ಮಹಿಳೆಯರ ಅನ್ಯೋನ್ಯತೆ ಕಂಡಾಗ ಸಂತೋಷವಾಗುತ್ತಿದೆ: ದೇವದಾಸ್ ಕುಲಾಲ್
Team Udayavani, Mar 9, 2020, 6:29 PM IST
ಮುಂಬಯಿ, ಮಾ. 8: ಕುಲಾಲ ಸಂಘ ಮುಂಬಯಿ ಕಳೆದ ಒಂಬತ್ತು ದಶಕಗಳಿಂದ ಮಹಾನಗರದಲ್ಲಿ ಎಲ್ಲಾ ಸಮಾಜ ಬಾಂಧವರೊಂದಿಗೆ ಅನ್ಯೋನ್ಯತೆಯ ಸಂಬಂಧವನ್ನು ಹೊಂದಿದೆ. ಕುಲಾಲ ಸಮಾಜದ ಮಹಿಳೆಯರು ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ. ಅರಸಿನ ಕುಂಕುಮವು ಪಾವಿತ್ರ್ಯತೆಯ ಸಂಕೇತ ವಾಗಿದ್ದು, ನಿಮ್ಮೆಲ್ಲರ ಮುತೈದೆತನವನ್ನು ಕಾಪಾಡಲಿ.ಮಂಗಳೂರಿನಲ್ಲಿ 15 ಕೋ. ರೂ. ಗಳಲ್ಲಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಲಾಲ ಭವನ ನಿರ್ಮಾಣ ಯೋಜನೆಯು ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಲೋಕಾರ್ಪಣೆಯು ಶೀಘ್ರದಲ್ಲೇ ನಡೆಯಲಿದೆ. ಅದಕ್ಕಾಗಿ ಸಮಾಜ ಬಾಂಧವರು, ದಾನಿಗಳ ಸಹಕಾರ ಸದಾಯಿರಲಿ ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್ ನುಡಿದರು.
ಮಾ. 1ರಂದು ನಲಸೋಪರ ಪಶ್ಚಿಮದ ಗ್ಯಾಲಕ್ಸಿ ಹೊಟೇಲ್ ಸಭಾಂಗಣದಲ್ಲಿ ಕುಲಾಲ ಸಂಘ ಮುಂಬಯಿ ಮೀರಾರೋಡ್ -ವಿರಾರ್ ಸ್ಥಳೀಯ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ ಶುಭ ಹಾರೈಸಿದರು.
ಇನ್ನೋರ್ವ ಅತಿಥಿ ವಸಾಯಿ-ವಿರಾರ್ ಮಹಾನಗರ ಪಾಲಿಕೆಯ ನಗರ ಸೇವಕಿ ಮಾಯಾ ಚೌಧರಿ ಅವರು ಮಾತನಾಡಿ, ವಸಾಯಿ-ವಿರಾರ್ ಮಹಾನಗರ ಪಾಲಿಕೆಯಲ್ಲಿ ಮಹಿಳೆಯರು, ಮಕ್ಕಳಿಗೆ ವಿಶೇಷವಾದ ಸರಕಾರಿ ಯೋಜನೆಗಳಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದು ಕೊಳ್ಳಬೇಕು ಎಂದು ವಿನಂತಿಸಿದರು.
ಸಮಾಜ ಸೇವಕಿ ತುಳಸಿ ಪದ್ಮನಾಭ ಬಂಗೇರ ಅವರು ಮಾತನಾಡಿ, ಮದುವೆಯಾದ ಹೆಣ್ಮಕ್ಕಳಿಗೆ ಅರಸಿನ ಕುಂಕುಮ ಹೆಚ್ಚು ಗೌರವ ಕೊಡುತ್ತದೆ. ಶುಭ ಕಾರ್ಯಗಳಿಗೆ ಅರಸಿನ ಕುಂಕುಮ ಎಷ್ಟು ಪ್ರಾಮುಖ್ಯವೋ ಅಷ್ಟೇ ಸ್ತ್ರೀಯೊಬ್ಬಳ ಸೌಂದರ್ಯಕ್ಕೆ ಅಗತ್ಯವಾಗಿದೆ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಚೇತನಾ ವಿಜಯ್ ಕುಂದರ್ ಅವರು ಮಾತನಾಡಿ, ಪ್ರಥಮ ಬಾರಿಗೆ ಸಂಘದ ವೇದಿಕೆಯನ್ನು ಹಂಚಿಕೊಂಡಿರುವುಕ್ಕೆ ಸಂತೋಷವಾಗುತ್ತಿದೆ. ಈ ಪರಿಸರದ ಮಹಿಳೆಯರನ್ನು ಒಗ್ಗೂಡಿಸುವಲ್ಲಿ ಸ್ಥಳೀಯ ಸಮಿತಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದರು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಮೂಲ್ಯ ಅವರು ಮಾತನಾಡಿ, ಮಹಿಳೆಯರು ಬಹಳ ಮುತುವರ್ಜಿಯಿಂದ ಸ್ಥಳೀಯ ಸಮಿತಿಯ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರ ಯಾವುದೇ ಕೆಲಸ ಯಶಸ್ವಿಯಾಗಬೇಕಾದರೆ ಪುರುಷರು ಮತ್ತು ಮಕ್ಕಳ ಸಹಕಾರ ಅಗತ್ಯವಿದೆ. ಕುಲಾಲ ಸಮಾಜ ಬಾಂಧವರು ಧರ್ಮಿಷ್ಟರು. ಎಲ್ಲಾ ಕ್ಷೇತ್ರಗಳಲ್ಲೂ ಸಂಸ್ಕಾರವಂತರಾಗಿ ಬೆಳೆಯುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ದೇವಕಿ ಸುನೀಲ್ ಸಾಲ್ಯಾನ್, ಪುಷ್ಪಾ ಸುಂದರ್ ಮೂಲ್ಯ, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷೆ ಗೀತಾ ಯೋಗೇಶ್ ಬಂಗೇರ, ಉಪ ಕಾರ್ಯಾಧ್ಯಕ್ಷೆ ಚಂದ್ರಾವತಿ ಸಾಲ್ಯಾನ್, ಕಾರ್ಯದರ್ಶಿ ರೇಣುಕಾ ಎಸ್. ಸಾಲ್ಯಾನ್, ಕೋಶಾಧಿಕಾರಿ ಸಾವಿತ್ರಿ ಎಸ್. ಬಂಗೇರ, ಜತೆ ಕಾರ್ಯದರ್ಶಿಗಳಾದ ಪ್ರಮೀಳಾ ಎಂ. ಬಂಜನ್, ಸ್ವಪ್ನಾ ಅಶ್ವಿನಿ
ಮೂಲ್ಯ, ಜತೆ ಕೋಶಾಧಿಕಾರಿ ಜಯಂತಿ ಉಮೇಶ್ ಬಂಗೇರ ಉಪಸ್ಥಿತರಿದ್ದರು. ಗೀತಾ ಯೋಗೇಶ್ ಬಂಗೇರ ಸ್ವಾಗತಿಸಿದರು. ಜಯಂತಿ ಉಮೇಶ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಲತಾ ಯಶೋಧರಾ ಬಂಗೇರ ಅರಸಿನ ಕುಂಕುಮದ ಮಹತ್ವವನ್ನು ತಿಳಿಸಿದರು. ಅತಿಥಿಗಳನ್ನು ಸುಜಾತಾ ಸಾಲ್ಯಾನ್, ರಸಿಕಾ ಮೂಲ್ಯ, ಲತಾ ಬಂಗೇರ, ಸುರೇಖಾ ಬಂಗೇರ ಪರಿಚಯಿಸಿದರು. ರೇಣುಕಾ ಬಂಗೇರ ವಂದಿಸಿದರು. ಸಭಿಕರ ಪರವಾಗಿ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಮಾತನಾಡಿ, ಅರಸಿನ ಕುಂಕುಮ ನಮ್ಮ ಸಂಸ್ಕೃತಿಯನ್ನು ತಿಳಿಸುತ್ತದೆ. ಈ ಆಚರಣೆಯನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಮಹಿಳೆಯರು ಬೇರೆ ಬೇರೆ ಕಾರ್ಯಕ್ರಮದ ಮೂಲಕ ತಮ್ಮ ಸಂಘಟನಾ ಚತುರತೆಯನ್ನು ತೋರಿಸಬೇಕು ಎಂದರು.
ಉದ್ಯಮಿ ಸುನಿಲ್ ಸಾಲ್ಯಾನ್ ಶುಭ ಹಾರೈಸಿದರು. ಸ್ಥಳೀಯ ಸಮಿತಿಯ ಸಲಹೆಗಾರ ನ್ಯಾಯವಾದಿ ಉಮಾನಾಥ ಮೂಲ್ಯ ಮಾತನಾಡಿ, ಈ ಪರಿಸರದಲ್ಲಿ ಜ್ಯೋತಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯಾಲಯವಿದೆ. ಸಮಾಜ ಬಾಂಧವರು ಇದರ ಪ್ರಯೋಜನ ವನ್ನು ಪಡೆಯಬೇಕು ಎಂದರು.
ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಎಲ್ಲರಿಗೂ ಸಮಿತಿಯ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಗ್ಯಾಲಕ್ಸಿ ಸಭಾಂಗಣದಶಶಿಧರ ಕೆ. ಶೆಟ್ಟಿ ಇನ್ನಂಜೆ ಇವರನ್ನು ಗೌರವಿಸಲಾಯಿತು. ಉಮೇಶ್ ಬಂಗೇರ, ಮೋಹನ್ ಬಂಜನ್, ಚಂದು ಮೂಲ್ಯ, ಸತೀಶ್ ಮೂಲ್ಯ, ಚಂದ್ರಶೇಖರ ಕುಲಾಲ್, ಚಂದ್ರಹಾಸ್ ಮೂಲ್ಯ, ಯಶೋಧರ ಬಂಗೇರ, ಉದಯ ಮೂಲ್ಯ ಮಾಣಿ ಅವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಕುಲಾಲ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.