ಮೊಗವೀರ ವ್ಯವಸ್ಥಾಪಕ ಮಂಡಳಿ: ಉಪಾಧ್ಯಕರಾಗಿ ಅಶೋಕ್ ಸುವರ್ಣ ಆಯ್ಕೆ
Team Udayavani, Jan 15, 2021, 4:24 PM IST
ಮುಂಬಯಿ: ನಗರದ ಹಿರಿಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಸಂಘಟನೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷರಾಗಿ ಅಶೋಕ್ ಸುವರ್ಣ ಆಯ್ಕೆಯಾಗಿದ್ದಾರೆ. ಜ. 7ರಂದು ನಡೆದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಮಿತಿಯ ಸಭೆಯಲ್ಲಿ ಅವರನ್ನು ಉಪಾಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಲಾಯಿತು. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಸುವರ್ಣ ಅವರನ್ನು ಮೊಗವೀರ ಮಂಡಳಿಯ ವತಿಯಿಂದ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಲತಾ ಪುತ್ರನ್ ಅವರು ಅಭಿನಂದಿಸಿದರು.
ಈ ಸಂದರ್ಭ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್. ಬಂಗೇರ, ಟ್ರಸ್ಟಿಗಳಾದ ದೇವರಾಜ್ ಬಂಗೇರ, ಹರೀಶ್ ಪುತ್ರನ್, ಲಕ್ಷ್ಮಣ್ ಶ್ರೀಯಾನ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಸಾಲ್ಯಾನ್, ಸಂಜೀವ ಸಾಲ್ಯಾನ್, ಬಿ. ಕೆ. ಪ್ರಕಾಶ್, ಕೋಶಾಧಿಕಾರಿ ಹೇಮಾನಂದ್ ಕುಂದರ್, ದಯಾನಂದ್ ಬಂಗೇರ, ದಿಲೀಪ್ ಮೂಲ್ಕಿ, ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ಪ್ರೀತಿ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮೊಗವೀರ ವ್ಯವಸ್ಥಾಪಕ ಮಂಡಳಿ ಯ ಆಡಳಿತ ಸಮಿತಿಯಲ್ಲಿ 1985ರಿಂದ ಸುದೀರ್ಘ ಕಾಲದಿಂದ ಕಾರ್ಯನಿರ್ವ ಹಿಸುತ್ತಿರುವ ಅಶೋಕ್ ಸುವರ್ಣ ಅವರು ಮೊಗವೀರ ಪತ್ರಿಕೆಯ ಗೌರವ ಸಂಪಾದಕರಾಗಿಯೂ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸುದೀರ್ಘ ಕಾಲದ ಅನುಭವ, ಸಂಘಟನಾತ್ಮಕ ಶಕ್ತಿಯನ್ನು ಹಾಗೂ ಪತ್ರಿಕೆಯ ಪ್ರಗತಿಗಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರನ್ನು ಮಂಡಳಿಯ ಉಪಾಧ್ಯಕ್ಷರ ನ್ನಾಗಿ ನೇಮಿಸಲಾಗಿದೆ ಎಂದು ಮೂಲ ಗಳು ತಿಳಿಸಿವೆ.
ಅಶೋಕ್ ಸುವರ್ಣ ಅವರನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ವತಿಯಿಂದಲೂ ಸಮಿತಿಯ ಅಧ್ಯಕ್ಷ ಸದಾನಂದ ಕೋಟ್ಯಾನ್ ಅವರುಅಭಿನಂದಿಸಿ ಶುಭ ಹಾರೈಸಿದರು.
ಇದನ್ನೂ ಓದಿ: ಸಿದ್ಧರಾಮೇಶ್ವರ ತತ್ವಾದರ್ಶ ಪಾಲಿಸಿ; ಸುಭಾಷ ಗುತ್ತೇದಾರ
ಈ ಸಂದರ್ಭದಲ್ಲಿ ಶ್ರೀನಿವಾಸ್ ಕಾಂಚನ್, ಮೊಗವೀರ ಮಂಡಳಿಯ ಪದಾಧಿಕಾರಿ ಗಳು, ಮಂಡಳಿಯ ಟ್ರಸ್ಟಿಗಳಾದ ಹರೀಶ್ ಪುತ್ರನ್, ಲಕ್ಷ್ಮಣ್ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.
