29ನೇ ವಾರ್ಷಿಕ ಮಹಾಪೂಜೆ ಸಂಪನ್ನ
Team Udayavani, Jun 20, 2021, 12:11 PM IST
ಮುಂಬಯಿ: ಮೀರಾರೋಡ್‌ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 29ನೇ ವಾರ್ಷಿಕ ಮಹಾಪೂಜೆಯು ಜೂ. 14ರಂದು ಕೋವಿಡ್ ನಿಯಮಾನುಸಾರದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರಳ ರೀತಿಯಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ನವಗ್ರಹ ಹೋಮ, ನವಕ ಕಲಶಾಭಿಷೇಕ ಗಣಪತಿ ಹೋಮ, ಪ್ರಸನ್ನ ಪೂಜೆ ನಡೆಯಿತು. ರಾತ್ರಿ ದೀಪಾರಾಧನೆ, ರಂಗಪೂಜೆ, ಮಹಾಮಂಗಳಾರತಿ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾತಿಂಜ ಜನಾರ್ಧನ್ ಭಟ್ ಅವರು ನಡೆಸಿಕೊಟ್ಟರು. ಪೂಜೆಯಲ್ಲಿ ಮಾಧವ ಭಟ್, ಸುರೇಶ್ ಭಟ್ ಕುಂಟಾಡಿ ಮತ್ತು ವಿಪ್ರ ವೃಂದದವರು ಸಹಕರಿಸಿದರು.
ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಆಡಳಿತ ಮೊಕ್ತೇಸರ ಶಿಮಂತೂರು ಮಜಲ ಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ದೇವಸ್ಥಾನದ ಟ್ರಸ್ಟಿಗಳಾದ ಅನಿಲ್ ಶೆಟ್ಟಿ, ಪ್ರಸನ್ನ ಶೆಟ್ಟಿ ಬೋಳ, ಪ್ರಸನ್ನ ಶೆಟ್ಟಿ ಕುರ್ಕಾಲ್, ಆನಂದ್ ಶೆಟ್ಟಿ ಐಕಳ, ಚಂದ್ರ ಶೆಟ್ಟಿ ಶಿಮಂತೂರು ಮಜಲಗುತ್ತು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.