಸ್ವಾಮೀಜಿ ಮತ್ತು ಕೇಮಾರು ಶ್ರೀ ಈಶ ವಿಟuಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಉಭಯ ಸಂಸ್ಥೆಗಳು ತುಳು ಭಾಷೆಗಾಗಿ ಸಂಸ್ಕೃತಿಯ ಉಳಿವಿಗಾಗಿ ಕೈಗೊಂಡ ಈ ಭಕ್ತಿ ಸಾರ ಕಾರ್ಯಕ್ರಮವು ಭಕ್ತರಿಗೆ ಮನೆಯಲ್ಲಿದ್ದೇ ಆನ್‌ಲೈನ್ ಮೂಲಕ ನೋಡಿ ಕೇಳಿ ದೇವರ ಕೃಪೆಗೆ ಪಾತ್ರರಾಗಲು ನೂತನ ಯೋಚನೆ, ಅನುಭವ ಮತ್ತು ಪ್ರಯತ್ನವಾಗಿದೆ. ವಿಶ್ವದ ಇನ್ನಷ್ಟು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಟೀಮ್ ಐಲೇಸಾ ತಂಡದ ಪ್ರಧಾನ ರೂವಾರಿ, ಗಾಯಕ ರಮೇಶ್ಚಂದ್ರ ಮತ್ತು ಸುರೇಂದ್ರಕುಮಾರ್ ಮಾರ್ನಾಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.