ಬೈಡೆನ್‌, ಕಮಲಾ  ಜೋಡಿ; ಭಾರತಕ್ಕೆ ಮಾಡುವುದೇ ಮೋಡಿ


Team Udayavani, Nov 28, 2020, 3:37 PM IST

ಬೈಡೆನ್‌, ಕಮಲಾ  ಜೋಡಿ; ಭಾರತಕ್ಕೆ ಮಾಡುವುದೇ ಮೋಡಿ

ಚುನಾವಣೆ ಮುಗಿದು ಮೂರು ವಾರಗಳಾದರೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಪ್‌ ಸೋಲೊಪ್ಪಿಕೊಳ್ಳಲು ತಯಾರಿಲ್ಲ. ನೂತನ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಸಹಕರಿಸುತ್ತಿಲ್ಲ. ಮೇಲಾಗಿ ಚುನಾವಣೆ ಫ‌ಲಿತಾಂಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಒಂದೆಡೆ ರಾಜಕೀಯ ಸಂದಿಗ್ಧ ಪರಿಸ್ಥಿತಿಯಾದರೆ ಇನ್ನೊಂದೆಡೆ ಅಮೆರಿಕದಲ್ಲಿ ಕೊರೊನಾ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ. ಈವರೆಗೆ 1.20 ಕೋಟಿ ಜನರು ಸೋಂಕಿತರಾಗಿದ್ದು, 2.50 ಲಕ್ಷ ಜನರು ಮೃತಪಟ್ಟಿದ್ದಾರೆ. ಹೀಗಾಗಿ ಜೋ ಬೈಡೆನ್‌ ಜ. 20ರಂದು ಪ್ರಮಾಣ ವಚನ ಸ್ವೀಕರಿಸಿದರೆ ಮುಂದೆ ಹಲವಾರು ಸವಾಲುಗಳನ್ನು ಅವರು ಎದುರಿಸಲು ಸಜ್ಜಾಗಬೇಕಿದೆ. ಇದರೊಂದಿಗೆ ಜೋ ಬೈಡನ್‌ ಮತ್ತು ಕಮಲಾ ಹ್ಯಾರಿಸ್‌ ಆಳ್ವಿಕೆಯಲ್ಲಿ ಅಮೆರಿಕ- ಭಾರತದ ಸಂಬಂಧಗಳು ಹೇಗಿರಬಹುದು ಎಂಬ ಚರ್ಚೆಯೂ ದೊಡ್ಡ ಮಟ್ಟಿಗೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಒಂದು ಸಣ್ಣ ಅವಲೋಕನ.

ಚುನಾವಣೆಯಲ್ಲಿ  ತಮ್ಮ ಸೋಲನ್ನು ಟ್ರಂಪ್‌ ಅಧಿಕೃತವಾಗಿ ಒಪ್ಪಿಕೊಳ್ಳದೇ ಇರುವುದರಿಂದ ಜೋ ಬೈಡೆನ್‌  ಅವರನ್ನು  ಅಭಿನಂದಿಸಬೇಕೋ ಅಥವಾ ಬೇಡವೋ ಎಂದು ಜಗತ್ತಿನ ವಿವಿಧ ದೇಶಗಳ ನಾಯಕರು ಇಕ್ಕಟ್ಟಿಗೆ ಒಳಗಾಗಿದ್ದರು. ಈ ನಿಟ್ಟಿನಲ್ಲಿ ಜಗತ್ತಿನ ಬಲಿಷ್ಠ ದೇಶಗಳಾದ ರಷ್ಯಾ, ಚೀನ ಮತ್ತು ಬ್ರೆಜಿಲ್‌ ಅಧ್ಯಕ್ಷರು ದೀರ್ಘ‌  ಮೌನಕ್ಕೆ ಶರಣಾಗಿದ್ದರು. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು  ಫ‌ಲಿತಾಂಶ ಬಂದ ತತ್‌ಕ್ಷಣ ಜೋ ಬೈಡನ್‌ ಅವರದ್ದು ಒಂದು ಅದ್ಭುತ ಗೆಲುವು ಎಂದು ಹೇಳುವ ಮೂಲಕ ತಮ್ಮ ಕೆಚ್ಚೆದೆಯ ಧೈರ್ಯವನ್ನು  ಜಗತ್ತಿಗೆ ತೋರಿಸಿ, ತಾವು ವಿಶ್ವನಾಯಕ ಎಂದು ಸಾಬೀತು ಪಡಿಸಿದರು. ಮೋದಿ ಶುಭಾಶಯಕ್ಕೆ ತೀವ್ರ ಸಂತೋಷ ವ್ಯಕ್ತಪಡಿಸಿರುವ ಜೋ ಬೈಡನ್‌, ತಾವು ಭಾರತದ ಜತೆ ಸೇರಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಅಮೆರಿಕದಲ್ಲಿಯೂ ಕಮಲ

