ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ನಿಯೋಗದಿಂದ ಸಂಸದ ಗೋಪಾಲ್‌ ಶೆಟ್ಟಿ  ಅವರಿಗೆ ಮನವಿ 


Team Udayavani, Oct 30, 2022, 11:19 AM IST

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ನಿಯೋಗದಿಂದ ಸಂಸದ ಗೋಪಾಲ್‌ ಶೆಟ್ಟಿ  ಅವರಿಗೆ ಮನವಿ 

ಮುಂಬಯಿ: ದೇಶಾದ್ಯಂತ ಮುನ್ಸಿಪಲ್‌ ಮಿತಿಗಳಲ್ಲಿ ಎಲ್‌ಪಿಜಿ ಗ್ಯಾಸ್‌ ಮತ್ತು ಎಲೆಕ್ಟ್ರಿಕ್‌ ಶ್ಮಶಾನಗಳನ್ನು ಅನುಷ್ಠಾನ ಗೊಳಿಸುವಂತೆ ಪ್ರತಿಷ್ಠಿತ ಸರಕಾರೇತರ ಸಂಸ್ಥೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಉತ್ತರ ಮುಂಬಯಿ ಸಂಸದ ಗೋಪಾಲ್‌ ಶೆಟ್ಟಿ ಅವರಿಗೆ ಮನವಿ ಮಾಡಿತು.

2000ರ ಸೆ. 5ರಂದು ಸ್ಥಾಪನೆಯಾದ ದಿನದಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅತ್ಯಂತ ವಿಶ್ವಾಸಾರ್ಹ ಸರಕಾ ರೇಕರ ಸಂಸ್ಥೆಯಾಗಿ ಪ್ರಸಿದ್ಧಿ ಪಡೆದಿದೆ. ಕಳೆದ 22 ವರ್ಷಗಳಿಂದ ಸಮಿತಿಯು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಗಮನ ಸೆಳೆದು ಸಮಸ್ಯೆಗಳ ಪರಿಹಾರದೊಂದಿಗೆ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿ ಯಾಗಿದೆ. ಇತ್ತೀಚೆಗೆ ಸಿಒಪಿ-26 ಗ್ಲಾಸ್ಗೋ ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2070ರ ವೇಳೆಗೆ ಭಾರತವು ಕಾರ್ಬನ್‌ ಎಮಿಷನ್‌ ಮುಕ್ತ ರಾಷ್ಟ್ರವಾಗಲಿದೆ ಎಂದು ಘೋಷಿಸಿದರು. ಇಂತಹ ಸಂದರ್ಭ ದೇಶಾದ್ಯಂತ ಮುನ್ಸಿಪಲ್‌ ಮಿತಿಗಳಲ್ಲಿ ಎಲ್‌ಪಿಜಿ ಗ್ಯಾಸ್‌, ಎಲೆಕ್ಟ್ರಿಕ್‌ ಶ್ಮಶಾನಗಳ ಅನುಷ್ಠಾನವಾಗಬೇಕು. ಮುಂದಿನ 10 ವರ್ಷಗಳಲ್ಲಿ ಭಾರತಾದ್ಯಂತ ಪ್ರತಿ ಪಂ. ಬೋರ್ಡ್‌ ಮಿತಿಯಲ್ಲೂ ಅಂತಹ ಒಂದು ಶ್ಮಶಾನ ನಿರ್ಮಿಸಬೇಕು. ಇದರಿಂದ ಪ್ರತೀವರ್ಷ ಮೃತದೇಹಗಳನ್ನು ಸುಡಲು ಬಳಸಲಾಗುವ 37 ಲಕ್ಷ ಟನ್‌ ಕಟ್ಟಿಗೆಯನ್ನು ಉಳಿಸಿ ಪರಿಸರ ಸಂರಕ್ಷಣೆ ಮಾಡಬಹುದು. ಇದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪ್ರಬಲ ಬೇಡಿಕೆಯಾಗಿದೆ ಎಂದು ಮನವಿಯಲ್ಲಿ  ತಿಳಿಸಲಾಯಿತು.

ಗ್ಲಾಸ್ಗೋ ಶೃಂಗ ಸಭೆಯಲ್ಲೂ ಪರಿಸರ ಸಂರಕ್ಷಣೆ ಬಗ್ಗೆ ಚರ್ಚೆ: 

ರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ 2014-19ರ ನಡುವೆ ಪ್ರತೀವರ್ಷ ಸರಾಸರಿ 82.16 ಲಕ್ಷ ಹಿಂದೂಗಳು ಸಾವನ್ನಪ್ಪುತ್ತಿದ್ದಾರೆ. ಹಿಂದೂ ಮೃತದೇಹಗಳನ್ನು ಸುಡಲು ಪ್ರತೀ ಮೃತದೇಹಕ್ಕೆ ಸರಾಸರಿ 475 ಕೆ.ಜಿ. ಕಟ್ಟಿಗೆಯ ಅಗತ್ಯವಿದೆ. ಒಂದು ವರ್ಷದಲ್ಲಿ 82.16 ಲಕ್ಷ ಮೃತದೇಹಗಳನ್ನು ಸುಡಲು 37 ಲಕ್ಷ ಟನ್‌ಗಳಷ್ಟು ಕಟ್ಟಿಗೆ ಅಗತ್ಯವಿದೆ. ಮೃತದೇಹಗಳನ್ನು ಸುಡುವುದರಿಂದ ಪ್ರತೀವರ್ಷ ದೊಡ್ಡ ಮಟ್ಟದಲ್ಲಿ ಪರಿಸರ ನಾಶವಾಗುತ್ತಿರುವುದು ವಿಷಾಧನೀಯ. ಕೊರೊನಾ ದಿನಗಳ ಮೊದಲ ಅಂಕಿಅಂಶದ ಪ್ರಕಾರ ದೇಶದಲ್ಲಿ ಪ್ರತೀದಿನ 47,000 ಜನನಗಳು ಮತ್ತು 28,000 ಸಾವುಗಳು ಸಂಭವಿಸುತ್ತಿವೆ. ಪರಿಸರ ನಾಶದ ಹೊರ ತಾಗಿ, ಮೃತದೇಹಗಳನ್ನು ಸುಡುವಾಗ ಭಾರೀ ಕಾರ್ಬನ್‌ ಡೈಆಕ್ಸೈಡ್‌ (ಸಿಒ2) ಹೊರಸೂಸುವಿಕೆ ಹೆಚ್ಚಿನ ಮಟ್ಟದಲ್ಲಿರುತ್ತದೆ. ಒಂದು ಶವಸಂಸ್ಕಾರದಲ್ಲಿ  ಸರಾಸರಿ 534.6 ಪೌಂಡ್‌ಗಳಷ್ಟು ಕಾರ್ಬನ್‌ ಡೈಆಕ್ಸೆ çಡ್‌ ಉತ್ಪಾದನೆಯಾಗುತ್ತದೆ. ಇದು ಪರಿಸರಕ್ಕೆ ಅಪಾಯ ಉಂಟುಮಾಡುತ್ತಿದ್ದು, ಇದನ್ನು

ನಿಯಂತ್ರಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇಂದು ವಿಶ್ವದಲ್ಲೇ ಅತ್ಯಂತ ಕಾಳಜಿ ಯುಳ್ಳ ವಿಷಯವೆಂದರೆ ಹವಾಮಾನ ಬದಲಾವಣೆಯಾಗಿದ್ದು, ಇದನ್ನು ಎಲ್ಲ ದೇಶಗಳು ಸಾಮಾನ್ಯವಾಗಿ ಶೃಂಗಸಭೆಯಲ್ಲಿ ಚರ್ಚಿಸುವುದರೊಂದಿಗೆ ವಿಶ್ವ ನಾಯಕರು ನಿಯತಕಾಲಿಕವಾಗಿ ಧ್ವನಿ ಎತ್ತುತ್ತಿದ್ದಾರೆ ಎಂದು ಸಮಿತಿಯು ಮನವಿಯಲ್ಲಿ ಹೇಳಿದೆ.

10 ವರ್ಷಗಳಲ್ಲಿ ದೇಶದ ಎಲ್ಲ ಹಳ್ಳಿಗಳಲ್ಲಿ ತ್ವರಿತ ಜಾರಿಗೆ ಆಗ್ರಹ : 

ಪ್ರತಿ ಮುನ್ಸಿಪಲ್‌ ಮತ್ತು ಪಂಚಾಯತ್‌ ಬೋರ್ಡ್‌ ಮಿತಿಗಳಲ್ಲಿ ಎಲ್‌ಪಿಜಿ ಗ್ಯಾಸ್‌, ಎಲೆಕ್ಟ್ರಿಕ್‌ ಶ್ಮಶಾನಗಳನ್ನು ನಿರ್ಮಿಸಿದ ಬಳಿಕ ಶವಸಂಸ್ಕಾರದ ಸಮಸ್ಯೆಗಳು ದೂರವಾಗುವುದಲ್ಲದೆ, ಮಾಲಿನ್ಯವನ್ನು ಸಂಪೂ ರ್ಣವಾಗಿ ನಿಯಂತ್ರಿಸಬಹುದು. ಎಲ್‌ಪಿಜಿ ಗ್ಯಾಸ್‌ ಸರಬರಾಜು ಎಲ್ಲೆಲ್ಲಿ ಲಭ್ಯವಿದೆಯೋ ಅಲ್ಲಲ್ಲಿ ಸರಕಾರವು ಎಲ್‌ಪಿಜಿ ಗ್ಯಾಸ್‌ ಶ್ಮಶಾನಗಳನ್ನು ಪ್ರೋತ್ಸಾಹಿಸಬೇಕು. ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್‌ಪಿಜಿ ಗ್ಯಾಸ್‌ ಮತ್ತು ಎಲೆಕ್ಟ್ರಿಕ್‌ ಶ್ಮಶಾನಗಳ ತ್ವರಿತ ಅನುಷ್ಠಾನವನ್ನು ದೇಶಾದ್ಯಂತ ಮುನ್ಸಿಪಲ್‌ ಮಿತಿ ಗಳಲ್ಲಿ  ಮತ್ತು ಮುಂದಿನ 10 ವರ್ಷ ಗಳಲ್ಲಿ  ದೇಶದ ಎಲ್ಲ  ಹಳ್ಳಿಗಳಲ್ಲಿ ಶ್ಮಶಾನ ವನ್ನು ತ್ವರಿತವಾಗಿ ಜಾರಿಗೊಳಿಸಲು ಸಮಿತಿಯು ಆಗ್ರಹಿಸುತ್ತಿದೆ.

