ಅನಾಥ ಮಕ್ಕಳನ್ನು ಪತ್ತೆಹಚ್ಚಿ ಯೋಜನೆಗಳ ಲಾಭ ಒದಗಿಸಿ: ಡಿಸಿ
Team Udayavani, Jun 4, 2021, 2:27 PM IST
ಮುಂಬಯಿ: ಕೋವಿಡ್-19ರ ಕಾರಣದಿಂದಾಗಿ ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳನ್ನು ಪತ್ತೆಹಚ್ಚಿ ಅವರಿಗೆ ಅನ್ವಯವಾಗುವ ಎಲ್ಲ ಸರಕಾರಿ ಯೋಜನೆಗಳ ಲಾಭವನ್ನು ಒದಗಿಸಬೇಕೆಂಬ ಸ್ಪಷ್ಟ ಸೂಚನೆಗಳನ್ನು ಮುಂಬಯಿ ನಗರ ಜಿಲ್ಲಾಧಿಕಾರಿ ರಾಜೀವ್ ನಿವಾತ್ಕರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ್ದಾರೆ.
ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಸಂರಕ್ಷಣೆಗೆ ಜಿÇÉಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶ ಮತ್ತು ಮುಂಬಯಿಹೈಕೋರ್ಟ್ ಜುವ್ಹೆನಾಯಿಲ್ ನ್ಯಾಯ ಸಮಿತಿಯ ಸೂಚನೆಯಂತೆ ಕೋವಿಡ್-19 ಸಂದರ್ಭ ಮಕ್ಕಳ ಕಾಳಜಿ ಮತ್ತು ಸಂರಕ್ಷಣೆ ಮಾಡುತ್ತಿರುವ ಸಂಸ್ಥೆಗಳಲ್ಲಿರುವ ಮಕ್ಕಳಿಗೆ ಹಾಗೂ ಕೋವಿಡ್‌ನಿಂದ ಹೆತ್ತವರನ್ನು ಕಳೆದು ಕೊಂಡಿರುವ ಮಕ್ಕಳಿಗಾಗಿ ಸಮಯಕ್ಕೆ ಸರಿ ಯಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಕೋವಿಡ್-19 ಕಾರಣ ದಿಂದಾಗಿ ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳ ಬಗ್ಗೆ ತತ್‌ಕ್ಷಣವೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು.
ಇದಕ್ಕಾಗಿ ಮುಂಬಯಿ ನಗರ ಜಿಲ್ಲೆಯ ಎಲ್ಲ ಸಂಬಂಧಿತ ಏಜೆನ್ಸಿಗಳು ಸಹಕರಿಸಬೇಕು. ಕೊರೊನಾ ಅವಧಿಯಲ್ಲಿ ವಿಧವೆಯಾದ ಮಹಿಳೆಯರಿಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವ ಮೂಲಕ ಸರಕಾರದ ವಿವಿಧ ಯೋಜನೆಗಳ ಲಾಭವನ್ನು ನೀಡಬೇಕು. ಅವರಿಗೆ ಉದ್ಯೋಗ ಮತ್ತು ಸೊÌàದ್ಯೋಗಾವಕಾಶಗಳನ್ನು ಒದಗಿಸಬೇಕು. ಮಕ್ಕಳ ಶಿಕ್ಷಣ ಮತ್ತು ಇತರ ವಿಷಯಗಳಿಗಾಗಿ ಸಾಮಾಜಿಕ ಸಂಸ್ಥೆಗಳು ಸಹಕರಿಸಬೇಕು. ಅದಕ್ಕಾಗಿ ನಿರ್ದಿಷ್ಟ ಕಾರ್ಯವಿಧಾನಗಳನ್ನು ನಿರ್ಧರಿಸಲು ನಿರ್ದೇಶನ ನೀಡಿದರು.
ಅನಾಥ ಮಕ್ಕಳ ಪತ್ತೆಗೆ ಕ್ರಮಮೇ 14ರಿಂದ ಮೇ 31ರ ವರೆಗೆ ಮಾಡಿದ ಕಾರ್ಯಗಳನ್ನು ಪರಿಶೀಲಿಸಲಾಗಿದೆ. ಕೊರೊನಾದಿಂದ ಸಾವನ್ನಪ್ಪಿದವರ ಪತ್ತೆಹಚ್ಚಲು ಮತ್ತು ಪ್ರತಿ ಪೀಡಿತ ಮಗುವಿನ ತನಕ ತಲುಪಲು ಪ್ರಯತ್ನಗಳು ನಡೆಯುತ್ತಿವೆ. ಆರೋಗ್ಯ ಇಲಾಖೆಯು 63 ಆಸ್ಪತ್ರೆಗಳು ಮತ್ತು ಮುಂಬಯಿ ಕೋವಿಡ್ ಕೇಂದ್ರಗಳ ಪಟ್ಟಿಯನ್ನು ಪಡೆದುಕೊಂಡಿದೆ. ನಿಗದಿತ ಫಾರ್ಮ್ ಅನ್ನು ಭರ್ತಿ ಮಾಡಲು ಫಾರ್ಮ್ ಅನ್ನು ಸಿದ್ಧಪಡಿಸಿದೆ.
ರೋಗಿಗಳನ್ನು ಚಿಕಿತ್ಸೆಗಾಗಿ ದಾಖಲಿಸಿ ಕೋವಿಡ್ ಕೇಂದ್ರಕ್ಕೆ ಮೇಲ್ ಮಾಡಲಾಗಿದೆ. ಪ್ರತೀದಿನ ಸಾವನ್ನಪ್ಪಿದ ರೋಗಿಗಳ ಮಾಹಿತಿಯನ್ನು ಒದಗಿಸಲು ಗೂಗಲ್ ಶೀಟ್ ಫಾರ್ಮ್ ಅನ್ನು ರಚಿಸಲಾಗಿದೆ. 2020ರ ಮಾರ್ಚ್‌ನಿಂದ 2021ರ ಮೇ 25ರ ವರೆಗೆ ಕೋವಿಡ್-19ನಿಂದ ಸಾವನ್ನಪ್ಪಿದ 1,783 ರೋಗಿಗಳ ಪಟ್ಟಿಯನ್ನು ಆರೋಗ್ಯ ಇಲಾಖೆ ಸ್ವೀಕರಿಸಿದೆ. ಈ ರೋಗಿಗಳ ಸಂಬಂಧಿಕರನ್ನು ಸಂಪರ್ಕಿಸಲು ಪ್ರಾರಂಭಿಸಿದೆ. ಪ್ರಸ್ತುತ ಸಮಿತಿಯು 124 ಓರ್ವ ಪಾಲಕರನ್ನು ಹೊಂದಿದ ಮಕ್ಕಳನ್ನು ಮತ್ತು 3 ಅನಾಥರನ್ನು ಪತ್ತೆ ಹಚ್ಚಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪ್ರೇಮಾ ಘಾಟೆY ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಹಿತೇಂದ್ರ ವಾಣಿ, ಸಾರ್ವಜನಿಕ ಆರೋಗ್ಯ ಇಲಾಖೆಯ ಡಾ| ಓಂಪ್ರಕಾಶ್ ವಾಲೆ ಪವಾರ್, ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಡಾ| ಅಷ್ಟೂರ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.