ಅಮೆರಿಕ ಚುನಾವಣೆ ಫ‌ಲಿತಾಂಶ ಬಂದೊಡನೆ ಭಾರತದಲ್ಲಿಯೂ  ಕಮಲ ಮತ್ತು ಅಮೆರಿಕದಲ್ಲಿಯೂ  ಕಮಲ ಎಂಬ ಸಾಲುಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದವು. ಇದಕ್ಕೆ ಕಾರಣ ಅಮೆರಿಕದ ಉಪಾಧ್ಯಕ್ಷೆ ಕಮಲ ಹ್ಯಾರಿಸ್‌ ಭಾರತೀಯ ಮೂಲದವರು. ಇದು ಭಾರತಕ್ಕೆ ಹೆಚ್ಚಿನ ಸಹಾಯ ಮಾಡಬಲ್ಲದು ಎನ್ನುವ ನಂಬಿಕೆ ಇದೆ. ಯಾಕೆಂದರೆ ಅಧ್ಯಕ್ಷರ ಹಿಂದಿನ ಎಲ್ಲ ಯೋಜನೆಗಳನ್ನು ರೂಪಿಸುವುದು ಉಪಾಧ್ಯಕ್ಷರೇ!

ಇನ್ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊಟ್ಟಮೊದಲ ಮಹಿಳೆಯಾಗಿ ಕಮಲಾ ಹ್ಯಾರಿಸ್‌ ಹೊಸ ದಾಖಲೆ ಸೃಷ್ಟಿಸಿದರು. ಜೋ ಬೈಡನ್‌ ಅನಂತರ ಅಮೆರಿಕ ಅಧ್ಯಕ್ಷರಾಗುವ ಎಲ್ಲ ಸಾಧ್ಯತೆಗಳು ಇವರ ಮುಂದಿವೆ.

