ಚರಿತ್ರೆ ನಿರ್ಮಿಸಿದ ಅಪೂರ್ವ ಸಾಧಕ ಜಾರ್ಜ್: ಡಾ| ಜಿ. ಎನ್. ಉಪಾಧ್ಯ
Team Udayavani, Jul 22, 2021, 1:41 PM IST
ಮುಂಬಯಿ: ಘನ ವ್ಯಕ್ತಿತ್ವದ ಜಾರ್ಜ್ ಅವರು ಮುಂಬಯಿಯಲ್ಲಿ ಅರಳಿದ ಮಹಾನ್ ಪ್ರತಿಭೆ. ಮುಂಬಯಿಯ ಕಾರ್ಮಿಕರ ಆಂದೋಲನದಲ್ಲಿ ಮಿಂಚಿ ಸಂಚಲನ ಉಂಟು ಮಾಡಿ ಲಕ್ಷಾಂತರ ಬಡ ಕಾರ್ಮಿಕರ ಬಾಳಿಗೆ ಬೆಳಕಾದ ಕ್ರಾಂತಿಯ ಕಿಡಿ ಅವರು. ಲೋಹಿಯಾವಾದಿ, ಛಲದಂಕಮಲ್ಲ, ದಣಿವರಿಯದ ನಿಷ್ಠಾವಂತ ರಾಜಕಾರಣಿ, ಕಾರ್ಮಿಕ ನೇತಾರ ಹೀಗೆ ವಿವಿಧ ನೆಲೆಗಳಲ್ಲಿ ಲೋಕಮಾನ್ಯರಾದ ಶ್ರೇಯಸ್ಸು ಫೆರ್ನಾಂಡಿಸ್ ಅವರಿಗೆ ಸಲ್ಲುತ್ತದೆ.
ಲೋಕೋಪಯೋಗಿಯಾದ ಅಸಾಧಾರಣವಾದ ಕಾರ್ಯ ಸಾಹಸಗಳನ್ನು ಮಾಡಿ ಸಫಲರಾದವರು ಜಾರ್ಜ್ ಎಂಬುದು ಉಲ್ಲೇಖನೀಯ. ಪ್ರತಿಯೊಬ್ಬ ವ್ಯಕ್ತಿಯೂ ಚರಿತ್ರೆಗೆ ತನ್ನ ಪಾಲಿನ ಕೊಡುಗೆಯನ್ನು ಸಂದಾಯ ಮಾಡುತ್ತಾನೆ. ಆದರೆ ಚರಿತ್ರೆ ನಿರ್ಮಿಸುವವರ ಸಂಖ್ಯೆ ವಿರಳ. ನಿಜವಾದ ಅರ್ಥದಲ್ಲಿ ಚರಿತ್ರೆಯನ್ನು ನಿರ್ಮಿಸಿದ ಅಪೂರ್ವ ಸಾಧಕ ನಮ್ಮ ಜಾರ್ಜ್ ಎಂದು ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅಭಿಪ್ರಾಯಪಟ್ಟರು.
ಸಾಂತಕ್ರೂಜ್ ಪೂರ್ವದ ವಿದ್ಯಾನಗರಿಯ ಕಲೀನಾ ಕ್ಯಾಂಪಸ್‌ನ ರಾನಡೆ ಭವನದಲ್ಲಿ ಜು. 13ರಂದು ಸುರೇಖಾ ಹೇಮನಾಥ ದೇವಾಡಿಗ ಅವರ “ಹೋರಾಟದ ಮೂಲಕ ಕ್ರಾಂತಿಯ ಕನಸು ಕಂಡ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡಿಸ್’ ಕೃತಿ ಸಮರ್ಪಣ ಕಾರ್ಯಕ್ರಮದಲ್ಲಿ ಕೃತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಜಾರ್ಜ್ ಅವರು ಮಾನವತಾವಾದಿ. ಜಾತಿ, ಮತ, ಪಂಥ, ಪಂಗಡಗಳನ್ನು ಮೀರಿ ಬೆಳೆದ ದೂರದೃಷ್ಟಿ ಹೊಂದಿದ್ದ ಪ್ರಗತಿಶೀಲ ಚಿಂತಕರೂ ಆಗಿದ್ದರು.
