“ತುರ್ತು ಪರಿಸ್ಥಿತಿಯಲ್ಲಿ ಎದೆಗುಂದದೆ ಆತ್ಮ ಸ್ಥೈರ್ಯದಿಂದ ಮುನ್ನಡೆಯಬೇಕು’


Team Udayavani, Apr 27, 2021, 10:18 AM IST

“ತುರ್ತು ಪರಿಸ್ಥಿತಿಯಲ್ಲಿ ಎದೆಗುಂದದೆ ಆತ್ಮ ಸ್ಥೈರ್ಯದಿಂದ ಮುನ್ನಡೆಯಬೇಕು’

ಮುಂಬಯಿ: ಪ್ರತಿಷ್ಠಿತ ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಇದರ ಭಾರತ್‌ ಬ್ಯಾಂಕ್‌ ಎಂಪ್ಲಾಯೀಸ್‌ ಯೂನಿಯನ್‌ ಇದರ ವಾರ್ಷಿಕ ಮಹಾಸಭೆಯು ಮಾ. 27ರಂದು ಗೋರೆಗಾಂವ್‌ ಪಶ್ವಿ‌ಮದ ಲಲಿತ್‌ ಬ್ಯಾಂಕ್ವೆಟ್‌ ಸಭಾಗೃಹದಲ್ಲಿ ಜರಗಿತು.

ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಹಿರಿಯ ಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಸಭೆಯ ಅಧ್ಯಕ್ಷತೆ ವಹಿಸಿದ ಭಾರತ್‌ ಬ್ಯಾಂಕ್‌ ಎಂಪ್ಲಾಯೀಸ್‌ ಯೂನಿಯನ್‌ ಅಧ್ಯಕ್ಷ ಅಶೋಕ್‌ ಎಲ್‌. ಕೋಟ್ಯಾನ್‌ ಮಾತನಾಡಿ, ಒಂದು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದಾಗಿದೆ. ಸಮಯ ಪ್ರಜ್ಞೆ, ಗ್ರಾಹಕ ಸಂತೃಪ್ತಿಗೊಳಿಸುವ ವಿಶಾಲ ಮನೋಭಾವ ಪ್ರತಿಯೊಬ್ಬರಲ್ಲಿ ಅಂತರ್ಗತವಾಗಿರಬೇಕು. ಕೊರೊನಾ ಸಂದರ್ಭ ಭಾರತ್‌ ಬ್ಯಾಂಕ್‌ ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮದಂತೆ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಸೇವಾವಧಿಯನ್ನು ವಿಸ್ತರಿಸಿ ವೈದ್ಯಕೀಯ ಚಿಕಿತ್ಸೆಗೆ ಸಹಕರಿಸಿದೆ. ಎಂತಹ ತುರ್ತು ಪರಿಸ್ಥಿತಿಯಲೂ ಎದೆಗುಂದದೆ ಆತ್ಮ ಸ್ಥೆçರ್ಯದಲ್ಲಿ ಮುನ್ನಡೆಯಬೇಕು. ಮಾತೃ ಸಂಸ್ಥೆ ಬಿಲ್ಲವ ಅಸೋಸಿಯೇಶನ್‌ ಮುಂಬಯಿಯ ಪ್ರಾಯೋಜತ್ವದಲ್ಲಿರುವ ಭಾರತ್‌ ಬ್ಯಾಂಕ್‌ ಅಪೂರ್ವ ಸಾಧನೆಗಳಿಂದ ಮುನ್ನಡೆಯುತ್ತಿದೆ. ನಮ್ಮ ಬ್ಯಾಂಕ್‌ ಭದ್ರತೆ ಮತ್ತು ಸದೃಡತೆಗಾಗಿ ಆನೇಕ ಪ್ರಶಸ್ತಿ, ಪುರಸ್ಕಾರಗಳ ಮೂಲಕ ಶೇಷ್ಠತೆಯನ್ನು ಹೊಂದಿದೆ. ಇದನ್ನು ಸದಾ ಶಾಶ್ವತಗೊಳಿಸುದು ನಮ್ಮ ಧ್ಯೇಯವಾಗಿದೆ. ನಿರ್ದೇಶಕ ಮಂಡಳಿ, ಉನ್ನತ ಅಧಿಕಾರಿಗಳೊಂದಿಗೆ ಮಧುರ ಬಾಂಧವ್ಯವನ್ನು ಇರಿಸಿಕೊಂಡು ಭಾರತ್‌ ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ಮುಂದಾಗಬೇಕು ಎಂದರು.

