ಅಪ್ಪಾಜಿ ಬೀಡು ಫೌಂಡೇಶನ್ :ದಿನೇಶ್ ಕುಲಾಲ್ ಕಾರ್ಯಾಧ್ಯಕ್ಷ
Team Udayavani, Mar 22, 2018, 3:36 PM IST
ಮುಂಬಯಿ: ಕಳೆದ 25 ವರ್ಷಗಳಿಂದ ನಗರದ ವರ್ಲಿ ಪರಿಸರದಲ್ಲಿ ಧಾರ್ಮಿಕ ಹಾಗೂ ಸಮಾಜ ಸೇವಾ ನಿರತವಾಗಿರುವ ಅಪ್ಪಾಜಿ ಬೀಡು ಫೌಂಡೇಶನ್ ಈಗಾಗಲೇ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ಇದರ ಬಗ್ಗೆ ವಿಶೇಷ ಸಭೆಯು ಮಾ. 18 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಅಪ್ಪಾಜಿ ಬೀಡು ಫೌಂಡೇಶನ್ ರಮೇಶ್ ಗುರುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನಗರದ ಪತ್ರಕರ್ತ, ಸಂಘಟಕ ಬಿ, ದಿನೇಶ್ ಕುಲಾಲ್ ಇವರನ್ನು ಬೆಳ್ಳಿ ಹಬ್ಬ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಅವಿರೋಧವಾಗಿ ನೇಮಿಸಲಾಯಿತು. ಅಪ್ಪಾಜಿ ಬೀಡು ಫೌಂಡೇಶನ್‌ನ 25 ನೇ ವಾರ್ಷಿಕ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸ ಲಿದ್ದು ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ರಮೇಶ್ ಗುರುಸ್ವಾಮಿ ಅವರು ಇದೇ ಸಂದರ್ಭದಲ್ಲಿ ನುಡಿದರು.
ಸಭೆಯಲ್ಲಿ ಅಪ್ಪಾಜಿ ಬೀಡು ಫೌಂಡೇಶನ್‌ನ ಆಡಳಿತ ಟ್ರಸ್ಟಿ ಶಾಂಭವಿ ಶೆಟ್ಟಿ, ಟ್ರಷ್ಟಿಗಳಾದ ರತ್ನಾಕರ ಶೆಟ್ಟಿ, ರಘುನಾಥ ಶೆಟ್ಟಿ, ಅಧ್ಯಕ್ಷರಾದ ಕೇದಗೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಸಂತೋಶ್ ಶೆಟ್ಟಿ, ಕಾರ್ಯದರ್ಶಿ ವಸಂತ್ ಪೂಜಾರಿ ಹಾಗೂ ಇತರ ಸದಸ್ಯರುಗಳು ಉಪಸ್ಥಿತರಿದ್ದರು.
ಬೆಳ್ಳಿಹಬ್ಬ ಸಂಭ್ರಮಾಚರಣೆಯು ಡಿ. 30 ರಂದು ದಿನೇಶ್ ಕುಲಾಲ್ ಅವರ ಸಾರಥ್ಯದಲ್ಲಿ ನಗರದಲ್ಲಿ ಹೃದಯಭಾಗದಲ್ಲಿ ಆಯೋಜಿಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು. ಶ್ರೀಕ್ಷೇತ್ರದ ಭಕ್ತಾದಿಗಳು, ಮಹಿಳಾ ವಿಭಾಗದ ಸದಸ್ಯೆಯರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
Desi Swara@150: ಪೊಲೇಂಡ್ ಕನ್ನಡಿಗರು ಸಂಘದ ಅದ್ದೂರಿ ಉದ್ಘಾಟನೆ
Desi Swara@150: ನವವಿಂಶತಿ ನೃತ್ಯ ಹಬ್ಬದಲ್ಲಿ ದ್ವಿದಳದ ಸತ್ರಿಯ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.