ರಾವಲ್ಪಾಡಾ ದೇವಸ್ಥಾನ‌ ವಾರ್ಷಿಕ ಮಹೋತ್ಸವ

Team Udayavani, Mar 3, 2019, 2:54 PM IST

0103mum11.jpg

ಮುಂಬಯಿ: ದಹಿಸರ್‌ ಪೂರ್ವ ರಾವಲ್ಪಾಡಾದ  ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ಶನೀಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ಹಾಗೂ ಸಾಂಸ್ಕೃತಿಕ, ಸಮ್ಮಾನ ಕಾರ್ಯಕ್ರಮವು ಫೆ. 9ರಿಂದ ದೇವಸ್ಥಾನದ ಆವರಣದಲ್ಲಿ ಎರಡು ದಿನಗಳ ಕಾಲ ನಡೆಯಿತು.

ಡೊಂಬಿವಲಿಯ ಬ್ರಹ್ಮಶ್ರೀ ಶಂಕರ ನಾರಾಯಣ ತಂತ್ರಿಯವರ ಪೌರೋಹಿತ್ಯದಲ್ಲಿ ಮಂದಿರದ ಪ್ರಧಾನ ಅರ್ಚಕರಾದ ಶಂಕರ ಗುರು ಭಟ್‌ ಮತ್ತು ಗುರುಶಂಕರ ಭಟ್‌ ಅವರ ನೇತೃತ್ವದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಗಣಪತಿ ಹಾಗೂ ಶ್ರೀ ಶನಿದೇವರಿಗೆ ನವಕಲಶ, ಪ್ರಧಾನ ಹೋಮ, ಶನಿಶಾಂತಿ, ನಾಗದೇವರ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ, ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ, ಶ್ರೀ ದೇವಿಯ ಸನ್ನಿಧಾನದಲ್ಲಿ 25 ಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಸ್ವರ್ಣಾಲಂಕಾರ, ಸೇವೆ ಪಲ್ಲಪೂಜೆ ಜರಗಿತು.

ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ಭಜನೆ, ಶ್ರೀ ಶನಿಗ್ರಂಥ ಪಾರಾಯಣ, ಸಿ. ಎನ್‌. ಪೂಜಾರಿ ಅವರಿಂದ ಶ್ರೀ ದೇವಿ ಆವೇಶ, ಬಲಿ ಉತ್ಸವ, ಕಟ್ಟೆಪೂಜೆ ನೆರವೇರಿತು. ವಿವಿಧ ಪೂಜಾ ಕೈಂಕರ್ಯದಲ್ಲಿ ಕೆ. ಗೋವಿಂದ ಮೂರ್ತಿ ಭಟ್‌, ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ ಭಟ್‌, ರಾಮ ಭಟ್‌, ನಟೇಶ್‌ ಅಮ್ಮಣ್ಣಾಯ, ರಜನೀಶ್‌ ಸಾಮಗ, ಯತಿರಾಜ್‌ ಉಪಾಧ್ಯಾಯ, ಸ್ವಸ್ತಿಕ್‌ ಭಟ್‌, ಬಾಲಕೃಷ್ಣ ಭಟ್‌, ಉದಯ ಶಂಕರ ಸಹಕರಿಸಿದರು.

