ಪದ್ಮಶಾಲಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ಸಾಂಸ್ಕೃತಿಕ ವೈವಿಧ್ಯ
Team Udayavani, Sep 2, 2018, 4:31 PM IST
ಥಾಣೆ: ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಮಹಾಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಆ. 19ರಂದು ಮುಲುಂಡ್ ರೈಲು ನಿಲ್ದಾಣ ಸಮೀಪದ ಮಹಾರಾಷ್ಟ್ರ ಸೇವಾ ಸಂಘದ ಸಭಾಗƒಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಎಜುಕೇಶನ್ ಸೊಸೈಟಿ ಮತ್ತು ಮಹಿಳಾ ಬಳಗದ ವಾರ್ಷಿಕ ಮಹಾಸಭೆಯು ಇದೇ ಸಂದರ್ಭದಲ್ಲಿ ನಡೆಯಿತು. ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಉತ್ತಮ ಶೆಟ್ಟಿಗಾರ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪದ್ಮಶಾಲಿ ಎಜುಕೇಶನ್ ಸೊಸೈಟಿಯ ಸಭಾಪತಿ ಬಿ. ರಾಮಚಂದ್ರ ಶೆಟ್ಟಿಗಾರ್, ಮಹಿಳಾ ಬಳಗದ ಮುಖ್ಯಸ್ಥೆ ಸರೋಜಿನಿ ಎಚ್. ಶೆಟ್ಟಿಗಾರ್ ಹಾಗೂ ಕಲಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಾನಂದ್ ಎಂ. ಶೆಟ್ಟಿಗಾರ್ ಹಾಗೂ ಶ್ರೀ ವೀರಭದ್ರ ದೇವಸ್ಥಾನ ಪಡುಬಿದ್ರಿಯ ಪ್ರಧಾನ ಕಾರ್ಯದರ್ಶಿ ಸುಂದರ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೋಶಾಧಿಕಾರಿ ನವೀನ ಎಂ. ಶೆಟ್ಟಿಗಾರ್ ಅವರು ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರೆ, ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಮೇಶ್ ಪಿ. ಶೆಟ್ಟಿಗಾರ್ ಅವರು ಎಜುಕೇಶನ್ ಸೊಸೈಟಿಯ ವಾರ್ಷಿಕ ವರದಿ ಹಾಗೂ ಲಕ್ಷ್ಮೀನಾರಾಯಣ ಶೆಟ್ಟಿಗಾರರು ಲೆಕ್ಕಪತ್ರ ಮಂಡಿಸಿದರು. ಸಂಘದ ಕಾರ್ಯದರ್ಶಿ ಲೀಲಾಧರ್ ಬಿ. ಶೆಟ್ಟಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಘದ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್ ಅವರು ಮಾತನಾಡಿ, ಸಮಾಜದ ಎಲ್ಲರ ಸಹಕಾರವನ್ನು ಬಯಸುತ್ತಾ ಮುಂಬಯಿ ಪದ್ಮಶಾಲಿಗರ ಕಲಾಭವನದ ಕನಸು ಆದಷ್ಟು ಬೇಗನೆ ಸಾಕಾರವಾಗಲಿ ಎಂದು ಹಾರೈಸಿದರು. ಕೃಷ್ಣಾನಂದರು ಕಲಾಭವನವನ್ನು ಮುಂಬಯಿ ಮಹಾನಗರದೊಳಗೆ ಮಾಡಿದರೆ ಸಮಾಜದವರಿಗೆ ಹೆಚ್ಚು ಉಪಯೋಗ ವಾಗಲಿದೆ. ಅದಕ್ಕೆ ಬೇಕಾಗುವ ಅಧಿಕ ವೆಚ್ಚದ ಹೊಣೆಯನ್ನು ಹರ್ಷ್ ಫೌಂಡೇಶನ್ ಮೂಲಕ ಒದಗಿಸಿ ಕೊಡುವ ಭರವಸೆ ಯನ್ನು ನೀಡಿದರು. ಸಲಹೆಗಾರ ಶಿವಾನಂದ ಶೆಟ್ಟಿಗಾರ ಮಾತನಾಡಿ, ಕಲಾ ಭವನವನ್ನು ಮಹಾನಗರದೊಳಗೆ ನಿರ್ಮಿಸುವ ವಿಚಾರವನ್ನು ಬೆಂಬಲಿಸಿ ಏಲ್ಲಾ ಸದಸ್ಯರು ತಮ್ಮಿಂದಾದಷ್ಟು ಆರ್ಥಿಕ ಸಹಾಯ ಮತ್ತು ಸಹಕಾರವನ್ನು ಈ ಕಾರ್ಯಕ್ಕೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಬಿ. ರಾಮಚಂದ್ರ ಶೆಟ್ಟಿಗಾರರು ಸಂಘದ ವತಿಯಿಂದ ಸಮಾಜದ 9 ಬಡ ಕುಟುಂಬದವರಿಗೆ ಮೆಡಿಕ್ಲೇಮ್ ಪಾಲಿಸಿಯನ್ನು ಹಂಚಿದರು. ಸಂಘದ ಅತಿ ಉತ್ತಮ ಕಾರ್ಯಕರ್ತ ಬಹುಮಾನವನ್ನು ಎಸ್. ವಿ. ಗೋಪಾಲಕೃಷ್ಣರು, ಅತಿ ಹೆಚ್ಚಿನ ಸದಸ್ಯರನ್ನು ನೋಂದಾಯಿಸಿದ ಪುರಸ್ಕಾರವನ್ನು ರಾಧಾ ಶೆಟ್ಟಿಗಾರ ಮತ್ತು ದಯಾನಂದ ಅವರು ಪಡೆದರು. ಶಾಲಾ, ಕಾಲೇಜು ಮತ್ತು ಇತರ ಪ್ರತಿಭಾನ್ವಿತರಿಗೆ ಬಹುಮಾನ ನೀಡಲಾಯಿತು. ಬಹುಮಾನ ವಿಜೇತರ ಹೆಸರನ್ನು ಪ್ರತಿಭಾ ಪಿ. ಶೆಟ್ಟಿಗಾರರು ಘೋಷಿಸಿದರು. ಜೊತೆ ಕಾರ್ಯದರ್ಶಿ ನರೇಂದ್ರ ಕಬ್ಬಿನಾಲೆ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಬಳಗದವರಿಂದ ನೃತ್ಯ ವೈವಿಧ್ಯ ನಡೆಯಿತು.
ಹರ್ಷ್ ಫೌಂಡೇಶನ್‌ನ ಟ್ರಿಸ್ಟಿ ಗಳಾದ ಕಾಂತಿ ಕೆ. ಶೆಟ್ಟಿಗಾರ್ ಮತ್ತು ಹರಿಣಾಕ್ಷಿ ಬಿ. ಶೆಟ್ಟಿಗಾರ್ ಅವರ ವತಿಯಿಂದ ಊಟೋಪಚಾರದ ವ್ಯವಸ್ಥೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೂ ನೆನಪಿನ ಕಾಣಿಕೆಯನ್ನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ತುಂಬೆ ಮೊಯ್ದೀನ್ ಅವರಿಗೆ ಪ್ರತಿಷ್ಠಿತ ಗ್ಲೋಬಲ್ ವಿಷನರಿ ಎನ್‌ಆರ್‌ಐ ಪ್ರಶಸ್ತಿ
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Jimmy Carter Life Journey: ಜಿಮ್ಮಿ ಕಾರ್ಟರ್- ಮಾನವೀಯತೆ, ಶಾಂತಿಯ ಶಿಲ್ಪಿ
ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.