ಕಠಿನ ಹಾದಿಯಲ್ಲೂ ಸಿಕ್ಕಿದ ಭರವಸೆಯ ಕಿರಣಗಳು


Team Udayavani, Feb 20, 2021, 5:16 PM IST

ಕಠಿನ ಹಾದಿಯಲ್ಲೂ ಸಿಕ್ಕಿದ ಭರವಸೆಯ ಕಿರಣಗಳು

 

ಅರ್ಜೆಂಟೀನಾದಲ್ಲಿ ಒಂದು ವರ್ಷದ ಓದು ಸುತ್ತಾಟಕ್ಕೆ ನೆನ್ನೆ ಮೊನ್ನೆಯಷ್ಟೇ ಹೊರಟಿದ್ದೆ ಎನಿಸುತ್ತಿದ್ದರೂ ಈಗಾಗಲೇ ನನ್ನ ಪ್ರಯಾಣ ಕೊನೆಯಾಗುತ್ತಿದೆ. ಅದೂ ಎಂತಹ ವರ್ಷ!  ಈ ಪ್ರಯಾಣ ಕೈಗೊಂಡಾಗ ಚೈನಾದ ವೂಹಾನಿನ ಈ ನಿಗೂಢ ಕಾಯಿಲೆಯ ಬಗ್ಗೆ ಯಾವ ಮಟ್ಟದ ಆತಂಕವೂ ಇರಲಿಲ್ಲ ಎನ್ನುವುದು ಸೋಜಿಗದಂತೆ ಈಗ ಕಾಣುತ್ತದೆ.

ಅರ್ಜೆಂಟೀನಾದಲ್ಲಿ ಬಂದಿಳಿದಾಗ, ಇಡೀ ದಕ್ಷಿಣ ಅಮೆರಿಕದಲ್ಲಿ ಒಂದೇ ಒಂದು ಕೇಸ್‌ ಬ್ರೆಜಿಲ್‌ನಲ್ಲಿ ವರದಿಯಾಗಿತ್ತು. ಮುಂದೆ ನಾನು ಈ ದೇಶದಲ್ಲಿ ಇಪ್ಪತ್ತು ದಿನ ಕಳೆಯುವ ಮುನ್ನವೇ ಎಲ್ಲ ಬದಲಾಗಲಿದೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ನೆಲದ ನುಡಿಯನ್ನು ಅಲ್ಪಸ್ವಲ್ಪ ಮಾತಾನಾಡಬಲ್ಲ ದೇಶಕ್ಕೆ ಕಾಲ್ಲಿಟಿದ್ದಲ್ಲದೆ, ಸಾಂಕ್ರಾಮಿಕದ ಲಾಕ್‌ಡೌನ್‌ನಡಿ ಬದುಕನ್ನು ತುರ್ತಾಗಿ ಹೊಂದಿಸಿಕೊಳ್ಳಬೇಕಾಗಿತ್ತು.

ವರ್ಷವಿಡೀ ಹಲವಾರು ಕಾರ್ಯಕ್ರಮ, ಸುತ್ತಾಟ ಹಾಗೂ ಹೊಸ ಹೊಸ ಗೆಳೆತನಗಳನ್ನು ಎದುರು ನೋಡುತ್ತಿದ್ದವಳಿಗೆ ಈ ಪರಿಸ್ಥಿತಿಯಿಂದ ಹತಾಶೆಯಾಗಿದ್ದಂತೂ ಹೌದು. ಆಸ್ಟ್ರೇಲಿಯಾಕ್ಕೆ ಮರಳದೇ ಅರ್ಜೆಂಟೀನಾದಲ್ಲೇ ಉಳಿಯಲು ನಿರ್ಧರಿಸಿದ ಕೂಡಲೇ, ಆಸ್ಟ್ರೇಲಿಯಾವೂ ನಮ್ಮನ್ನು ಒಳಗೆ ಬಿಟ್ಟುಕೊಳ್ಳುವುದಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ಅರಿವಿಗೆ ಬಂದಿತು.

ಈ ಸಾಂಕ್ರಾಮಿಕವನ್ನು ಅರ್ಜೆಂಟೀನಾದಲ್ಲೇ ಎದುರಿಸುವ ನಿರ್ಧಾರದ ಬಗ್ಗೆ ಅಂದೂ, ಇಂದೂ ನನ್ನ ಮನಸ್ಸು ಸಮಾಧಾನದಲ್ಲೇ ಇದೆ. ಆದರೆ, ಇಲ್ಲಿ ಕುಳಿತು ಆಸ್ಟ್ರೇಲಿಯಾ ತನ್ನೆಲ್ಲ ಗಡಿಗಳನ್ನು ಮುಚ್ಚುವುದನ್ನು ನೋಡುವುದಷ್ಟೇ ಅಲ್ಲದೆ, ದೇಶದ ಪ್ರಧಾನಿ ಹೊರಗೆ ಉಳಿದ ನಮ್ಮಂತಹವರನ್ನು ಹೀಗಳೆದದ್ದನ್ನೂ ಕೇಳಬೇಕಾದ ವಿಶಿಷ್ಟ ಪರಿಸ್ಥಿತಿ ರೂಪುಗೊಂಡಿತ್ತು.