ಗೌರವ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಸನಿಲ್‌ ಅವರು ಮಾತನಾಡಿ, ಸುರಕ್ಷಿತ ಠೇವಣಿ, ಕರೆನ್ಸಿ ವಿನಿಮಯ, ಮುಂತಾದ ಹಲವಾರು ಹಣಕಾಸು ಸೇವೆಗಳಿಗೆ ಭಾರತ್‌ ಬ್ಯಾಂಕ್‌ ಖಾತೆದಾರರ, ಶೇರುದಾರರ ಮತ್ತು ಹಿತೈಷಿಗಳ ಪ್ರಶಂಶೆಗೆ ಪಾತ್ರವಾಗಿದೆ. ಬ್ಯಾಂಕ್‌ಗಳು ಅಧುನಿಕ ಕಾಲದ ಹಣಕಾಸಿನ ಜೀವನಾಡಿಗಳು. ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗಿರುವ ಉಳಿತಾಯ ಖಾತೆ, ಚಾಲ್ತಿ ಖಾತೆ, ಸ್ಥಿರ ಠೇವಣಿ ಮುಂತಾದವುಗಳ ಬಗ್ಗೆ ಹೆಚ್ಚಿನ ಅದ್ಯತೆ ನೀಡಬೇಕು. ಹಕ್ಕುಗಳ ಬಗ್ಗೆ ಮಾತಾಡುವಾಗ ನಾವು ಕರ್ತವ್ಯವನ್ನು ಮರೆಯಬಾರದು ಎಂದರು.

ಇದೇ ಸಂದರ್ಭ ಸೇವೆಯಿಂದ ನಿವೃತಿ ಹೊಂದಿದ ಯೂನಿಯನ್‌ನ ಹಿರಿಯ ಪದಾಧಿಕಾರಿ ವಿಜಯ ಪಾಲನ್‌ ಅವರನ್ನು ವೇದಿಕೆಯ ಗಣ್ಯರು ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಗತ ವರ್ಷದಲ್ಲಿ ನಿಧನ ಹೊಂದಿದ ಭಾರತ್‌ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷರಾದ ಜಯ ಸಿ. ಸುವರ್ಣ ಮತ್ತು ಎಂ. ಬಿ. ಕುಕ್ಯಾನ್‌, ಬ್ಯಾಂಕಿನ ಸಿಬಂದಿ ನಾರಾಯಣ ಸಿ. ಪೂಜಾರಿ, ರೋಹಿತಾಕ್ಷ ಆರ್‌. ಸುವರ್ಣ ಮತ್ತು ಹರೀಣಾಕ್ಷಿ ಕೆಮ್ರಾಲ್‌ ಅವರಿಗೆ ಮಹಾಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಾರತ್‌ ಬ್ಯಾಂಕ್‌ ಜೋಗೇಶ್ವರಿ ಶಾಖೆಯ ಕೋಶಾಧಿಕಾರಿ ಪುರುಷೋತ್ತಮ ಕೆ. ಪೂಜಾರಿ ಆಯ-ವ್ಯಯ ಮಂಡಿಸಿದರು. ದಹಿಸರ್‌ ಶಾಖೆಯ ವಿನುತಾ ಪಿ. ಪೂಜಾರಿ ಗತ ಮಹಾಸಭೆಯ ವರದಿ ವಾಚಿಸಿದರು. ಭಾರತ್‌ ಬ್ಯಾಂಕ್‌ ದಹಿಸರ್‌ ಶಾಖೆಯ ಲೋಹಿತಾಕ್ಷ ಅಂಚನ್‌ ಪ್ರಾರ್ಥಿಸಿದರು. ಲೆಕ್ಕ ಪರಿಶೋಧಕರಾಗಿ ಮೆಸರ್ಸ್‌ ಅಶ್ವಜಿತ್‌ ಅಸೋಸಿಯೇಟ್ಸ್‌ ಅವರನ್ನು ಮಹಾಸಭೆಯಲ್ಲಿ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಸದಸ್ಯರು ಸಲಹೆ ಸೂಚನೆ ನೀಡಿದರು. ಜತೆ ಕಾರ್ಯದರ್ಶಿ ಅಂಧೇರಿ ಪೂರ್ವ ಶಾಖೆಯ ಪ್ರಿಯ ಬಿ. ಪೂಜಾರಿ ಧನ್ಯವಾದಗೈದರು. ವೇದಿಕೆಯಲ್ಲಿ ಉಪಾಧ್ಯಕ್ಷ ಲೋಹಿತಾಕ್ಷ ಎ. ಅಂಚನ್‌, ರಾಘವೇಂದ್ರ ಪ್ರಸಾದ್‌ ಸಾಲ್ಯಾನ್‌ ಗಿರೀಶ್‌ ಎ. ಸಾಲ್ಯಾನ್‌, ಸುಜಿತ್‌ ಕೋಟ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.