ಅಸಲ್ಫಾ ಗೀತಾಂಬಿಕಾ ದೇವಸ್ಥಾನ:54ನೇ ವಾರ್ಷಿಕ ದಸರಾ
Team Udayavani, Sep 28, 2017, 3:40 PM IST
ಮುಂಬಯಿ: ಘಾಟ್ಕೋಪರ್ ಪಶ್ಚಿಮದ ಅಸಲ್ಫಾದ ನಾರಿ ಸೇವಾಸದನ್ ರಸ್ತೆಯ ಶ್ರೀ ಗೀತಾಂಬಿಕಾ ಸೇವಾ ಸಮಿತಿಯ ಸಂಚಾಲಕತ್ವದ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ 54ನೇ ವಾರ್ಷಿಕ ನವರಾತ್ರಿ ಮಹೋತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು, ಸೆ. 26ರಂದು ಸಂಜೆ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅವರು ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಒಗ್ಗೂಡಿ ಉತ್ಸಹದಲ್ಲಿ ದಸರಾ ಸಂಭ್ರಮಾಚರಣೆ ಮಾಡುತ್ತಿರುವುದನ್ನು ಕಂಡಾಗ ನಮ್ಮ ಮಹಿಳೆಯರಲ್ಲಿನ ಧಾರ್ಮಿಕ ಉತ್ಸುಕತೆ, ಭಕ್ತಿ, ಶ್ರದ್ಧೆಯ ಅರಿವಾಗುತ್ತದೆ, ತುಳುನಾಡ ಎಲ್ಲಾ ಸಂಪ್ರದಾಯ ಸಂಸ್ಕೃತಿಗಳು ಪಾವಿತ್ರÂತೆಯಿಂದ ಕೂಡಿದ್ದು, ದೇವಿಗೆ ಇಷ್ಟವಾದ ಅರಸಿನ ಎಲ್ಲಾ ಆಚರಣೆಗಳಿಗೂ ಅಗತ್ಯವಾದ ಕಾರಣ ಅರಸಿನ, ಕುಂಕುಮ, ಹೂವು, ಬಳೆಗಳು ಮಹತ್ವ ಪಡೆದಿವೆ. ಇಂತಹ ಕಾರ್ಯಕ್ರಮಗಳಿಂದ ಪರಸ್ಪರ ಸಾಮರಸ್ಯ ಬೆಳೆದು ತಮ್ಮಲ್ಲಿನ ಪ್ರತಿಭೆ ಗುರುತಿಸಿಕೊಳ್ಳುವಂತಾಗಬೇಕು. ಅಂತೆಯೇ ಭಜನೆಯಿಂದ ದೇವರು ಒಲಿಯುತ್ತಾರೆ ಎನ್ನುವುದೂ ಸತ್ಯ. ನಾವು ಮಕ್ಕಳನ್ನು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಬೇಕು ಎಂದು ನುಡಿದು ಶುಭ ಹಾರೈಸಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಗೌರವ ಅತಿಥಿಯಾಗಿ ಮಾತನಾಡಿ, ನಾಡಹಬ್ಬ ದಸರಾವನ್ನು ನಾಡಿನ ಹಬ್ಬವಾಗಿ ಸಂಭ್ರಮಿಸಲಾಗುತ್ತದೆ. ವಿವಿಧತೆಯಲ್ಲಿ ಏಕತೆ ಸಾರುವ ಹಬ್ಬ ದಸರಾವಾಗಿದೆ. ಮಹಿಷಾಸುರ ಮತ್ತು ದೇವಿ ಮಧ್ಯೆಯ ಕಾಳಗ ದಾಂಡಿಯಾ ಆಗಿದೆ. ಇಂತಹ ಸಂಪ್ರದಾಯಸ್ಥ, ಸಾಂಸ್ಕೃತಿಕತೆಯನ್ನು ಮಕ್ಕಳಲ್ಲಿ ಬಿತ್ತರಿಸುವ ಜವಾಬ್ದಾರಿ ಹೆತ್ತವರದ್ದು. ಆಚರಣೆ ಮೂಲಕ ಅಂತಃಕರಣ ನಿರ್ಮಾಲಗೊಳಿಸಿ ಸಮಾಜದ ಜವಾಬ್ದಾರಿ ತಿಳಿದು ಮುನ್ನಡೆಯಲು ಈ ಆಚರಣೆ ವಿಶೇಷವಾಗಿ ಮಹಿಳಾ ಪ್ರಧಾನ ಹಬ್ಬ ಪ್ರೇರಣೆಯಾಗಿದೆ ಎಂದರು.
