ಅಸಲ್ಫಾ ಶ್ರೀ ಗೀತಾಂಬಿಕಾ ಮಂದಿರ: ಯಕ್ಷಗಾನ


Team Udayavani, Oct 27, 2017, 2:24 PM IST

26-Mum04.jpg

ಮುಂಬಯಿ: ಯಕ್ಷಗಾನ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಮನುಷ್ಯನಲ್ಲಿರುವ ಅಜ್ಞಾನದ ಪೊರೆಯನ್ನು ಕಳಚಿ ಜ್ಞಾನದ ಪೊರೆಯ ಬೆಳಕನ್ನು ನೀಡುವ ಶಕ್ತಿ ಯಕ್ಷಗಾನ ಕಲೆಗಿದೆ. ಬಣ್ಣದ ಬದುಕಿನ ಕಲಾವಿದರು ಆರ್ಥಿಕವಾಗಿ ಶ್ರೀಮಂತರಲ್ಲ. ಹೆಚ್ಚಿನವರ ಬದುಕು ಕಷ್ಟದಲ್ಲಿದ್ದು, ಅಂಥವರನ್ನು ಗುರುತಿಸಿ, ಸಹಕರಿಸುವ ಕಾರ್ಯ ನಮ್ಮಿಂದಾಗಬೇಕು. ಅವರ ಕತ್ತಲೆಯ ಬದುಕಿಗೆ ಬೆಳಕು ಚೆಲ್ಲುವಂತಹ ಕೆಲಸವನ್ನು ಕಲಾಪೋಷಕರಾದ ನಾವು ಮಾಡಬೇಕು ಎಂದು ಶ್ರೀ ಕ್ಷೇತ್ರ ಗೀತಾಂಬಿಕಾ ಮಂದಿರದ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅವರು ನುಡಿದರು.

ಅ.22 ರಂದು ಘಾಟ್‌ಕೋಪರ ಅಸಲ್ಫಾದ ಶ್ರೀ ಕ್ಷೇತ್ರ ಗೀತಾಂಬಿಕಾ ಮಂದಿರದ ರಂಗಮಂಟಪದಲ್ಲಿ ಯಕ್ಷತುಳು ಪರ್ಬ ಸಮಿತಿ ಮಂಗಳೂರು ಅವರ ಆಶ್ರಯದಲ್ಲಿ ಪ್ರದರ್ಶನಗೊಂಡ ಶ್ರೀ ಮಾತಾ ವೈಷ್ಣೋದೇವಿ ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬಯಿ ಕಲಾಭಿಮಾನಿಗಳು ಕಲಾವಿದರನ್ನು ಸದಾ ಗೌರವಿಸಿ, ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ತುಳು ಕನ್ನಡಿಗರು ನಾಡಿನ ಕಲೆ, ಸಂಸ್ಕೃತಿಯನ್ನು ಬೆಳೆಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಹಾಸ್ಯ ಕಲಾವಿದ ಸೀತಾರಾಮ್‌ ಕುಮಾರ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಅತಿಥಿಯಾಗಿ ಪಾಲ್ಗೊಂಡ ಪುರೋಹಿತ ಪ್ರವೀಣ್‌ ಜೆ. ಭಟ್‌  ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದು ಶ್ಲಾಘನೀಯ ಕಾರ್ಯ. ಎಲ್ಲರೂ ಸಂತೋಷದಲ್ಲಿರಬೇಕು ಎಂಬ ಮನೋ ಭಾವದಿಂದ ಕಷ್ಟದಲ್ಲಿರುವವರಿಗೆ ಸ್ಪಂದಿಸುವ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಕಡಂದಲೆ ಸುರೇಶ್‌ ಭಂಡಾರಿ ಅವರ ನಿರ್ಮಾಪಕತ್ವದ ಅಂಬರ್‌ ಕ್ಯಾಟರರ್ ತುಳು ಚಲನಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹವನ್ನು ನೀಡಿ ಅದನ್ನು ಯಶಸ್ವಿಗೊಳಿಸಬೇಕು ಎಂದರು.