ಜೂನ್‌ನ ಹೊತ್ತಿಗೆ ಎಲ್ಲ ಸರಿ ಹೋಗುತ್ತದೆ ಎಂದು ನನ್ನ ವಸತಿ ಸಂಗಾತಿ ಹೇಳಿದ್ದು ಈಗ ನೆನಪಾಗುತ್ತಿದೆ. ಆ ಜೂನ್‌- ಆಗಸ್ಟಾಗಿ, ಅಕ್ಟೋಬರಿಗೆ ತಿರುಗಿ, ಡಿಸೆಂಬರ್‌ ಬಂದು ಜನವರಿಯಾದರೂ, ಇನ್ನೂ ಸುಗಮವಾಗಿ ಕೊನೆಗೊಳ್ಳುವ ಸೂಚನೆಗಳೇ ಕಾಣುತ್ತಿಲ್ಲ. ಒಂದಾದ ಮೇಲೆ ಒಂದರಂತೆ ನನ್ನಂತಹವರ ಫ್ಲೈಟ್‌ಗಳನ್ನು ರದ್ದು ಮಾಡುತ್ತಾ, ಆಟಗಾರರನ್ನೂ,  ಸೆಲೆಬ್ರಿಟಿಗಳನ್ನೂ ಎಗ್ಗಿಲ್ಲದೇ ಆಸ್ಟ್ರೇಲಿಯಾದ ಒಳ ಹೊರಗೆ ಹಾರಾಡಿಸುತ್ತಿದ್ದರು. ನನ್ನ ದೇಶದ ಸರಕಾರ ನನ್ನನ್ನು ನನ್ನ ಮನೆಯಿಂದ ಹೊರಗಿಡಲು ಸರ್ವಪ್ರಯತ್ನ ಮಾಡುತ್ತಿರುವುದು ನಂಬಲಾಗದಂತಹ ವಿಚಿತ್ರ ಅನುಭವವಾಗಿ ನನ್ನನ್ನು ತಟ್ಟಿತು.

ನನ್ನ ಹಾಗೇ ಅನುಭವಿಸುತ್ತಿರುವವರನ್ನು ಆನ್‌ಲೈನ್‌ನಲ್ಲಿ ಹುಡುಕಿದಾಗ ಫೇಸ್‌ಬುಕ್‌ನಲ್ಲಿ ಸಿಕ್ಕ ದಕ್ಷಿಣ ಅಮೆರಿಕದಲ್ಲಿ ಸಿಕ್ಕುಳಿದ ಆಸ್ಟ್ರೇಲಿಯನ್ನರ ಗುಂಪೊಂದರಲ್ಲಿ ಹಲವಾರು ಮಂದಿ ಹಿಂದಿರುಗಲು ತಾವು ಪಡುತ್ತಿದ್ದ ಪಾಡಿನ ಕತೆಗಳನ್ನು ಹಂಚಿಕೊಳ್ಳುವುದನ್ನು ನೋಡಿದೆ. ಅಲ್ಲಿದ್ದವರ ಜತೆ ಮಾತಾಡಿದಾಗ ಮತ್ತೆ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ಮನೆಯವರನ್ನೂ ಸಂಗಾತಿಗಳನ್ನೂ ನೋಡುತ್ತೇನೆ ಎನ್ನುವ ಆಶಾಕಿರಣ ನನ್ನ ಮನದಲ್ಲೂ ಮೂಡಿತು ಎಂದೇ ಹೇಳಬೇಕು.

ನೀವು ಇದನ್ನು ಓದುತ್ತಿರುವಾಗ, ಸುಮಾರು ಮೂವತ್ತು ಸಾವಿರ ಆಸ್ಟ್ರೇಲಿಯನ್ನರು ಪ್ರಪಂಚದ ಹಲವೆಡೆ ಹಿಂದಿರುಗಲು ಕಾಯುತ್ತಿದ್ದು, ಸರಕಾರ ಯುಕೆ, ಯುಎಸ್‌ ಹಾಗೂ ಏಷಿಯಾಗಳಲ್ಲಿ ಸಹಾಯ ಮಾಡುತ್ತಿದ್ದರೂ ದಕ್ಷಿಣ ಅಮೆರಿಕದಲ್ಲಿ ಯಾವುದೇ ಸಹಾಯವಿಲ್ಲದೆ ಸಿಲುಕಿಕೊಂಡಿದ್ದಾರೆ ಎನ್ನುವುದು ವಿಷಾದಕರ.

ಆಸ್ಟ್ರೇಲಿಯಾದ ನನ್ನೂರು ಸಿಡ್ನಿಯಲ್ಲಿ ನಾನು ಹದಿನಾಲ್ಕು ದಿನಗಳ ಕಡ್ಡಾಯ ಕ್ವಾರಂಟೈನ್‌ ಅನ್ನು ಪೂರೈಸುತ್ತಿದ್ದೇನೆ. ನನ್ನ ಮನೆಯವರನ್ನು ಒಂದು ವರ್ಷದ ಬಳಿಕ, ಬಹುಶಃ ನಮ್ಮ ಬದುಕಿನ ಒಂದು ಅತ್ಯಂತ ವಿಷ್ಣ ವರ್ಷದ ಬಳಿಕ,  ಮತ್ತೆ ತಬ್ಬಿಕೊಳ್ಳುತ್ತೇನೆ. ಮನೆಯವರೊಡನೆ ಸೇರಿಕೊಳ್ಳುತ್ತಿರುವ ನಾನು ಅತ್ಯಂತ ಅದೃಷ್ಟವಂತೆ ಅನಿಸುವಾಗಲೂ, ತಮ್ಮ ಕುಟುಂಬದವರಿಂದ ಬೇರ್ಪಟ್ಟು ಸಿಕ್ಕಿಕೊಂಡಿರುವವರನ್ನು ನೋಡಿ ನನ್ನ ಮನಸ್ಸು ಆರ್ದ್ರವಾಗಿ ನೆನೆಯುತ್ತದೆ.

 

ತನ್ಮಯ ನಾವಡ,  ಅರ್ಜೆಂಟೀನ

ಅನುವಾದ: ಸುದರ್ಶನ್ಎನ್‌.

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.