ಸಾಮರಸ್ಯದ ಬದುಕಿಗೆ ಕಲಾ ಸೇವೆ ಪ್ರೇರಣೆ: ಶಿವಪ್ರಸಾದ್ ಪುತ್ತೂರು
ಥಾಣೆ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ಯಕ್ಷಗಾನ ಪ್ರದರ್ಶನ
Team Udayavani, Jul 27, 2019, 12:25 PM IST
ಥಾಣೆ, ಜು. 26: ಮೂರ್ತಿ ಪ್ರತಿಮೆಗಳಲ್ಲಿ ದೇವರಿದ್ದಾರೆ ಅನ್ನೋದನ್ನು ನಾನು ನಂಬುವುದಿಲ್ಲ. ಶುದ್ಧ ನಿಸ್ವಾರ್ಥ ಪ್ರಾಮಾಣಿಕ ಮನದ ಮನುಷ್ಯರಲ್ಲೇ ದೇವರಿದ್ದಾರೆ. ಜಾತಿ ಮತ ಭೇದವಿಲ್ಲದೆ ಕಲಾಸೇವೆಯನ್ನು ಮಾಡುವ ಕಲಾ ಸೇವೆಯೇ ದೇವರ ಸೇವೆ. ಮುಸ್ಲಿಂ ಸಮುದಾಯದ ಮೊಹಮ್ಮದ್ ಗೌಸ್ ಹಿಂದೂ ದೇವರ ಬಗ್ಗೆ ಯಕ್ಷಗಾನ ಪ್ರಸಂಗವನ್ನಿತ್ತು ಅಭಿನಯಿಸುವುದು ನಮಗೆಲ್ಲರಿಗೂ ಸೋಜಿಗ ಹಾಗೂ ಅಭಿಮಾನದ ಸಂಗತಿ. ಮಾತ್ರವಲ್ಲದೆ ಸಾಮರಸ್ಯದ ಬದುಕಿಗೊಂದು ಮಾದರಿ ಪಾಠ. ಸರ್ವ ಧರ್ಮದ ಜನರೊಂದಿಗೆ ಅನ್ಯೋನ್ಯ ಸಂಪರ್ಕ ಸ್ನೇಹ ಬೆಳೆಸಿಕೊಡಿರುವ ಇಂತಹ ಮಹಾನ್ ಕಲಾವಿದರಿಗೆ ಸರ್ವರ ಪ್ರೋತ್ಸಾಹ ಬೆಂಬಲವಿರಲಿ. ಮುಂಬರುವ ದಿನಗಳಲ್ಲಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯ ವತಿಯಿಂದ ಪರಿಸರದ ಸುಮಾರು ನೂರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಅಭಿಲಾಷೆ ಇದೆ. ಇದಕ್ಕೆಲ್ಲಾ ದಾನಿಗಳ ಪ್ರೋತ್ಸಾಹ ಬೆಂಬಲ ಇರಲಿ ಎಂದು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಸಾವರ್ಕರ್ ನಗರ ಥಾಣೆ ಇದರ ಸಂಸ್ಥಾಪಕರಾದ ಶಿವಪ್ರಸಾದ್ ಪೂಜಾರಿ ಪುತ್ತೂರು ಅವರು ನುಡಿದರು.
ಜು. 21ರಂದು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಸಾವರ್ಕರ್ ನಗರ ಥಾಣೆ ವತಿಯಿಂದ ನವೋದಯ ಕನ್ನಡ ಸಂಘ ಸಂಚಾಲಿತ ನವೋದಯ ಜೂನಿಯರ್ ಕಾಲೇಜು ಸಭಾಗೃಹ ಮುಲುಂಡ್ ಚೆಕ್‌ನಾಕಾ ಇಲ್ಲಿ ಆಯೋಜಿಸಿದ ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ ಕುಂದಾಪುರ ಇವರು ಪ್ರದರ್ಶಿಸಿದ ಶ್ರೀ ಶನೀಶ್ವರ ಮಹಾತ್ಮೆ ಎಂಬ ಪುಣ್ಯ ಯಕ್ಷಗಾನ ಕಥಾನಕ ಪ್ರದರ್ಶನದ ಮಧ್ಯೆ ಜರಗಿದ ಕಿರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಅವರು ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಶಿವಪ್ರಸಾದ್ ಪೂಜಾರಿ ಪುತ್ತೂರು ಇವರನ್ನು ಯಕ್ಷಸೌರಭ ಪ್ರವಾಸಿ ಮೇಳ ಕುಂದಾಪುರ ಇದರ ಪರವಾಗಿ ಮೇಳದ ಸಂಚಾಲಕರಾದ ಮೊಹಮ್ಮದ್ ಗೌಸ್ ಇವರು ಸೇರಿದಂತೆ ಅತಿಥಿ ಗಣ್ಯರು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪವನ್ನಿತ್ತು ಸಮ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶನಿಮಂದಿರ ಭಟ್ಟಿಪಾಡಾ ಭಾಂಡೂಪ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸದಾನಂದ ಅಮೀನ್ ಮಾತನಾಡಿ, ಸದಾ ತೆರೆಮರೆಯಲಿದ್ದು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗೈಯುತ್ತಿರುವ ಶಿವಪ್ರಸಾದ್ ಪೂಜಾರಿ ಪುತ್ತೂರು ಕಲಾಪೋಷಕರು ಮಾತ್ರವಲ್ಲ ಕಲಾ ಸಂಘಟಕರಾಗಿ ಗುರುತಿಸಿಕೊಂಡು ಜಾತಿ ಮಾತ ಭೇದವಿಲ್ಲದೆ ಧಾರ್ಮಿಕ ಹಾಗೂ ಕಲಾ ಸೇವೆಗೈಯ್ಯುತ್ತಿರುವುದು ಹೆಮ್ಮೆಯ ವಿಷಯ. ಅವರ ಎಲ್ಲ ಸಮಾಜಮುಖೀ ಸೇವೆಗೆ ದೈವಾನುಗ್ರಹವಿರಲಿ ಎಂದು ಆಶಿಸಿದರು.
ಇನ್ನೋರ್ವ ಮುಖ್ಯ ಅತಿಥಿ ನವೋದಯ ಕನ್ನಡ ಸೇವಾ ಸಂಘ ಥಾಣೆ ಇದರ ಅಧ್ಯಕ್ಷರಾದ ಜಯ ಕೆ. ಶೆಟ್ಟಿ ಮಾತನಾಡಿ, ಇಲ್ಲಿ ಬರುವ ಅತಿಥಿ ಗಣ್ಯರನ್ನು ಗೌರವಿಸುವ ನಮ್ಮನ್ನೇ ಅತಿಥಿಯನ್ನಾಗಿಸಿದ್ದು ನಮ್ಮ ಸೌಭಾಗ್ಯ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿವಪ್ರಸಾದ್ ಇವರ ಕಲಾ ಸೇವೆ ಶ್ಲಾಘನೀಯ. ಶ್ರೀ ಚಾಮುಂಡೇಶ್ವರಿ ದೇವಿ ಹಾಗೂ ಶ್ರೀ ಶನೀಶ್ವರ ದೇವರ ಅನುಗ್ರಹವಿರಲಿ ಎಂದು ಶುಭ ಹಾರೈಸಿದರು.
ಅತಿಥಿ ಸ್ಥಾನದಿಂದ ಬಿಲ್ಲವರ ಅಸೋಸಿ ಯೇಷನ್ ಥಾಣೆ ಸ್ಥಳೀಯ ಕಛೇರಿ ಇದರ ಗೌರವಾಧ್ಯಕ್ಷರಾದ ಅನಂತ್ ಡಿ. ಸಾಲ್ಯಾನ್ ಮಾತನಾಡಿ, ಶಿವಪ್ರಸಾದ್ ಪುತ್ತೂರು ಅವರು ಜಾತಿ ಭೇದ ಮರೆತು ಧಾರ್ಮಿಕ ಸೇವೆಯೊಂದಿಗೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವುದರ ಜತೆಗೆ ಇದೀಗ ಯಕ್ಷಸೇವೆಯ ಮುಖೇನ ಕಲಾ ಪೋಷಕರಾಗಿ ಗುರುತಿಸಿಕೊಂಡಿದ್ದು ಅಭಿನಂದನೀಯ. ಭಗವಂತ ಅವರಿಗೆ ಇನ್ನಷ್ಟು ಶ್ರೇಯಸ್ಸನ್ನು ಕರುಣಿಸಲಿ ಎಂದು ಆಶಿಸಿದರು.