ಗೌರವ ಅತಿಥಿಗಳಾಗಿ ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗಾಧ್ಯಕ್ಷೆ ಶೋಭಾ ಎಸ್. ಭಂಡಾರಿ ಕಡಂದಲೆ, ಸ್ಥಾನೀಯ ಮಾಜಿ ನಗರ ಸೇವಕಿ ಸುಪುತ್ರಿ ಶ್ರದ್ಧಾ ಬಿ. ಹಾಗೂ ಸ್ಥಾನೀಯ ಹಾಲಿ ನಗರ ಸೇವಕರ ಪತ್ನಿ ಅನಿತಾ ಕಿರಣ್ ಲಾಂಗ್ನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿ-ಗಣ್ಯರು ಸಾಂಪ್ರ ದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸ್ಥಾನೀಯ ಹೆಸರಾಂತ ಸಮಾಜ ಸೇವಕಿ ಮೀನಾ ಪೂಜಾರಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸತೀಶ್ ಕೆ. ಶೆಟ್ಟಿ, ದಾಮೋದರ ಶೆಟ್ಟಿ ಇರುವೈಲು, ಗೌರವ ಉಪಾಧ್ಯಕ್ಷ ಜಯರಾಮ ಜಿ. ರೈ, ಕಾರ್ಯದರ್ಶಿ ಧರ್ಮಪಾಲ್ ಪಿ. ಕೋಟ್ಯಾನ್, ಕೋಶಾಧಿಕಾರಿ ವಿಕ್ರಮ್ ಸುವರ್ಣ, ಕಾರ್ಯನಿರತ ಅಧ್ಯಕ್ಷರಾದ ಸುರೇಶ್ ಪಿ. ಕೋಟ್ಯಾನ್, ಪ್ರಭಾಕರ ಕುಂದರ್, ವಿಟuಲ್ ಬೆಳುವಾಯಿ, ಸಂಜೀವ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಸುಧಾಕರ ಶೆಟ್ಟಿ, ಕೃಷ್ಣ ಅಮೀನ್, ಜೊತೆ ಕೋಶಾಧಿಕಾರಿಗಳಾದ ಸಚಿನ್ ಡಿ. ಜಾಧವ್, ಸೌಮ್ಯಾ ಎಸ್. ಪೂಜಾರಿ, ಸಂಚಾಲಕರಾದ ನಿತ್ಯಾಪ್ರಕಾಶ್ ಎನ್. ಶೆಟ್ಟಿ, ನಾಗೇಶ್ ಎಸ್. ಸುವರ್ಣ, ಮಹಿಳಾ ಮಂಡಳಿ ಮತ್ತು ಪೂಜಾ ಸಮಿತಿ ಹಾಗೂ ಭಜನಾ ಸಮಿತಿಯ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು. ಆರಂಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ರಘುಪತಿ ಭಟ್ ಉಡುಪಿ ಪೂಜಾದಿಗಳನ್ನು ನೆರವೇರಿಸಿ ಹರಸಿದರು. ಶ್ರೀ ಗೀತಾಂಬಿಕಾ ಮಂಡಳಿ ಭಜನೆ ನಡೆಸಿತು. ಅನಂತರ ದುರ್ಗಾನಮಸ್ಕಾರ ಪೂಜೆ, ಹೂವಿನ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನೆರವೇರಿತು. ಸಲಹಾ ಸಮಿತಿಯ ಸದಸ್ಯ ಕರ್ನೂರು ಮೋಹನ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವಾರ್ಷಿಕ ಶರನ್ನವರಾತ್ರಿ ಉತ್ಸವ ನಿಮಿತ್ತ ಸೆ. 29 ರಂದು ಬೆಳಗ್ಗೆಯಿಂದ ದುರ್ಗಾಹೋಮ, ರಾತ್ರಿ ರಂಗಪೂಜೆ, ಮಂಗಳಾರತಿ, ದೇವಿ ದರ್ಶನ ಬಲಿ, ತುಲಾಭಾರ, ರಾತ್ರಿ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ “ಕೋರªಬ್ಬು ಬಾರಗ’ ತುಳು ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನ, ಸೆ. 30ರಂದು ವಿಜಯ ದಶಮಿಯ ದಿನದಂದು ದೇವಿ ದರ್ಶನ, ಮಹಾ ಮಂಗಳಾರತಿ ನೆರವೇರಲಿದೆ. ದಸರಾ ತನಕ ದಿನಂಪ್ರತಿ ರಾತ್ರಿ ಭಜನೆ, ವಿವಿಧ ಪೂಜೆಗಳು, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಲಿದ್ದು, ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ವಾರ್ಷಿಕ ದಸರೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುವಂತೆ ಮಂದಿರದ ಕಾರ್ಯದರ್ಶಿ ಧರ್ಮಪಾಲ್ ಪಿ. ಕೋಟ್ಯಾನ್ ವಿನಂತಿಸಿದರು.
ನಮ್ಮ ಕರಾವಳಿನ ಮಣ್ಣಿನಿಂದ ಉದ್ಯೋಗಕ್ಕಾಗಿ ಕರ್ಮಭೂಮಿಗೆ ಬಂದಿರುವ ನಾವು ನಮ್ಮ ಕರಾವಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ಕರ್ಮಭೂಮಿ ಮಹಾರಾಷ್ಟ್ರದ ಸಂಸ್ಕೃತಿಯನ್ನು ಅರಸಿನ ಕುಂಕುಮ ಆಚರಣೆಯೊಂದಿಗೆ ಉಳಿಸಿಕೊಳ್ಳುತ್ತೇವೆ. ಅರಸಿನ ರೋಗನಿರೋಧಕ ಶಕ್ತಿಯುಳ್ಳಂಥ ಪವಿತ್ರವಾದ ವಸ್ತುವಾಗಿದೆ.
ಅರಸಿನ ಗುರುವಿನ ಚಿಹ್ನೆ, ಕುಂಕುಮ ದೈವಿಕತೆಯನ್ನು ಸಾರುವ ಚಿಹ್ನೆಯಾಗಿವೆೆ. ಇಂತಹ ಕಾರ್ಯಕ್ರಮಗಳನ್ನು ಆಚರಿಸುವು ದರಿಂದ ಮನಸ್ಸಿನಲ್ಲಿರುವ ನೋವು ಮರೆತು ಒಗ್ಗಟ್ಟಿನಲ್ಲಿರುವಂತೆ ಪ್ರೇರೇಪಿಸುತ್ತದೆ. ಮನಸ್ಸಿಗೆ ತುಂಬಾ ಆನಂದ ಸಿಗುತ್ತದೆ
– ಕಡಂದಲೆ ಸುರೇಶ್ ಭಂಡಾರಿ
(ಅಧ್ಯಕ್ಷರು: ಗೀತಾಂಬಿಕಾ ಮಂದಿರ ಅಸಲ್ಫಾ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.