ಮತ್ತೋರ್ವ ಅತಿಥಿ ರಂಗನಟ ಮೋಹನ್‌ ಮಾರ್ನಾಡ್‌ ಅವರು ಮಾತನಾಡಿ, ಎಲ್ಲಾ ವಿಧದ ಕಲೆಗಳಲ್ಲಿ ಸಂಪೂರ್ಣವಾದ ಕಲೆ ಅಂದರೆ ಅದು ಯಕ್ಷಗಾನ. ನಮಗೆ ದೇವರ ಹಾಗೂ ಭಕ್ತಿಯ ಪರಿಚಯ ಮಾಡಿಕೊಡುವಂತಹ ಕಲೆಯೆ ಯಕ್ಷಗಾನ. ಆದ್ದರಿಂದ ಕಲಾಭಿಮಾನಿಗಳ ಪಾಲಿಗೆ ಯಕ್ಷಗಾನ ದೇವ ಕಲೆಯಾಗಿದೆ. ಕಲಾವಿದರಲ್ಲಿ ಅಡಕವಾಗಿರುವ ಕಲಾ ಪ್ರತಿಭೆಯೇ ಅವರ ಪಾಲಿಗೆ ಶ್ರೀಮಂತಿಕೆಯಾಗಿದೆ. ಇದನ್ನು ಉಳಿಸಿಕೊಳ್ಳಲು ಕಲಾವಿದರು ಪ್ರಯತ್ನಿಸಬೇಕು ಎಂದು ನುಡಿದರು.

ಅತಿಥಿಯಾಗಿ ಪಾಲ್ಗೊಂಡ ಪಟ್ಲ ಫೌಂಡೇಷನ್‌ ಮಂಗಳೂರು ಕಾರ್ಕಳ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕುಂದೂರು ಅವರು ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ನಾನು ಡಿ. ಮನೋಹರ್‌ ಕುಮಾರ್‌ ಅವರ ಅಪ್ಪಟ ಅಭಿಮಾನಿ. ಅವರ ಮೇಲಿನ ಪ್ರೀತಿ, ಅಭಿಮಾನ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷತುಳು ಪರ್ಬ ಸಮಿತಿ ಮಂಗಳೂರು ಅಧ್ಯಕ್ಷ ಡಿ. ಮನೋಹರ ಕುಮಾರ್‌ ಅವರು ಮಾತನಾಡಿ, ಊರಿನ ಮೇಳಗಳ ಮೂಲಭೂತ ವ್ಯವಸ್ಥೆಗೆ ಮುಂಬಯಿ ಕಲಾಭಿಮಾನಿಗಳ ಕೊಡುಗೆ ತುಂಬಾಯಿದೆ. ಊರಿನ ಮೇಳಗಳು ಉಳಿದು ಬೆಳೆಯಲು ಕೂಡಾ ಮುಂಬಯಿ ಮಹಾಜನತೆಯ ಸಹಕಾರ, ಪ್ರೋತ್ಸಾಹವಿದೆ. ಕದ್ರಿ ಮೇಳ ಮುಂಬಯಿಯಲ್ಲಿ ಪ್ರದರ್ಶನ ನೀಡಲು ಬರುವಾಗ ತಿಂಗಳಿಗೆ ನಲ್ವತ್ತು ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು. ತುಳುಭಾಷೆಯ ಅಭಿಮಾನ ನಮ್ಮೆಲ್ಲರಲ್ಲಿ ಹೆಚ್ಚಬೇಕು. ತುಳು ರಂಗ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಏಳು ವರ್ಷಗಳ ಹಿಂದೆ ಯಕ್ಷ ತುಳು ಪರ್ಬ ಸಮಿತಿಯನ್ನು ರಚಿಸಿ ತುಳು ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದೇವೆ. ನಮ್ಮ ಸಮಿತಿಯ ಸಂಘಟಕರಾದ ಪ್ರಕಾಶ್‌ ಶೆಟ್ಟಿ ಸುರತ್ಕಲ್‌ ಹಾಗೂ ಕಲಾವಿದ ದಾಸಪ್ಪ ರೈ ಅವರ ಪುತ್ರ, ಪತ್ರಕರ್ತ ದೇವಿಪ್ರಸಾದ್‌ ರೈ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಕಲಾಭಿಮಾನಿಗಳ, ಕಲಾಪೋಷಕರ ಸಹಾಯ, ಪ್ರೋತ್ಸಾಹದಿಂದ ಯಕ್ಷತುಳು ಪರ್ಬವು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಉದ್ಯಮಿ, ಕಲಾಪೋಷಕ ನಿಟ್ಟೆ ಕರುಣಾಕರ ಶೆಟ್ಟಿ, ಸುಧಾಕರ ಶೆಟ್ಟಿ ಎಣ್ಣೆಹೊಳೆ, ರಂಗಚಾವಡಿ ಅಧ್ಯಕ್ಷ ಕರುಣಾಕರ ಶೆಟ್ಟಿ ಕುಕ್ಕುಂದೂರು, ರಮಾನಾಥ್‌ ಕೋಟ್ಯಾನ್‌, ಡಾಣ ರಂಜನ್‌ ಶೇಣವ, ಬಿಲ್ಲವರ ಅಸೋಸಿಯೇಶನ್‌ ಘಾಟ್‌ಕೋಪರ್‌ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕೆ. ಕೆ. ಪೂಜಾರಿ, ಉದ್ಯಮಿ ಶೇಖರ್‌ ಕೋಟ್ಯಾನ್‌ ಕುಂಪದವು, ಕಲಾ ಸಂಘಟಕ ಪ್ರಕಾಶ್‌ ಶೆಟ್ಟಿ ಸುರತ್ಕಲ್‌ ಮೊದಲಾದವರು ಉಪಸ್ಥಿತರಿದ್ದರು. ಬಾಬಾ ಪ್ರಸಾದ್‌ ಅರಸ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್‌ ಕೋಟ್ಯಾನ್‌, ವಿಕ್ರಂ ಸುವರ್ಣ, ಕಣಂಜಾರು ಸುರೇಶ್‌ ಶೆಟ್ಟಿ, ಸತೀಶ್‌ ಶೆಟ್ಟಿ, ಸುನಿಲ್‌ ಅಮೀನ್‌ ಅವರು ಸಹಕರಿಸಿದರು.

