ಶ್ರೀ ವರದ ಸಿದ್ಧಿವಿನಾಯಕ ಸೇವಾಮಂಡಲ ಡೊಂಬಿವಲಿ ವಾರ್ಷಿಕೋತ್ಸವ
Team Udayavani, Jan 10, 2018, 4:27 PM IST
ಡೊಂಬಿವಲಿ: ಡೊಂಬಿವಲಿ ಪೂರ್ವದ ಶ್ರೀ ವರದಸಿದ್ಧಿವಿನಾಯಕ ಸೇವಾಮಂಡಲದ ವಾರ್ಷಿಕೋತ್ಸವವು ಡಿ.25ರಂದು ಮಂಡಲದ ವೇದಿಕೆಯಲ್ಲಿ ಸಂಭ್ರಮ ಸಡಗರದೊಂದಿಗೆ ಜರಗಿತು.
ಬೆಳಗ್ಗೆ 9.30ಕ್ಕೆ ದಕ್ಷಿಣ ಕನ್ನಡದ ಕಲಾವಿದರಾದ ಕಲ್ಲಡ್ಕ ವಿಠಲನಾಯಕ್ ಮತ್ತು ತಂಡದವರಿಂದ ಗೀತಾ ಸಾಹಿತ್ಯ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ವಿಶೇಷ ಹಾಡುಗಳ ಗಾಯನದೊಂದಿಗೆ ಆಧುನಿಕ ಜೀವನದಲ್ಲಿನ ಸಾಮರಸ್ಯ ಹಾಗೂ ಸವಾಲುಗಳನ್ನು ನಿಭಾಯಿಸುವ ಬಗ್ಗೆ ವಿಶದಪಡಿಸಿದ ಈ ಕಾರ್ಯಕ್ರಮವು ಸಭಿಕರ ಮನೆಗೆದ್ದಿತು.
ಅನಂತರ ಸಂಸ್ಥೆಯ ಅಧ್ಯಕ್ಷರಾದ ಎಲ್.ವಿ. ನಾಯಕ್ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಮ್ಮೇಳನ ಜರಗಿತು. ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಸಂಸ್ಥೆಯು ನಡೆದುಬಂದ ದಾರಿಯನ್ನು ವಿವರಿಸುತ್ತಾ ಭಾವಿ ಯೋಜನೆಗಳಿಗೆ ಎಲ್ಲರ ಸಹಕಾರವನ್ನು ಕೋರಿದರು. ಶ್ರೀ ವರದಸಿದ್ಧಿವಿನಾಯಕ ಸೇವಾಭವನದ ಉದ್ದೇಶಿತ 2 ಹೊಸ ಮಾಳಿಗೆಗಳ ಕಾಮಗಾರಿಯ ಶುಭಾರಂಭವನ್ನು ಸಭೆಯಲ್ಲಿ ಪ್ರಕಟಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆ.ಎಸ್ಸೆನ್ ಹಾಸ್ಪಿಟಾಲಿಟಿ ಆ್ಯಂಡ್ ಕ್ಯಾಟರಿಂಗ್ ಸರ್ವೀಸಸ್‌ನ ವಿಠಲ ನಾಯಕ್ ಅವರು, ನೂತನ ಸಭಾಭವನದ ಕಾಮಗಾರಿಯ ನಿವೇದನಾ ಪತ್ರ ಹಾಗೂ ಸಿಸ್ಮಮ್ಯಾಟಿಕ್ ಡೆವೆಲಪ್‌ಮೆಂಟ್ ಕೂಪನ್‌ಗಳನ್ನು ಬಿಡುಗಡೆಗೊಳಿಸಿದರು.
ಕಾರ್ಯದರ್ಶಿ ರವೀಂದ್ರನಾಥ್ ನಾಯಕ್ ಸ್ವಾಗತಿಸುತ್ತಾ, ನೂತನ ವಾಸ್ತುವಿನ ಕಾಮಗಾರಿಗೆ ಧನಸಹಾಯ ನೀಡಲು ಇಚ್ಛೆಯುಳ್ಳವರಿಗೆ ಕಂತಿನಲ್ಲಿ ಪಾವತಿಸಲು ಇಂದು ಬಿಡುಗಡೆಗೊಂಡ ಡೆವಲಪ್‌ಮೆಂಟ್ ಕೂಪನ್‌ಗಳು ಸಹಕಾರಿಯಾಗಲಿವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರ್‌ರಾಷ್ಟ್ರೀಯ(ಸ್ಪೀಡ್ ಪೈಂಟಿಂಗ್ ಫೇಮ್)ಮಟ್ಟದ ಕಲಾವಿದ ಉಜಿರೆಯ ವಿಲಾಸ್ ನಾಯಕ್ ಅವರು ಸಂಸ್ಥೆಯ ನೂತನ ಯುವಸಂಘಟನೆ ಯುವ ವೇದಿಕೆಯನ್ನು ಉದ್ಘಾಟಿಸಿದರು.
ಅನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಲಾಸ್ ನಾಯಕ್ ಅವರು, ಯುವ ಜನಾಂಗವು ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವತ್ತ ತಮ್ಮ ಗಮನ ಕೇಂದ್ರೀಕರಿಸಬೇಕು ಎಂದರು.
