ಆರ್ಥಿಕ ಸಂಕಷ್ಟದಲ್ಲಿ ಮೀರಾ ಭಾಯಂದರ್ ಮನಪಾ
Team Udayavani, May 28, 2021, 1:24 PM IST
ಭಾಯಂದರ್: ಕೊರೊನಾ ರೋಗವನ್ನು ತಡೆಗಟ್ಟಲು ಹಗಲು-ರಾತ್ರಿ ಪ್ರಯತ್ನಿಸುತ್ತಿರುವ ಮೀರಾ ಭಾಯಂದರ್ ಮಹಾನಗರ ಪಾಲಿಕೆಯು ಕಳೆದ 2 ತಿಂಗಳಲ್ಲಿ ಕೊರೊನಾ ರೋಗಿಗಳಿಗೆ ಅಗತ್ಯ ವಸ್ತುಗಳು ಹಾಗೂ ವಿವಿಧ ಯೋಜನೆಗಳಿಗಾಗಿ 6.23 ಕೋಟಿ ರೂ. ಖರ್ಚು ಮಾಡಿದ್ದ ಪರಿಣಾಮ ಬೊಕ್ಕಸ ಖಾಲಿಯಾಗಿದ್ದು, ಆರ್ಥಿಕ ಸಂಕಟಕ್ಕೆ ಒಳಗಾಗಿ ಸರಕಾರದ ಬಳಿ ನೆರವಿನ ಹಸ್ತ ಚಾಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಮೀರಾ ಭಾಯಂದರ್ ನಗರದಲ್ಲಿ ಕೊರೊನಾ ಹೆಚ್ಚು ವೇಗವಾಗಿ ಹರಡಿದೆ. ವರದಿಯ ಪ್ರಕಾರ ಮೀರಾ ಬಾಯಂದರ್‌ನಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 48,223ಕ್ಕೆ ತಲುಪಿದೆ, ಸಾವಿನ ಒಟ್ಟು ಸಂಖ್ಯೆ 1,248ಕ್ಕೆ ತಲುಪಿದೆ. ಕಳೆದ ಎರಡು ತಿಂಗಳಲ್ಲಿ 20,500 ಪ್ರಕರಣಗಳು ವರದಿಯಾಗಿದ್ದರೆ, 443 ಮಂದಿ ಪ್ರಾಣ ಕಳೆದುಕೊಂಡಿ¨ªಾರೆ. ನಗರದ ಸರಕಾರಿ ಆಸ್ಪತ್ರೆಗಳು ಸಹಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಪಡೆಯುವುದು ಕಷ್ಟಕರವಾಗಿದ್ದು, ರೋಗಿಗಳ ಸಂಖ್ಯೆಯನ್ನು ನಿಯಂತ್ರಿಸಲು ಮನಪಾ ಕಠಿನ ನಿರ್ಬಂಧವನ್ನು ಜಾರಿಗೆ ತಂದಿದೆ. ಹೆಚ್ಚು ಹೆಚ್ಚು ರೋಗಿಗಳ ಆ್ಯಂಟಿಜನ್ ಪರೀಕ್ಷೆಗೂ ಒತ್ತು ನೀಡಲಾಗುತ್ತಿದೆ.
ಇದಕ್ಕಾಗಿ ಪುರಸಭೆ ಆಡಳಿತವು ಗೋಲ್ಡನ್ ನೆಸ್ಟ್, ಡೆಲ್ಟಾ ಮತ್ತು ಸಮೃದ್ಧಿ ಎಂಬ ಮೂರು ಕೋವಿಡ್ ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸಿದೆ. ಇದಲ್ಲದೆ ಪ್ರಮೋದ್ ಮಹಾಜನ್, ಮೀನಾ ತಾಯಿ ಠಾಕ್ರೆ ಮತ್ತು ಅಪ್ಪಾಸಾಹೇಬ್ ಧರ್ಮಾಧಿಕಾರಿ ಕೋವಿಡ್ ಆಸ್ಪತ್ರೆಗಳನ್ನು ಸ್ಥಾಪಿಸಿದೆ. ಆದ್ದರಿಂದ ಆಡಳಿತವು ಈ ಆಸ್ಪತ್ರೆಯ ಆವಶ್ಯಕತೆಗಳನ್ನು ಪೂರೈಸುವಲ್ಲಿ ಒತ್ತು ನೀಡುತ್ತಿದೆ. ಇವುಗಳಲ್ಲಿ ಮುಖ್ಯವಾಗಿ ಆಹಾರ, ಔಷಧ, ಆಮ್ಲಜನಕ, ಹಾಸಿಗೆ ಮತ್ತು ಲಸಿಕೆ ಕೇಂದ್ರಗಳು ಸೇರಿವೆ.
ಒಂದೆಡೆ ನಿಗಮದ ಆರ್ಥಿಕ ಸಂಪನ್ಮೂಲಗಳು ಕ್ಷೀಣಿಸಿ ಹಣದ ಕೊರತೆಯಿದ್ದರೆ, ಮತ್ತೂಂದೆಡೆ ಕ್ರಮಗಳಿಗಾಗಿ 6.23 ಕೋಟಿ ರೂ.ಗಳ ವೆಚ್ಚದಿಂದಾಗಿ ಭಾರೀ ಆರ್ಥಿಕ ಬಿಕ್ಕಟ್ಟು ಉಂಟಾ ಗಿದೆ. ಆಮ್ಲಜನಕ ಮತ್ತು ಔಷಧಗಳ ಬೆಲೆ ಮೂರು ಪಟ್ಟು ಹೆಚ್ಚಿರುವುದರಿಂದ ಅದನ್ನು ಪೂರೈಸಲು ನೆರವು ಒದಗಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯ ಲೆಕ್ಕಪರಿಶೋಧಕ ಅಧಿಕಾರಿ ಶರದ್ ಬೆಲ್ವಾಟೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.