ಹಿಂದೂ ಪದ್ಧತಿಗಳಂತೆ ಶವಸಂಸ್ಕಾರಕ್ಕೆ ನೆರವು :

ವಿದ್ಯುತ್‌ ಚಾಲಿತ ಶ್ಮಶಾನಗಳ ಕಾರ್ಯಾ ಚರಣೆ ತುಂಬಾ ದುಬಾರಿಯಾಗಿದ್ದು, ವಿದ್ಯುತ್‌ ಬಳಕೆ ಹೆಚ್ಚಾಗಿರುತ್ತದೆ. ಮೃತ ದೇಹಗಳನ್ನು ಸುಡಲು ಕುಲುಮೆಯನ್ನು ಪೂರ್ವಭಾವಿಯಾಗಿ ಕಾಯಿ ಸಲು ನಿರಂತರ ವಿದ್ಯುತ್‌ ಸರಬರಾಜು ಅನಿವಾರ್ಯವಾಗಿದೆ. ಹಿಂದೂ ಧಾರ್ಮಿಕ ಪದ್ಧತಿಗಳೊಂದಿಗೆ ಸಂಪೂರ್ಣ ಪರಿಸರ ಸ್ನೇಹಿಯಾಗಿರುವ ಶವ ದಹನದ ಪರ್ಯಾಯ ವಿಧಾನವನ್ನು ಜಾರಿಗೆ ತರುವ ಮೂಲಕ ಪರಿಸರವನ್ನು ಸಂಪೂರ್ಣವಾಗಿ ರಕ್ಷಿಸಲು ಪರ್ಯಾಯ ಪರಿಹಾರ ವನ್ನು ಹೇಗೆ ತರಬಹುದು ಎಂಬುವುದನ್ನು ಈ ದಿಕ್ಕಿನಲ್ಲಿ ಯೋಚಿಸುವುದು ಭಾರತ ಸರಕಾರದ ಕರ್ತವ್ಯ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಆತ್ಮದ ಮೋಕ್ಷಕ್ಕೆ ಭಾರತ ಸರಕಾರ ಮಹತ್ವ ನೀಡಬೇಕು: ನೈಸರ್ಗಿಕ ಹಸುರಿನ ನಷ್ಟವನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಎಲ್‌ಪಿಜಿ ಗ್ಯಾಸ್‌ ಮತ್ತು ಎಲೆಕ್ಟ್ರಿಕ್‌ ಶ್ಮಶಾನಗಳನ್ನು ಜಾರಿಗೆ ತರಲು ಮತ್ತು ಪರಿಸರ ನಾಶ ತಡೆಯಲು ಮತ್ತು ಭಾರೀ ಇಂಗಾಲದ ಡೈಆಕ್ಸೈಡ್‌ ಹೊಸಸೂಸುವುದನ್ನು ನಿಲ್ಲಿಸುವ ಮೂಲಕ ಕೇಂದ್ರ ಸರಕಾರವು ಶಾಸನದ ಮೂಲಕ ನೀತಿ ರೂಪಿಸಲು ಇದು ಸೂಕ್ತ ಸಮಯವಾಗಿದೆ. ಮೃತ ಮಾನವ ದೇಹವನ್ನು ದಹನ ಮಾಡುವುದು ಜೀವನದ ಅಂತ್ಯವಾಗಿದೆ. ಆದ್ದರಿಂದ ಅಗಲಿದ ಆತ್ಮದ ಮೋಕ್ಷಕ್ಕೆ ಭಾರತ ಸರಕಾರವು ಹೆಚ್ಚಿನ ಮಹತ್ವ ನೀಡಬೇಕು. ಪ್ರತಿ ಪಂ. ಬೋರ್ಡ್‌ ಮಿತಿಗಳಲ್ಲಿ ದೇಶಾದ್ಯಂತ ವಿನೂತನ ಗುಣಮಟ್ಟದ ಶ್ಮಶಾನಗಳನ್ನು ರಚಿಸುವ ಮೂಲಕ ಮಾಲಿನ್ಯ ಹೊರಸೂಸುವಿಕೆ ಮಟ್ಟಗಳು ಮತ್ತು ಹವಾಮಾನ ಬದಲಾ ವಣೆಗಾಗಿ ಗ್ಲೋಬಲ್‌ ಪ್ಲಾನೆಟ್‌ಗೆ ಸಹಾಯ ಮಾಡಲು ಮುಂದಾಗಬೇಕು. ಇದರೊಂದಿಗೆ 2021ರಲ್ಲಿ ಗ್ಲಾಸ್ಕೋದಲ್ಲಿ ಹವಾಮಾನ ಶೃಂಗಸಭೆಯ ಘೋಷಣೆಯ ಗುರಿಯನ್ನು ಸಾಧಿಸುವಲ್ಲೂ ಕೇಂದ್ರ ಸರಕಾರ ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕೇಂದ್ರ – ರಾಜ್ಯ ಸರಕಾರಗಳ