ಐಬಿಎಂನಂತಹ ಸಂಸ್ಥೆಯಲ್ಲಿ 5 ವರ್ಷ ಉದ್ಯೋಗದಲ್ಲಿದ್ದರೂ ಚಿತ್ರಕಲೆಯಲ್ಲಿ ವಿಶ್ವದಾಖಲೆಯ ಸಾಧನೆಯತ್ತ ಗುರಿ ಇಟ್ಟುಕೊಂಡು ನೌಕರಿ ತ್ಯಜಿಸಿ ಪೈಂಟಿಂಗ್ ಒಂದರಲ್ಲೇ ಮುಂದೆ ಸಾಗುತ್ತಿರುವೆ. ಯುವಕರಲ್ಲಿ ಭವಿಷ್ಯದತ್ತ ಲಕ್ಷéವಹಿಸಿದ ಗೋಲ್(ಗುರಿ) ವಿಶಾಲವಾಗಿರಬೇಕು. ಹಾಗಿದ್ದರೆ ಮಾತ್ರ ವಿಶೇಷ ಸಾಧನೆಗಳನ್ನು ಕಾರ್ಯಗತಗೊಳಿಸಬಹುದು ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿದ್ದ ರಾಜಾಪುರ ಸಾರಸ್ವರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರಭಾಕರ್ ಡಿ. ಬೋರ್ಕರ್ ಅವರು ಮಾತನಾಡುತ್ತ, ಬೆಳೆದು ಭವಿಷ್ಯದ ನಾಗರಿಕರಾಗುವ ಯುವಕ ಯುವತಿಯರ ಮನೋವಿಕಾಸಕ್ಕೆ ಸಂಬಂಧಿಸಿದ ಹಾಗೂ ನಾಗರಿಕತೆಯ ಓಟದಲ್ಲಿ ಮೆಲ್ಲನೆ ಮರೆಯಾಗುತ್ತಿರುವ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ನೂತನ ಯುವ ವೇದಿಕೆಯು ಸಶಕ್ತವಾಗಲಿ ಎಂದು ಆಶಿಸಿದರು.
2017-18ರ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ ಪ್ರತಿಭಾವಂತ ಶಾಲಾವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಭಾಭವನದ ಆರ್ಕಿಟೆಕ್ಟ್ ದಿನೇಶ್ ನಾಯಕ್, ರಾಷ್ಟ್ರಮಟ್ಟದ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ನಲ್ಲಿ ಚಿನ್ನದ ಪದಕ ಪಡೆದ ಸೂರಜ್ ಪಾಟ್ಕರ್ ಮತ್ತು ರಾಷ್ಟ್ರೀಯ ಮಟ್ಟದ ಪ್ರತಿಭಾವಂತ ಕ್ರಿಕೆಟ್ ಆಟಗಾರ್ತಿ ಕು| ರೇಷ್ಮಾ ರಾಜೇಂದ್ರ ಪ್ರಭು ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಸ್ಮರಣಿಕಗಳನ್ನಿತ್ತು ಸತ್ಕರಿಸಲಾಯಿತು.
ಈ ಸಂದರ್ಭ ರಾಜಾಪುರ ಸಾರಸ್ವತ ಸಂಘ ಮುಂಬಯಿ, ವಿಘ್ನಹರ್ತಾ ಶ್ರೀ ಮಹಾಗಣಪತಿ ಸೇವಾ ಮಂಡಲ ದಹಿಸರ್, ದುರ್ಗಾಪರಮೇಶ್ವರಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿ, ಸಚ್ಚಿದಾನಂದ ಸರಸ್ವತೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಡಹಾಣು ರಾಜಾಪುರ ಸಾರಸ್ವತ ಸಮಾಜ ಸೇವಾಮಂಡಲ ಇದರ ಪದಾಧಿಕಾರಿಗಳು ಹಾಗೂ ಡಹಾಣು ವರದಸಿದ್ಧಿವಿನಾಯಕ ಸೇವಾಮಂಡಲದ ಉಪಾಧ್ಯಕ್ಷ ಎ.ಪಿ. ನಾಯಕ್, ಖಜಾಂಟಿ ಸಂಜಯ್ ಬಿ. ಪಾಟ್ಕರ್, ಕಾರ್ಯದರ್ಶಿ ರವೀಂದ್ರನಾಥ್ ಜಿ. ನಾಯಕ್, ಪದಾಧಿಕಾರಿಗಳಾದ ವಿರಾಜ್ ನಾಯಕ್, ನಾಗರಾಜ್ ಪಾಟ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತೋಷ್ ನಾಯಕ್, ರಘುನಾಥ್ ಪ್ರಭು ಹಾಗೂ ಆಶಾ ಎಸ್. ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಸ್ಥೆಯ ಯುವ ವೇದಿಕೆಯ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಸ್ಪೀಡ್ ಪೈಂಟಿಂಗ್ ಖ್ಯಾತಿಯ ಕಲಾವಿದ ವಿಲಾಸ್ ನಾಯಕ್ ಅವರು ವೇದಿಕೆಯ ಮೇಲೆ ಸಿದ್ಧಿವಿನಾಯಕನ ಪೈಂಟಿಂಗ್ ರಚನೆ ಮಾಡಿ ಸಂಸ್ಥೆಗೆ ಉಡುಗೊರೆ ನೀಡಿದರು.
ಸಂಸ್ಥೆಯ ಸದಸ್ಯರು ಹಾಗೂ ವಿಲಾಸ್ ನಾಯಕ್ ಅಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.