ರಾತ್ರಿ ಜರಗಿದ ಧಾರ್ಮಿಕ ಸಭೆಯಲ್ಲಿ ಪೊವಾಯಿ ಶ್ರೀ ರುಂಡ ಮಾಲಿನಿ ದೇವಸ್ಥಾನದ ಧರ್ಮದರ್ಶಿ ಸುವರ್ಣ ಬಾಬಾ ಅವರು ಆಶೀರ್ವಚನ ನೀಡಿ, ಶ್ರೀ ದುರ್ಗಾಪರಮೇಶ್ವರಿ ಮತ್ತುಶ್ರೀ ಶನೀಶ್ವರ ದೇವಸ್ಥಾನ ಗಳಿರುವ ದಹಿಸರ್‌ ರಾವಲ್ಪಾಡವು ಪವಿತ್ರ ಸ್ಥಳವಾಗಿ ಅಭಿವೃದ್ಧಿ ಹೊಂದಲಿ.ಭಕ್ತರಜನರ ಇಷ್ಟಾರ್ಥದೊಂದಿಗೆ ಅವರ ಮೂಲಭೂತ ಸೌಕರ್ಯಗಳು ದೇವಸ್ಥಾನದಿಂದ ಸಿಗುವಂತಾಗಬೇಕು. ಧಾರ್ಮಿಕ ಮಹೋತ್ಸವದೊಂದಿಗೆ, ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಶ್ರೇಯೋಭಿವೃದ್ಧಿಗೆ ಸರ್ವ ಸೇವಾ ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಸಹಕರಿಸಿದ ಭಾಸ್ಕರ ನಾಯ್ಡು, ಕರುಣಾಕರ ಅಮೀನ್‌, ಚಂದ್ರಶೇಖರ ಪೂಜಾರಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಉದ್ಯಮಿ ದಾಮೋದರ ಕುಂದರ್‌, ಬ್ರಹ್ಮಶ್ರೀಶಂಕರ ನಾರಾಯಣ ತಂತ್ರಿ, ದೇವಸ್ಥಾನದ ಅಧ್ಯಕ್ಷ ಸಿ. ಎನ್‌.ಪೂಜಾರಿ ಮಾತನಾಡಿದರು. ಸಮ್ಮಾನ ಪತ್ರವನ್ನು ನ್ಯಾಯವಾದಿ ಸೌಮ್ಯಾ ಸಿ. ಪೂಜಾರಿ ವಾಚಿಸಿದರು.

 ಕಾರ್ಯದರ್ಶಿ ಜಯರಾಮ ಮೆಂಡನ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಧ್ಯೇಯೋದ್ದೇಶ
ಗಳನ್ನು ವಿವರಿಸಿದರು. ಮಾಜಿ ಅಧ್ಯಕ್ಷ ಲಕ್ಷ್ಮಣ್‌ ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ದೀಪಕ್‌ ಕೆ. ಪೂಜಾರಿ ಅವರು  ಗಣ್ಯರನ್ನು ಗೌರವಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉದ್ಯಮಿ ಚಂದ್ರಶೇಖರ ಎ. ಪೂಜಾರಿ ಅವರ ಪ್ರಾಯೋಜಕತ್ವದಲ್ಲಿಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್‌ಕಲಾವಿದರಿಂದ  ಶ್ರೀದೇವಿ ಮಹಾತೆ¾ ಯಕ್ಷಗಾನ ಪ್ರದ
ರ್ಶನಗೊಂಡಿತು. ಫೆ.10 ರಂದು ಸಂಪ್ರೋಕ್ಷಣೆ, ಮಹಾ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.

  ಚಿತ್ರ-ವರದಿ: ರಮೇಶ್‌ ಅಮೀನ್‌

ಟಾಪ್ ನ್ಯೂಸ್

3-gadaga

Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು

muslim marriage

Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Thalapathy 69: ರಿಲೀಸ್ ಗೂ ಮುನ್ನ ಕೋಟಿ‌ ಕೋಟಿ ಕಮಾಯಿ ಮಾಡಿದ ವಿಜಯ್ ಕೊನೆಯ ಸಿನಿಮಾ

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

Kantara: Chapter 1: ‘ಕಾಂತಾರ’ ಸೆಟ್ ಗೆ ಮರಳಿದ ರಿಷಬ್; ಮೂರನೇ ಹಂತದ ಚಿತ್ರೀಕರಣ ಶುರು

1-poli

Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3-gadaga

Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು

muslim marriage

Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್‌ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್‌ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!

2-hunsur

Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.