ಬರೋಡ ಗಾಯತ್ರಿ ಪರಿವಾರದಿಂದ ಕಾರ್ಮಿಕರಿಗೆ ನೆರವು ವಿತರಣೆ
Team Udayavani, May 17, 2021, 12:47 PM IST
ಮುಂಬಯಿ: ಕೋವಿಡ್ ಸಂಕಷ್ಟದ ದಿನಗಳಲ್ಲಿ ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೆ ಕಂಗಾಲಾಗಿವೆ. ಅದರಲ್ಲೂ ಸಂಪಾದನೆಗೈದು ಸಂಸಾರ ನಡೆಸುತ್ತಿದ್ದವರಲ್ಲಿ ಕೆಲವು ಕಾರ್ಮಿಕರು ಕೊರೊನಾದಿಂದ ಸಾವನ್ನಪ್ಪಿದ್ದು, ಇಂತಹ ಕುಟುಂಬಗಳಿಗೆ ಗಾಯತ್ರಿ ಪರಿವಾರ ಬರೋಡದಿಂದ ಮೂರು, ನಾಲ್ಕು ತಿಂಗಳ ವರೆಗೆ ಬೇಕಾಗುವಷ್ಟು ಆಹಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆಯಲಾಯಿತು.
ಬರೊಡಾ ಮತ್ತು ಸುತ್ತಮುತ್ತಲಿನ ಸುಮಾರು 250 ಕುಟುಂಬ ಗಳಿಗೆ ಇದುವರೆಗೆ ಬರೊಡದಲ್ಲಿನ ಗಾಯತ್ರಿ ಪರಿವಾರ ಇಂತಹ ಸೇವಾ ಕಾರ್ಯದಲ್ಲಿ ನಿತ್ಯ ಕೈಜೋಡಿಸಿದ್ದು, ಅದೆಷ್ಟೋ ದಿನಕೂಲಿ ಕಾರ್ಮಿಕ ಪರಿವಾರಗಳಿಗೆ ಪ್ರಯೋಜನಕಾರಿಯಾಗಿದೆ.
ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇನ್ನಷ್ಟು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪ್ರಸಿದ್ಧ ಗಾಯತ್ರಿ ಶಕ್ತಿ ಪೀಠ ದೇಗುಲದ ಪ್ರಮುಖ, ಗಾಯತ್ರಿ ಪರಿವಾರ ಬಂಧು, ಕೊಡುಗೈದಾನಿ ದಯಾನಂದ ಬೋಂಟ್ರಾ ಕಾರ್ಕಳ ತಿಳಿಸಿದ್ದಾರೆ. ಮಾತಾ ಗಾಯತ್ರಿ ಕೊರೊನಾ ಮಹಾಮಾರಿ ಸಾಂಕ್ರಾಮಿಕ ಸೋಂಕಿನಿಂದ ಮುಕ್ತಗೊಳಿಸಿ ದೇಶದ ಸರ್ವ ಕುಟುಂಬಗಳನ್ನು ಮತ್ತು ಎಲ್ಲರನ್ನೂ ಕಾಪಾಡಲಿ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.