ಅಶೋಕ್ ಸುವರ್ಣ ಅವರ ಪರಿಚಯ: ಅಶೋಕ್ ಸುವರ್ಣ ಅವರು ಮುಂಬಯಿ ಕನ್ನಡಿಗರಿಗೆ ಪರಿಚಿತರು. ಪತ್ರಕರ್ತ ರಾಗಿ ತಮ್ಮ ಅಂಕಣ ಬರಹಗಳ ಮೂಲಕ ಎಲ್ಲರ ಮನಗೆದ್ದವರು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾದರೂ ಸಮಾಜ ಕಲ್ಯಾಣ ಕ್ಕಾಗಿ ಅವರು ಸತತವಾಗಿ ಶ್ರಮಿಸುತ್ತಾ ಬಂದಿದ್ದಾರೆ.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖವಾಣಿ ಮೊಗವೀರಮಾಸಿಕದ ಗೌರವ ಸಂಪಾದಕರಾಗಿಯ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದಾರೆ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಮುಂಬಯಿ ಶಾಖೆಯ ಪದಾಧಿಕಾರಿಯಾಗಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌರವ ಪ್ರಧಾನಕಾರ್ಯದರ್ಶಿಯಾಗಿ, ಒಡೆಯರಬೆಟ್ಟು ಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಮೊಗವೀರ ವ್ಯವಸ್ಥಾಪಕ ಮಂಡಳಿಯ ಶತಮಾನೋತ್ಸವದ ಸವಿನೆನಪಿಗಾಗಿ ಮಹತ್ವದ ಕೃತಿಗಳನ್ನು ಬೆಳಕಿಗೆ ತರುವ ಕಾರ್ಯವನ್ನು ಅವರು ಮಾಡಿದ್ದುಉಲ್ಲೇಖನೀಯ ಅಂಶ. ಮೊಗವೀರ ಬ್ಯಾಂಕ್‌ನಲ್ಲಿ ಉದ್ಯೋಗಿ ಯಾಗಿ ಮುಂಬಯಿಯಲ್ಲಿ ಕನ್ನಡದ ತೇರನ್ನು ಎಳೆಯುತ್ತಿರುವ ಅಶೋಕ್ ಸುವರ್ಣರು ಬಂಡಾಯ ಬರಹಗಾರರಾಗಿ ಹೆಸರಾದ ವರು. ಜಾತೀಯ ಹಾಗೂ ಇಲ್ಲಿನ ಕನ್ನಡಪರ ಸಂಘ-ಸಂಸ್ಥೆಗಳಲ್ಲಿ ದುಡಿಯುತ್ತಿರುವ ಅವರು ಹೊಸ ಹೊಸ ಪ್ರತಿಭೆಗಳನ್ನು ಮುಂಬಯಿಯಲ್ಲಿ ಮೊಗವೀರದ ಮೂಲಕ ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಳನಾಡಿನ ಜನರ ವೃತ್ತಿ ಸಮಸ್ಯೆಗಳನ್ನು ಕೂಲಂಕುಷವಾಗಿ ತಿಳಿದು ತಮ್ಮ ಬರಹಗಳಲ್ಲಿ ದಾಖಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮುಂಬಯಿಯ ಅನೇಕ ಚಾರಿತ್ರಿಕ ಕಟ್ಟಡಗಳ ಮಾಹಿತಿ ಸಂಗ್ರಹವನ್ನೊಳಗೊಂಡ ಅವರ ಉಪಯುಕ್ತ ಲೇಖನಗಳು ಮೊಗವೀರ ಸಂಚಿಕೆಯಲ್ಲಿ ಸರಣಿಯಾಗಿ ಪ್ರಕಟಗೊಂ ಡಿವೆ. ನಿಗೂಢ ಮಾಯಾ ಜಗತ್ತು, ಮಹಾಕಾಳಿ ಕೇವ್ಸ್‌ನ ಮಹಾನುಭಾವ, ಮುಂಬಯಿ ಪರಿಕ್ರಮಣ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಇತಿಹಾಸ ಇನ್ನಿತರ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಮಹಾರಾಷ್ಟ್ರ ಸರಕಾರದ ಮಾನ್ಯತೆ ಪಡೆದ ಮೊದಲ ಕನ್ನಡಿಗ ಪತ್ರಕರ್ತರೂ ಅವರು ಆಗಿರುವುದು ವಿಶೇಷತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.