ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್:ಸುಚರಿತಾ ಶೆಟ್ಟಿಗೆ 1ಚಿನ್ನ ಸೇರಿ 5ಪದಕ
Team Udayavani, Mar 21, 2018, 4:28 PM IST
ಮುಂಬಯಿ: ಥಾಯ್ಲೆಂಡ್‌ನ ಲಂಪಾಂಗ್ ಸ್ಟೇಡಿಯಂನಲ್ಲಿ ಮಾ. 9ರಿಂದ 11 ರವರೆಗೆ 27ನೇ ಥಾಯ್ಲೆಂಡ್ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಆಯೋಜನೆಯಲ್ಲಿ ನಡೆದ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್-2018ರಲ್ಲಿ ನಗರದ ತುಳು-ಕನ್ನಡತಿ ಸುಚರಿತಾ ಶೆಟ್ಟಿ (ಕರೇಲಿಯಾ) ಇವರು 1 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ 40-44ರ ವಯೋಮಿತಿಯ ವಿಭಾಗದ ಶಾಟ್‌ಪುಟ್, ಡಿಸ್ಕಸ್‌ತ್ರೋ, ರಿಲೇಯಲ್ಲಿ 4*400 ರಿಲೇಯಲ್ಲಿ ಬೆಳ್ಳಿಯ ಪದಕ, 4*100 ರಿಲೇಯಲ್ಲಿ ಚಿನ್ನದ ಪದಕ ಹಾಗೂ ಜಾವಲಿಯನ್ ಎಸೆತದಲ್ಲಿ ಕಂಚಿನ ಪದಕದೊಂದಿಗೆ ಒಟ್ಟು 5 ಪದಕಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
ಮೂಲತಃ ಪೊಸ್ರಾಲ್ ಕೊಟ್ರಪಾಡಿ ದಿ| ಶಂಕರ ಶೆಟ್ಟಿ ಮತ್ತು ತಾಳಿಪಾಡಿ ಪಾದೆಮನೆ ಕುಶಾಲ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಇವರು ವೈಎಂಸಿಎ ರಾಜ್ಯಮಟ್ಟದ 42ನೇ ಆಥ್ಲೆಟಿಕ್ ಮೀಟ್ -2017 ರಲ್ಲಿ ಕೂಡಾ ದಾಖಲೆಯೊಂದಿಗೆ ಎರಡು ಚಿನ್ನ, ಮಾಸ್ಟರ್ಸ್ ಸ್ಟೇಟ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2017ರಲ್ಲಿ ಮೂರೂ ಚಿನ್ನದ ಪದಕ ಪಡೆದಿದ್ದರು. ಹಾಗೆಯೇ ಆಸ್ಟ್ರೇಲಿಯದಲ್ಲಿ ನಡೆದ ಆಸ್ಟ್ರೇಲಿಯನ್ ಮಾಸ್ಟರ್ ಗೇಮ್ಸ್- 2015ರಲ್ಲಿ ಭಾರತವನ್ನು ಪ್ರತಿನಿಧಿಸಿ ಒಂದು ಚಿನ್ನ, 2 ಬೆಳ್ಳಿಯೊಂದಿಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅದೇ ರೀತಿ 2013-14ನೇ ಸಾಲಿನಲ್ಲಿ ಜರಗಿದ ಮಾಸ್ಟರ್ಸ್ ನ್ಯಾಶನಲ್ ಅಥ್ಲೆಟಿಕ್ ಮೀಟ್‌ನಲ್ಲಿ 6 ಚಿನ್ನ, 2015ರಲ್ಲಿ ಜರಗಿದ ಸ್ಟೇಟ್ ಮರ್ಕಂಟೈಲ್ ಅಥ್ಲೆಟಿಕ್ ಮೀಟ್‌ನಲ್ಲಿ 4 ಚಿನ್ನದ ಪದಕ, 2013 ರ ರನ್ ಇಂಡಿಯಾ ರನ್ 10 ಕಿ. ಮೀ. ಮ್ಯಾರಥಾನ್‌ನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಸಹೋದರಿಯರಾದ ಸುಜಾತಾ ಮತ್ತು ಬಬಿತಾ ಶೆಟ್ಟಿ ಮತ್ತು ಪತಿ ಉದಯ ಕರೇಲಿಯರವರ ಪ್ರೋತ್ಸಾಹವೇ ತನ್ನ ಸಾಧನೆಗೆ ಪ್ರೇರಣೆ ಎನ್ನುವ ಇವರು, ಕ್ಯಾಥೆಡ್ರಲ್ ಮತ್ತು ಜಾನ್‌ಕೊನೊನ್ ಸ್ಕೂಲ್ ´‚ೊàರ್ಟ್ ಮುಂಬಯಿಯಲ್ಲಿ 13 ವರ್ಷಗಳ ಕಾಲ ಕ್ರೀಡಾ ಮಾರ್ಗದರ್ಶಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಯುನಿಕ್ಯೂ ನ್ಪೋರ್ಟ್ಸ್ ಅಕಾಡೆಮಿ ಎಂಬ ನ್ಪೋರ್ಟ್ಸ್ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಇಲ್ಲಿ ಕ್ರೀಡಾಳುಗಳಿಗೆ ಕ್ರೀಡಾ ಮಾಹಿತಿಯೊಂದಿಗೆ ತರಬೇತಿಯನ್ನು ಕೂಡಾ ನೀಡಲಾಗುತ್ತಿದ್ದು, ವಿಶೇಷವಾಗಿ ಮಕ್ಕಳಿಗೆ ದೈಹಿಕ ಶಿಕ್ಷಣವನ್ನು ನೀಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.