ಅಂಧೇರಿ ಪಶ್ಚಿಮದ ಶ್ರೀ ಶಾಂತಾ ದುರ್ಗಾ ಮಂದಿರ: ವಾರ್ಷಿಕ ಭಜನ ಮಹೋತ್ಸವ
Team Udayavani, Mar 31, 2021, 11:08 AM IST
ಮುಂಬಯಿ: ಅಂಧೇರಿ ಪಶ್ಚಿಮದ ಮಾಲ್ದಡೋಂಗ್ರೀಯ ಶ್ರೀ ಶಾಂತಾ ದುರ್ಗಾ ಮಂದಿರದ ಭಜನ ಮಂಡಳಿಯ ದ್ವಿತೀಯ ವಾರ್ಷಿಕ ಭಜನ ಮಹೋತ್ಸವವು ಮಾ. 21
ರಂದು ನೆರವೇರಿತು.
ಮಂದಿರದ ಧರ್ಮದರ್ಶಿ ಆನಂದ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ದಹಿಸರ್‌ನ ಶಂಕರನಾಥ್ ಪುರೋಹಿತರ ಮಾರ್ಗದರ್ಶನದೊಂದಿಗೆ ಪ್ರಸನ್ನ ಪುರೋಹಿತ್ ಅವರ ಮುಂದಾಳತ್ವದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಸರ್ವಾಲಂಕಾರ ಪೂಜೆ, ಅಷೊuàತ್ತರ ಶತ ಕುಂಕುಮಾರ್ಚನೆ, ನಿತ್ಯ ಆರತಿ ಯೊಂದಿಗೆ ಆರಂಭಗೊಂಡಿತು.
ಬಳಿಕ ಸಾಂತಾಕ್ರೂಜ್ ಅಂತಾರಾಷ್ಟ್ರೀಯ ವಾಸ್ತುತಜ್ಞ, ಜೋತಿಷಿ ಅಶೋಕ್ ಪುರೋಹಿತರು ದೀಪ ಪ್ರಜ್ವಲಿಸಿ, ಭಜನ ಮಹೋತ್ಸವಕ್ಕೆ ಚಾಲನೆ ನೀಡಿದರು. ಶ್ರೀ ದೇವಿಯ ಸನ್ನಿಧಾನದಲ್ಲಿ ಭಜನೆ ಮಾಡುವುದರಿಂದ ಎಲ್ಲ ಕಷ್ಟ ಪರಿಹಾರವಾಗುತ್ತವೆ ಎಂದು ಹೇಳಿದ ಅವರು, ಭಜನೆಯ ಅರ್ಥವನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿದರು. ಭಕ್ತಿಯಿಂದ ಜನಾರ್ದನನನ್ನು ನೆನೆಯುವುದೇ ಭಜನೆ. ಅದರಲ್ಲಿಯೂ ಶ್ರೀ ದೇವಿ ಪಾರಾಯಣ ಪ್ರಿಯೆ. ಇಂತಹ ಕಷ್ಟದ ಸಮಯದಲ್ಲೂ ಮಾಡಿದಂತಹ ಈ ಭಜನ ಸೇವೆಗೆ ಶ್ರೀ ದೇವಿಯ ಪೂರ್ಣ ಅನುಗ್ರಹ, ಆಶೀರ್ವಾದ ಭಕ್ತರೆಲ್ಲರ ಮೇಲೆ ಇರಲಿ.
ಕೊರೊನಾ ಮಹಾಮಾರಿಯು ಆದಷ್ಟು ಬೇಗ ದೂರವಾಗಲಿ ಎಂದರು.
ಭಜನ ಮಹೋತ್ಸವದ ಅನ್ನದಾನಿ ಪ್ರವೀಣ್ ಶೆಟ್ಟಿ, ಸುದೇಶ್ ರೈ, ಸತೀಶ್ ಪ್ರಭು, ಅಂಧೇರಿಯ ನಗರ ಸೇವಕ ಮುರ್ಜಿ ಪಟೇಲ್, ಎಡಿಐಸಿ ಕಮಿಷನರ್ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಮಂದಿರದ ಧರ್ಮದರ್ಶಿ ಆನಂದ ಸ್ವಾಮೀಜಿ, ಅಧ್ಯಕ್ಷ ಹರೀಶ್ ಪೂಜಾರಿ, ಉಪಾಧ್ಯಕ್ಷ ಸದಾನಂದ ಆಚಾರ್ಯ, ಪ್ರಧಾನ ಅರ್ಚಕ ಪ್ರಸನ್ನ ಪುರೋಹಿತ್, ದಯಾನಂದ ಶೆಟ್ಟಿ ಬಾಂದ್ರಾ, ಸುಂದರ ಪೂಜಾರಿ ಅಂಧೇರಿ, ಕೇಶವ ಬಂಗೇರ, ಉಮೇಶ್ ಪೂಜಾರಿ, ಶಿವಾನಂದ ಪೂಜಾರಿ, ಸುರೇಶ್ ಆಚಾರ್ಯ, ಪುರುಷೋತ್ತಮ ಬಂಗೇರ, ಚಂದ್ರಶೇಖರ್ ಪೂಜಾರಿ, ವಿಶ್ವನಾಥ ಪೂಜಾರಿ, ರಾಜ ಎನ್. ರಾವ್, ಉಷಾ ಶೆಟ್ಟಿ, ಪ್ರಮೀಳಾ ಗುಜರನ್, ಲೀಲಾವತಿ ಗುಜರನ್, ಆಶಾ ಶೆಟ್ಟಿ, ವನಿತಾ ಸಹಕರಿಸಿದರು.
ಶ್ರೀ ಶಾಂತಾದುರ್ಗಾ ಭಜನ ಮಂಡಳಿ ಅಂಧೇರಿ, ವೃಂದಾವನ ಭಜನ ಮಂಡಳಿ ಅಂಧೇರಿ, ಬ್ಯಾಪಿಸ್ಟ್ ವಾಡಿ ಭಜನ ಮಂಡಳಿ ಅಂಧೇರಿ, ಜೈ ಭವಾನಿ ಭಜನ ಮಂಡಳಿ ಅಂಧೇರಿ, ಜಗದಂಬಾ ಭಜನ ಮಂಡಳಿ ಜೋಗೇಶ್ವರಿ, ಲಲಿತಾಂಬಾ ಭಜನ ಮಂಡಳಿ ಬೊರಿವಲಿ, ಜೈ ವಿಶ್ವಕರ್ಮ ಭಜನ ಮಂಡಳಿ, ವರಮಹಾಲಕ್ಷ್ಮೀ ಭಜನ ಮಂಡಳಿ ಮೊದಲಾದ ಭಜನ ಮಂಡಳಿಗಳು ಭಜನ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವು.
ಸದಾನಂದ ಆಚಾರ್ಯ, ಸತೀಶ್ ಪ್ರಭು, ಪೂಜಾ ಕಾರ್ಯಕ್ರಮದಲ್ಲಿ ಪ್ರಸನ್ನ ಪುರೋಹಿತ, ಹೂವಿನ ಅಲಂಕಾರದಲ್ಲಿ ಅಶೋಕ್ ಕೊಡ್ಯಡ್ಕ ಮತ್ತು ಸುರೇಶ್ ಆಚಾರ್ಯ ಸಹಕರಿಸಿದರು. ಮಂದಿರದ ಸದಸ್ಯರು ವಿವಿಧ ಸೇವೆಗಳನ್ನು ನೀಡಿ ಸಹಕರಿಸಿ ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.