ಪುಣೆ ಬಿಲ್ಲವ ಸಮಾಜ ಸೇವಾ ಸಂಘದಿಂದ ವಾರ್ಷಿಕ ಗುರುಜಯಂತಿ ಆಚರಣೆ
Team Udayavani, Sep 12, 2018, 4:11 PM IST
ಪುಣೆ: ಜ್ಞಾನದಿಂದ ಸನ್ಮಾರ್ಗದಲ್ಲಿ ನಡೆದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ. ಅಂಥ ಜ್ಞಾನವನ್ನು ನಾವು ಪಡೆಯಬೇಕಾದರೆ ನಮಗೆ ವಿದ್ಯೆ ಬೇಕಾಗಬಹುದು. ವಿದ್ಯೆಯನ್ನೂ ಸನ್ಮಾರ್ಗದ ದಾರಿಯನ್ನೂ ತೋರಿಸುವವನು ಗುರು. ಅಂಥಹ ವಿದ್ಯಾ ಜ್ಞಾನವನ್ನು ಪಡೆಯಬೇಕಾದರೆ ನಾವೆಲ್ಲರೂ ಗುರುವಿನ ಗುಲಾಮರಾಗಬೇಕು. ಇಂದಿನ ದಿನಗಳಲ್ಲಿ ವಿದ್ಯೆ ಇಲ್ಲದ ವ್ಯಕ್ತಿ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತ ಪರಿಸ್ಥಿತಿ ಇದೆ. ಆದರೆ ನಮ್ಮ ಸಮಾಜದವರು 18 ನೇ ಶತಮಾನದÇÉೇ ದೇವಮಾನವರಾದ ಗುರುವನ್ನು ಪಡೆದ ಪುಣ್ಯವಂತರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗಕ್ಕೆ ಸಾರುತ್ತಾ ಭೂಮಿಗಿಳಿದು ಬಂದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಸಮಾಜದಲ್ಲಿ ಇದ್ದ ತಾರತಮ್ಯವನ್ನು ನಿರ್ನಾಮ ಮಾಡಿದ ಗುರುವರ್ಯರ ಗುರು ಪೂಜೆಯನ್ನು ಇಂದು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬಂತೆ ಕೂಡಿ ಗುರುಗಳ ಪಾದಗಳಿಗೆ ಅರ್ಪಣೆ ಮಾಡಿದ್ದೇವೆ. ಅಂತಹ ಪುಣ್ಯ ಪುರುಷರ ಪೂಜೆ ವರ್ಷಕೊಮ್ಮೆ ಎಂಬ ಭಾವನೆ ನಮ್ಮಲ್ಲಿರಬಾರದು. ದಿನ ನಿತ್ಯ ಅವರ ಸ್ಮರಣೆ ಮಾಡಿ ಅವರ ತತ್ವ ಆದರ್ಶಗಳನ್ನು ನಮ್ಮಲ್ಲಿ ಜೀವನದಲ್ಲಿ ಅಳವಡಿಸಿಕೊಂಡು, ನಮ್ಮ ಮಕ್ಕಳಿಗೂ ತಿಳಿಸುವ ಮೂಲಕ ಅವರ ನಿತ್ಯ ಪೂಜೆಯನ್ನು ಮಾಡಬೇಕು. ಸಂಘಟನೆಯಿಂದ ಬಲಿಷ್ಟರಾಗಿ ಎಂಬ ಗುರು ಪ್ರೇರಣೆಯಂತೆ ನಾವೆÇÉಾ ನಮ್ಮ ಸಂಘಟನಾ ಶಕ್ತಿಯನ್ನು ಒಟ್ಟುಗೂಡಿಸಿ ಬಲಿಷ್ಟರಾಗೋಣ ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ಶೇಖರ್ ಪೂಜಾರಿ ನುಡಿದರು.
ಸೆ. 9 ರಂದು ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜಯಂತಿ ಆಚರಣೆ ಅಂಗವಾಗಿ, ಸೋಮವಾರ ಪೇಟೆಯ ನರ ಪತ್‌ಗಿರಿ ಚೌಕ್‌ನಲ್ಲಿರುವ ಸಂತ ಘಾಡೆY ಮಹಾರಾಜ್ ಪ್ರಾರ್ಥನಾಗೃಹದಲ್ಲಿ ನಡೆದ ಗುರುಪೂಜೆ ನಡೆದಿದ್ದು, ಆನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜನ ಸಾಮಾನ್ಯರ ಉ¨ªಾರಕ್ಕಾಗಿ ಅವತಾರವೆತ್ತಿದ ಪೂಜ್ಯ ನಾರಾಯಣ ಗುರುಗಳ ತತ್ವಾದರ್ಶವನ್ನು ಪಾಲನೆ ಮಾಡುತ್ತ, ನಮ್ಮ ಹಿರಿಯರು ಸ್ಥಾಪನೆ ಮಾಡಿದ ಈ ಸಂಸ್ಥೆಯನ್ನು ಸಮಾಜ ಬಾಂಧವರ ಕಷ್ಟ ಸುಖಗಳಿಗೆ ಪೂರಕವಾಗಿ ಕಾರ್ಯವನ್ನು ಮಾಡುತ್ತಾ ಬೆಳೆಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಪುಣೆ ಬಿಲ್ಲವ ಸಂಘ ಎಂಬುವುದು ಒಂದು ಕುಟುಂಬವಿದ್ದಂತೆ. ಸಮಾಜ ಬಾಂಧವರು ಎಲ್ಲರೂ ನಮ್ಮ ಬಂಧುಗಳು. ನಮ್ಮ ಮನೆಯಂತಿರುವ ಈ ಸಂಘವನ್ನು ಮಾದರಿ ಸಂಘವಾಗಿ ಮಾಡುವ ಧ್ಯೇಯ ನಮ್ಮದಾಗಬೇಕು ಎಂದರು.