ಇಂದು ನನಗೆ ಈ ಭಾಗ್ಯ ಒದಗಿ ಬಂದಿರುವುದು,  ಯಕ್ಷತುಳು ಪರ್ಬದಲ್ಲಿ ಸಮ್ಮಾನ ಸ್ವೀಕರಿಸಲು ಸಂತೋಷವಾಗುತ್ತಿದೆ. ಹನ್ನೆರಡು ವರ್ಷ ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿರುವ ನಾನು ಕಳೆದ 49 ವರ್ಷಗಳಿಂದ ಗೆಜ್ಜೆಕಟ್ಟಿ ಯಕ್ಷಗಾನ ರಂಗದಲ್ಲಿ ಬೆಳೆಯುತ್ತಿದ್ದೇನೆ. ಕಲಾಸೇವೆಯ ಮುಖಾಂತರ ಕಲಾಭಿಮಾನಿಗಳ ಪ್ರೀತಿಯು ಲಭಿಸಿದೆ. ಇಂದು ಶ್ರೀ ಕ್ಷೇತ್ರ ಗೀತಾಂಬಿಕೆಯ ಸನ್ನಿಧಿಯಲ್ಲಿ ಸಿಕ್ಕ ಸಮ್ಮಾನವನ್ನು ದೇವಿಯ ಪ್ರಸಾದವೆಂದು ಸ್ವೀಕರಿಸಿದ್ದೇನೆ. ಇದು ಈ ಊರಿನ ಮಂಡಳಿಯ ಕಲಾವಿದರಿಗೆ ಸಂದ ಗೌರವವಾಗಿದೆ   ಸೀತಾರಾಮ್‌ ಕುಮಾರ್‌ ಕಟೀಲು (ಸಮ್ಮಾನಿತರು).

ಟಾಪ್ ನ್ಯೂಸ್

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.