ಇದನ್ನೂ ಓದಿ:ದೀಪಾವಳಿ ಆಚರಣೆ: ‘ರಾಗ ಆರೋಗ್ಯ’ ಸಂಗೀತ ಕಾರ್ಯಕ್ರಮ

ಹೆಚ್ಚಿದ ಆಶಾವಾದ

HIB ಮತ್ತು ಗ್ರೀನ್‌ ಕಾರ್ಡ್‌ ಆಕಾಂಕ್ಷಿಗಳಲ್ಲಿ  ಆಶಾವಾದ ಹೆಚ್ಚಾಗಿದೆ. ಯಾಕೆಂದರೆ  ಟ್ರಂಪ್‌ ಆಡಳಿತದಲ್ಲಿ  HIB ವೀಸಾ ಅರ್ಹತೆ ನಿಯಮಗಳನ್ನು ಕಠಿಣಗೊಳಿಸಿ, ಕನಿಷ್ಠ ವೇತನವನ್ನು ಹೆಚ್ಚಿಸಿ ಅನಿವಾಸಿ ಭಾರತೀಯರ ಅಸಮಾಧಾನಕ್ಕೆ ಕಾರಣರಾಗಿದ್ದರು. HIB  ವೀಸಾ ನಿಯಮಗಳನ್ನು ಸಡಿಲಿಸುವಂತೆ ಬೃಹತ್‌ ಐಟಿ  ಕಂಪೆನಿಗಳಾದ ಮೈಕ್ರೋಸಾಫ್ಟ್, ಗೂಗಲ್ ಅರಕಲ್  ಮಾಡಿದ ಮನವಿಗಳಿಗೆ ಜಗ್ಗಲಿಲ್ಲ. ಜತೆಗೆ ಗ್ರೀನ್‌ ಕಾರ್ಡ್‌ ಪಡೆಯಲು ಅನೇಕ ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವ ಲಕ್ಷಾಂತರ ಭಾರತೀಯರಿಗೆ ಉಪಕಾರವನ್ನೂ ಮಾಡಲಿಲ್ಲ. ಡೆಮಾಕ್ರಟಿಕ್‌ ಪಕ್ಷದವರು ವಲಸಿಗರಿಗೆ ಪ್ರಾಮುಖ್ಯತೆ ಕೊಡುವುದರಿಂದ ಬೈಡೇನ್‌ ಅಧಿಕಾರವಧಿಯಲ್ಲಿ ಭಾರತೀಯರ HIB  ಗ್ರೀನ್‌ ಕಾರ್ಡ್‌ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಪರಿಹಾರವಾಗುವ ಸಾಧ್ಯತೆ ಇದೆ.

ರಾಜಕೀಯದಲ್ಲಿ ಸಕ್ರಿಯರಾಗಿರುವ ಪಾಕಿಸ್ತಾನಿಗಳು

ಅಮೆರಿಕದಲ್ಲಿರುವ ಕೆಲವು ಪ್ರಭಾವಶಾಲಿ ಪಾಕಿಸ್ತಾನಿಗಳು ಜೋ ಬೈಡೆನ್‌  ಅವರ ಆಪ್ತ ವಲಯದಲ್ಲಿದ್ದು ಭಾರತ ವಿರೋಧಿ ಪಾಲಿಸಿಗಳನ್ನು, ಕಾಶ್ಮೀರಿ ವಿರೋಧಿ ನೀತಿಯನ್ನು ತರುವ ದಟ್ಟ ಅನುಮಾನಗಳಿವೆ. ಏಕೆಂದರೆ ಈ ಹಿಂದೆ ಮೋದಿ ಸರಕಾರವು ಆರ್ಟಿಕಲ್‌ 370 ರದ್ದುಗೊಳಿಸಿದಾಗ  ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ  ಮಾಡಿದೆ ಎಂದು ಬೈಡನ್‌ ಮತ್ತು ಕಮಲ ಹ್ಯಾರಿಸ್‌ ಕಟುವಾಗಿ ಟೀಕಿಸಿದ್ದರು.

ಅಮೆರಿಕದಲ್ಲಿರುವ  ಬಹಳಷ್ಟು ಭಾರತೀಯರು ವೈದ್ಯಕೀಯ, ಸಾಫ್ಟ್ವೇರ್‌ ಎಂಜಿನಿಯರಿಂಗ್‌ ಮತ್ತು ವ್ಯಾಪಾರವಹಿವಾಟುಗಳಲ್ಲಿ ಬಹಳಷ್ಟು ಹೆಸರು ಮಾಡಿದ್ದರೂ ಇಲ್ಲಿಯ ಸಕ್ರಿಯ ರಾಜಕಾರಣದಿಂದ ಬಹಳ ದೂರವಿದ್ದಾರೆ. ಆದರೆ ಪಾಕಿಸ್ತಾನಿಗಳು, ಅಮೆರಿಕದ ರಾಜಕೀಯದಲ್ಲಿ, ಅದರಲ್ಲೂ ಡೆಮಾಕ್ರಟಿಕ್‌ ಪಕ್ಷದಲ್ಲಿ ತುಂಬಾ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.  ಅವರಿಂದ ಅಮೆರಿಕದಲ್ಲಿರುವ ಭಾರತೀಯರು ಬಹಳಷ್ಟು ಕಲಿಯಬೇಕಾಗಿದೆ.

