![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 16, 2020, 8:31 PM IST
ಮುಂಬಯಿ, ನ. 15: ಘಾಟ್‌ಕೋಪರ್ ಪಶ್ಚಿಮದ ಅಸಲ್ಫಾದ ಶ್ರೀ ಗೀತಾಂಬಿಕಾ ಮಂದಿರದಲ್ಲಿ ಶ್ರೀ ಶರನ್ನವರಾತ್ರಿ ಉತ್ಸವದ ಅಂಗವಾಗಿ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಅ. 24ರಂದು ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಗಣಪತಿ ಹೋಮ ಮತ್ತು ವಿವಿಧ ಪೂಜೆಗಳು ಶಿವರಾಮ ಸಫಲಿಗ ದಂಪತಿಯ ಸೇವಾರ್ಥದಲ್ಲಿ ನಡೆಯಿತು. ಬಳಿಕ ದುರ್ಗಾಹೋಮವು ದೇವಸ್ಥಾನದ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ ಅವರ ನೇತೃತ್ವದಲ್ಲಿ ನೆರವೇರಿತು. ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನೆರವೇರಿತು. ಇದೇ ಸಂದರ್ಭ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಭಾರತ್ ಕೆಫೆಯ ವಿಶ್ವನಾಥ್ ಶೆಟ್ಟಿ ಮತ್ತು ಸತೀಶ್ ಕುಕ್ಯಾನ್ ಅವರು ವಿವಿಧ ಸೇವೆಗಳಲ್ಲಿ ಸಹಕರಿಸಿದರು.
ಅಸಲ್ಫ ಪರಿಸರದ ನಗರ ಸೇವಕ ಕಿರಣ್ ಲಾಂಡ್ಗೆ ಮತ್ತು ಮಾಜಿ ನಗರ ಸೇವಕಿ ಅಶ್ವಿನಿ ಭರತ್ ಮಾತೆ ಮತ್ತಿತರ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪೂಜೆಗಳಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು. ಸಂಜೆ ಭಜನೆ, ಕುಣಿತ ಭಜನೆ, ರಂಗ ಪೂಜೆಯು ಭಕ್ತರ ಸಹಾಯದಿಂದ ದೇವಸ್ಥಾ ನದ ಚಂದ್ರಶೇಖರ ತಂತ್ರಿಯವರು ನಡೆಸಿ ಕೊಟ್ಟರು. ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಕಾರ್ಯ ಕ ಾರಿ ಸಮಿತಿಯ ಕಾರ್ಯದರ್ಶಿ ಧರ್ಮಪಾಲ್ ಕೋಟ್ಯಾನ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು.
ರಾತ್ರಿ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಲಾವಿದರಿಂದ ಹಾಗೂ ಮನೋಜ್ ಕುಮಾರ್ ಹೆಜಮಾಡಿ ಇವರ ಶಿಷ್ಯರಿಂದ ಮಹಿಷ ವಧೆ ಯಕ್ಷಗಾನ ಪ್ರದರ್ಶನಗೊಂಡಿತು. ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆ ಯರು ಸಹಕರಿಸಿದರು. ದಶಮಿಯ ದಿನ ದಂದು ಮಂದಿ ರದಲ್ಲಿ ತೆನೆ ಕಟ್ಟುವ ಕಾರ್ಯಕ್ರಮಗಳು ನಡೆದವು. ಪ್ರಹ್ಲಾದ್ ಭಾವು ಶೆಟ್ಟಿ ಅವರು ದೇವಸ್ಥಾನದ ಕಚೇರಿಗೆ ಪ್ರಿಂಟರ್ ಮೆಷಿನ್ ಅನ್ನು ಸೇವಾ ರ್ಥಕವಾಗಿ ನೀಡಿದರು. ದಾನಿಗಳಾದ ನಿಟ್ಟೆ ಕರು ಣಾಕರ ಶೆಟ್ಟಿ ಭಾಂಡೂಪ್, ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ಬಿಪಿನ್ ಶೆಟ್ಟಿ, ರಾಜವಮಾರ್ ಜೈನ್ ಇವರು ಚಾಲನೆ ನೀಡಿದರು. ನವರಾತ್ರಿಯ ಎಲ್ಲ ಪೂಜಾ ಕಾರ್ಯಕ್ರಮಗಳಲ್ಲಿ ನೂರಾರು ಸಂಖ್ಯೆ ಯಲ್ಲಿ ಭಕ್ತರು ದಿನಂಪ್ರತಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಕೊರೊನಾ ಲಾಕ್‌ಡೌನ್ ಮಾರ್ಗ ಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.