ಅರುಣೋದಯ ಕಲಾನಿಕೇತನ ಸಂಸ್ಥೆ: ವಜ್ರಮಹೋತ್ಸವ,ನೃತ್ಯ ವೈಭವ
Team Udayavani, Nov 29, 2018, 5:43 PM IST
ಮುಂಬಯಿ: ನಗರದ ಪ್ರತಿಷ್ಠಿತ ಹಿರಿಯ ಕಲಾಸಂಸ್ಥೆ ಅರುಣೋ ದಯ ಕಲಾ ನಿಕೇತನ ಮುಂಬಯಿ ಇದರ ವಜ್ರಮ ಹೋತ್ಸವ ಸಂಭ್ರಮವು ನ. 25 ರಂದು ಚೆಂಬೂರಿನ ಫೈನ್‌ಆರ್ಟ್ಸ್ ಕಲ್ಚರಲ್ ಸೆಂಟರ್‌ನ ಶಿವ ಸ್ವಾಮಿ ಆಡಿಟೋರಿಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಂಸ್ಥೆಯ ನೃತ್ಯ ಗುರು ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರ ನೇತೃತ್ವದಲ್ಲಿ ನಡೆದ ವಜ್ರ ಮಹೋತ್ಸವದ ಅಂಗವಾಗಿ ಒಂದೇ ವೇದಿಕೆಯಲ್ಲಿ ಒಂದೇ ವೇಳೆ 60 ಕಲಾವಿದರಿಂದ ಭಾರತದ ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯಂ, ಕೊಚುಪುಡಿ, ಮೋಹಿನಿಯಾಟ್ಟಂ, ಮಣಿಪುರಿ, ಕಥಕ್, ಓಡಿಸ್ಸಿ, ಕಥ್‌ಕಳಿ ನೃತ್ಯಗಳ ಜುಗಲ್‌ಬಂದಿ ನಡೆಯಲಿದೆ. 60 ಕಲಾವಿದರಿಂದ ತಾಳ- ವಾದ್ಯ, ಜುಗಲ್ ಬಂದಿ ಮತ್ತು ಮ್ಯೂಸಿಕಲ್ ಇನ್‌ಸ್ಟುÅಮೆಂಟ್ ಹಾಗೂ ಸ್ಟಿÅಂಗ್ ಸಲಕರಣೆಗಳಿಂದ ತಾಳವಾದ್ಯ, ಗಾಯನ, ಗಾಳಿ ವಾದ್ಯ ವೈವಿಧ್ಯಮಯ ಇನ್‌ಸ್ಟುÅಮೆಂಟ್‌ಗಳಿಂದ ಜುಗಲ್ ಬಂದಿಯನ್ನು ಆಯೋಜಿಸಲಾಗಿದ್ದು, ಸೇರಿದ ನೂರಾರು ಮಂದಿ ಕಲಾಭಿಮಾನಿಗಳನ್ನು ರಂಜಿಸಿತು. ಸಂಸ್ಥೆಯ ನೃತ್ಯ ಗುರು ನಿರ್ದೇಶಕಿ ಡಾ| ಗುರು ಮೀನಾಕ್ಷಿ ರಾಜು ಶ್ರೀಯಾನ್ ಅವರ ದಕ್ಷಣ ನಿರ್ದೇಶನದಲ್ಲಿ ಅರುಣೋದಯ ಕಲಾನಿಕೇತನ ಸಂಸ್ಥೆಯ ವಿವಿಧ ಶಾಖೆಗಳ ಮಕ್ಕಳಿಂದ ನೃತ್ಯಗಳು ಪ್ರದರ್ಶನಗೊಂಡಿತು. ಸಂಸ್ಥೆಯ ನಿರ್ದೇಶಕ, ಸಮಾಜ ಸೇವಕ ರಾಜು ಶ್ರೀಯಾನ್ ಅವರ ಸಹಕಾರ ದೊಂದಿಗೆ ಸಂಸ್ಥೆಯ ಟ್ರಸ್ಟಿಗಳಾದ ಸಂಜೀವ ಕೆ. ಸಾಲ್ಯಾನ್, ಗೋಪಾಲ್ ಪುತ್ರನ್, ಸುರೇಶ್ ಕಾಂಚನ್ ಅವರ ಪ್ರೋತ್ಸಾಹದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಚಿತ್ರ-ವರದಿ : ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.