ಇಂದು 89ನೇ ವಾರ್ಷಿಕ ಸಂಸ್ಥಾಪನ ದಿನಾಚರಣೆ
Team Udayavani, Jan 24, 2021, 4:38 PM IST
ಮುಂಬಯಿ: ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ 89ನೇ ವಾರ್ಷಿಕ ಸಂಸ್ಥಾಪನ ದಿನಾಚರಣೆಯು ಜ. 24ರಂದು ಸಂಜೆ 5.30ರಿಂದ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಂಗ ವಾಗಿ ವಿವಿಧ ಭಜನ ಮಂಡಳಿಗಳ ಭಜನೆ ಹಾಗೂ ಗುರುಪೂಜೆಯನ್ನು ಆಯೋಜಿಸಲಾಗಿದೆ.
ಕೋವಿಡ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಸರಳ ರೀತಿಯಲ್ಲಿ ಕಾರ್ಯಕ್ರಮವು ನಡೆಯಲಿದ್ದು, ಭಕ್ತರು, ಸಮಾಜ ಬಾಂಧ ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸುವಂತೆ ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಎ. ಶಾಂತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮುಂಬಯಿಯಲ್ಲಿ ಸ್ಥಾಪಿಸಲ್ಪಟ್ಟ ಹಲವಾರು ಸಂಸ್ಥೆಗಳಲ್ಲಿ ಬಿಲ್ಲವರ ಅಸೋಸಿಯೇಶನ್ ಪ್ರಮುಖವಾದುದು. ಇದು ಸ್ಥಾಪನೆಯಾದುದು 1932ರಲ್ಲಿ. ಬಡ ಮಕ್ಕಳಿಗೆ ವಿದ್ಯಾರ್ಥಿವೇತನ, ಶಾಲೆ-ಕಾಲೇಜು, ಔದ್ಯೋಗಿಕ ಕೇಂದ್ರ, ಗ್ರಂಥಾಲಯ, ವೈದ್ಯಕೀಯ ನೆರವು ಮೊದಲಾದ ಧ್ಯೇಯಗಳನ್ನು ಇಟ್ಟುಕೊಂಡು ಬಿಲ್ಲವರ ಅಸೋಸಿಯೇಶನ್ ಸ್ಥಾಪನೆಯಾಯಿತು. ಆಕರ್ಷಕವಾದ ಕಟ್ಟಡವನ್ನು ಹೊಂದಿರುವ ಈ ಸಂಸ್ಥೆ ಅಮೃತ ಮಹೋತ್ಸವವನ್ನು ಆಚರಿಸಿದೆ. ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಇನ್ನಿತರ ಸಾಂಸ್ಕೃತಿಕ ಬೆಳವಣಿಗೆಗಾಗಿ ತಕ್ಕ ಅವಕಾಶ ಮತ್ತು ಅನುಕೂಲತೆಗಳನ್ನು ಒದಗಿಸುತ್ತಾ ಬಂದಿರುವುದು ಸ್ಮರಣೀಯ ಅಂಶ.
ಇದೇ ಸಂಸ್ಥೆ ಗುರುನಾರಾಯಣ ರಾತ್ರಿ ಶಾಲೆಯನ್ನು ನಡೆಸಿಕೊಂಡು ಬರುತ್ತಿದೆ. ಬಿಲ್ಲವರ ಸೇವಾದಳವನ್ನು ಸ್ಥಾಪಿಸಿದೆ. ಆರಂಭದಲ್ಲಿ ಈ ಸೇವಾದಳ ಸದಸ್ಯರನ್ನು ಕಲೆಹಾಕುವ ಕಾರ್ಯ ಮಾಡುತ್ತಿತ್ತು. ಈ ಸಂಸ್ಥೆಯ ಸದಸ್ಯರಲ್ಲಿ ಶಿಸ್ತು ಪರಿಪಾಲನೆ, ವ್ಯಕ್ತಿತ್ವದ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸಂಸ್ಥೆಯು ಇಪ್ಪತ್ತಕ್ಕೂ ಹೆಚ್ಚು ಸ್ಥಳೀಯ ಕಚೇರಿಗಳನ್ನು ಹೊಂದಿದ್ದು, ಅಕ್ಷಯ ಮಾಸಿಕವು ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವು ಸಾಧನೆ ಅಪಾರ. ಗುರುನಾರಾಯಣ ಯಕ್ಷಗಾನ ಮಂಡಳಿಯ ಸಾಧನೆಯನ್ನು ಗುರುತಿಸಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಎಂ.ಬಿ. ಕುಕ್ಯಾನ್ ಪ್ರಾಯೋಜಿತ ಶ್ರೀ ಗುರುನಾ ರಾಯಣ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾ ಬಂದಿದೆ.
ಇದನ್ನೂ ಓದಿ:ಉಪಾಧ್ಯಕೆಯಾಗಿ ನಂದಿತಾ ಕೋಟ್ಯಾನ್ ಬೆಳ್ಮಣ್ ಆಯ್ಕೆ
ದೇಶದಲ್ಲಿ ವಿಶೇಷ ಗೌರವಕ್ಕೆ ಪಾತ್ರವಾದ ಭಾರತ್ ಕೋ-ಆಪರೇ ಟಿವ್ ಬ್ಯಾಂಕನ್ನು ಬಿಲ್ಲವರ ಅಸೋಸಿಯೇಶನ್ ಹೊಂದಿದ್ದು, ನೂರಕ್ಕೂ ಹೆಚ್ಚು ಶಾಖೆಗಳನ್ನು ಸ್ಥಾಪಿಸಿ ಇತಿಹಾಸ ನಿರ್ಮಿಸಲಾಗಿದೆ. ಮುಂಬಯಿಯಲ್ಲಿ ಅಕ್ಷಯ ಪತ್ರಿಕೆ ಅತ್ಯಂತ ಹಳೆಯ ಪತ್ರಿಕೆ. ಸುಮಾರು 1988ರಲ್ಲಿ ಈ ಪತ್ರಿಕೆ ಬೆಳಕು ಕಂಡಿತು.
ಮುಂಬಯಿಯ ಹಿರಿಯ ಲೇಖಕರು ಮಾತ್ರವಲ್ಲ ಕಿರಿಯ ಲೇಖಕರನ್ನು ಹರಸಿ ಬೆಳೆಸಿದ ಪತ್ರಿಕೆ ಅಕ್ಷಯ.ಉತ್ತಮ ಮುಖಚಿತ್ರ, ಸಾಹಿತ್ಯಿಕ ಮೌಲ್ಯವನ್ನೊಳಗೊಂಡ ಈ ಪತ್ರಿಕೆ ಮುಂಬಯಿಯಲ್ಲಿ ಯಾವ ಜಾತಿ ಭೇದವಿಲ್ಲದೆ ಎಲ್ಲರ ಅಚ್ಚುಮೆಚ್ಚಿನ ಪತ್ರಿಕೆ. ಈ ಸಂಸ್ಥೆಯ ಎಲ್ಲ ಕಾರ್ಯಕರ್ತರು ಅತ್ಯಂತ ಚಟುವಟಿಕೆಯಿಂದ ಈ ಪತ್ರಿಕೆಗಾಗಾಗಿ ಕೆಲಸ ಮಾಡುತ್ತಿರುವುದು ಮೆಚ್ಚತಕ್ಕಂತಹ ವಿಷಯ. ಅನೇಕ ಜನಪರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮುಂಬಯಿಯಲ್ಲಿ ಕನ್ನಡದ ಬೆಳವಣಿಗೆಗೆ ಶ್ರಮಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.