ಸಹಜವಾದ ಪ್ರತಿಭೆ ಸಮಾಜವನ್ನು ಮೀರಿ ಬೆಳೆಯಬಲ್ಲದು ಎಂಬುದಕ್ಕೆ ಜಾರ್ಜ್ ಅವರು ಉತ್ತಮ ನಿದರ್ಶನ. ಜಾರ್ಜ್ ಅವರ ಕುರಿತು ಅಮ್ಮೆಂಬಳ ಆನಂದ ಅವರು ಕನ್ನಡದಲ್ಲಿ ಕೃತಿಯನ್ನು ರಚಿಸಿದ್ದಾರೆ. ಇದೀಗ ದೊಡ್ಡ ಪ್ರಮಾಣದಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಧೀಮಂತ ವ್ಯಕ್ತಿತ್ವದ ಸಮಗ್ರ ದರ್ಶನ ಪ್ರಸ್ತುತ ಕೃತಿಯಲ್ಲಿ ದಾಖಲಾಗಿದೆ. ಈ ಕೃತಿಯನ್ನು ಅಭಿಜಿತ್ ಪ್ರಕಾಶನವು ಪ್ರಕಟಿಸಿದೆ. ಇದೊಂದು ಒಳ್ಳೆಯ ಕೃತಿ. ಬಹು ಶ್ರಮವಹಿಸಿ ಈ ಕೃತಿಯನ್ನು ರಚಿಸಿದ ನಮ್ಮ ವಿಭಾಗದ ಸುರೇಖಾ ದೇವಾಡಿಗ ಅವರ ಶ್ರಮ ಸಾರ್ಥಕವಾಗಿದೆ ಎಂದು ಈ ಮೌಲಿಕ ಕೃತಿಗಾಗಿ ಸುರೇಖಾ ದೇವಾಡಿಗ ಅವರಿಗೆ ಅಭಿನಂದನೆ ಸಲ್ಲಿಸಿದರು.
ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಮಾತನಾಡಿ, ಕಾರ್ಮಿಕ ನೇತಾರರಾಗಿ, ರಾಜಕೀಯ ಮುಖಂಡರಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ ಜಾರ್ಜ್ ಫೆರ್ನಾಂಡಿಸ್ ಅವರ ಜೀವನದ ವಿವಿಧ ಮುಖಗಳು, ಏಳುಬೀಳುಗಳನ್ನು ಈ ಕೃತಿಯಲ್ಲಿ ಅವರ ನಿಕಟವರ್ತಿಗಳು, ಆತ್ಮೀಯರು ಹಂಚಿಕೊಂಡಿದ್ದಾರೆ. ಇಷ್ಟೆಲ್ಲ ಮಾಹಿತಿಗಳನ್ನು ಕಲೆ ಹಾಕುವುದು ಅಷ್ಟು ಸುಲಭದ ಸಂಗತಿಯಲ್ಲ. ಸುರೇಖಾ ದೇವಾಡಿಗ ಅವರು ಬಹಳ ಪರಿಶ್ರಮಪಟ್ಟು ಸಮಯೋಚಿತ ವಿಷಯಗಳನ್ನು ಸಂಗ್ರಹಿಸಿ ದಾಖಲಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಜಾರ್ಜ್ ಫೆರ್ನಾಂಡಿಸ್ ಅವರ ಜೀವನದ ಯಶೋಗಾಥೆ ಬಿಂಬಿಸುವ ಈ ಕೃತಿ ಕನ್ನಡ ವಿಭಾಗದ ಸಂಶೋಧನ ಸಹಾಯಕಿ ಆಗಿರುವ ಸುರೇಖಾ ಅವರು ಸಂಪಾದಿಸಿರುವುದು ಅಭಿಮಾನದ ಸಂಗತಿ ಎಂದರು.
ಕೃತಿ ಸಮರ್ಪಣ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ| ಉಮಾ ರಾವ್, ಕಲಾ ಭಾಗÌತ್, ಶೈಲಜಾ ಹೆಗಡೆ, ಪ್ರತಿಭಾ ರಾವ್, ಕನ್ನಡ ವಿಭಾಗದ ಕಚೇರಿ ಸಹಾಯಕರಾದ ರೇಷ್ಮಾ ಮಾನೆ ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.