ಬಜೆಟ್‌ ನಿಬಂಧನೆ : 

ಭಾರತ ಸರಕಾರವು ಉತ್ತಮ ಗುಣ ಮಟ್ಟದ ಎಲ್‌ಪಿಜಿ ಗ್ಯಾಸ್‌, ಎಲೆಕ್ಟ್ರಿಕ್‌ ಶ್ಮಶಾನ ನಿರ್ಮಿಸುವವರನ್ನು ಗುರುತಿಸಬೇಕು. ಅವರು ಭಾರತಾದ್ಯಂತ ಶ್ಮಶಾನಗಳನ್ನು ನಿರ್ಮಿಸುವುದರೊಂದಿಗೆ ಅದರ ನಿರ್ವಹಣೆ ಸೇವೆ ಒದಗಿಸಬಹುದು. ಶವಸಂಸ್ಕಾರ ಯಂತ್ರಗಳು ಮೈಕ್ರೋ ಪ್ರೊಸೆಸರ್‌ ಆಧಾರಿತ ಸಂಪೂರ್ಣ ಸ್ವಯಂಚಾಲಿತವಾಗಿರಬೇಕು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಎಲ್‌ಪಿಜಿ ಗ್ಯಾಸ್‌, ಎಲೆಕ್ಟ್ರಿಕ್‌ ಶ್ಮಶಾನಗಳ ಅನುಷ್ಠಾನದ ಗುರಿಯನ್ನು 10 ವರ್ಷಗಳಲ್ಲಿ ಪೂರ್ಣಗೊಳಿಸಲು ಪ್ರತೀವರ್ಷ ಬಜೆಟ್‌ ನಿಬಂಧನೆಗಳನ್ನು ಮಾಡಬೇಕು ಎಂದು ಮನವಿಯಲ್ಲಿ  ಆಗ್ರಹಿಸಲಾಗಿದೆ.

ಶೀಘ್ರ ಅನುಷ್ಠಾನದ ಭರವಸೆ :

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನಿಯೋಗವು ಅ. 29ರಂದು ಸಂಸದ ಗೋಪಾಲ ಶೆಟ್ಟಿ ಅವರನ್ನು ಭೇಟಿ ಮಾಡಿ ಎಲ್‌ಪಿಜಿ ಗ್ಯಾಸ್‌ ಮತ್ತು ಎಲೆಕ್ಟ್ರಿಕ್‌ ಶ್ಮಶಾನಗಳನ್ನು ಅನುಷ್ಠಾನಗೊಳಿಸುವ ಕುರಿತು ಚರ್ಚಿಸಿತು. ಸಂಸದ ಗೋಪಾಲ ಶೆಟ್ಟಿ ಅವರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪರಿಸರ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಸಮಸ್ಯೆಯನ್ನು ತತ್‌ಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರಿಗೆ ಮನವರಿಕೆ ಮಾಡಿ, ಶೀಘ್ರ ಅನುಷ್ಠಾನಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷ ಎಲ್‌. ವಿ. ಅಮೀನ್‌, ಮಾಜಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ, ಉಪಾಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್‌, ಸಿಎ ಐ. ಆರ್‌. ಶೆಟ್ಟಿ, ಗಿರೀಶ್‌ ಸಾಲ್ಯಾನ್‌, ರಾಮಣ್ಣ ಭಂಡಾರಿ, ಬಿಜೆಪಿ ನಾಯಕ-ಸಂಘಟಕ ಎರ್ಮಾಳ್‌ ಹರೀಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.