ಅಪಾಯದ ಸ್ಥಿತಿಯಲ್ಲಿ ಮುಂಬಯಿ ಪರಿಸರದ ಸರೋವರಗಳು
Team Udayavani, Jul 4, 2021, 11:34 AM IST
ಮುಂಬಯಿ: ನಗರದಲ್ಲಿಯ ವಸತಿ ಪ್ರದೇಶಗಳ ಕೊಳಚೆನೀರು, ತ್ಯಾಜ್ಯ, ಕಾಂಕ್ರೀ ಟಿಕರಣ ಇತ್ಯಾದಿಗಳಿಂದಾಗಿ ಮುಂಬಯಿ ಸುತ್ತ ಮುತ್ತಲಿನ ಪ್ರದೇಶಗಳ ಸರೋವರಗಳ ಸ್ಥಿತಿ ಪ್ರಸ್ತುತ ಹದಗೆಡುತ್ತಿರುವುದಲ್ಲದೆ, ಇದರೊಂದಿಗೆ ಜಲ ಸಂಪನ್ಮೂಲಗಳು ಅಪಾಯದಲ್ಲಿದೆ.
ಮುಂಬಯಿ ಪೊವಾಯಿ ಸರೋವರಕ್ಕೆ ನಗರದಲ್ಲಿಯ 17 ಒಳಚರಂಡಿಯಿಂದ ಕೊಳಚೆನೀರನ್ನು ಬಿಡಲಾಗುತ್ತಿದ್ದು, ಇದರಿಂದ ಗಣೇಶಘಾಟ್ ಮತ್ತು ಉತ್ತರ ಭಾಗದ ಸಮೀಪವಿರುವ ಪ್ರದೇಶಗಳಲ್ಲಿ ನೀರು ಹೆಚ್ಚು ಕಲುಷಿತಗೊಂಡಿದೆ. ಇದಲ್ಲದೆ ಸರೋವರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಸರೋವರದ ಕೆಳಭಾಗಗಳಲ್ಲಿ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಸಂಗ್ರವಾಗಿರುವುದರಿಂದ ಇದರ ಆಳವು ಕಡಿಮೆಯಾಗಿದ್ದು, ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಗೊಂಡಿದೆ.
ಕಲುಷಿತ ನೀರು
ಸೂರ್ಯನ ಬೆಳಕು ನೀರನ ಎಷ್ಟು ಆಳಕ್ಕೆ ತಲುಪುತ್ತದೆ ಎಂಬುದರ ಮೂಲಕ ನೀರಿನ ಪಾರದರ್ಶಕತೆಯನ್ನು ಅಳೆಯಲಾಗುತ್ತದೆ. 1989ರಲ್ಲಿ ಪೊವಾಯಿ ಸರೋವರದ ಪಾರದರ್ಶಕತೆ 120 ಸೆಂ.ಮೀ.ಗಳಷ್ಟಿತ್ತು. ಅದೇ 2002ರಲ್ಲಿ ಇದು 100 ಸೆ. ಮೀ.ಗೆ ಇಳಿದಿತ್ತು. ಈಗ ಇದು ಕೇವಲ 19ರಿಂದ 20 ಸೆ. ಮೀ. ಪಾರದರ್ಶಕತೆ ಉಳಿದಿದೆ ಎಂದು ಸರೋವರವನ್ನು ಅಧ್ಯಯನ ಮಾಡುತ್ತಿರುವ ತಜ್ಞ ಡಾ| ಪ್ರಮೋದ್ ಸಲಸ್ಕರ್ ತಿಳಿಸಿದ್ದಾರೆ.
ಈ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಂದಾಗಿ ಜಮೀನುಗಳನ್ನು ಕಾಂಕ್ರಿಟ್ ಮಾಡಲಾಗಿದೆ. ಇದರಿಂದಾಗಿ ನೆಲದ ಮೇಲೆ ಬೀಳುವ ಮಳೆ ನೀರು ಸರೋವರಕ್ಕೆ ಸೇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪಾಲ^ರ್ ತೆಂಬೋಡದಲ್ಲಿರುವ ಗಣೇಶಕುಂಡ್ ಸರೋವರವು ವರ್ಷಪೂರ್ತಿ ನೀರನ್ನು ಹೊಂದಿತ್ತು. ಆದರೆ ಸುತ್ತಮುತ್ತಲಿನ ನಿರ್ಮಾಣಗಳ ಮಣ್ಣು ಮತ್ತು ಗಣೇಶ ಮೂರ್ತಿಗಳ ವಿಸರ್ಜನೆಗಳಿಂದಾಗಿ ಸರೋವರದ ಆಳದಲ್ಲಿ ತ್ಯಾಜ್ಯಗಳು ಸಂಗ್ರಹವಾಗಿದೆ. ಇದರ ಪರಿಣಾಮ, ನೀರು ಮಣ್ಣಿನಲ್ಲಿ ಹರಿಯುವುದಿಲ್ಲ ಮತ್ತು ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಅನೇಕ ಸ್ಥಳಗಳಲ್ಲಿ ಗೋಡೆಗಳನ್ನು ಸಿಮೆಂಟಿನಿಂದ ಮುಚ್ಚಲಾಗಿದ್ದರಿಂದ ಸರೋವರಗಳು ಟ್ಯಾಂಕ್‌ಗಳ ರೂಪವನ್ನು ಪಡೆದಿವೆ.
ಲೋಖಂಡ್ವಾಲಾ ಸರೋವರದ ಬಗ್ಗೆ ಕಳವಳ
ಲೋಖಂಡ್ವಾಲಾ-ಒಶಿವಾರಾ ನಿವಾಸಿಗಳ ಸಂಘದ ಧವಲ್ ಶಾ ಅವರು ಅಂಧೇರಿಯ ಲೋಖಂಡ್ವಾಲಾ ಸರೋವರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾರಾಟವಾಗದ ವಿಗ್ರಹಗಳನ್ನು ಗಣೇಶೋತ್ಸವದ ಬಳಿಕ ಈ ಸರೋವರದಲ್ಲಿ ಮುಳುಗಿಸಲಾಗುತ್ತಿದೆ. ಆದ್ದರಿಂದ ಕೆರೆಯ ಸ್ವತ್ಛತೆ ಮತ್ತು ಜಲಚರ ಜೀವಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.