ಗುರುಪೂಜೆಯ ಅಂಗವಾಗಿ ಬೆಳಗ್ಗೆ 9 ರಿಂದ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಲ್ದಾಕ್ಕ ಚೌಕ, ಮಂಗಳವಾರ ಪೇಟೆಯ ಪ್ರಧಾನ ಅರ್ಚಕರಾದ ಕರುಣಾಕರ ಶಾಂತಿ ಅವರ ಪೌರೋಹಿತ್ಯದಲ್ಲಿ ಕಲಶ ಮಹೂರ್ತ, ಗುರುಪೂಜೆ ನಡೆಯಿತು. ಸಂಘದ ಉಪಾಧ್ಯಕ್ಷ ಜಯ ಆರ್. ಪೂಜಾರಿ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಸಮಾಜ ಬಾಂಧವರಿಂದ ಭಜನೆ ನಡೆಯಿತು. ಅನಂತರ ಮಹಾಮಂಗಳಾರತಿ ನೆರವೇರಿತು.
ಶೇಖರ್ ಟಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಪಾಂಡುರಂಗ ಅರ್. ಪೂಜಾರಿ, ಸಂಘದ ಸಂಸ್ಥಾಪಕ ಅಧ್ಯಕ್ಷ ಸುಂದರ್ ಎನ್. ಪೂಜಾರಿ, ಧಾರ್ಮಿಕ ಪ್ರವಚನಕಾರ ಕೊಳ್ತಿಗೆ ನಾರಾಯಣ ಗೌಡ, ಪಿಂಪ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಅರ್. ಸಾಲ್ಯಾನ್, ಪುಣೆ ಬಿಲ್ಲವ ಸಂಘದ ಉಪಾಧ್ಯಕ್ಷರುಗಳಾದ ವಿಶ್ವನಾಥ್ ಪೂಜಾರಿ ಕಡ್ತಲ ಜಯ ಅರ್. ಪೂಜಾರಿ, ಕಾರ್ಯದರ್ಶಿ ಲೋಹಿತ್ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಡಿ. ಬಂಗೇರ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಧ-ಸಂಘ ಸಂಸ್ಥೆಗಳ ಪದಾಧಿಕಾರಿ ಗಳನ್ನು ಹಾಗು ಸಾಧಕರನ್ನು ಪುಷ್ಪತ್ಛ ನೀಡಿ ಅಭಿನಂದಿಸಲಾಯಿತು. ಹಾಗೂ ಬಿಲ್ಲವ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದರು. ಸಮಾಜದ ಹಿರಿಯರಾದ ಕೊಥ್ರೊಡ್ ಮಾದವ ಪೂಜಾರಿ ದಂಪತಿ ಹಾಗೂ ಶಿವಾಜಿನಗರದ ದೇವಕಿ ಗಿರಿಯ ಪೂಜಾರಿಯವರನ್ನು ಸಂಘದ ಪರವಾಗಿ ಸಮ್ಮಾನಿಸಲಾಯಿತು. ಸಮ್ಮಾನ ಪತ್ರವನ್ನು ಕ್ರಮವಾಗಿ ಸುಂದರ ಕರ್ಕೇರ ಹಾಗೂ ಶಿವಪ್ರಸಾದ ಪೂಜಾರಿ ಮೌಲಿ ಅವರು ಓದಿದರು. ಸಂಘದ ವಾರ್ಷಿಕ ವರದಿಯನ್ನು ಎಸ್. ಕೆ. ಪೂಜಾರಿ ವಾಚಿಸಿದರು.
