ಇಂದಿನಿಂದ ವಾರ್ಷಿಕ ದಸರಾ ಮಹೋತ್ಸವ
Team Udayavani, Sep 29, 2019, 1:08 PM IST
ಮುಂಬಯಿ, ಸೆ. 28: ಪೊವಾಯಿ ಪಂಚ ಕುಟೀರದ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ದಸರಾ ಮಹೋತ್ಸವವು ಸೆ. 29ರಿಂದ ಪ್ರಾರಂಭಗೊಂಡು ಅ. 20ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ.
ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರ ನೇತೃತ್ವದಲ್ಲಿ ಉತ್ಸವವು ನೆರವೇರಲಿದ್ದು, ಸೆ. 29 ರಂದು ಬೆಳಗ್ಗೆ 9ರಿಂದ ಬ್ರಹ್ಮಕಲಶ ಘಟ ಸ್ಥಾಪನೆಗೊಳ್ಳಲಿದೆ. ನವರಾತ್ರಿಯ ಪ್ರತೀ ದಿನ ಮಧ್ಯಾಹ್ನ 12ರಿಂದ ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅಪರಾಹ್ನ 3ರವರೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಅ. 5 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ರವರೆಗೆ ಶ್ರೀ ಮಹಾಚಂಡಿಕಾ ಹೋಮ, ಮಧ್ಯಾಹ್ನ 12ರಿಂದ ಶ್ರೀ ಸತ್ಯ ನಾರಾಯಣ ಮಹಾಪೂಜೆ, ಅಪರಾಹ್ನ 3 ರಿಂದ ಸಂಜೆ 5 ರವರೆಗೆ ಶ್ರೀ ಶನೀಶ್ವರ ಮಹಾಪೂಜೆ ಜರಗಲಿದೆ.
ಅ. 6ರಂದು ಶ್ರೀ ಮಹಾಶೇಷ ರುಂಡಮಾಲಿನಿ ದೇವಿಗೆ ಮಹಾಪೂಜೆ, ಅಪರಾಹ್ನ 3 ರಿಂದ ಅನ್ನದಾನ, ಸಂಜೆ 4ರಿಂದ ಶ್ರೀ ಮಹಾಶೇಷ ರುಂಡಮಾಲಿನಿ ದೇವಿಯ ಸನ್ನಿಧಿಯಲ್ಲಿ ಭಜನಾ ಸೇವಾ ಕಾರ್ಯಕ್ರರಮ ನಡೆಯಲಿದೆ. ಅ. 13 ರಂದು ಘಟ ಬ್ರಹ್ಮಕಲಶ ವಿಸರ್ಜನೆ, ಸಂಜೆ 4ರಿಂದ ಪಿ. ಆರ್. ಅಂಚನ್ ಮತ್ತು ಬಳಗದವರಿಂದ ಹುಲಿವೇಷ, ಚೆಂಡೆ-ಮದ್ದಳೆಯೊಂದಿಗೆ ಯಕ್ಷಗಾನ ಪ್ರಾತ್ಯಕ್ಷಿಕೆಯೊಂದಿಗೆ ಶ್ರೀ ದೇವಿಯ ವಿಜೃಂಭಣೆಯ ಶೋಭಾಯಾತ್ರೆ ನಡೆಯಲಿದ್ದು, ದಿನೇಶ್ ಕೋಟ್ಯಾನ್ ಬಳಗದವರಿಂದ ಸ್ಯಾಕ್ಸೋಫೋನ್ ವಾದನ ಆಯೋಜಿಸಲಾಗಿದೆ.
ಅ. 20ರಂದು ಶ್ರೀ ಅಣ್ಣಪ್ಪ ಸ್ವಾಮಿ ಮಹಾಪೂಜೆ, ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತುಳು-ಕನ್ನಡಿಗರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವಿಯಅನುಗ್ರಹಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಧರ್ಮದರ್ಶಿ ಸುವರ್ಣ ಬಾಬಾ ಹಾಗೂ ಒಂಭತ್ತು ತಾಯಿಯ ಮಕ್ಕಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.