ಯಕ್ಷಸೌರಭ ಪ್ರವಾಸಿ ಮೇಳ ಕುಂದಾಪುರ ಇದರ ಸಂಚಾಲಕರಾದ ಮೊಹಮ್ಮದ್ ಗೌಸ್ ಮಾತನಾಡಿದರು. ಸಭಾ ಕಾರ್ಯಕ್ರಮದ ಮಧ್ಯೆ ಮೇಳದ ನಾಮಾಂಕಿತ ಹಾಸ್ಯ ಕಲಾವಿದರಾದ ಹಳ್ಳಾಡಿ ಜಯರಾಮ ಶೆಟ್ಟಿ ಮತ್ತು ಭಾಗವತರಾದ ಸುರೇಶ್ ಶೆಟ್ಟಿ ಶಂಕರ ನಾರಾಯಣ ಇವರನ್ನು ಅತಿಥಿ ಗಣ್ಯರ ಹಸ್ತದಿಂದ ಪುಷ್ಪಗುಚ್ಛವನ್ನಿತ್ತು ಗೌರವಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯ ಸಲಹೆಗಾರರು ಹಾಗೂ ಪುರೋಹಿತರಾದ ಜಗದೀಶ್ ತಂತ್ರಿ, ಶ್ರೀ ಅಯ್ಯಪ್ಪ ಮಂದಿರ ವರ್ತಕ್ ನಗರ ಇದರ ರಾಧಾಕೃಷ್ಣ ಗುರುಸ್ವಾಮಿ, ಉದ್ಯಮಿ ಹಾಗೂ ಕಲಾಪೋಷಕರಾದ ಸುಧಾಕರ್ ಶೆಟ್ಟಿ ವಿರಾರ್, ಪ್ರವೀಣ್ ಶೆಟ್ಟಿ ನಾವುಂದ, ಸಾಹಿತಿ ಕಲಾಪ್ರೇಮಿ ಸಿ. ಎ. ಪೂಜಾರಿ ಥಾಣೆ, ಆಜ್‌ತಕ್ ಇಂಡಿಯಾ ಟುಡೇ ಸುದ್ದಿ ವಾಹಿನಿಯ ಅಶ್ವಿನ್ ಅಮೀನ್, ಫ್ಯಾಶನ್ ಕೊರಿಯೋಗ್ರಾಫರ್ ಸನ್ನಿಧ್ ಪೂಜಾರಿ, ಸಾಮಾಜಿಕ ಕಾರ್ಯಕರ್ತೆ ಸೋನಿಯಾ ಗಿಲ್, ಯಕ್ಷಸೌರಭ ಪ್ರವಾಸಿ ಮೇಳದ ಮುಂಬಯಿ ಸಂಚಾಲಕರಾದ ನಾಗರಾಜ್ ಪೂಜಾರಿ ಅಪ್ಪೇಡಿ ಹೆರಂಜಾಲು, ಉಪಸ್ಥಿತರಿದ್ದರು.
ಅಥಿತಿ ಗಣ್ಯರನ್ನು ಶಿವಪ್ರಸಾದ್ ಪೂಜಾರಿ ಪುತ್ತೂರು ಮತ್ತು ಆಶಾಲತಾ ಶಿವಪ್ರಸಾದ್ ಅವರು ಗೌರವಿಸಿದರು. ಕಾರ್ಯಕ್ರಮಕ್ಕೆ ಸಹಕಾರವನ್ನಿತ್ತ ಗಣ್ಯರಿಗೆ ಪುಷ್ಪಗುಚ್ಛವನ್ನಿತ್ತು ಗೌರವಿಸಲಾಯಿತು. ಕಾರ್ಯಕ್ರಮದ ಶ್ರೇಯಸ್ಸಿಗೆ ಮಾಧವ ಪಡೀಲ್, ಸಂಘಟಕ ಪ್ರಭಾಕರ್ ಬೆಳುವಾಯಿ, ವಿಶ್ವನಾಥ್ ಶೆಟ್ಟಿ ಪೇತ್ರಿ, ಜಗದೀಶ್ ಕೇಮಾರು, ಪ್ರಸನ್ನ ಶೆಟ್ಟಿ ಕುಂಟಾಡಿ, ಜಯ ಪೂಜಾರಿ ಥಾಣೆ, ಯೋಗೇಶ್ ಪೂಜಾರಿ ಕಡಂದಲೆ, ಪುರುಷೋತ್ತಮ್ ಬಂಟ್ವಾಳ್, ಯುವರಾಜ್ ಶೆಟ್ಟಿ ಹೆರಂಜೆ, ರಾಜೇಶ್ ಶೆಟ್ಟಿ ಥಾಣೆ, ಸತೀಶ್ ಪೂಜಾರಿ ಹೀರೆ ಬಂಡಾಡಿ, ವಸಂತ್ ಕುಂದರ್, ರಾಧಾಕೃಷ್ಣ ಶೆಟ್ಟಿ, ಜಯಂತ್ ಮುಟ್ಟ, ಪ್ರೀತಿಕಾ ಶೆಟ್ಟಿ ಮೊದಲಾದವರು ಸಹಕರಿಸಿದರು. ಸಭಾ ಕಾರ್ಯಕ್ರಮವನ್ನು ರಂಗನಟ ಕಲಾಸಂಘಟಕ ಭಾಸ್ಕರ್ ಸುವರ್ಣ ಸಸಿಹಿತ್ಲು ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.