ಪುಣೆ ಕುಲಾಲ ಸುಧಾರಕ ಸಂಘದ ವಾರ್ಷಿಕ ಮಹಾಸಭೆ, ಸ್ನೇಹ ಸಮ್ಮಿಲನ
Team Udayavani, Nov 28, 2018, 5:22 PM IST
ಪುಣೆ: ಒಂದು ಸಮಾಜಕ್ಕೆ ಅದರದ್ದೆ ಆದಂಥ ಚರಿತ್ರೆ ಮತ್ತು ಅದರ¨ªೆ ಆದಂಥ ಕುಲ ಕಸುಬು ಇದೆ. ಪ್ರತಿಯೊಂದು ಸಮಾಜದಲ್ಲೂ ಸಂಘಟನೆ ಅಥವಾ ಸಂಸ್ಥೆ ಇದ್ದೇ ಇದೆ. ಸಮಾಜದ ಸಂಘವನ್ನು ಕಟ್ಟುವ ಕೆಲಸ ಬಹಳ ಸುಲಭ. ಆದರೆ ಅದನ್ನು ಬೆಳೆಸಿಕೊಂಡು ಹೋಗುವುದು ಅಷ್ಟೊಂದು ಸುಲಭದ ಮಾತಲ್ಲ. ಸಮಾಜದ ಅಭಿವೃದ್ಧಿಗೆ ಸಂಘಟನೆಯನ್ನು ಕಟ್ಟಬೇಕು. ನಮ್ಮ ಸಂಸ್ಕೃತಿಯನ್ನು ಬೆಳೆಸುವಂತಹ ಕಾರ್ಯವನ್ನು ಮಾಡಬೇಕು. ಆಗ ಸಂಬಂಧಗಳು ಬೆಳೆಯುತ್ತದೆ. ಅಲ್ಲದೆ ಅದಕ್ಕೆ ಬೇಕಾದ ಆರ್ಥಿಕ ಸಹಾಯ, ಬೆಳವಣಿಗೆಗೆ ಬೇಕಾದ ಮಾನವ ಸಂಪನ್ಮೂಲ ದೊರೆತು ಸಂಘ ಬೆಳೆಯುತ್ತದೆ. ಒಗ್ಗಟ್ಟಿನೊಂದಿಗೆ ಸಂಸ್ಥೆಯು ಸಮಾಜ ಬಾಂಧವರನ್ನು ಸೆಳೆಯುವಂತಿರಬೇಕು ಎಂದು ವೇಣೂರು ಕುಂಭಶ್ರೀ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕ ಗಿರೀಶ್ ಕೆ.ಎಚ್. ಹೇಳಿದರು.
ನ. 25ರಂದು ಪುಣೆಯ ಶ್ಯಾಮ್‌ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್‌ನ ಸಭಾ ಭವನದಲ್ಲಿ ನಡೆದ ಪುಣೆ ಕುಲಾಲ ಸಂಘದ 40ನೇ ಮಹಾಸಭೆ ಹಾಗೂ ಸ್ನೇಹ ಸಮ್ಮಿಲನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಎಲ್ಲರೂ ವಿದ್ಯಾವಂತರೆ. ಪ್ರತಿ ಮನೆಯಲ್ಲೂ ಉನ್ನತ ವ್ಯಾಸಂಗ ಮಾಡಿದವರು ಇರುತ್ತಾರೆ. ಆದರೆ ವಿದ್ಯೆಯ ಜತೆಯಲ್ಲಿ ವಿನಯ ಮತ್ತು ಸೌಜನ್ಯ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಸಮಾಜದ ಹಿರಿಯರು, ಯುವಜನತೆ ಸೇರಿದರೆ ಸಂಘಟನೆ ನಿತ್ಯ ಸುಂದರವಾಗಿರಬಹುದು. ಇದು ನಾವು ಮಾಡುವ ಕೆಲಸ ಅಥವಾ ಸಂಘಟನೆಯಲ್ಲೂ ಬಹು ಮುಖ್ಯ. ಇದರಿಂದ ಸಂಘಟನೆ ತನ್ನಿಂತಾನೆ ಒಮ್ಮತದೊಂದಿಗೆ ಬೆಳೆದು ಸಮಾಜದ ಜನರಲ್ಲಿ ವಿಶ್ವಾಸವನ್ನು ಪಡೆಯಬಹುದು ಎಂದರು.