ಚೀನ-ಅಮೆರಿಕ ವೈರತ್ವ

ಬೈಡೆನ್‌ ಅವರು ಚುನಾವಣೆಯ ಸಂದರ್ಭದಲ್ಲಿ ಚೈನಾದ ಅಧ್ಯಕ್ಷ ಕ್ಸಿಪಿಂಗ್‌ ಅವರನ್ನು  ಒಬ್ಬ ಕಪಟಿ, ಮೋಸಗಾರನೆಂದು ತೀವ್ರವಾಗಿ ಖಂಡಿಸಿದ್ದರು. ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಚೀನ ದೇಶಗಳ ನಡುವಿನ ಸಂಬಂಧ ಹದಗೆಡುತ್ತ ಬಂದಿದೆ. ಅಮೆರಿಕ ಮತ್ತು ಚೀನದ ಸಂಬಂಧವೂ  ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ಹದಗೆಟ್ಟಿವೆ. ಇತ್ತೀಚಿನ ವರ್ಷಗಳಲ್ಲಿ ಚೀನ ದೇಶವು ಮಿಲಿಟರಿ, ಬಿಸಿನೆಸ್‌ ಮತ್ತು ಎಲ್ಲ  ಕ್ಷೇತ್ರಗಳಲ್ಲಿಯೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ದೇಶವಾಗಿ ಬೆಳೆಯುತ್ತಿದೆ. ಹೀಗಾಗಿ ಚೀನ ದೇಶದ ಪ್ರಾಬಲ್ಯವನ್ನು ಮುರಿಯಲು ಅಮೆರಿಕಕ್ಕೆ  ಭಾರತದ ಬಾಂಧವ್ಯ ಮತ್ತು ಸಂಬಂಧ ಬೇಕಾಗಿದೆ.

ಬೈಡನ್‌ ಮತ್ತು ವಿಶ್ವ ಆರೋಗ್ಯ ಸಂಸ್ಥೆ

ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾಗಿ ಭಾರತದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ಡಾ| ಹರ್ಷವರ್ಧನ್‌ ಆಯ್ಕೆಯಾಗಿದ್ದರು. ಆದರೆ ದುರದೃಷ್ಟವಶಾತ್‌ ಟ್ರಂಪ್‌ ಅವರು ಅಮೆರಿಕದ ಧನ ಸಹಾಯವನ್ನು ಸಂಪೂರ್ಣ ನಿಲ್ಲಿಸಿ,  ಅಮೆರಿಕವನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಗೆ ತಂದಿದ್ದರು. ಜೋ ಬೈಡನ್‌ ಅಧಿಕಾರವಹಿಸಿಕೊಂಡ ತತ್‌ಕ್ಷಣವೇ ಅಮೆರಿಕವನ್ನು ಮರಳಿ  ವಿಶ್ವ ಆರೋಗ್ಯ ಸಂಸ್ಥೆಗೆ ಸೇರಿಸುವುದಾಗಿ ಮತ್ತು ಅದಕ್ಕೆ ಸಂಪೂರ್ಣ ಧನ ಸಹಾಯ ಮಾಡುವುದಾಗಿ ಘೋಷಿಸಿದ್ದು, ಭಾರತ ಸೇರಿದಂತೆ ಪ್ರಪಂಚದ ಎಲ್ಲ ದೇಶಗಳಿಗೂ ಬಹುದೊಡ್ಡ ಸಮಾಧಾನದ ವಿಷಯವಾಗಿದೆ. ಹಾಗೆಯೇ ಬೈಡೆನ್‌ ಅವರು, ಅಮೆರಿಕವನ್ನು ಮತ್ತೆ ಪ್ಯಾರಿಸ್‌ ಹವಾಮಾನ ಒಪ್ಪಂದಕ್ಕೆ ಸೇರ್ಪಡೆ ಮಾಡುವುದಾಗಿ ಹೇಳಿರುವುದು ಕೂಡ ಉತ್ತಮ ವಿಚಾರ. ಕಾರಣ  ಭಾರತವು ವಿಶ್ವದ ಪರಿಸರವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ಬೈಡೆನ್‌-ಮೋದಿ ಗೆಳೆತನ

