ಬಡವರ ಕಣ್ಣೀರೊರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ: ಹರೀಶ್ ಜಿ. ಅಮೀನ್
Team Udayavani, Jul 23, 2021, 12:37 PM IST
ಮುಂಬಯಿ: ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಇದರ ವತಿಯಿಂದ ಸಮಾಜದ ದಾನಿಗಳ ಸಂಪೂರ್ಣ ಸಹಕಾರದಿಂದ ಅಸೋಸಿಯೇಶನ್‌ನ 22 ಸ್ಥಳೀಯ ಕಚೇರಿಯಲ್ಲಿ ಸಮಾಜದ ಅಸಹಾಯಕ ಕುಟುಂಬದವರಿಗೆ ಅಹಾರ ಕಿಟ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜು. 18ರಂದು ಬಿಲ್ಲವರ ಅಸೋಸಿಯೇಶನ್ ಕಾಂದಿವಲಿಯ ಸ್ಥಳೀಯ ಕಚೇರಿಯಲ್ಲಿ ಸಮಾಜ ಬಾಂಧವರಿಗೆ ಆಹಾರ ಕಿಟ್ ವಿತರಣೆ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ಮಾತನಾಡಿ, ಬಿಲ್ಲವರ ಅಸೋಸಿಯೇಶನ್ ಕೊರೊನಾ ಮಹಾಮಾರಿಯಿಂದ ತೊಂದರೆಗೀಡಾದ ಕುಟುಂಬದವರಿಗೆ ಆರಂಭ ದಿಂದಲೂ ವಿವಿಧ ರೂಪಗಳಲ್ಲಿ ಸಹಕರಿಸಿದೆ. ಈ ವರೆಗೆ 900 ಮಂದಿಗೆ ಆಹಾರದ ಕಿಟ್ ನೀಡಿದ್ದೇವೆ. ಈ ಕಾರ್ಯಕ್ರಮಗಳಿಗೆ ಎಲ್ಲ ದಾನಿಗಳ ಅಪಾರ ಸಹಕಾರ ದೊರಕಿದೆ. ಅಸೋಸಿಯೇಶನಿನ 89 ವರ್ಷಗಳ ಇತಿಹಾಸದಲ್ಲಿ ಜನಪರ ಸೇವೆಯಲ್ಲಿ ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ. ಸಂದರ್ಭ ಒದಗಿದಾಗ ಅಸೋಸಿಯೇಶನಿನ ಪದಾಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ದಿ| ಜಯ ಸಿ. ಸುವರ್ಣ ಅವರು ನಮಗೆ ಸ್ಫೂರ್ತಿದಾಯಕರಾಗಿದ್ದು, ಅವರ ಮಾರ್ಗದರ್ಶನ ನಮಗೆ ಸಮಾಜ ಸೇವೆಗೆ ಉತ್ತೇಜನ ನೀಡಿದೆ. ಬಡವರ ಕಣ್ಣೀರೊರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ. ನಿಮ್ಮ ಸಹಕಾರ ನಮಗೆ ಸದಾ ಸಿಗುತ್ತಿರಲಿ. ಭವಿಷ್ಯದಲ್ಲೂ ನಮ್ಮಿಂದ ಸಾಧ್ಯವಾದಷ್ಟು ಸಹಕಾರ ನೀಡಲಿದ್ದೇವೆ. ಜು. 24ರಂದು ಬಿಲ್ಲವ ಭವನದಲ್ಲಿ ರಕ್ತದಾನ ಶಿಬಿರ ಜರಗಲಿದೆ. ಇದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಬಿಲ್ಲವರ ಅಸೋಸಿ ಯೇಶನಿನ ಕಾಂದಿವಲಿಯ ಸ್ಥಳೀಯ ಕಚೇರಿಯ ಪ್ರತಿನಿಧಿ ಹರೀಶ್ ಪೂಜಾರಿ ಮಾತನಾಡಿ, ದಿ| ಜಯ ಸಿ. ಸುವರ್ಣ ಅವರ ಮಾರ್ಗದರ್ಶನದಂತೆ ಮುನ್ನಡೆಯುವ ಯುವ ಅಧ್ಯಕ್ಷರು ನಮ್ಮ ಸಮಾಜಕ್ಕೆ ದೊರಕಿ¨ªಾರೆ. ಅವರಿಗೆ ನಾವು ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದರು.
ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಯೋಗೇಶ್ ಕೆ. ಹೆಜ್ಮಾಡಿ ಮಾತನಾಡಿ, ಈ ಕಾರ್ಯಕ್ರಮ ನೋಡಿ ಬಹಳ ಸಂತೋಷವಾಗಿದೆ. ಕಾರಣ ನಮ್ಮ ಸ್ಥಳೀಯ ಕಚೇರಿಯ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ನೂತನ ಅಧ್ಯಕ್ಷ ಹರೀಶ್ ಜಿ. ಅಮೀನ್, ನಮ್ಮ ಮಾರ್ಗ
ದರ್ಶಕರು ಸ್ವರ್ಗೀಯ ಜಯ ಸಿ. ಸುವರ್ಣರ ಸೊಸೆ ನಿಶಿತಾ ಎಸ್. ಸುವರ್ಣ ಹಾಗೂ ಪುತ್ರ ಸೂರ್ಯ ಕಾಂತ್ ಜಯ ಸುವರ್ಣ ಅವರನ್ನು ಸಮ್ಮಾನಿಸುವ ಭಾಗ್ಯ ಕಾಂದಿವಲಿ ಸ್ಥಳೀಯ ಕಚೇರಿಗೆ ಸಿಕ್ಕಿದೆ. ಗುರುದೇವರ ಅನುಗ್ರಹದಿಃದ ಉತ್ತಮ ಸಮಾಜಪರ ಸೇವೆ ಮಾಡುವುದಕ್ಕೆ ಸಮಾಜ ಬಾಂಧವರ ಸಹಕಾರ ದೊರಕುತ್ತಿದೆ. ಅಧ್ಯಕ್ಷರಿಗೆ ಕಾಂದಿವಲಿಯ ಸ್ಥಳೀಯ ಕಚೇರಿಯ ಸರ್ವ ಸದಸ್ಯರೆಲ್ಲರ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.
ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ, ಭಾರತ್ ಬ್ಯಾಂಕ್‌ನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ ಅವರು ನೂತನ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರನ್ನು ಅಭಿನಂದಿಸಿದರು. ನಿಶಿತಾ ಎಸ್. ಸುವರ್ಣ ಹಾಗೂ ಅವರ ಪತಿ ಸೂರ್ಯಕಾಂತ್ ಜಯ ಸುವರ್ಣ ಅವರನ್ನು ಸ್ಥಳೀಯ ಕಚೇರಿಯ ಜತೆ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಕಾರ್ಯಕರ್ತರಾದ ವಾರಿಜಾ ಶೇಖರ್ ಕರ್ಕೇರ, ಹರೀಶ್ ಜಿ. ಅಮೀನ್ ಅಭಿನಂದಿಸಿದರು.
ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ್ ಡಿ. ಪೂಜಾರಿ, ಜತೆ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಕೇಶವ ಕೆ. ಕೋಟ್ಯಾನ್, ಕಾಂದಿವಲಿ ಸ್ಥಳೀಯ ಕಚೇರಿಯ ಪ್ರತಿನಿಧಿ ಹರೀಶ್ ಪೂಜಾರಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಅಂಚನ್, ಯುವಕ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ನೀಲೇಶ್ ಪಲಿಮಾರ್, ಅತಿಥಿ ದೀಪಕ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂದಿವಲಿಯ ಸ್ಥಳೀಯ ಕಚೇರಿ ಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್ ಎಂ. ಪೂಜಾರಿ, ಕೋಶಾಧಿಕಾರಿ ರಮೇಶ ಬಂಗೇರ, ಕಾರ್ಯಕರ್ತ ರಾದ ವಿಲಾಸ್ ಪೂಜಾರಿ, ಶೈಲೇಶ್ ಪೂಜಾರಿ,
ಯಮುನಾ ಸಾಲ್ಯಾನ್, ಸುಜಾತಾ ಪೂಜಾರಿ. ಜಯರಾಮ್ ಪೂಜಾರಿ, ವಿದ್ಯಾ ಆರ್. ಅಮೀನ್, ಅನಿತಾ ಪೂಜಾರಿ ಮೊದಲಾದವರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.