ಅತಿಥಿಯಾಗಿ ಆಗಮಿಸಿದ ರಂಗನಟ ರಮಾ ಬಿ. ಸಿ. ರೋಡ್ ಅವರು ಮಾತನಾಡಿ, ನಮ್ಮ ಸಮಾಜ, ನಮ್ಮ ಪ್ರತಿಷ್ಠ ಎಂಬ ಸ್ವ ಹೆಗ್ಗಳಿಕೆ ಮತ್ತು ಸಮಾಜದ ಬಗ್ಗೆ ಅಸಕ್ತಿ ಎಲ್ಲರಲ್ಲೂ ಇರಬೇಕು. ಆಸಕ್ತಿ ಮತ್ತು ನಮ್ಮದೆಂಬ ಭಾವನೆ ನಮ್ಮಲ್ಲಿದ್ದರೆ ಯಾವುದೇ ಕಾರ್ಯವನ್ನು ಮಾಡಬಹುದು. ಸಂಘ ಅಥವಾ ಸಂಘಟನೆ ನಮ್ಮ ಮನೆಯದ್ದು ಎಂಬ ಮಮತೆ, ಪ್ರೀತಿ ಸಮಾಜ ಬಾಂಧವರಲ್ಲಿ ಇರಬೇಕು. ಸಮಾಜಸೇವಾ ಮನೋಭಾವದ ಸಮಾನ ಮನಸ್ಕ ವ್ಯಕ್ತಿಗಳ ಸಮೂಹವಿದ್ದರೆ ಸಂಘಟನೆ ಬಲಗೊಳ್ಳಲು ಸಾಧ್ಯ. ನಾವುಗಳು ಸೇರಿಕೊಂಡು ಸೃಷ್ಟಿ ಮಾಡುವ ಸಾಧನೆ ಎಂದಿಗೂ ಶಾಶ್ವತವಾಗಿರುತ್ತದೆ. ಅಂತಹ ಅವಕಾಶವನ್ನು ಸಮಾಜದ ಸಂಘಟನೆಗಳು ನಮಗೆ ನೀಡುತ್ತಿದ್ದು, ನಾವೆಲ್ಲರೂ ಒಂದೇ ಕುಟುಂಬದ ಮಕ್ಕಳು ಎಂಬ ಭಾವನೆಯೊಂದಿಗೆ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ಪುಣೆ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ತುಳುನಾಡ ತುಳುಶ್ರೀ ರಮಾ ಬಿ. ಸಿ. ರೋಡ್, ಜ್ಯೋತಿ ಕೋಆಪರೇಟೀವ್ ಕ್ರೆಡಿಟ್ ಸೊಸೈಟಿ ಮುಂಬಯಿ ಇದರ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಉಡುಪಿ, ಉಪಾಧ್ಯಕ್ಷ ದೊಡ್ಡಣ್ಣ ಮೂಲ್ಯ, ಗೌರವ ಕಾರ್ಯದರ್ಶಿ ನವೀನ್ ಬಂಟ್ವಾಳ್, ಕೋಶಾಧಿಕಾರಿ ಮನೋಜ್ ಸಾಲ್ಯಾನ್, ಹಿರಿಯ ಸಲಹೆಗಾರರಾದ ರಮೇಶ್ ಕೊಡ್ಮನ್ಕರ್, ಸದಸ್ಯರಾದ ಕುಟ್ಟಿ ಮೂಲ್ಯ, ಸದಾಶಿವ ಮೂಲ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಮೂಲ್ಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿ ಗಣ್ಯರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿ ಗಿರೀಶ್ ಕೆ. ಎಚ್. ಅವರನ್ನು ಅಧ್ಯಕ್ಷ ಹರೀಶ್ ಕುಲಾಲ್ , ರಮಾ ಬಿ. ಸಿ. ರೋಡ್ ಅವರನ್ನು ಗೌರವಾಧ್ಯಕ್ಷ ವಿಶ್ವನಾಥ್ ಉಡುಪಿ ಅವರು ಶಾಲು, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಗಣ್ಯರನ್ನು ಹಾಗೂ ಪದಾಧಿಕಾರಿಗಳನ್ನು ಸಂಘದ ಸದಸ್ಯರು ಗೌರವಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗು ಸಮಾಜದ ಹಿರಿಯರಾದ ಕುಟ್ಟಿ ಮೂಲ್ಯ, ರಮೇಶ್ ಕೊಡ್ಮನ್ಕರ್ ಅವರನ್ನು ಗೌರವಿಸಲಾಯಿತು.
ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಯಶೋದಾ ಮೂಲ್ಯ ಅವರು ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಮನೋಜ್ ಸಾಲ್ಯಾನ್ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದಿಸಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಾಜದ ಮಕ್ಕಳಿಂದ ನೃತ್ಯ ವೈವಿಧ್ಯ, ಪುಣೆ ಕುಲಾಲ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬಲೆ ತೆಲಿಪಾಲೆ ಖ್ಯಾತಿಯ ಅರುಣ್ ಚಂದ್ರ ಬಿ.ಸಿ. ರೋಡ್ ರಚಿಸಿ, ರಂಗನಟ ಸುವರ್ಣ ಕನ್ನಡರತ್ನ ರಮಾ ಬಿ. ಸಿ. ರೋಡ್ ನಿರ್ದೇಶನದ ಗೊತ್ತಾವರೆಗ್ ಬಲ್ಲಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದ ಯಶಸ್ಸಿಗೆ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸದಸ್ಯರು ಸಹಕರಿಸಿದರು. ಭಾಗ್ಯಶ್ರೀ ಮೂಲ್ಯ, ಸರಸ್ವತಿ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಮ್ಮಲ್ಲಿರುವ ಎಲ್ಲಾ ಮನೆಗಳ ವಿದ್ಯಾವಂತರು, ಉದ್ಯಮಿಗಳು, ಉದ್ಯೋಗಿಗಳು, ಯುವ ಜನತೆ ಸೇರಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸಿದರೆ ಸಂಘಟನೆಯ ಬೆಳವಣಿಗೆಗೆ ಯಾವುದೇ ತೊಂದರೆಯಿರುವುದಿಲ್ಲ. ಯಾವುದೇ ರೀತಿಯ ವೈಯಕ್ತಿಕ ಮೈಮನಸ್ಸು ಇದ್ದರೂ ಕೂಡಾ ಸಂಘದ ಕಾರ್ಯದಲ್ಲಿ ಅದನ್ನು ಬದಿಗಿಟ್ಟು ನಮ್ಮದು ಎಂದು ಭಾವನೆಯಿಂದ ಒಟ್ಟು ಸೇರಬೇಕು. 40 ವರ್ಷಗಳ ಹಿಂದೆ ಹಿರಿಯರು ಕಟ್ಟಿದ ಈ ಪುಣೆ ಕುಲಾಲ ಸಂಘ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಸಮಾಜದ ಎಲ್ಲಾ ಕುಟುಂಬಗಳು ಸೇರಿಕೊಂಡು ಸಂಘಟನೆಯ ಬಲವರ್ಧನೆಗೆ ಸಹಕರಿಸಬೇಕು. ಜ್ಯೋತಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿ ಪುಣೆಯ ಶಾಖೆ ಪ್ರಾರಂಭವಾಗಿದ್ದು, ಜಾತಿ ಬಾಂಧವರೊಂದಿಗೆ ಎಲ್ಲಾ ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದೆ .
ಗಿರೀಶ್ ಸಾಲ್ಯಾನ್, ಕಾರ್ಯಾಧ್ಯಕ್ಷರು, ಜ್ಯೋತಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿ
ಸಂಘದ ಈವರೆಗಿನ ನಡೆಯಲ್ಲಿ ಸ್ಥಾಪಕ ಅಧ್ಯಕ್ಷರಿಂದ ಹಿಡಿದು ಮಾಜಿ ಅಧ್ಯಕ್ಷರುಗಳು ಪದಾಧಿಕಾರಿಗಳು ಸಹಕಾರ ನೀಡಿ ಸಂಘವನ್ನು ಅರ್ಥಪೂರ್ಣವಾಗಿ ಬೆಳೆಸಿಕೊಂಡು ಬಂದಿ¨ªಾರೆ. ನಮ್ಮ ಮನದಲ್ಲಿ ಮುಖ್ಯವಾಗಿ ಸಮಾಜದ ಬಾಂಧವರಿಗಾಗಿ ಇರುವ ಸಂಸ್ಥೆ ತಮ್ಮದೇ ಎಂಬ ಭಾವನೆ ಮೂಡಬೇಕು. ಹೆಸರು, ಪದವಿಯ ಆಸೆಯನ್ನು ಬಿಟ್ಟು ಯಾರೇ ಸಂಘದ ಚುಕ್ಕಾಣಿ ಹಿಡಿದರೂ ಕೂಡಾ ತಮ್ಮೆಲ್ಲರ ಸಹಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಸಂಘಕ್ಕೆ ಭದ್ರ ಬುನಾದಿಯನ್ನು ಹಾಕುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು. ಈವರೆಗಿನ ತಮ್ಮೆಲ್ಲರ ಸಹಕಾರಕ್ಕೆ ವಂದನೆಗಳು .
ಹರೀಶ್ ಕುಲಾಲ ಮುಂಡ್ಕೂರು, ಅಧ್ಯಕ್ಷರು, ಕುಲಾಲ ಸಂಘ ಪುಣೆ
ನಮ್ಮ ಪುಣೆ ಕುಲಾಲ ಸಂಘ ಬೆಳವಣಿಗೆಯ ಹಂತದಲ್ಲಿ ಸಂಘ ಅಭಿವೃದ್ದಿಗೆ ಎಲ್ಲಾ ಬಾಂಧವರ ಸಹಕಾರ ಮುಖ್ಯ. ವ್ಯಕ್ತಿಗಿಂತ ಭಿನ್ನವಾಗಿ ಸಂಘಟನೆ ಬೆಳೆಯಬೇಕು. ನಮ್ಮಲ್ಲಿರುವ ಜನ ಸಂಖ್ಯೆಯಲ್ಲಿ ನೂರಕ್ಕೆ ನೂರರಷ್ಟು ಬಾಂಧವರು ಒಟ್ಟು ಸೇರಿ ನಮ್ಮ ಒಗ್ಗಟ್ಟನ್ನು , ಸಾಧನೆಯನ್ನು,
ಮುಂದಿನ ದಿನಗಳಲ್ಲಿ ಸಮಾಜಕ್ಕೆ ತೋರಿಸಬೇಕು. ಇದು ಸಾಧ್ಯವಾಗುತ್ತದೆ ಎಂಬ ಭಾವನೆ ನನ್ನಲ್ಲಿದೆ .
ವಿಶ್ವನಾಥ್ ಉಡುಪಿ, ಗೌರವಾಧ್ಯಕ್ಷರು, ಕುಲಾಲ ಸಂಘ ಪುಣೆ ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.