ಜೋ ಬೈಡನ್‌ ಅಧ್ಯಕ್ಷರಾದರೆ ಭಾರತದ ಸಂಬಂಧವೇನೂ ಹಳಸುವುದಿಲ್ಲ. ಕಾರಣ ಮೋದಿಯವರಿಗೆ ಜೋ ಬೈಡನ್‌ ಜತೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ.  ಬರಾಕ್‌ ಒಬಾಮ ಅವರ ಅವಧಿಯಲ್ಲಿ ಬೈಡನ್‌ ಎಂಟು ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದರು. ಆಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ಬಹಳಷ್ಟು ಒಡನಾಟವನ್ನಿಟ್ಟುಕೊಂಡಿದ್ದರು. ಮೋದಿ ಮತ್ತು ಬರಾಕ್‌ ಒಬಾಮಾ ಒಳ್ಳೆಯ ಸ್ನೇಹಿತರು. ಮೋದಿ- ಒಬಾಮ ಸ್ನೇಹವು ಮೋದಿ- ಟ್ರಂಪ್‌  ಅವರ ಸ್ನೇಹಕ್ಕಿಂತಲೂ ಗಾಢವಾಗಿತ್ತು. ಮೋದಿಯವರು ಚೀನಾ ದೇಶದ ಪ್ರಾಬಲ್ಯವನ್ನು ಮುರಿಯಲು,  ಪಾಕಿಸ್ತಾನದ  ಸೊಕ್ಕನ್ನು ಅಡಗಿಸಲು ಮತ್ತು ಕಾಶ್ಮೀರದಲ್ಲಿ 370 ಆರ್ಟಿಕಲ್‌ ವಜಾ ಗೊಳಿಸಲು ಅನಿವಾರ್ಯವಾಗಿ ಟ್ರಂಪ್‌ ಅವರ ಸ್ನೇಹವನ್ನು ಮಾಡಲೇಬೇಕಾಗಿ ಬಂದಿತ್ತು. ಭಾರತದ ಹಿತಾಸಕ್ತಿಗಳಿಗೆ ಅಮೆರಿಕಾದ ಬೆಂಬಲ ಬೇಕೇ ಬೇಕಿತ್ತು.

ಮೋದಿಯವರು ಒಬ್ಬ ಬಹು ಅನುಭವಿ, ಮುತ್ಸದ್ದಿ, ಚಾಣಕ್ಯನಾಗಿದ್ದು  ಒಬಾಮಾ,  ಟ್ರಂಪ್‌ ಸ್ನೇಹದಂತೆಯೇ, ಬೈಡೆನ್‌ ಜತೆಗೆ  ಉತ್ತಮ ವೈಯಕ್ತಿಕ ಸ್ನೇಹವನ್ನು ಹೊಂದಿ, ಭಾರತ ಮತ್ತು ಅಮೆರಿಕ ಬಾಂಧವ್ಯ ವೃದ್ಧಿಸುವಂತೆ ಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

ಬೆಂಕಿ ಬಸಣ್ಣ, ಲೇಖಕ,ನ್ಯೂ ಯಾರ್ಕ್‌

ಟಾಪ್ ನ್ಯೂಸ್

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

1-wewwewq

Tamil actor ವಿಶಾಲ್‌ಗೆ ಅನಾರೋಗ್ಯ?: ಅಭಿಮಾನಿಗಳಿಗೆ ಆತಂಕ

1-kumb

Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

ICC

ICC; ಟು-ಟೈರ್‌ ಟೆಸ್ಟ್‌  ನಿಯಮಕ್ಕೆ ಸಿದ್ಧತೆ? ಏನಿದು ಸಿಸ್ಟಮ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

1-wewwewq

Tamil actor ವಿಶಾಲ್‌ಗೆ ಅನಾರೋಗ್ಯ?: ಅಭಿಮಾನಿಗಳಿಗೆ ಆತಂಕ

1-kumb

Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.