ಕಾರ್ಯಕ್ರಮದಲ್ಲಿ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಸಮಾಜದ ಪ್ರಮುಖರಾದ ಸಂಘದ ಮಾಜಿ ಅಧ್ಯಕ್ಷರುಗಳಾದ ಸದಾಶಿವ ಸಾಲ್ಯಾನ್, ಸದಾನಂದ ಪೂಜಾರಿ, ಪೂಜಾ ಸಮಿತಿಯ ಕಾರ್ಯದರ್ಶಿ ಗಿರೀಶ್ ಪೂಜಾರಿ, ಶಿವರಾಂ ಪೂಜಾರಿ, ಶಂಕರ್ ಪೂಜಾರಿ, ಉತ್ತಂ ಪಣಿಯಾಡಿ, ಎಸ್. ಕೆ. ಪೂಜಾರಿ, ವಾಸುದೇವ ಪೂಜಾರಿ, ಜಯ ಟಿ. ಪೂಜಾರಿ, ವಸಂತ್ ಪೂಜಾರಿ, ವಿಶ್ವನಾಥ್ ಟಿ. ಪೂಜಾರಿ, ರಾಘು ಪೂಜಾರಿ, ಲೋಹಿತ್ ಪೂಜಾರಿ, ಶಿವರಾಂ ಪೂಜಾರಿ, ಪ್ರಿಯಾ ಪಣಿಯಾಡಿ, ರೇವತಿ ಪೂಜಾರಿ, ಉಮಾ ಕೆ. ಪೂಜಾರಿ, ವನಿತಾ ಎಸ್. ಕರ್ಕೇರ, ಲಲಿತಾ ಪೂಜಾರಿ ಅವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ವಿಶ್ವನಾಥ ಪೂಜಾರಿ ಕಡ್ತಲ ಅವರು ಸಭಾಗೃಹದ ಮೇಲ್ವಿಚಾರಣೆಯಲ್ಲಿ ಸಹಕರಿಸಿದರು.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿ ಗುರು ಕೃಪೆಗೆ ಪಾತ್ರರಾದರು. ಪ್ರಸಾದ ವಿತರಣೆಯ ಆನಂತರ ಸದಾಶಿವ ಸಾಲ್ಯಾನ್ ಮತ್ತು ಶಂಕರ ಪೂಜಾರಿ ದುರ್ಗಾ ಅವರ ಸೇವಾರ್ಥಕವಾಗಿ ಅನ್ನ ಸಂತರ್ಪಣೆ ಜರಗಿತು. ಸಂಘದ ಜೊತೆ ಕಾರ್ಯದರ್ಶಿ ಸುಂದರ ಕರ್ಕೇರ ಅವರು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಪೂಜಾರಿ ವಂದಿಸಿದರು. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಯಾದಿಯನ್ನು ರೇವತಿ ಪೂಜಾರಿ ಅವರು ಓದಿದರು.
ಸಮಷ್ಟಿಯಲ್ಲಿ ಜನರು ಅಜ್ಞಾನದತ್ತ ಮುಖ ಮಾಡಿದಾಗ ವೇದಶಾಶ÷, ಪುರಾಣಗಳಿಂದ ಸಿಗದ ಜ್ಞಾನವನ್ನು ಸರಳ ಶೈಲಿಯಲ್ಲಿ ಜನ ಮಾನಸಕ್ಕೆ ದಾರೆಯೆರೆದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅಧ್ಯಾತ್ಮದ ತತ್ವಗಳೆಲ್ಲವನ್ನು ಸರಳ ರೀತಿಯಲ್ಲಿ ಬೋಧನೆ ಮಾಡಿ ಹಿಂದುಳಿದ ವರ್ಗಕ್ಕೆ ಚೈತನ್ಯದ ಸಂದೇಶ ನೀಡಿ ಸಮಾಜದಲ್ಲಿ ಸಮಾನತೆಯನ್ನು ಸಾರಿದವರು. ನಾರಾಯಣ ಗುರುಗಳು ಒಂದೇ ಜಾತಿಗೆ ಸೀಮಿತವಾದವರಲ್ಲ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿ ವಿಶ್ವ ಗುರುವಾದವರು ಅವರು. ಬ್ರಾಹ್ಮಣ ಜಾತಿವಾದುದಲ್ಲ ಅದೊಂದು ಗುಣ ಸ್ವಭಾವ. ಅದು ಪ್ರಕಟವಾಗಬೇಕಾದರೆ ವಿದ್ಯೆ ಬೇಕು. ಇದನ್ನೇ ಆಧಾರವಾಗಿ ಬ್ರಹ್ಮಶ್ರೀಗಳು ವಿದ್ಯೆಯಿಂದ ಸಂಘಟಿತರಾಗಿ ಎಂದು ಬೋಧಿಸಿ ಸಂಘಟಿತರಾಗಲು ಕರೆಕೊಟ್ಟವರು. ಸಂಘಟನೆಯಿಂದ ಯಾವ ಕೆಲಸವನ್ನು ಮಾಡಬಹುದು ಎಂದು ಜಗಕ್ಕೆ ತೋರಿಸಿ ಕೊಟ್ಟವರು ನಾರಾಯಣ ಗುರುಗಳು.
ಕೊಳ್ತಿಗೆ ನಾರಾಯಣ ಗೌಡ,
ಪ್ರವಚನಕಾರರು, ಯಕ್ಷಗಾನ ಕಲಾವಿದರು
ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.